
ಪ್ರತಿಯೊಬ್ಬರ ಅಡುಗೆ (Cooking) ಮನೆಯಲ್ಲೂ ಫ್ರಿಜ್ (Fridge) ಜಾಗ ಪಡೆದಿರುತ್ತದೆ. ಬೇಸಿಗೆ (Summer) ಯಲ್ಲಂತೂ ಫ್ರಿಜ್ ಬಳಕೆ ಹೆಚ್ಚಾಗುತ್ತದೆ. ಆಹಾರ (Food) ಹಾಳಾಗದಂತೆ ರಕ್ಷಿಸಿಡಲು ಫ್ರಿಜ್ ಅತ್ಯುತ್ತಮ. ಇದ್ರ ಜೊತೆಗೆ ಫ್ರಿಜ್ ನಲ್ಲಿರುವ ಆಹಾರ ಪದಾರ್ಥಗಳು ತಣ್ಣಗಿರುವ ಕಾರಣ, ಬೇಸಿಗೆಯಲ್ಲಿ ಜನರು ಹೆಚ್ಚೆಚ್ಚು ಫ್ರಿಜ್ ಆಹಾರ ಸೇವನೆ ಮಾಡ್ತಾರೆ. ಅತಿ ಬೇಗ ಹಾಳಾಗುವ ಆಹಾರ ವಸ್ತುಗಳನ್ನು ಫ್ರಿಜ್ ನಲ್ಲಿ ಇಡ್ತಾರೆ. ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ಬೇಗ ಕೊಳೆಯುವ ಆಹಾರ ಫ್ರಿಜ್ ನಲ್ಲಿ ಸ್ಥಾನ ಪಡೆಯುತ್ತಿರುತ್ತದೆ. ನೀರಿನಿಂದ ಹಿಡಿದು ಬಗೆ ಬಗೆಯ ಜ್ಯೂಸ್ ಸೇರಿದಂತೆ ನೇಲ್ ಪಾಲಿಶ್ ಕೂಡ ಜನರು ಫ್ರಿಜ್ ನಲ್ಲಿ ಇಡ್ತಾರೆ. ಹಾಲು, ಮೊಸರನ್ನು ಕೂಡ ನಾವು ಫ್ರಿಜ್ ನಲ್ಲಿ ಇಡ್ತೇವೆ. ಹಾಲು ಹಾಳಾಗ್ಬಾರದು ಎಂಬ ಕಾರಣಕ್ಕೆ ಫ್ರಿಜ್ ನಲ್ಲಿ ಇಡುತ್ತೇವೆ. ಆದ್ರೆ ಫ್ರಿಜ್ ನಲ್ಲಿ ಹಾಲಿಟ್ಟರೂ ಅನೇಕ ಬಾರಿ ಹಾಲು ಹಾಳಾಗುತ್ತದೆ. ಅರೇ, ಫ್ರಿಜ್ ನಲ್ಲಿ ಹಾಲಿಟ್ಟರೂ ಹಾಲು ಒಡೆದು ಹೋಯ್ತು ಎನ್ನುತ್ತೇವೆ. ಇದಕ್ಕೆ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಫ್ರಿಜ್ ನಲ್ಲಿ ಹಾಲನ್ನು ಎಲ್ಲಿಡಬೇಕು? :
ಮನೆಗೆ ಫ್ರಿಜ್ ಬಂದಿರುತ್ತದೆ. ಅನೇಕ ವರ್ಷಗಳಿಂದ ಫ್ರಿಜ್ ಬಳಸ್ತಿರುತ್ತೇವೆ. ಆದ್ರೆ ಫ್ರಿಜ್ ನಲ್ಲಿ ಯಾವ ವಸ್ತುವನ್ನು ಎಲ್ಲಿ ಇಡಬೇಕೆಂಬುದು ನಮಗೆ ತಿಳಿದಿರುವುದಿಲ್ಲ. ಇದೇ ಕಾರಣಕ್ಕೆ ಹಾಲನ್ನು ಇಡಬಾರದ ಜಾಗದಲ್ಲಿ ಇಡ್ತೇವೆ. ಆಗ ಹಾಲು ಹಾಳಾಗುತ್ತದೆ. ಫ್ರಿಜ್ ನ ಒಳಗೆ ಎಲ್ಲಿ ಇಟ್ಟರೂ ಆಹಾರ ತಣ್ಣಗಿರುತ್ತದೆ ಎಂದು ನಾವು ಭಾವಿಸಿರುತ್ತೇವೆ. ಹಾಲು ಸರಿಯಾಗಿರಲಿ ಎನ್ನುವ ಕಾರಣಕ್ಕೆ ರೆಫ್ರಿಜಿರೇಟರ್ ಬಾಗಿಲಲ್ಲಿ ಹಾಲನ್ನು ಇಡುವವರೇ ಹೆಚ್ಚು. ಆದರೆ ಹಾಲನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಇದು ಉತ್ತಮ ಸ್ಥಳವಲ್ಲ. ರೆಫ್ರಿಜರೇಟರ್‌ನ ಉಳಿದ ಭಾಗಗಳಿಗಿಂತ ಬಾಗಿಲು ಹೆಚ್ಚು ಬಿಸಿಯಾಗಿರುತ್ತವೆ. ರೆಫ್ರಿಜರೇಟರ್ ಬಾಗಿಲಿನಲ್ಲಿ ಹಾಲು ದೀರ್ಘಕಾಲದವರೆಗೆ ಇರುವುದಿಲ್ಲ. ಹಾಲನ್ನು ಫ್ರಿಜ್ ನ ಮುಖ್ಯ ಶೇಖರಣಾ ಪ್ರದೇಶದಲ್ಲಿ ಇಡಿ. ನೀವು ಹಾಲನ್ನು ಫ್ರೀಜರ್ ನಲ್ಲಿ ಕೂಡ ಇಡಬಹುದು. ಫ್ರೀಜರ್ ನಲ್ಲಿ ಹಾಲಿಟ್ಟರೆ ಅದು ದೀರ್ಘಕಾಲದವರೆಗೆ ಸರಿಯಾಗಿರುತ್ತದೆ.
ಕಾಂಡಿಮೆಂಟ್ಸ್ – ಸಾಸ್ : ಕಾಂಡಿಮೆಂಟ್ಸ್ ಮತ್ತು ಸಾಸ್‌ಗಳನ್ನು ಫ್ರಿಜ್ ನ ಮುಖ್ಯ ಜಾಗದಲ್ಲಿ ಇಡುವ ಅವಶ್ಯಕತೆಯಿಲ್ಲ. ಕಾಂಡಿಮೆಂಟ್ಸ್ ಹಾಗೂ ಸಾಸ್ ಗೆ ಹೆಚ್ಚಿನ ತಾಪಮಾನದ ಅವಶ್ಯಕತೆಯಿಲ್ಲ. ಆದ್ದರಿಂದ ಅವುಗಳನ್ನು ಬಾಗಿಲಿನ ಮೇಲೆ ಅಥವಾ ಫ್ರಿಜ್ ಒಳಗಿನ ಶೆಲ್ಫ್ ನಲ್ಲಿ ಇಡುವುದು ಉತ್ತಮ. ರೆಫ್ರಿಜರೇಟರ್‌ನ ಒಳಾಂಗಣದ ಕಂಫಾರ್ಟ್ಮೆಂಟ್ ನಲ್ಲಿ ಅಥವಾ ಬಾಗಿಲಿಗೆ ನೀವು ಬಾಟಲಿಯಲ್ಲಿ ತುಂಬಿದ ಪಾನೀಯವನ್ನು ಇಡಬಹುದು. ಇದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಹಾಗೂ ತಣ್ಣಗಿರುತ್ತದೆ. ಕೆಲವರು ಬೇಳೆ – ಕಾಳುಗಳನ್ನು ಕೂಡ ಇಡ್ತಾರೆ. ಅದನ್ನು ಕೂಡ ನೀವು ಫ್ರಿಜ್ ಬಾಗಿಲಿಗೆ ಇಡಬಹುದು.
ಎದೆಹಾಲು ಸಾಲ್ತಿಲ್ವೇ? ಮೊಳಕೆಯೊಡೆದ ರಾಗಿ ಸೇವಿಸಿ
ಮಾಂಸ ಮತ್ತು ಮೀನು : ಮಾಂಸ ಹಾಗೂ ಮೀನುಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಡುವಾಗ ಅದನ್ನು ಬಾಗಿಲಿಗೆ ಇಡಲು ಸಾಧ್ಯವಿಲ್ಲ. ಹಾಗೆ ಮುಖ್ಯ ಭಾಗದಲ್ಲಿ ಇಟ್ಟರೂ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಫ್ರಿಜ್ ನಲ್ಲಿ ಅತಿ ಹೆಚ್ಚು ತಣ್ಣಗಿರುವ ಪ್ರದೇಶದಲ್ಲಿ ಇಡಬೇಕು. ಅಂದ್ರೆ ಫ್ರೀಜರ್ ನಲ್ಲಿ ಮಾಂಸ ಮತ್ತು ಮೀನನ್ನು ಇಡುವುದು ಒಳ್ಳೆಯದು. ಬಾಗಿಲಿಗೆ ಇದನ್ನು ಇಟ್ಟರೆ ಬೇಗ ಹಾಳಾಗುತ್ತದೆ.
Kitchen Hacks: ಕಲೆಯ ಟೆನ್ಷನ್ ಬಿಟ್ಬಿಡಿ.. ನಿಂಬೆಯಲ್ಲಿದೆ ಮ್ಯಾಜಿಕ್ ಗುಣ
ಅತಿಯಾಗಿ ತುಂಬಬೇಡಿ : ಜನರು ತಮ್ಮ ರೆಫ್ರಿಜರೇಟರ್‌ಗಳಲ್ಲಿ ಹೆಚ್ಚು ಹೆಚ್ಚು ವಸ್ತುಗಳನ್ನು ತುಂಬುತ್ತಾರೆ. ಹಾಗೆ ಮಾಡುವುದರಿಂದ ಫ್ರಿಜ್ ನ ಸಂಪೂರ್ಣ ಬಳಕೆಯನ್ನು ಮಾಡುತ್ತಿದ್ದೇವೆ ಎಂದುಕೊಳ್ತಾರೆ. ಆದರೆ ಹಾಗೆ ಮಾಡಬಾರದು. ಏಕೆಂದರೆ ಇದು ರೆಫ್ರಿಜರೇಟರ್‌ನ ಒಳಗಿನ ಗಾಳಿಯ ಚಲನೆಯನ್ನು ತಡೆಯುತ್ತದೆ ಮತ್ತು ಇದರಿಂದಾಗಿ ಶೀತ ಗಾಳಿಯು ರೆಫ್ರಿಜರೇಟರ್‌ನ ವಿವಿಧ ವಿಭಾಗಗಳನ್ನು ತಲುಪುವುದಿಲ್ಲ. ಆಗ ಆಹಾರ ಬೇಗ ಹಾಳಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.