ಸೀರೆಯುಟ್ಟು ಹುಡುಗಿಯರ ಸ್ಟಂಟ್ಸ್, ಆಗೇ ಬಿಡ್ತು ವೀಡಿಯೋ ವೈರಲ್

Published : Sep 04, 2023, 05:27 PM IST
ಸೀರೆಯುಟ್ಟು ಹುಡುಗಿಯರ ಸ್ಟಂಟ್ಸ್, ಆಗೇ ಬಿಡ್ತು ವೀಡಿಯೋ ವೈರಲ್

ಸಾರಾಂಶ

ಸಾಹಸ ಹಾಗೂ ಹುಡುಗಿ ದೂರ ದೂರ ಎನ್ನುವ ಕಾಲವಿತ್ತು. ಆದ್ರೀಗ ಸಾಹಸ, ಹುಡುಗಿ ಜೊತೆ ಸೀರೆ ಎಲ್ಲವೂ ಸೇರಿಕೊಂಡಿದೆ. ಸೀರೆಯುಟ್ಟು ಹುಡುಗಿಯರು ಮಾಡುವ ಸ್ಟಂಟ್ ಗಳು ಎದೆ ಝೆಲ್ಲೆನಿಸುತ್ತೆ.  

ಸೀರೆ ನಮ್ಮ ಭಾರತದ ಸಾಂಪ್ರದಾಯಿ ಉಡುಗೆ. ಹಿಂದೆ ಬಹುತೇಕ ಎಲ್ಲ ಮಹಿಳೆಯರು ಸೀರೆ ಉಡುತಿದ್ದರು. ಕಾಲ ಬದಲಾದಂತೆ ಮಹಿಳೆಯರ ಡ್ರೆಸ್ ನಲ್ಲಿ ಬದಲಾವಣೆ ಕಂಡು ಬಂತು. ಪಾಶ್ಚಾತ್ಯರ ಉಡುಪುಗಳು ನಮ್ಮ ಫೆವರೆಟ್ ಆಯ್ತು. ಹಬ್ಬ, ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಾತ್ರ ಸೀರೆ ಸೀಮಿತ ಎನ್ನುವಂತಾಗಿತ್ತು. ಆದ್ರೀಗ ಮತ್ತೆ ಕಾಲ ಬದಲಾಗಿದೆ. ಈಗ ಯುವತಿಯರೂ ವೆರೆಟಿ ಶೈಲಿಯಲ್ಲಿ ಸೀರೆ ಧರಿಸುವುದನ್ನು ಇಷ್ಟಪಡ್ತಿದ್ದಾರೆ. ಹಾಗಾಗಿಯೇ ಮಾರುಕಟ್ಟೆಗೆ ಸಾಕಷ್ಟು ರೆಡಿಮೆಡ್ ಸೀರೆಗಳು ಲಗ್ಗೆಯಿಟ್ಟಿವೆ.

ನಾನೇನು ಕೈಗೆ ಬಳೆ ತೊಟ್ಟುಕೊಂಡಿದ್ದೇನಾ? ಹೂ ಮುಡಿದಿದ್ದೇನಾ? ಸೀರೆ (Saree) ಉಟ್ಟಿದ್ದೆನಾ? ಹೀಗೆ ಯಾವುದೇ ದುರ್ಬಲ ಕೆಲಸ ಬಂದಾಗ ಹುಡುಗಿ ನಾನಲ್ಲ ಎನ್ನುವುದನ್ನು ತೋರಿಸಲು ಹುಡುಗ್ರು ಈ ಡೈಲಾಗ್ ಹೇಳೋದನ್ನು ನೀವು ಕೇಳಿರಬಹುದು. ಈಗ್ಲೂ ಅನೇಕ ಕಡೆ ಹುಡುಗಿ ದುರ್ಬಲೆ ಎಂದೇ ನಂಬುತ್ತಾರೆ. ಹಾಗೇ, ಸೀರೆಯುಟ್ಟವರು ದುರ್ಬಲರು, ಬಡವರು, ಸಂಪ್ರದಾಯವಾದಿಗಳು, ಹಿಂದುಳಿದವರು ಎಂದು ಪರಿಗಣಿಸುವ ಜನರಿದ್ದಾರೆ. ಅವರೆಲ್ಲರ ನಂಬಿಕೆ ಸುಳ್ಳು ಎನ್ನುವುದನ್ನು ಹುಡುಗಿಯರು ತೋರಿಸಿದ್ದಾರೆ. ಸೀರೆ ಬರಿ ಒಂದು ಸಮುದಾಯಕ್ಕೆ ಸೀಮಿತವಾದದ್ದಲ್ಲ. ವಿದ್ಯಾವಂತೆ, ಧೈರ್ಯವಂತೆ ಹೆಣ್ಣಿಗೆ ಡ್ರೆಸ್ (dress) ಇಂಪಾರ್ಟೆಂಟ್ ಆಗೋದಿಲ್ಲ. ಆಕೆ ಮಿಡಿ, ಜಿನ್ಸ್, ಚೂಡಿ ಧರಿಸಿ ಮಾತ್ರವಲ್ಲ ಸೀರೆಯುಟ್ಟು ಕೂಡ ಸ್ಟಂಟ್ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. 

ಪ್ಲಾಸ್ಟಿಕ್ ಸರ್ಜರಿ ಎಡವಟ್ಟಿಗೆ ಬಲಿಯಾಯ್ತು ಜೀವ, ಖ್ಯಾತ ನಟಿ ಸಿಲ್ವಿನಾ ಇನ್ನಿಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ ಸೀರೆಯುಟ್ಟ ಅನೇಕ ಯುವತಿಯರನ್ನು ನೀವು ನೋಡ್ಬಹುದು. ಸೀರೆಯುಟ್ಟು ಡಾನ್ಸ್ ಮಾಡೋದಲ್ಲದೆ ಸ್ಟಂಟ್ ಮಾಡುವ ವಿಡಿಯೋಗಳು ಇತ್ತೀಚಿಗೆ ವೈರಲ್ ಆಗ್ತಿವೆ. Shethepeopletv ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೀರೆಯುಟ್ಟ ಹುಡುಗಿಯರ ಸ್ಟಂಟ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಸೀರೆಯುಟ್ಟ ಹುಡುಗಿಯರು ಜಿಮ್ನಾಸ್ಟಿಕ್ ಮಾಡೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಸೀರೆ ಧರಿಸಿ ಹುಡುಗಿಯರು ಮಾಡುವ ಸಾಹಸ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಫಿಟ್‌ನೆಸ್ ಮತ್ತು ಮಹಿಳೆಯರು ಅತ್ಯುತ್ತಮ ಸಂಯೋಜನೆಯಾಗಿಲ್ಲದಿರಬಹುದು, ಆದರೆ ಬದಲಾಗುತ್ತಿರುವ ಕಾಲದೊಂದಿಗೆ, ಮಹಿಳೆ ಮಾಡಲು ಸಾಧ್ಯವಿಲ್ಲ ಎನ್ನುವ ವಿಷ್ಯವೇ ಇಲ್ಲ. ಮಹಿಳೆಯರ ಫಿಟ್ನೆಸ್ ವಿಷ್ಯಕ್ಕೆ ಬಂದಾಗ ನಿಮ್ಮ ಅಭಿಪ್ರಾಯ ಏನು ಎಂದು ಶೀರ್ಷಿಕೆ ಹಾಕಲಾಗಿದೆ. 

ಹಾಟ್ ಹಾಡಿಗೆ ಸೆಕ್ಸಿ ಡಾನ್ಸ್.. ಹುಡುಗಿ ವಿಡಿಯೋ ಫುಲ್ ವೈರಲ್

ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋದ ಕೊನೆಯಲ್ಲಿ ಸಾಮಾನ್ಯ ಬಟ್ಟೆ ಧರಿಸಿ ಸ್ಟಂಟ್ ಮಾಡಿರುವ ಹುಡುಗಿಯರನ್ನು ಕೂಡ ನೀವು ನೋಡ್ಬಹುದು. 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ಈ ವಿಡಿಯೋಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದೆ. 

ಹುಡುಗಿಯರ ಸ್ಟಂಟ್ ನೋಡಿ ಕೆಲವರು ಮೆಚ್ಚಿಕೊಂಡಿದ್ದಾರೆ. ಆದ್ರೆ ಇನ್ನು ಕೆಲವರು ಹುಡುಗಿಯರು ಸೀರೆ ಧರಿಸಿದ್ದಕ್ಕೆ ಕೋಪ ವ್ಯಕ್ತಪಡಿಸಿದ್ದಾರೆ.  ಗಾಯಗಳಾಗಬಾರದು ಎಂದರೆ ಇಂಥಹ ಸಾಹಸಗಳನ್ನು ಮಾಡುವಾಗ ಸರಿಯಾದ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ನಾವು ಏನು ಧರಿಸಬೇಕು ಮತ್ತು ಯಾವುದನ್ನು ಧರಿಸಬಾರದು ಎಂಬುದನ್ನು ಆಯ್ಕೆ ಮಾಡಲು ನಾವು ಸ್ವತಂತ್ರರಾಗಿದ್ದೇವೆ. ಆದರೆ ನಿಮ್ಮ ಜೀವನವನ್ನು ಏಕೆ ಅಪಾಯಕ್ಕೆ ತಳ್ಳಬೇಕು ಅಥವಾ ಇತರರನ್ನು ದಾರಿ ತಪ್ಪಿಸಬೇಕು.  ಎಲ್ಲವೂ ಸ್ಟೀರಿಯೊಟೈಪ್ ಅಲ್ಲ. ಹಾಗಾಗಿ ಇಂಥ ಸಾಹಸ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಎಂದು ಒಬ್ಬರು ಸಲಹೆ ನೀಡಿದ್ದಾರೆ.

ಇನ್ನು ಕೆಲವರಿಗೆ ಹುಡುಗಿಯರು ಸರಿಯಾಗಿ ಸೀರೆ ಧರಿಸಿಲ್ಲ ಎನ್ನುವ ಕೋಪ, ಬೇಸರವಿದೆ. ಸೀರೆ ಕೆಳಗೆ ಲೆಗ್ಗಿನ್ಸ್, ರೆಡಿಮೆಡ್ ಬ್ಲೌಸ್ ಹಾಕುವ ಬದಲು ಪೆಟಿಕೋಟ್, ಸ್ಟಿಚ್ ಮಾಡಿದ ಬ್ಲೌಸ್ ಹಾಕಿದ್ರೆ ಈ ಸ್ಟಂಟ್ ಸಾಧ್ಯವಿಲ್ಲವೆಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸೀರೆ ಹಾಗೂ ಸ್ಟಂಟ್ ಗೆ ಸಂಬಂಧವಿಲ್ಲ. ಸೀರೆಯುಟ್ಟು ಈ ಸಾಹಸ ಮಾಡಿದ್ರೆ ಅಪಾಯವಾಗಬಹುದು. ದಯವಿಟ್ಟು ಇಂಥ ಸಾಹಸ ಬೇಡ ಎನ್ನುವವರನ್ನು ಕೂಡ ನೀವು ಇಲ್ಲಿ ಕಾಣ್ಬಹುದು.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?