
ಇಲ್ಲಿನ ಪ್ರತಿಯೊಂದೂ 100% ಸತ್ಯ!
ಹೆಣ್ಣು ಹಾಗೂ ಗಂಡು ಈ ಸೃಷ್ಟಿಯ ಎರಡು ವಿಭಿನ್ನ ಜೀವಿಗಳು. ಆಧ್ಯಾತ್ಮಿಕವಾಗಿ ಹೇಳಬೇಕು ಎಂದರೆ ಎರಡೂ ವಿಭಿನ್ನ ತತ್ವಗಳು. ಸ್ತ್ರೀ ತತ್ವ ಹಾಗೂ ಪುರುಷ ತತ್ವ ಎಂಬ ಎರಡು ತತ್ವಗಳೇ ಈ ಬ್ರಹ್ಮಾಂಡದ ಉತ್ಪತ್ತಿಗೆ ಕಾರಣಗಳು ಎನ್ನಲಾಗಿದೆ. ಮಹಿಳೆ ಹಾಗೂ ಪುರುಷರದ್ದು ವಿಭಿನ್ನ ವ್ಯಕ್ತಿತ್ವ, ಇವೆರಡೂ ವಿರುದ್ಧ ದಿಕ್ಕುಗಳಂತೆ ಎನ್ನಲಾಗುತ್ತದೆ. ಹೀಗಾಗಿಯೇ ಪ್ರಕೃತಿ ಹಾಗೂ ಪುರುಷ ಎಂಬ ಈ ಎರಡು ತತ್ವಗಳ ಕಾನ್ಸೆಪ್ಟ್ ಬಂದಿದ್ದು, ವಿಭಿನ್ನ ವ್ಯಕ್ತಿತ್ವಗಳಲ್ಲಿ ಆಕರ್ಷಣೆ ಸಹಜ ಎಂಬಂತೆ ಜಗತ್ತು ನಡೆಯುತ್ತಿದೆ.
ಮಹಿಳೆಯ ಬಗ್ಗೆ ಪುರುಷರಿಗೂ ಪುರುಷರ ಬಗ್ಗೆ ಮಹಿಳೆಯರಿಗೂ ಆಕರ್ಷಣೆಯ ಜೊತೆಗೆ ಕುತೂಹಲ ಕೂಡ ಇರುತ್ತದೆ. ಅವರು ತಮ್ಮ ಬಗ್ಗೆ ಅದೇನು ಯೋಚಿಸಬಹುದು, ಅವರ ಮನಸ್ಸಿನಲ್ಲಿ ಅದೇನು ಇರಬಹುದು ಎಂಬ ಯೋಚನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಲವರ್‌ಗಳಲ್ಲಿ ಹಾಗೂ ಪತಿ-ಪತ್ನಿಯರಲ್ಲಿ ಇನ್ನೊಬ್ಬರು ಏನು ಯೋಚಿಸುತ್ತಿರಬಹುದು ಎಂಬ ಬಗ್ಗೆ ಕುತೂಹಲ ಸಹಜ. ಅದಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಕಾರ್ಡ್ ವೈರಲ್ ಆಗುತ್ತಿದೆ. ಅದರಲ್ಲೇನಿದೆ ನೋಡಿ..
1. ಅವಳು ಮೊದಲಿಗೆ ಮೆಸೇಜ್ ಮಾಡುವುದಿಲ್ಲ. ಆದರೆ ನೀವು ಮಾಡದೇ ಇದ್ದರೆ ಅವಳು ಒಳಗೊಳಗೆ ತುಂಬಾ ಯೋಚಿಸುತ್ತಾಳೆ.
2. ಅವಳು ಕಾಳಜಿ ಇಲ್ಲದಂತೆ ನಟಿಸುತ್ತಾಳೆ- ಆದರೆ ಪ್ರತಿಯೊಂದು ಸಣ್ಣ ವಿಷಯವನ್ನೂ ಗಮನಿಸುತ್ತಾಳೆ.
3. ಅವಳು 'ನಾನು ಚೆನ್ನಾಗಿದ್ದೇನೆ' ಎಂದಾಗ ಮತ್ತೆ ಮತ್ತೆ ಅದನ್ನೇ ಕೇಳಿ ಕಾಳಜಿ ತೋರಿಸುತ್ತೀರಾ ಎಂದು ಪರೀಕ್ಷೆ ಮಾಡುತ್ತಾಳೆ.
4. ಅವಳು ನಿಮ್ಮನ್ನು ದೂರ ತಳ್ಳಬಹುದು. ಆದರೆ ನೀವು ಇನ್ನೂ ಹತ್ತಿರಕ್ಕೆ ಎಳೆಯುತ್ತೀರಿ ಎಂಬ ನಿರೀಕ್ಷೆಯಲ್ಲಿ ಹಾಗೆ ಮಾಡಿರುತ್ತಾಳೆ. ಒಮ್ಮೆ ನೀವು ದೂರವೇ ಇದ್ದುಬಿಟ್ಟರೆ ತುಂಬಾ ನೊಂದುಕೊಳ್ಳುತ್ತಾಳೆ.
5. ಅವಳು ಸ್ವತಂತ್ರಳಂತೆ ಕಾಣಿಸಿಕೊಳ್ಳುತ್ತಾಳೆ. ಆದರೆ, ಒಳಗೊಳಗೇ ಸಹಾಯ ಹಾಗೂ ನಿರ್ಧಾರದ ಭರವಸೆಯನ್ನು ಬಯಸುತ್ತಾಳೆ.
6. ಅವಳು ಮುಂದಕ್ಕೆ ಹೋದಂತೆ ತೋರಿಸಿಕೊಳ್ಳುತ್ತಾಳೆ. ಆದರೆ, ಇನ್ನೂ ನಿಮ್ಮ ಹಳೆಯ ಮೆಸೇಜ್‌ಗಳನ್ನು ನೋಡುತ್ತಿರುತ್ತಾಳೆ.
7. ಅವಳು ಎಷ್ಟೇ ಬಲಿಷ್ಠಳಂತೆ ಕಂಡರೂ ಅವಳಿಗೆ ಬೇಕಾಗಿದ್ದು ಒಂದೇ, ಅದು ನಿಮ್ಮ ಪ್ರಶಂಸೆ ಹಾಗೂ ಸಪೋರ್ಟ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.