ಮಕ್ಕಳಿಗೆ ಸ್ಕೂಲ್, ನಿಮಗೆ ಆಫೀಸಿಗೆ ಲೇಟ್ ಆಗಬಾರದು ಅಂದ್ರೆ ಈ ಪ್ಲ್ಯಾನ್ ಟ್ರೈ ಮಾಡಿ

Published : Jun 19, 2025, 02:46 PM ISTUpdated : Jun 19, 2025, 03:23 PM IST
Video

ಸಾರಾಂಶ

ಒಮ್ಮೆ ನೀವು ಈ ವಿಡಿಯೋ ನೋಡಿದ್ರೆ ಅಥವಾ ಮಕ್ಕಳಿಗೆ ತೋರಿಸಿದ್ರೆ ಬಹುಶಃ ಇದೇ ರೀತಿ ರೆಡಿಯಾಗಬಹುದೇನೋ ಟ್ರೈ ಮಾಡಿ ನೋಡಿ.

ಶಾಲೆಗೆ ಮಕ್ಕಳನ್ನು ರೆಡಿ ಮಾಡೋದು ಅಂದ್ರೆನೇ ಒಂದು ರೀತಿ ದೊಡ್ಡ ಟಾಸ್ಕ್. ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಶಾಲೆ ಆರಂಭವಾಗುವುದೇ ಬೆಳಗಿನ ಜಾವ ಎಂಟು ಅಥವಾ ಒಂಭತ್ತು ಗಂಟೆಯಿಂದ. ಅಷ್ಟೊರೊಳಗೆ ಅವರಿಗೆ ಟಿಫಿನ್ ಬಾಕ್ಸ್‌ಗೆ ರೆಡಿ ಮಾಡಿ, ಬ್ಯಾಗ್‌ಗೆ ಬುಕ್‌ ತುಂಬಿಸಿ, ಅವರಿಗೂ ತಿಂಡಿ ತಿನ್ನಿಸಿ, ಯೂನಿಫಾರ್ಮ್ ಹಾಕಿ, ಶೂ ಸಾಕ್ಸ್ ಚೆನ್ನಾಗಿ ಒರೆಸಿ ಅವರಿಗೆ ಸ್ಕೂಲ್‌ ವ್ಯಾನ್‌ಗೆ ಕಳುಹಿಸಿಕೊಡುವಷ್ಟರಲ್ಲಿ ಒಂದು ದೊಡ್ಡ ಯುದ್ಧ ಗೆದ್ದ ಫೀಲ್.

ಇದು ಮಕ್ಕಳಿರುವ ಮನೆಯಲ್ಲಿ, ಅದರಲ್ಲೂ ಶಾಲೆಗೆ ಹೋಗುವ ಮಕ್ಕಳ ಮನೆಯಲ್ಲಿ ಬೆಳಗಿನ ಜಾವ ಕಂಡುಬರುವ ದೃಶ್ಯ. ಸಾಮಾನ್ಯವಾಗಿ ಅಪ್ಪಂದಿರು ಮಕ್ಕಳನ್ನು ಕಳುಹಿಸಲು ಹೆಲ್ಪ್ ಮಾಡುತ್ತಾರಾದರೂ ಹೆಚ್ಚಿನ ಜವಬ್ದಾರಿ ತೆಗೆದುಕೊಳ್ಳುವುದು ಅಮ್ಮಂದಿರೇ. ಅದನ್ನೆಲ್ಲಾ ಹೆಚ್ಚು ವಿವರಿಸುವ ಅವಶ್ಯಕತೆಯೇ ಇಲ್ಲ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕನನ್ನು ಯಾರೂ ರೆಡಿ ಮಾಡುತ್ತಿಲ್ಲ. ಬದಲಾಗಿ ಅವನೇ ರೆಡಿಯಾಗುತ್ತಿದ್ದಾನೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ವಿಡಿಯೋ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ನಮಗೆ ಅದೆಷ್ಟು ಉಪಯುಕ್ತವೆನಿಸುತ್ತದೆ ಅಂದ್ರೆ ನಾವು ಯಾಕೆ ಈ ರೀತಿ ಟ್ರೈ ಮಾಡಬಾರದೆಂದು ಅಂದುಕೊಳ್ಳುತ್ತೇವೆ. ವೈರಲ್ ವಿಡಿಯೋದಲ್ಲಿ ತೋರಿಸಿರುವ ಹಾಗೆ ಆ ಪುಟ್ಟ ಬಾಲಕ ಅದೆಷ್ಟು ಬೇಗ ರೆಡಿಯಾಗುತ್ತಿದ್ದಾನೆ ಎಂದರೆ ನೀವೇ ಮನಸಾರೆ ಹೊಗಳುವಿರಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು ಅನಂತ್‌ಕುಮಾರ್ ಎಂಬುವವರು ಹಂಚಿಕೊಂಡಿದ್ದು, ಸದ್ಯ ವಿಡಿಯೋ ನೋಡಿದರೆ ಆ ತಂದೆ-ಮಗ ನಮ್ಮ ದೇಶದವರಂತೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ವಿಡಿಯೋವನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಒಮ್ಮೆ ನೀವು ಈ ವಿಡಿಯೋ ನೋಡಿದ್ರೆ ಅಥವಾ ಮಕ್ಕಳಿಗೆ ತೋರಿಸಿದ್ರೆ ಬಹುಶಃ ಇದೇ ರೀತಿ ರೆಡಿಯಾಗಬಹುದೇನೋ ಟ್ರೈ ಮಾಡಿ ನೋಡಿ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಾಗಿ ಶಾಲೆಗೆ ಕಳುಹಿಸೋದು ಇಷ್ಟೊಂದು ಈಸಿನಾ ಅಂದೆನಿಸುತ್ತದೆ.

 

ಶಾಲೆಗೆ ಕಳುಹಿಸುವ ಮೊದಲು ಮಕ್ಕಳಿಗೆ ಈ ವಿಷಯಗಳನ್ನು ಕಲಿಸಿ
ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅವರಿಗೆ ಕೆಲವು ಪ್ರಮುಖ ವಿಷಯಗಳನ್ನು ಕಲಿಸುವುದು ಬಹಳ ಮುಖ್ಯ, ಇದು ಅವರಿಗೆ ಸ್ವಾವಲಂಬನೆ, ಭದ್ರತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇಂದು ನಾವು ನಿಮಗೆ ಅಂತಹ ಕೆಲವು ವಿಷಯಗಳನ್ನು ಹೇಳಲಿದ್ದೇವೆ.

ಸ್ವ-ಆರೈಕೆ
ಮಕ್ಕಳಿಗೆ ಕೈ ತೊಳೆಯುವುದು, ಹಲ್ಲುಜ್ಜುವುದು, ಉಗುರು ಕತ್ತರಿಸುವುದು ಮುಂತಾದ ನೈರ್ಮಲ್ಯ ಅಭ್ಯಾಸಗಳನ್ನು ಕಲಿಸಿ. ಅವರಿಗೆ ಸ್ವತಃ ಬಟ್ಟೆ ಧರಿಸಲು ಮತ್ತು ಶೂ ಲೇಸ್‌ಗಳನ್ನು ಕಟ್ಟಲು ಕಲಿಸಿ.

ಸಾಮಾಜಿಕ ಕೌಶಲ್ಯಗಳು
'ದಯವಿಟ್ಟು', 'ಧನ್ಯವಾದಗಳು', 'ಕ್ಷಮಿಸಿ' ಮುಂತಾದ ಪದಗಳನ್ನು ಬಳಸಲು ಕಲಿಸಿ.

ಸುರಕ್ಷತೆಯ ಪಾಠ
ರಸ್ತೆ ದಾಟುವಾಗ ಎರಡೂ ಕಡೆ ನೋಡಲು ಕಲಿಸಿ, ಜೀಬ್ರಾ ಕ್ರಾಸಿಂಗ್ ಬಳಸಿ. ಅಪರಿಚಿತರೊಂದಿಗೆ ಮಾತನಾಡಬಾರದು ಅಥವಾ ಅವರಿಂದ ಏನನ್ನೂ ತೆಗೆದುಕೊಳ್ಳಬಾರದು ಎಂದು ಕಲಿಸಿ, ಮತ್ತು ಯಾವುದೇ ಅಹಿತಕರ ಪರಿಸ್ಥಿತಿ ಎದುರಾದರೆ ತಕ್ಷಣ ಶಿಕ್ಷಕರಿಗೆ ಅಥವಾ ಪೋಷಕರಿಗೆ ತಿಳಿಸಬೇಕು.

ಸ್ವಾತಂತ್ರ್ಯ ಮತ್ತು ಜವಾಬ್ದಾರಿ
ಬಾಲಕನಿಗೆ ತಮ್ಮದೇ ಬ್ಯಾಗ್ ಪ್ಯಾಕ್ ಮಾಡಲು ಮತ್ತು ಅಗತ್ಯ ವಸ್ತುಗಳನ್ನು ಪರಿಶೀಲಿಸಲು ಕಲಿಸಿ. ಸಮಯಕ್ಕೆ ಸರಿಯಾಗಿ ಮಲಗಲು, ಎಚ್ಚರಗೊಳ್ಳಲು ಮತ್ತು ಶಾಲೆಗೆ ಸಿದ್ಧರಾಗಲು ಕಲಿಸಿ.

ಭಾವನಾತ್ಮಕ ಸಿದ್ಧತೆ
ಶಾಲೆಯು ಮೋಜಿನಿಂದ ಕೂಡಿರುತ್ತದೆ. ಅಲ್ಲಿಗೆ ಖಷಿಖುಷಿಯಾಗಿ ಹೋಗಿ. ಅಲ್ಲಿಂದ ಬಂದ ನಂತರ ಮತ್ತೆ ಆಟವಾಡಬಹುದು ಎಂದು ಮಕ್ಕಳಿಗೆ ನೆನಪಿಸಿ. ಅವರ ಭಾವನೆಗಳನ್ನು ಪದಗಳಲ್ಲಿ ಹೇಗೆ ವ್ಯಕ್ತಪಡಿಸಬೇಕು ಮತ್ತು ಸಮಸ್ಯೆಯ ಬಗ್ಗೆ ಶಿಕ್ಷಕರು ಅಥವಾ ಪೋಷಕರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಅವರಿಗೆ ಕಲಿಸಿ.

ಈ ಅಂಶಗಳಿಗೆ ಗಮನ ಕೊಡುವ ಮೂಲಕ, ನೀವು ನಿಮ್ಮ ಮಗುವನ್ನು ಶಾಲೆಗೆ ಸಿದ್ಧಪಡಿಸಬಹುದು ಮತ್ತು ಅವರ ಬೆಳವಣಿಗೆಗೆ ಕೊಡುಗೆ ನೀಡಬಹುದು. ನಿಮಗೆ ಹೆಚ್ಚಿನ ಸಲಹೆಗಳು ಅಥವಾ ಮಾರ್ಗದರ್ಶನ ಬೇಕಾದರೆ ಈ ವಿಧಾನಗಳು ಸಹಾಯಕವಾಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!