
ಹುಡುಗಿಯರು ಚೆನ್ನಾಗಿ ಕಾಣಲು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಡಿಯಿಂದ ಮುಡಿವರೆಗೂ ಅಂದ ಹೆಚ್ಚಿಸಲು ಕಸರತ್ತು ನಡೆಸುತ್ತಲೇ ಇರುತ್ತಾರೆ. ಅದರಲ್ಲೂ ತ್ವಚೆ ನಯವಾಗಿ ಹೊಳಪು ಪಡೆದುಕೊಂಡಿದ್ದರೆ ಅವರ ಅರ್ಧ ಶ್ರಮ ತಗ್ಗುತ್ತದೆ. ಇದಕ್ಕಾಗಿ ಹೇರ್ ರಿಮೂವ್ ಮಾಡಬೇಕಾಗುತ್ತದೆ. ಕೆಲವರು ಕೈ, ಕಾಲು, ಮುಖ, ದೇಹದಲ್ಲಿನ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್ ಮೊರೆ ಹೋದರೆ, ಮತ್ತೆ ಕೆಲವರು ಸುಲಭವೂ, ನೋವು ರಹಿತವೂ ಆದ ಶೇವಿಂಗ್ ನೆಚ್ಚಿಕೊಂಡಿರುತ್ತಾರೆ. ರೇಜರ್ ಬಳಸಿ ಶೇವ್ ಮಾಡುತ್ತಾರೆ. ಇವು ಸುಲಭವಷ್ಟೇ ಅಲ್ಲ, ಕಡಿಮೆ ಖರ್ಚಿನ ಉಪಾಯ ಕೂಡಾ.
ಶೇವಿಂಗ್‌ನಿಂದ ಕೂದಲಷ್ಟೇ ಅಲ್ಲ, ಚರ್ಮ(skin)ದ ಮೇಲಿದ್ದ ಡೆಡ್ ಸ್ಕಿನ್ (dead skin) ಸೆಲ್‌ಗಳೂ ಹೋಗುತ್ತವೆ. ಇದರಿಂದ ಚರ್ಮ ಬಹಳ ನಯವಾಗಬೇಕು. ಆದರೆ, ಪದೇ ಪದೆ ಶೇವ್ ಮಾಡುವಾಗ ಚರ್ಮದ ಮೇಲಿನ ಈ ಲೇಯರ್ ಹೋಗಿ ತ್ವಚೆ ಜೀವವಿಲ್ಲದಂತೆ, ಒಣಗಿದಂತೆ ಕಾಣುತ್ತದೆ. ಹಾಗಾಗಿ ಶೇವಿಂಗ್ ಮಾಡುವಾಗ ಕೆಲ ಕಾಳಜಿಯ ವಿಧಾನಗಳನ್ನು ಅನುಭವಿಸಬೇಕಾಗುತ್ತದೆ. ಆಗಲೇ ತ್ವಚೆ ಮೃದುವಾಗಿಯೂ, ಹೊಳಪಾಗಿಯೂ ಇರಲು ಸಾಧ್ಯ. ಹಾಗಾದರೆ ಸಿಲ್ಕೀ ಸ್ಮೂತ್ ಸ್ಕಿನ್‌ಗಾಗಿ ನೀವು ಶೇವ್ ಮಾಡುವಾಗ ಗಮನಿಸಬೇಕಾದ ವಿಚಾರಗಳಿವು..
ಮೃದು ತ್ವಚೆ
ಶೇವಿಂಗ್ ಮಾಡುವ ಮುನ್ನ ತ್ವಚೆಯನ್ನು ಹೆಚ್ಚು ಮೃದುವಾಗಿಸಿಕೊಳ್ಳಬೇಕು. ಹೊರಗಿನ ಚರ್ಮ ಮೆತ್ತಗಾಗಬೇಕೆಂದರೆ ನೀವು 10 ನಿಮಿಷ ಬೆಚ್ಚಗಿನ ನೀರಿನಲ್ಲಿ ಶೇವ್ ಮಾಡುವ ದೇಹದ ಭಾಗಗಳನ್ನು ನೆನೆಸಬೇಕು. ಇದಕ್ಕೆ ಉತ್ತಮ ವಿಧಾನ ಸ್ನಾನದ ಬಳಿಕ ಶೇವ್ ಮಾಡುವುದು. ಹೀಗೆ ಮಾಡಿದಾಗ ತುಂಬಾ ಬೇಗ ಹೇರ್ ರಿಮೂವ್ ಮಾಡಬಹುದು. ಜೊತೆಗೆ, ರೇಜರ್‌ನಿಂದಾಗುವ ಅಪಾಯವೂ ತಗ್ಗುತ್ತದೆ.
ಸ್ಕ್ರಬ್
ಕೂದಲನ್ನು ಶೇವ್ ಮಾಡಿ ತೆಗೆದ ಕೂಡಲೇ ನಿಮ್ಮ ಬಳಕೆಯ ಸ್ಕ್ರಬ್ ಹಚ್ಚಿ ಚೆನ್ನಾಗಿ ತಿಕ್ಕಿ. ಇದರಿಂದ ಕೂದಲಿನ ಬುಡ ಪೂರ್ತಿ ಸ್ವಚ್ಛವಾಗುತ್ತದೆ. ಅಲ್ಲಿ ಕುಳಿತಿರಬಹುದಾದ ಕೊಳೆ ಹೋಗುತ್ತದೆ.
ಶೇವಿಂಗ್ ಕ್ರೀಂ
ಹೇರ್ ರಿಮೂವ್ ಮಾಡುವ ಮುನ್ನ ಶೇವಿಂಗ್ ಕ್ರೀಂ(Shaving Cream) ಬಳಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಶೇವ್ ಮಾಡುವಾಗ ಚರ್ಮದ ಹೊರಗಿನ ತೆಳು ಲೇಯರ್ ಹೋಗಿ ಬಿಡುವ ಸಂಭವಗಳು ಹೆಚ್ಚಿರುವುದರಿಂದ ತ್ವಚೆಯನ್ನು ಚೆನ್ನಾಗಿ ನೀರಿನಲ್ಲಿ ನೆನಸಿದ ಬಳಿಕ ಅದಕ್ಕೆ ಶೇವಿಂಗ್ ಕ್ರೀಂ ಹಚ್ಚಬೇಕು. ಇದರಿಂದ ಮಾಯಿಶ್ಚರೈಸ್ ಮಾಡಿದಂತಾಗುತ್ತದೆ. ಸುಲಭವಾಗಿ ಹೇರ್ ತೆಗೆಯಲು ಸಾಧ್ಯವಾಗುತ್ತದೆ.
ಶೇವ್ ಮಾಡುವ ಸರಿಯಾದ ವಿಧಾನ
ಶೇವ್ ಮಾಡುವಾಗ ಯಾವಾಗಲೂ ಒಂದೇ ಸ್ಟ್ರೋಕ್‌ನಲ್ಲಿ ಕೂದಲನ್ನು ತೆಗೆಯಬೇಕು. ಮೇಲಿಂದ ಮೇಲೆ ಒಂದೇ ಸ್ಥಳದಲ್ಲಿ ರೇಜರ್ ಆಡಿಸಬಾರದು. ಕೂದಲು ಯಾವ ಕಡೆ ತಿರುಗಿದೆಯೋ ಅದರ ವಿರುದ್ಧ ದಿಕ್ಕಿನಲ್ಲಿ ಒಂದೇ ಸ್ಟ್ರೋಕ್ ಒಂದು ಭಾಗಕ್ಕೆ ಎಳೆಯಬೇಕು. ಹಾಗಿದ್ದಾಗ, ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ, ಇನ್ಫೆಕ್ಷನ್ ಚಿಂತೆಯೂ ಇರುವುದಿಲ್ಲ.
First Date : ಮೊದಲ ಭೇಟಿಯಲ್ಲಿ ಹುಡುಗ್ರು ಏನೆಲ್ಲ ಸುಳ್ಳು ಹೇಳ್ತಾರೆ ಗೊತ್ತಾ?
ಮಾಯಿಶ್ಚರೈಸರ್
ಶೇವಿಂಗ್ ಬಳಿಕ ಚೆನ್ನಾಗಿ ತ್ವಚೆಯನ್ನು ತೊಳೆದುಕೊಂಡು, ಟವೆಲ್‌ನಿಂದ ತಟ್ಟುತ್ತಾ ನೀರನ್ನು ತೆಗೆಯಬೇಕು. ಟವೆಲ್ ಹಾಕಿ ತಿಕ್ಕಬಾರದು. ನಂತರ ತಕ್ಷಣವೇ ಉತ್ತಮ ಮಾಯಿಶ್ಚರೈಸರ್(moisturizer) ಹಚ್ಚಬೇಕು. ಇದರಿಂದ ಒಣತ್ವಚೆ, ತುರಿಕೆ ರಗಳೆಗಳು ಇರುವುದಿಲ್ಲ.
Niyokov Variant: ಹೊಸ ವೈರಸ್ ಪತ್ತೆ , ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ಭೀತಿ
ಶೇವಿಂಗ್ ಮಾಡಿದ್ರೆ ಕೂದಲು ದಪ್ಪವಾಗಿ ಬರುತ್ತಾ?
ಇದೊಂದು ನಂಬಿಕೆಯನ್ನು ಬ್ಯೂಟಿ ಪಾರ್ಲರ್‌ನವರು ಬಿತ್ತುತ್ತಾರೆ. ಆದರೆ ಇದು ನಿಜವಲ್ಲ. ವ್ಯಾಕ್ಸಿಂಗ್ ಮಾಡಿದಾಗ ಕೂದಲು ಒಳಗಿನಿಂದಲೇ ಹೊರ ಬಂದಿರುತ್ತದೆ. ಹಾಗಾಗಿ, ಬೆಳವಣಿಗೆ ನಿಧಾನವಾಗಿ ಆಗುತ್ತದೆ. ಶೇವಿಂಗ್‌ನಲ್ಲಿ ಕೂದಲಿನ ಹೊರ ಭಾಗ ಮಾತ್ರ ಹೋಗಿರುತ್ತದೆ. ಇದರಿಂದ ಬೇಗ ಬಂದಂತೆ ಎನಿಸುತ್ತದೆ. ಇನ್ನು ಮುಂಚೆ ಇದ್ದಿದ್ದಕ್ಕಿಂತ ದಪ್ಪಗೆ ಬರಲು ಸಾಧ್ಯವಿಲ್ಲ. ಅವೆಲ್ಲ ದೇಹದೊಳಗಿನ ಬದಲಾವಣೆಯಿಂದ ಆಗಬೇಕು. ಆದರೆ, ಶೇವಿಂಗ್‌ನಿಂದ ದೇಹದೊಳಗೆ ಯಾವುದೇ ಬದಲಾವಣೆಯೂ ಆಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.