5 ಮೆದುಳು ಸರ್ಜರಿಗೆ ಯಾವೂದು ನೆನಪಿಲ್ಲ, ಮಕ್ಕಳಂತೆ ಕಲಿಕೆ ಆರಂಭಿಸಿದ ಪದ್ಮಜಾ ಮನಮಿಡಿಯುವ ಕತೆ

Published : Feb 25, 2025, 09:37 PM ISTUpdated : Feb 26, 2025, 08:43 AM IST
5 ಮೆದುಳು ಸರ್ಜರಿಗೆ ಯಾವೂದು ನೆನಪಿಲ್ಲ, ಮಕ್ಕಳಂತೆ ಕಲಿಕೆ ಆರಂಭಿಸಿದ ಪದ್ಮಜಾ ಮನಮಿಡಿಯುವ ಕತೆ

ಸಾರಾಂಶ

ಖ್ಯಾತ ಫೋಟೋಗ್ರಾಫರ್ ಹಾಗೂ ಫಿಲ್ಮ್‌ಮೇಕರ್ ಪದ್ಮಜಾಗೆ 6 ತಿಂಗಳಲ್ಲಿ ಬರೋಬ್ಬರಿ 5 ಬಾರಿ ಮೆದುಳು ಸರ್ಜರಿ. ಇದರ ಪರಿಣಾಮ ಎಲ್ಲವೂ ಅಳಿಸಿ ಹೋಗಿದೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ಪದ್ಮಾಜ ಮಕ್ಕಳಂತೆ ಮತ್ತೆ ಹೊಸದಾಗಿ ಕಲಿಯಲು ಆರಂಭಿಸಿದ್ದಾಳೆ. ಸತತ 7 ವರ್ಷಗ ಪ್ರಯತ್ನದಿಂದ ಇದೀಗ ಪದ್ಮಜಾ ಹೇಗಿದ್ದಾರೆ ಗೊತ್ತಾ?

ಮುಂಬೈ(ಫೆ.25) ಸಿನಿ ಪ್ರಿಯರು, ಫೋಟೋಗ್ರಾಫಿ ಕ್ಷೇತ್ರದಲ್ಲಿನ ಆಸಕ್ತರು ಪದ್ಮಜಾ ಹೆಸರು ಕೇಳಿರುತ್ತಾರೆ. ನಾಲ್ಕು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದ ಪದ್ಮಜಾ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಳು. ಆದರೆ 31ನೇ ವಯಸ್ಸಿಗೆ ಅಪರೂಪದ ಮೆದಳು ಬ್ಯಾಕ್ಟಿರಿಯಾ ಸಮಸ್ಯೆಗೆ ತುತ್ತಾಗಿ ಹೈರಾಣಾಗಿ ಹೋಗಿದ್ದಳು. ವೈದ್ಯರ ಸೂಚನೆಯಿಂದ ಮೆದಳು ಸರ್ಜರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಒಂದು ಸರ್ಜರಿಯಿಂದ ಈಕೆಯ ಆರೋಗ್ಯ ಸಮಸ್ಯೆ ದೂರವಾಗಿಲ್ಲ. ಹೀಗಾಗಿ 6 ತಿಂಗಳಲ್ಲಿ ಬರೋಬ್ಬರಿ 5 ಬಾರಿ ಮೆದುಳು ಸರ್ಜರಿಗೆ ಒಳಗಾಗಬೇಕಾಯಿತು. ಮೆದಳಿನ ಬ್ಯಾಕ್ಟಿರಿಯಾ ಸಮಸ್ಯೆಯಿಂದ ದೂರವಾದರೂ ಪದ್ಮಜಾ ಮೆದುಳಿನಲ್ಲಿದ್ದ ಎಲ್ಲಾ ನೆನಪು ಅಳಿಸಿ ಹೋಗಿತ್ತು. ದೇಹದಲ್ಲಿ ಜೀವ ಇದೆ. ಆದರೆ ತಿನ್ನುವುದು ತಿಳಿದಾಯಿತು, ಮಾತು ಹೊರಡದಾಯಿತು. ನಡಿಗೆ ಮರೆತೆ ಹೋಯಿತು. ಇಲ್ಲಿಂದ ಪದ್ಮಜಾ ಬದುಕಿನ ಪಯಣವೇ ಎಲ್ಲರಿಗೂ ಸ್ಪೂರ್ತಿ.

ಪದ್ಮಜಾ ಫೋಟೋಗ್ರಾಫಿ, ಫಿಲ್ಮ್‌ಮೇಕಿಂಗ್‌ನಲ್ಲಿ ಪದವಿ ಪಡೆದ ದಿಟ್ಟ ಹಾಗೂ ಪ್ರತಿಭಾನ್ವಿತೆ. ಮೂಲ ಜೈಪುರವಾಗಿದ್ದರೂ, ವೃತ್ತಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಮುಂಬೈ ಮಹಾನಗರಿ. ಇದರಂತೆ ಪದ್ಮಜಾ ತನ್ನ ವೃತ್ತಿ ಜೀವನದಲ್ಲಿ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲು ಏರತೊಡಗಿದ್ದಳು. ಈಗಲೇ ಮದೆಳು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಳು. ಮೆದುಳಿನ ಫಂಗಸ್ ಹೆಚ್ಚಾಗಿ, ಊತ ಕಾಣಿಸಿಕೊಂಡಿತ್ತು. ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿತು. ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ತನ್ನ ಹೋರಾಟದ ಬದುಕಿನ ಕುರಿತು ಪದ್ಮಜಾ ಹೇಳಿಕೊಂಡಿದ್ದಾಳೆ.

ಹಾರುವ ವಿಮಾನದಲ್ಲಿ ಹುಟ್ಟಿದ್ರೂ ಚಿಂತೆ: ಆಕಾಶದಲ್ಲಿ ಜನಿಸಿದ ಮಗು ಫಾಂಟಾ ಫೋಟೋ ವೈರಲ್

ಪದ್ಮಜಾ ಪೋಷಕರು, ಕುಟುಂಬಸ್ಥರು ಅದೆೇನೆ ಆದರೂ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದರು. ಇದರಂತೆ ಉತ್ತಮ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಆರಂಭಿಸಿದ್ದರು. 2017ರಲ್ಲಿ ವೈದ್ಯರ ಸೂಚನೆಯಂತೆ 5 ಮೆದಳು ಸರ್ಜರಿಗೆ ಒಳಪಟ್ಟ ಪದ್ಮಜಾ ಎಲ್ಲಾ ನೆನಪಿನ ಶಕ್ತಿ ಕಳೆದುಕೊಂಡಿದ್ದಳು. ತಾನು ಯಾರು ಅನ್ನೋದು ಗೊತ್ತಿಲ್ಲದಾಯಿತು. ಮೆದಳು ಖಾಲಿ ಖಾಲಿ. ತನಗೆ ಹಸಿವಾಗುತ್ತಿದೆ, ಊಟ ಮಾಡಬೇಕು, ಮಾತನಾಡಬೇಕು, ನಡೆಯಬೇಕು, ಪಕ್ಕದಲ್ಲಿರುವವರು ಯಾರು, ತಾನು ಯಾರು ಯಾವುದು ಗೊತ್ತಿಲ್ಲ. 

ಒಂದೆಡೆ ಸರ್ಜರಿ ನೋವು, ಮತ್ತೊಂದೆಡೆ ಯಾವುದು ನೆನಪಿಲ್ಲ. ಕುಟುಂಬಸ್ಥರು ಅಕ್ಷರಶ ನಲುಗಿ ಹೋಗಿದ್ದರು. ಪದ್ಮಾಜಾ ಪೋಷಕರು ಪ್ರಮುಖವಾಗಿ ತಂದೆ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಮಗಳನ್ನು ಮೊದಲಿನಂತೆ ಮಾಡಲು ಏನು ಮಾಡಬೇಕು ಎಂದು ಸಲಹೆ ಕೇಳಿದ್ದರು. ವೈದ್ಯರ ಸೂಚನೆಯಂತೆ ಥೆರಪಿ ಸೇರಿದಂತೆ ಇತರ ಅಭ್ಯಾಸಗಳು ಆರಂಭಗೊಂಡಿತು. ಪದ್ಮಜಾ ತಂದೆ ಕೆಲಸಕ್ಕೆ ರಜೆ ಹಾಕಿ ಮಗಳ ಜೊತೆ ಕಾಲ ಕಳೆಯಲು ಆರಂಭಿಸಿದರು. 

ಪದ್ಮಜಾ ಮಗುವಿನಂತೆ ಆಗಿದ್ದಳು. ಹೀಗಾಗಿ ಪದ್ಮಜಾಗೆ ಮೊದಲಿನಿಂದ ಎಬಿಸಿಡಿ ಸೇರಿದಂತೆ ಅಕ್ಷರ ಮಾಲೆ ಕಲಿಸಲು ನಿರ್ಧರಿಸಲಾಗಿತ್ತು. ಪೋಷಕರು ಹಾಗೂ ಪದ್ಮಾಜ ಗೆಳೆಯರು ಮಕ್ಕಳಿಗೆ ಕಲಿಸುವಂತೆ ಮೊದಲಿನಿಂದ ಶಿಕ್ಷಣ ಆರಂಭಿಸಿದ್ದರು. ಪೋಷಕರು ಯಾರು, ಗೆಳೆಯರು ಯಾರು, ಒದು, ಬರಹ ಎಲ್ಲವನ್ನೂ ಮೊದಲಿನಿಂದ ಮತ್ತೆ ಆರಂಭಿಸಬೇಕಾಯಿತು. ಪ್ರತಿ ದಿನ ತರಗತಿಗಳನ್ನು ತೆಗೆದುಕೊಳ್ಳಲಾಯಿತು. ಇದರ ಜೊತೆಗೆ ಆಕೆಯ ಕೆಲ ಫೋಟೋಗ್ರಾಫಿಗನ್ನು ತೋರಿಸುತ್ತಾ, ನೆನಪಿನ ಶಕ್ತಿ ಮರುಕಳಿಸುವ ಹಲವು ಪ್ರಯೋಗಗಳನ್ನು ಮಾಡಲಾಗಿತ್ತು. ಸತತ ಪ್ರಯತ್ನದಿಂದ ಪದ್ಮಜಾ ನಿಧಾನವಾಗಿ ಮೊದಲಿನಂತೆ ಆಗ ತೊಡಗಿದಳು. ಆದರೆ ನಾಲ್ಕು ಭಾಷೆಯಲ್ಲಿ ಪರಿಣಿತಿ ಹೊಂದಿದ್ದ ಪದ್ಮಜಾಗೆ ಸಾಹಿತ್ಯ ಜ್ಞಾನ ಮೊದಲಿನಷ್ಟು ಇಲ್ಲ. ಈಗ ಕಲಿತಿರುವ ಮಾಹಿತಿ ಬಿಟ್ಟು ಬೇರೆ ತಿಳಿದಿಲ್ಲ. ಆದರೆ ಪೋಷಕರು, ಗೆಳೆಯರು ಸೇರಿದಂತೆ ಎಲ್ಲರನ್ನು ಗುರುತಿಸಲು ಆರಂಭಿಸಿದಳು. ಹೀಗೆ ಶಿಕ್ಷಣ, ಕಲಿಕೆ ಆರಂಭಿಸಿದ ಪದ್ಮಜಾ ಮೊದಲಿಂತೆ ಆಗಲು ಬರೋಬ್ಬರಿ 7 ವರ್ಷ ತೆಗೆದುಕೊಂಡಿದ್ದಾಳೆ. ಇದೀಗ ಫೋಟೋಗ್ರಾಫಿ ಹಾಗೂ ಫಿಲ್ಮ್‌ಮೇಕಿಂಗ್ ಪದವಿಯನ್ನು ಮತ್ತೆ ಪಡೆಯುತ್ತಿದ್ದಾಳೆ.

ಅರಿಶಿನ ಜೊತೆ ಈ ಒಂದು ವಸ್ತುವಿದ್ರೆ ಮನೆಯಲ್ಲೇ ಫೇಸ್‌ಪ್ಯಾಕ್‌ ಮಾಡಿ ಹಚ್ಚಿ, 24 ಗಂಟೆಯೂ ಹೊಳೆಯುತ್ತೆ ಚರ್ಮ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Soaking Rice: ಅನ್ನ ಮಾಡುವ ಮುನ್ನ ಅಕ್ಕಿಯನ್ನು ಯಾಕೆ ನೆನೆಸಬೇಕು?
ಗಂಟೆಗಟ್ಟಲೇ ಸಮಯ ಬೇಕಿಲ್ಲ, ಕೆಲವೇ ನಿಮಿಷದಲ್ಲಿ ಅಕ್ಕಿಯನ್ನ ಈ ರೀತಿಯೂ ಕ್ಲೀನ್ ಮಾಡ್ಬೋದು