
ರಾಂಚಿ: ಮದುವೆಯ ನಂತರ ಅತ್ತೆ ಮನೆಯಲ್ಲಿ ಕಿರುಕುಳ ಶುರು ಆದರೆ ಬಹುತೇಕ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಸಹಿಸಿಕೊಂಡು ಇರುವಂತೆ ಹೇಳುತ್ತಾರೆ. ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಮಗಳು ಜೀವ ಬಿಡುತ್ತೇನೆ ಎಂದರು ಬಹುತೇಕರು ಒಮ್ಮೆ ಮದುವೆ ಮಾಡಿ ಕೊಟ್ಟ ನಂತರ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಲು ಸ್ವಲ್ಪವೂ ಇಷ್ಟಪಡುವುದಿಲ್ಲ(ಎಲ್ಲರೂ ಹೀಗಿಲ್ಲ) ಆದರೆ ಇಲ್ಲೊಂದು ಕಡೆ ತಂದೆಯೊಬ್ಬರು ತನ್ನ ಮುದ್ದಿನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಬ್ಯಾಂಡ್ ವಾಲಗದವರನ್ನು ಕರೆದುಕೊಂಡು ಹೋಗಿ ಮಗಳನ್ನು ಮೆರವಣಿಗೆ ಮೂಲಕ ತವರಿಗೆ ಕರೆತಂದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾರ್ಖಂಡ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಹೇಗೆ ಓರ್ವ ಹುಡುಗಿಯನ್ನು ಮದುವೆ ಮಾಡಿ ಕೊಡುವ ವೇಳೆ ಪಟಾಕಿಗಳನ್ನು ಸಿಡಿಸಿ, ಸಂಗೀತ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಕಳುಹಿಸಿಕೊಡುತ್ತಾರೋ ಅದೇ ರೀತಿ ಇಲ್ಲಿ ಗಂಡನ ಮನೆಯಿಂದ ಮಗಳನ್ನು ಕರೆದುಕೊಂಡು ಬರುವ ವೇಳೆಯೂ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಬಹಳ ಅದ್ದೂರಿಯಾಗಿ ಮಗಳನ್ನು ಆಕೆಯ ಗಂಡನ ಮನೆಯಿಂದ ತಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಪ್ರೇಮ್ ಗುಪ್ತಾ ಎಂಬುವವರೇ ಹೀಗೆ ಮಗಳನ್ನು ಮರಳಿ ತವರು ಮನೆಗೆ ಬಹಳ ಪ್ರೀತಿ ಹಾಗೂ ಸಂಭ್ರಮದಿಂದ ಕರೆಸಿಕೊಂಡ ತಂದೆ.
ಹಮಾಸ್ ಉಗ್ರರಿಂದ ಇಸ್ರೇಲಿಗರ ರಕ್ಷಿಸಿದ ಕೇರಳದ ಕೇರ್ ಟೇಕರ್ಸ್: ಧನ್ಯವಾದ ಹೇಳಿದ ಇಸ್ರೇಲ್ ರಾಯಭಾರಿ
ತನ್ನ ಮಗಳು ಸಾಕ್ಷಿ ಗುಪ್ತಾಗೆ ಅತ್ತೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಪೋಷಕರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ವೇಳೆ ಬಹಳ ಅದ್ದೂರಿ ಸಂಭ್ರಮಾಚರಣೆಯಿಂದ ಬಹಳ ಖರ್ಚುವೆಚ್ಚ ಮಾಡಿ ಮದುವೆ ಮಾಡಿಕೊಡುತ್ತಾರೆ. ಆದರೆ ಅಲ್ಲಿ ಕಿರುಕುಳ ನೀಡುತ್ತಾರೆ ಎಂದು ಗೊತ್ತಾದ ವೇಳೆ ಮದುವೆ ಮಾಡಿ ಕೊಟ್ಟಷ್ಟೇ ಗೌರವದಿಂದ ಆಕೆಯನ್ನು ನೀವು ವಾಪಸ್ ಮನೆಗೆ ಕರೆಸಿಕೊಳ್ಳಬೇಕು ಏಕೆಂದರೆ ಹೆಣ್ಣು ಮಕ್ಕಳು ತುಂಬಾ ಅಮೂಲ್ಯ ಎಂದು ಅವರು ಹೇಳಿದರು.
2022ರ ಏಪ್ರಿಲ್ 28ರಂದು ತಮ್ಮ ಪುತ್ರಿ ಸಾಕ್ಷಿ ಗುಪ್ತಾಳನ್ನು ಸಚಿನ್ ಕುಮಾರ್ ಎಂಬ ವರನಿಗೆ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಸಚಿನ್ ರಾಂಚಿಯ ಸರ್ವೇಶ್ವರಿ ನಗರದ ನಿವಾಸಿಯಾಗಿದ್ದು, ಜಾರ್ಖಂಡ್‌ನ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಮದುವೆಯಾದ ಸ್ವಲ್ಪ ದಿನಗಳಲ್ಲೇ ನನ್ನ ಮಗಳಿಗೆ ಆಕೆಯ ಗಂಡನ ಮನೆಯವರು ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೇ ಮನೆಯಿಂದ ಹೊರ ಹಾಕಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮದುವೆಯಾಗಿ ವರ್ಷ ಕಳೆಯುವ ವೇಳೆ ಸಚಿನ್ ಕುಮಾರ್‌ಗೆ ಈಗಾಗಲೇ ಎರಡು ಮದುವೆಯಾಗಿರುವುದು ತಿಳಿದು ಬಂತು. ಹೀಗಾಗಿ ಮಗಳು ಈ ಸಂಬಂಧದಿಂದ ಹೊರಗೆ ಬರಲು ಬಯಸಿದಳು ಎಂದು ಪ್ರೇಮ್ ಗುಪ್ತಾ ಹೇಳಿದ್ದಾರೆ.
ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್ ಮಹಿಳಾ ಯೋಧೆಯ ಕಿಡಿನುಡಿ
ಸಾಕ್ಷಿಯ ನಿರ್ಧಾರವನ್ನು ಆಕೆಯ ತಂದೆ ಸೇರಿದಂತೆ ಇಡೀ ಕುಟುಂಬ ಸ್ವಾಗತಿಸಿತ್ತು. ಅಲ್ಲದೇ ಆಕೆಯನ್ನು ಆಕೆಯ ಅತ್ತೆ ಮನೆಯಿಂದ ತಾಯಿ ಮನೆಗೆ ಬಹಳ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತರಲು ನಿರ್ಧರಿಸಲಾಯ್ತು. ಈ ವೇಳೆ ಆಕೆಯನ್ನು ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಲಾಯ್ತು. ನಾನು ಬಹಳ ಸಂತೋಷದಿಂದ ಈ ಮಗಳನ್ನು ಸ್ವಾಗತಿಸುವ ಈ ನಿರ್ಧಾರ ಕೈಗೊಂಡೆ, ಮಗಳೀಗ ಎಲ್ಲಾ ಕಿರುಕುಳದಿಂದ ಮುಕ್ತಳಾಗಿದ್ದಾಳೆ. ಸಾಕ್ಷಿ ವಿಚ್ಛೇದನಕ್ಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಇತ್ತ ಆಕೆಯ ಪತಿ ಸಚಿನ್ ಆಕೆಗೆ ಪರಿಹಾರ ನೀಡುವುದಾಗಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಆಸ್ಪತ್ರೆ ಮೇಲೆ ದಾಳಿಗೆ 500 ಬಲಿ: ಇಸ್ರೇಲ್ ಪ್ರಧಾನಿ ಮಹಾ ಸುಳ್ಳುಗಾರ: ಪ್ಯಾಲೇಸ್ತೇನ್ ರಾಯಭಾರಿ ಆಕ್ರೋಶ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.