ಸಿಕ್ಕಾಪಟ್ಟೆ ಸೆಕ್ಸ್ ಮಾಡಿದ್ರೆ ಹೆಂಗಸರಿಗೆ ಈ ಸಮಸ್ಯೆ ಆಗಬಹುದು, ನೋಡಿ

By Bhavani Bhat  |  First Published Jun 4, 2024, 3:46 PM IST

ಕೆಲವರಿಗೆ ಸಿಕ್ಕಾಪಟ್ಟೆ ಸೆಕ್ಸ್ ಮಾಡೋ ಕ್ರೇಜ್. ಈ ಕ್ರೇಜ್ ಯಾಕೆ ಬರುತ್ತೆ? ಮೂಡ್ ಬಂತು ಅಂತ ತುಂಬ ಸಲ ಸೆಕ್ಸ್ ಮಾಡಿದ್ರೆ ಹೆಣ್ಮಕ್ಕಳಿಗೆ ಏನೆಲ್ಲ ಸಮಸ್ಯೆ ಆಗಬಹುದು..


ಕೆಲವು ಹೆಂಗಸರಿಗೆ ಸೆಕ್ಸ್ ಬಗ್ಗೆ ವಿಪರೀತ ಆಸಕ್ತಿ. ಅದಕ್ಕೆ ಹಾರ್ಮೋನೂ ಸೇರಿದಂತೆ ಅನೇಕ ಕಾರಣ ಇವೆ. ಸೆಕ್ಸ್ ಮೇಲೆ ಇಂಟರೆಸ್ಟ್ ಜಾಸ್ತಿ ಇದೆ ಅಂತ ವಿಪರೀತ ಸೆಕ್ಸ್ ಮಾಡಲು ಶುರು ಮಾಡಿದರೆ ಅದರಿಂದ ಸಾಕಷ್ಟು ಸಮಸ್ಯೆಗಳೂ ಬರಬಹುದು. ಹಾಗೆ ನೋಡಿದರೆ ಕೆಲವರಲ್ಲಿ ಮಿತಿಗಿಂತಲೂ ಅಧಿಕ ಲೈಂಗಿಕ ವಾಂಛೆ ಇರುತ್ತದೆ. Diagnostic and Statistical Manual of Mental Disorders ಅನ್ನೋ ಸಮಸ್ಯೆಯೂ ಇದಕ್ಕೆ ಕಾರಣ ಇರಬಹುದು. ಅಥವಾ ಹೈಪರ್ ಸೆಕ್ಷುವಾಲಿಟಿ ಇರಬಹುದು. ಈ ಸಮಸ್ಯೆ ಇರುವವರಲ್ಲಿ ಸಿಕ್ಕಾಪಟ್ಟೆ ಲೈಂಗಿಕಾಸಕ್ತಿ ಇರುತ್ತದೆ. ತಮ್ಮ ಇಡೀ ಲೈಫೇ ಸೆಕ್ಸ್‌ ಮೇಲೆ ನಿಂತ ಹಾಗೆ ಇವರ ವರ್ತನೆ, ನಡವಳಿಕೆ ಇರುತ್ತದೆ. ಇದರಿಂದ ಇವರು ಅನೇಕ ಸಮಸ್ಯೆಗಳನ್ನೂ ಎದುರಿಸಬೇಕಾಗಿ ಬರುತ್ತದೆ. ಏಕೆಂದರೆ ಇವರಿಗೆ ಸೆಕ್ಸ್ ಮೇಲೆ ಕಂಟ್ರೋಲ್ ಇರೋದಿಲ್ಲ.

ಹಾಗೆ ನೋಡಿದರೆ ಸೆಕ್ಸ್ ಅನ್ನೋದು ಜೀವನದ ಪ್ರಮುಖ ಭಾಗವಾಗಿದೆ. ದೇಹದಲ್ಲಿ ಕೆಲವು ಹಾರ್ಮೋನುಗಳು ಇವೆ, ಇದು ಸೆಕ್ಸ್‌ನ ಕುರಿತಾದ ಉತ್ಸಾಹವನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರ ದೇಹದಲ್ಲಿ ಅದರ ಮಟ್ಟವು ವಿಭಿನ್ನವಾಗಿರಬಹುದು. ಅದಕ್ಕಾಗಿಯೇ ಕೆಲವರಿಗೆ ಲೈಂಗಿಕ ಬಯಕೆ ಹೆಚ್ಚು. ಆದರೆ ಈ ಲೈಂಗಿಕ ಆಸಕ್ತಿ ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲಾಗದೇ ಹೆಚ್ಚೆಚ್ಚು ಸೆಕ್ಸ್ ನಲ್ಲಿ ಮುಳುಗಿದರೆ ಅದು ಸ್ತ್ರೀಯರ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯೋದು ಮುಖ್ಯ.

Tap to resize

Latest Videos

ಸೆಕ್ಸ್‌ನಿಂದ ಸಡನ್ನಾಗಿ ದೂರವುಳಿದರೆ ಇಷ್ಟೆಲ್ಲ ಸಮಸ್ಯೆಯಾಗುತ್ತಾ?!

ಅತಿಯಾದ ಲೈಂಗಿಕಾಸಕ್ತಿ ಇರುವವರು ದಿನಕ್ಕೆ ಹಲವಾರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಮೇಲ್ನೋಟಕ್ಕೆ ಇದರಿಂದ ಯಾವುದೇ ಗಂಭೀರ ಅಪಾಯವಿಲ್ಲ. ಒಬ್ಬ ವ್ಯಕ್ತಿಯು ಎಷ್ಟು ಬಾರಿ ಸಂಭೋಗಿಸಬೇಕು ಎಂಬುದಕ್ಕೆ ಯಾವುದೇ ಮಿತಿಯಿಲ್ಲ, ಆದರೆ ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೈಹಿಕ ಮಿತಿಗಳನ್ನು (Physical Limitations) ಹೊಂದಿದ್ದು ಅದು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಅದು ಹಲವು ದಿನಗಳವರೆಗೆ ಅನೇಕ ಸಮಸ್ಯೆಗಳಾಗುವಂತೆ ಮಾಡುತ್ತದೆ. ಅತಿಯಾದ ಲೈಂಗಿಕ ಕ್ರಿಯೆಯಿಂದ ಮಹಿಳೆಯರು ಸಾಮಾನ್ಯವಾಗಿ ಒಂದಿಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಅತಿಯಾದ ಲೈಂಗಿಕ ಪ್ರಚೋದನೆಯಿಂದ ಯೋನಿಯಲ್ಲಿ ಊತ ಉಂಟಾಗಬಹುದು. ಇದು ಲೈಂಗಿಕ ಕ್ರಿಯೆ ನಡೆಯುವಾಗ ನೋವನ್ನುಂಟುಮಾಡುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಲೈಂಗಿಕ ಸಮಯದಲ್ಲಿ ನೋವು (pain) ಉಂಟಾದಾಗ, ನೀವು ತಕ್ಷಣ ಅದರಿಂದ ದೂರವಿರಬೇಕು ಮತ್ತು ದೇಹವು ಚೇತರಿಸಿಕೊಳ್ಳಲು ಸಮಯವನ್ನು ನೀಡುವುದು ಉತ್ತಮ.

ದೀರ್ಘಾವಧಿಯ ಫೋರ್‌ಪ್ಲೇ (Foreplay) ಮತ್ತು ಲೈಂಗಿಕತೆಯ ಕಾರಣದಿಂದಾಗಿ, ಯೋನಿಯ ನೈಸರ್ಗಿಕ ಲ್ಯೂಬ್ ಕ್ಷೀಣಿಸಲು ಪ್ರಾರಂಭಿಸುತ್ತದೆ. ಏಕೆಂದರೆ ಹೆಚ್ಚು ಸಂಭೋಗದ ನಂತರ, ದೇಹಕ್ಕೆ ಲೂಬ್ರಿಕೇಶನ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಕಡಿಮೆ ಆಗುತ್ತದೆ . ಅಂತಹ ಸಂದರ್ಭಗಳಲ್ಲಿ, ಲೈಂಗಿಕತೆಯು ತುಂಬಾ ನೋವಿನಿಂದ ಕೂಡಿದೆ. ನೀವು ಸೆಕ್ಸ್‌ನಿಂದ ವಿರಾಮ ತೆಗೆದುಕೊಳ್ಳಬೇಕು ಎಂಬುದಕ್ಕೆ ಸೂಚನೆ.

ಮದುವೆಗೂ ಮೊದ್ಲು ಪ್ರಿಯಾಂಕಾ ಚೋಪ್ರಾ 'ಅದನ್ನೇ' ಕಲಿತಿರಲಿಲ್ಲವಂತೆ; ಅವರಪ್ಪ ಏನ್ ಹೇಳಿದ್ರಂತೆ?

ಅತಿಯಾದ ಲೈಂಗಿಕತೆಯಿಂದಾಗಿ (sex) , ಮಹಿಳೆಯರಲ್ಲಿ ಮೂತ್ರಕೋಶ ಮತ್ತು ಯೋನಿಯ ಸೋಂಕಿನ (Vaginal Infection) ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಏಕೆಂದರೆ ಈ ಕಾರಣದಿಂದಾಗಿ ಯೋನಿಯ ನೈಸರ್ಗಿಕ ಪಿಹೆಚ್ ಮಟ್ಟವು ಕ್ಷೀಣಿಸಲು ಪ್ರಾರಂಭಿಸುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಲೈಂಗಿಕ ಸಂಭೋಗದ (Sexual Intercourse) ನಂತರ ಮೂತ್ರ ವಿಸರ್ಜಿಸುವಾಗ ಉರಿಯುತ್ತಿರುವ ಸಂವೇದನೆಯನ್ನು ಹೊಂದಿದ್ದರೆ ಅಥವಾ ಸರಿಯಾಗಿ ಮೂತ್ರ (urine)  ವಿಸರ್ಜಿಸಲು ಸಾಧ್ಯವಾಗದಿದ್ದರೆ, ಕೆಟ್ಟ ವಾಸನೆ ಅಥವಾ ತುರಿಕೆ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಈ ಅತಿಯಾದ ಸೆಕ್ಸ್ ಅನೇಕ ರೋಗಗಳ ಲಕ್ಷಣವೂ (symptoms) ಆಗಬಹುದು. ಅಲ್ಜೈಮರ್ಸ್ ನಂಥಾ ರೋಗದ ಲಕ್ಷಣಗಳಲ್ಲಿ ಇದೂ ಒಂದು. ಈ ಥರ ಸಮಸ್ಯೆ ಇದ್ದಾಗ ಒಮ್ಮೆ ಕೂಲಂಕುಶ ಪರೀಕ್ಷೆ ಮಾಡಿಸೋದು ಉತ್ತಮ.

click me!