ಸಾವನ್ನಪ್ಪಿದ ಜನರು ಮತ್ತೆ ಎದ್ದು ಬರಲು ಸಾಧ್ಯವಿಲ್ಲ. ಆದ್ರೆ ಅವರ ಹೆಸರು ಬಳಸಿಕೊಂಡು ಮೋಸ ಮಾಡೋರಿದ್ದಾರೆ. ಆದ್ರೆ ಇಲ್ಲೊಬ್ಬಳು ಸತ್ತ ಮೇಲೂ ಕೆಲಸಕ್ಕೆ ಬಂದಿದ್ದಾಳೆ, ಪಿಂಚಣಿ ಪಡೆದಿದ್ದಾಳೆ. ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.
ಹಣಕ್ಕಾಗಿ ಜನರು ಏನು ಬೇಕಾದ್ರೂ ಮಾಡ್ತಾರೆ. ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದ ಜನರನ್ನು ನೀವು ನೋಡಿರಬಹುದು. ಕೆಲ ದಿನಗಳ ಹಿಂದೆ ಮೃತ ಚಿಕ್ಕಪ್ಪನನ್ನು ವೀಲ್ ಚೇರ್ ನಲ್ಲಿ ಬ್ಯಾಂಕಿಗೆ ಕರೆತಂದ ಮಹಿಳೆಯೊಬ್ಬಳು, ಸಾಲ ಪಡೆಯುವ ಪ್ರಯತ್ನ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಈಗ ಮತ್ತೊಂದು ಘಟನೆ ಬೆರಗುಗೊಳಿಸಿದೆ. 14 ವರ್ಷಗಳ ಕಾಲ ಸತ್ತ ಮಹಿಳೆಯೊಬ್ಬಳು ಕೆಲಸಕ್ಕೆ ಬಂದಿದ್ದಾಳೆ. ನಂತ್ರ ನಿವೃತ್ತಿ ಘೋಷಣೆ ಮಾಡಿದ ಆಕೆ ಪಿಂಚಣಿ ಹಣವನ್ನೂ ಪಡೆದಿದ್ದಾಳೆ. ಇದನ್ನು ತಿಳಿದ ಅಲ್ಲಿನ ಕೆಲಸಗಾರರೇ ಆಘಾತಕ್ಕೊಳಗಾಗಿದ್ದಾರೆ.
ರಸ್ತೆ (Road) ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಆದ್ರೆ ಪ್ರತಿ ದಿನ ಕಚೇರಿ (Office) ಗೆ ಬಂದಿದ್ದಾಳೆ. ಹಾಜರಾತಿ ಪಟ್ಟಿಯಲ್ಲಿ ಆಕೆ ಹೆಸರಿದ್ದಿದ್ದಲ್ಲದೆ, ನಿವೃತ್ತಿ ತೆಗೆದುಕೊಂಡ್ಮೇಲೆ ನಿವೃತ್ತಿ (retirement) ಹಣ ಖಾತೆ ಸೇರಿದೆ. ಇದು ಭೂತ, ಆತ್ಮದ ಕಥೆಯಲ್ಲ. ಮಹಿಳೆಯೊಬ್ಬಳು ಮಾಡಿದ ಮೋಸ (Scam) ದ ಸುದ್ದಿ.
undefined
ಮದುವೆಯಾದ ನಟಿಯರಿಗೆ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್ ಎಂದ ಕಾಜಲ್: ನಟಿ ಕೊಟ್ಟ ಕಾರಣ ಹೀಗಿದೆ...
ಘಟನೆ ಚೀನಾದಲ್ಲಿ ನಡೆದಿದೆ. 1993 ರಲ್ಲಿ, ವುಹಾನ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಆದ್ರೆ ಸತ್ತ ಮೇಲೂ ಮಹಿಳೆ ಕಾರ್ಖಾನೆಗೆ ಪ್ರತಿ ದಿನ ಬಂದಿದ್ದಾಳೆ. 2007ರವರೆಗೂ ಮಹಿಳೆ ಕಾರ್ಖಾನೆಗೆ ಬಂದು ಕೆಲಸ ಮಾಡಿದ್ದನ್ನು ಅಲ್ಲಿನ ಸಿಬ್ಬಂದಿ ನೋಡಿದ್ದಾರೆ. ಸತತ 14 ವರ್ಷಗಳ ಕಾಲ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಮಹಿಳೆ ನಂತ್ರ ನಿವೃತ್ತಿ ಘೋಷಣೆ ಮಾಡಿ ಪಿಂಚಣಿ ಪಡೆದಿದ್ದಾಳೆ. 2023ರವರೆಗೂ ಆಕೆ ಪಿಂಚಣಿ ಹಣವನ್ನು ಡ್ರಾ ಮಾಡಿದ್ದಾಳೆ. ವರದಿ ಪ್ರಕಾರ ಮಹಿಳೆ 393,676 ಯುವಾನ್‌ಗಳನ್ನು ಪಿಂಚಣಿಯಾಗಿ ಪಡೆದಿದ್ದಾಳೆ. ಸತ್ತ ಮೇಲೆ ಆಕೆ ಹೇಗೆ ಕೆಲಸಕ್ಕೆ ಬರಲು ಸಾಧ್ಯ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಅದಕ್ಕೆ ಪೊಲೀಸರು ಉತ್ತರ ನೀಡಿದ್ದಲ್ಲದೆ ತಪ್ಪು ಮಾಡಿದ ಮಹಿಳೆಗೆ ಶಿಕ್ಷೆ ಕೊಡಿಸುವ ಪ್ರಯತ್ನ ನಡೆಸಿದ್ದಾರೆ.
ಪ್ರತಿ ದಿನ ಕಾರ್ಖಾನೆಗೆ ಹಾಜರಾದ ಸತ್ತ ಮಹಿಳೆ ಕಥೆ ಏನು? : ಅಷ್ಟಕ್ಕೂ ರಸ್ತೆ ಅಪಘಾತದಲ್ಲಿ ಸತ್ತ ಮಹಿಳೆ ಭೂತವಾಗಿ ಕಚೇರಿಗೆ ಬರಲಿಲ್ಲ. ಸತ್ತ ಮಹಿಳೆ ಬದಲು ಆಕೆ ಸಹೋದರಿ ಕೆಲಸಕ್ಕೆ ಬರ್ತಿರೋದು ಬಹಿರಂಗವಾಗಿದೆ. ಮಹಿಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿಯನ್ನು ಆಕೆ ಸಹೋದರಿ ಕಾರ್ಖಾನೆಗೆ ತಿಳಿಸಿಲ್ಲ. ಅದ್ರ ಬದಲು ಆ ಕೆಲಸಕ್ಕೆ ತಾನು ಹಾಜರಾಗ್ತಿದ್ದಳು. ಇನ್ನರ್ ಮಂಗೋಲಿಯಾದಲ್ಲಿ ವಾಸವಾಗಿದ್ದ ಮಹಿಳೆ, ಸಹೋದರಿ ಐಡಿ ತೆಗೆದುಕೊಂಡು ತಾನು ಕೆಲಸಕ್ಕೆ ಬರುತ್ತಿದ್ದಳು. ಅವರಿಬ್ಬರು ಅವಳಿ – ಜವಳಿ ಆಗಿರಲಿಲ್ಲ. ನೋಡಲು ಆಕೆ ಸಾವನ್ನದ ಮಹಿಳೆಯನ್ನು ಹೋಲುತ್ತಿರಲಿಲ್ಲ. ಆದ್ರೂ ಆಕೆ 14 ವರ್ಷ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದಳು. ಅಲ್ಲದೆ 2007ರ ನಂತ್ರ ಸುಮಾರು 16 ವರ್ಷಗಳ ಕಾಲ ಪಿಂಚಣಿ ಕೂಡ ಪಡೆದಿದ್ದಳು. ಇದು ವಿಚಿತ್ರವಾದ್ರೂ ಅದು ಸತ್ಯ. 2023ರಲ್ಲಿ ಮಹಿಳೆ ಬಣ್ಣ ಬಯಲಾಗಿತ್ತು. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದಾಗ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಅಲ್ಲದೆ ಪಿಂಚಣಿ ಹಣವನ್ನು ವಾಪಸ್ ಮಾಡುವುದಾಗಿ ಹೇಳಿದ್ದಳು.
ಯಾವುದೇ ವರ್ಕ್ಔಟ್ ಮಾಡದೆ ಬಿಲಿಯನೇರ್ ಮುಖೇಶ್ ಅಂಬಾನಿ 15 ಕೆ ಜಿ ತೂಕ ಇಳಿಸಿಕೊಂಡಿದ್ದೇಗೆ?
ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವುಹೈನ ಹೈಬೋವನ್ ಜಿಲ್ಲಾ ಪೀಪಲ್ಸ್ ಕೋರ್ಟ್ ಮಹಿಳೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಸುಮಾರು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆದ್ರೆ ಜನರು ಮಹಿಳೆ ಪರ ನಿಂತಿದ್ದಾರೆ. ಅಷ್ಟೊಂದು ವರ್ಷ ಕಂಪನಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದ ಮಹಿಳೆಗೆ ನ್ಯಾಯ ಸಿಗಬೇಕು ಎಂಬ ಮಾತುಗಳು ಕೇಳಿ ಬರ್ತಿವೆ.