
ರೈಲಿನ ಪ್ರಯಾಣ ಅತ್ಯಂತ ಸುರಕ್ಷಿತ ಎನ್ನುವ ಮಾತಿದೆ. ಇದು ನಿಜ ಕೂಡ. ಉಳಿದ ಎಲ್ಲಾ ವಾಹನಗಳಿಗೆ ಹೋಲಿಸಿದರೆ ರೈಲಿನ ಪ್ರಯಾಣ ಎಲ್ಲ ವಿಧದಲ್ಲಿಯೂ ಇದು ಸುರಕ್ಷಿತವೇ. ಆದರೆ, ಅದೇ ಇನ್ನೊಂದೆಡೆ, ಒಂಟಿಯಾಗಿ ಪ್ರಯಾಣಿಸುವಾಗ ಅದರಲ್ಲಿಯೂ ಮಹಿಳೆಯರು ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳಲೇಬೇಕು. ರೈಲು ಪ್ರಯಾಣವು ಎಷ್ಟು ಸೇಫೋ ಅಷ್ಟೇ ಡೇಂಜರ್ ಕೂಡ ಹೌದು. ಅದರಲ್ಲಿಯೂ ರಾತ್ರಿಯ ವೇಳೆಯ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಇನ್ನಷ್ಟು ಜಾಗೃತರಾಗಬೇಕಾಗುತ್ತದೆ. ಇಲ್ಲದಿದ್ದರೆ, ನಿಮ್ಮ ವಸ್ತುಗಳು ಕಳೆದುಹೋಗುವ ಸಾಧ್ಯತೇ ಹೆಚ್ಚು. ಅದರಲ್ಲಿಯೂ ಒಂಟಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಬಾತ್ರೂಮ್ಗೆ ಹೋಗುವಾಗ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸಲೇಬೇಕು. ಇದೇ ಕಾರಣಕ್ಕೆ ಯಾವುದಾದರೂ ರೈಲು ನಿಲ್ದಾಣದಲ್ಲಿ ರೈಲುಗಳು ನಿಂತ ಸಮಯದಲ್ಲಿ, ಒಂಟಿಯಾಗಿದ್ದರೆ ಸೀಟು ಬಿಟ್ಟು ಕದಲಬಾರದು ಎನ್ನುವುದು. ರೈಲು ನಿಂತ ಸಂದರ್ಭದಲ್ಲಿ ಕಳ್ಳಕಾಕರಿಗೆ ನಿಮ್ಮ ವಸ್ತುಗಳನ್ನು ಸುಲಭದಲ್ಲಿ ತೆಗೆದುಕೊಂಡು ರೈಲಿನಿಂದ ಹಾರಲು ಅನುಕೂಲ ಆಗುವ ಕಾರಣದಿಂದಲೇ ಹೀಗೆ ಹೇಳಲಾಗುತ್ತದೆ.
ಆದರೆ, ಇದೀಗ ವೈರಲ್ ಆಗಿರುವ ಶಾಕಿಂಗ್ ವಿಡಿಯೋದಲ್ಲಿ ಚಲಿಸುವ ರೈಲಿನಿಂದಲೇ ವ್ಯಕ್ತಿಯೊಬ್ಬ ಮಹಿಳೆಯ ಬ್ಯಾಗ್ ಕಿತ್ತು ಪರಾರಿಯಾಗಿದ್ದಾನೆ. ಒಂದು ಕ್ಷಣ ಹೆಚ್ಚೂ ಕಡಿಮೆಯಾಗಿದ್ದರೂ ಮಹಿಳೆ ಬ್ಯಾಗ್ ಕಸಿಯುವ ಭರದಲ್ಲಿ ರೈಲಿನಿಂದ ಬೀಳುವ ಸಾಧ್ಯತೆಯೂ ಇತ್ತು. ಇದೇ ಕಾರಣಕ್ಕೆ ಒಂಟಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಅಥವಾ ಯಾರೇ ಜೊತೆಗಿದ್ದರು ಕೂಡ ಮಹಿಳೆಯರು ತಮ್ಮ ಬ್ಯಾಗ್ ಅನ್ನು ಈ ರೀತಿಯಾಗಿ ಇಟ್ಟುಕೊಂಡು ರೈಲಿನಲ್ಲಿ ನಿಂತುಕೊಳ್ಳುವುದೋ ಅಥವಾ ಸೀಟು ಬಿಟ್ಟು ಹೋಗುವುದನ್ನೋ ಮಾಡಲೇಬಾರದು. ಎಷ್ಟೋ ಸಂದರ್ಭಗಳಲ್ಲಿ ಒಂಟಿಯಾಗಿದ್ದಾಗ ಬ್ಯಾಗ್ ಅನ್ನು ಬೇರೆಯವರಿಗೆ ಕೊಟ್ಟು ಹೋಗುವುದು ರೈಲಿನಲ್ಲಿ ಅಷ್ಟು ಸುಲಭದ ಮಾತಲ್ಲ, ಯಾರನ್ನೂ ನಂಬುವ ಹಾಗಿರುವುದಿಲ್ಲ. ಅಂಥ ಸಂದರ್ಭಗಳಲ್ಲಿ ಬ್ಯಾಗ್ ಅನ್ನು ಹಿಡಿದು ಶೌಚಾಲಯಕ್ಕೆ ಹೋಗುವುದೇ ಆಗಿದ್ದರೆ ಅದನ್ನು ಗಟ್ಟಿಯಾಗಿ ಬಿಗಿದಿಟ್ಟುಕೊಂಡು ಹೋಗಬೇಕು. ಸುಲಭದಲ್ಲಿ ಕಿತ್ತುಕೊಳ್ಳುವಂತೆ ಇಟ್ಟುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿಯಾಗಿದೆ.
ರೈಲುಗಳಲ್ಲಿ ಇಂಥ ಕಳ್ಳತನಗಳು ಮಾಮೂಲಾಗಿಬಿಟ್ಟಿವೆ. ಆದ್ದರಿಂದ ಒಂಟಿಯಾಗಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿ ಇರಬೇಕು. ಇಲ್ಲದಿದ್ದರೆ ಇಂಥ ಅನಾಹುತಗಳು ಸಂಭವಿಸುತ್ತವೆ. ಕಳ್ಳರು ರೈಲಿನಲ್ಲಿ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗುವ ಕಾರಣ ಇದು ತುಂಬಾ ಡೇಂಜರ್ ಕೂಡ ಆಗಿದೆ. ಸ್ವಲ್ಪ ಯಾಮಾರಿದರೂ ವಸ್ತು ಕಳುವಾಗುವುದು ಮಾತ್ರವಲ್ಲದೇ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿ ಬಂದರೂ ಬರಹುದು. ಆದ್ದರಿಂದ ವಯಸ್ಸಾದವರು ರೈಲಿನಲ್ಲಿ ಯಾರ ಜೊತೆಯಾದರೂ ಪ್ರಯಾಣಿಸುವುದು ತುಂಬಾ ಒಳ್ಳೆಯದು.
ಒಂದು ವೇಳೆ ಒಂಟಿಯಾಗಿಯೇ ಪ್ರಯಾಣಿಸುವ ಅಗತ್ಯ ಬಂದರೆ, ಅಕ್ಕಪಕ್ಕ ಸೀಟಿನಲ್ಲಿ ಇರುವ ನಂಬಿಗಸ್ತರನ್ನು, ನಿಮ್ಮದೇ ಊರಿನಲ್ಲಿ ಇಳಿಯುವ ಪ್ರಯಾಣಿಕರ ಬಳಿ ಬ್ಯಾಗ್ ಅಥವಾ ನಿಮ್ಮ ವಸ್ತು ಕೊಟ್ಟು ಸೀಟಿನಿಂದ ಹೋಗುವುದು ಒಳಿತು. ಅವರೂ ಟಿಕೆಟ್ ಪಡೆದುಕೊಂಡಿರುವ ಕಾರಣದಿಂದ ನಿಮ್ಮ ಸಾಮಗ್ರಿಗಳನ್ನು ಅವರು ತೆಗೆದುಕೊಂಡು ಹೋಗುವುದು ಅಸಾಧ್ಯ. ಆದ್ದರಿಂದ ಅವರನ್ನು ನಂಬಲೇಬೇಕು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ಆಘಾತಕಾರಿ ವಿಡಿಯೋ ನೋಡಬಹುದು.
https://x.com/itisprashanth/status/1935014141691052455
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.