ಮಹಿಳೆಯರೇ ಟೈಟ್ ಜೀನ್ಸ್ ಹಾಕುತ್ತೀರಾ? ಎಚ್ಚರ, ನಿಮಗೆ ಈ ಸಮಸ್ಯೆ ಕಾಡಬಹುದು.

By Suvarna News  |  First Published Sep 28, 2022, 12:33 PM IST

ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಉಡುಪುಗಳನ್ನು ತೊಟ್ಟಾಗ ಮಹಿಳೆಯರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಚರ್ಮದ ಕೋಶಗಳಿಗೆ ಗಾಳಿಯ ಸಂವಹನ ಕಷ್ಟವಾಗಿ, ಚರ್ಮದ ಕಾರ್ಯಕ್ಷಮತೆಗೆ ದಕ್ಕೆ ಉಂಟಾಗುತ್ತದೆ.


ಟೈಟ್ ಜೀನ್ಸ್‌ ಮತ್ತು ಲೆಗ್ಗಿನ್ಸ್ ಸಾಮಾನ್ಯವಾಗಿ ಮಹಿಳೆಯರಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಬಿಗಿಯಾದ ಈ ಉಡುಪುಗಳು ಕಾಲಿನ ಅಂದ ತೋರಿಸಲು ಸಹಾಯ ಮಾಡುತ್ತವೆ. ಇದು ಮಹಿಳೆಯರಿಗೆ ಲುಕ್ ನೀಡುತ್ತದೆ. ಆದ್ದರಿಂದ ಇಂದಿನ ಯುವತಿಯರು ಜಾಸ್ತಿ ಟೈಟ್ ಜೀನ್ಸ್ ಹಾಕುತ್ತಾರೆ. ಆದರೆ ಒಂದು ವಿಚಾರ ನೆನಪಿರಲಿ. ಇವು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳನ್ನು ಬೀರುವ ಉಡುಪುಗಳಾಗಿವೆ. ಇದರಿಂದ ಹಲವು ರೀತಿಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಯಾವೆಲ್ಲ ತೊಂದರೆಗಳು ಮಹಿಳೆಯರಿಗೆ ಬಿಗಿ ಉಡುಪುಗಳಿಂದ ಎದುರಾಗುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಟ್ಟೆ ನೋವು ಶುರುವಾಗುತ್ತೆ:

Tap to resize

Latest Videos

ಟೈಟ್ ಜೀನ್ಸ್ (tight jeans) ಮತ್ತು ಲೆಗ್ಗಿನ್ಸ್ (leggings) ಪ್ಯಾಂಟ್ ಧರಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಬಿಗಿಯಾದ ಪ್ಯಾಂಟ್  ಧರಿಸುವುದರಿಂದ ಜಠರಗರುಳಿನ ತೊಂದರೆಗೆ ಕಾರಣವಾಗುತ್ತದೆ. ಈ ಬಿಗಿಯಾದ ಬಟ್ಟೆಯಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದ ಸೊಂಟವು ಅಂಗಗಳನ್ನು ಹಿಸುಕುವುದು ಮಾತ್ರವಲ್ಲದೆ, ಹೊಟ್ಟೆಯ ಆಮ್ಲವು ಅನ್ನನಾಳದ ಮೇಲೆ ಪರಿಣಾಮ ಬೀರುತ್ತದೆ. ಇದು ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿಗೆ ಕಾರಣವಾಗಬಹುದು. ಇನ್ನು ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ನಮ್ಮ ಕರುಳುಗಳು ಮತ್ತು ಹೊಟ್ಟೆಯಲ್ಲಿನ ಆಹಾರವನ್ನು (Food) ಸಂಕುಚಿತಗೊಳಿಸುತ್ತವೆ. ಆಗ ಆಹಾರವು ಮುಕ್ತವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕರುಳುಗಳು ಕುಗ್ಗುತ್ತವೆ. ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ. ಇನ್ನು ಹೊಟ್ಟೆಯ ಮೇಲೆ ಹಾಕುವ ಒತ್ತಡವು ಹೊಟ್ಟೆಯ ಆಮ್ಲವನ್ನು ಹೆಚ್ಚಿಸುವುದರಿಂದ ಅನ್ನನಾಳಕ್ಕೆ ಹೋಗಿ ಅಸಿಡಿಟಿ ಮತ್ತು ಎದೆಯುರಿಯಂತಹ ಸಮಸ್ಯೆ ಉಂಟಾಗುತ್ತದೆ. ಅದಲ್ಲದೆ ಹೊಟ್ಟೆಯ ಆಮ್ಲದ ಹೆಚ್ಚಳವು ಹುಣ್ಣುಗಳಿಗೆ ಕಾರಣವಾಗಬಹುದು.

ಯೀಸ್ಟ್ ಸೋಂಕುಗಳಿಗೆ ಕಾರಣವಾಗಬಹುದು:

ಮಹಿಳೆಯರು ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ (leggings) ಪ್ಯಾಂಟ್ ಹಾಕುವುದರಿಂದ ಯೀಸ್ಟ್ ಸೋಂಕಿನ ಲಕ್ಷಣವನ್ನು ಕಾಣಬಹುದು. ಏಕೆಂದರೆ ತುಂಬಾ ಬಿಗಿಯಾದ ಬಟ್ಟೆಯಿಂದ ಚರ್ಮವು ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಿಲ್ಲ. ಇದರಿಂದ  ದೇಹದ ಉಷ್ಣತೆ ಹೆಚ್ಚಾಗಿ  ಬೆವರು ಉಂಟಾಗಿ ಚರ್ಮವು (Skin)ತೇವಾಂಶದಿಂದ ಕೂಡಿರುತ್ತದೆ. ಇದರಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗುತ್ತದೆ. ಯೀಸ್ಟ್ ಸೋಂಕು ತುಂಬಾ  ಬಿಗಿಯಾದ ಜೀನ್ಸ್, ಲೆಗ್ಗಿನ್ಸ್, ಕ್ರೀಡಾ ಉಡುಪು ಅಥವಾ ಶೇಪ್ವೇರ್ ಮತ್ತು ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಯೋನಿ ಆರೋಗ್ಯಕ್ಕೆ ಹಾನಿಕಾರಕವಾದ  ವಲ್ವೊಡಿನಿಯಾ ಎನ್ನುವ ಸಮಸ್ಯೆಯಿಂದ ಮಹಿಳೆಯರು ಬಳಲುತ್ತಾರೆ. ಈ ಸೋಂಕು ಮಹಿಳೆಯರ ಖಾಸಗಿ ಭಾಗಗಳಲ್ಲಿ ನೋವು ಉಂಟುಮಾಡುವ ಸ್ಥಿತಿಯಾಗಿದ್ದು, ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ವಲ್ವೊಡಿನಿಯಾ ಜನನಾಂಗದ ಪ್ರದೇಶದಲ್ಲಿ ದೀರ್ಘಕಾಲದ ನೋವನ್ನು ಉಂಟುಮಾಡುತ್ತದೆ. ಇನ್ನು ವಾರದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಿಗಿಯಾದ ಜೀನ್ಸ್ ಧರಿಸುವ ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುವ  ಸಾಧ್ಯತೆ  ಹೆಚ್ಚಿವೆ.

ಇದನ್ನೂ ಓದಿ: Women Health : ಕೆಲಸದ ಒತ್ತಡದಿಂದ ಹದಗೆಡ್ತಿದೆ ಮಹಿಳೆಯರ ಲೈಂಗಿಕ ಆರೋಗ್ಯ

ರಕ್ತಪರಿಚಲನೆಯ ಅಡಚಣೆ:

ದೇಹದ ಕೆಲವು ಭಾಗಗಳಲ್ಲಿ ಬಟ್ಟೆ ತುಂಬಾ ಬಿಗಿಯಾಗಿದ್ದರೆ, ಅದು  ದೇಹದ ಇತರ ಭಾಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್ ಧರಿಸುವುದರಿಂದ ದೇಹದ ಕೆಳಭಾಗದಲ್ಲಿ ರಕ್ತ ಪರಿಚಲನೆಯು ದುರ್ಬಲಗೊಳ್ಳತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ (Blood Clot) ಅಪಾಯಕ್ಕೆ ಕಾರಣವಾಗಬಹುದಾಗಿದ್ದು, ಬಿಗಿಯಾದ ಜೀನ್ಸ್’ಗಳನ್ನು, ನರಗಳ ಮೇಲೆ ನಿರಂತರ ಒತ್ತಡವಿರುತ್ತದೆ. ಇನ್ನು ಇದರಿಂದ ತೊಡೆಸಂದು ಪ್ರದೇಶ ಮತ್ತು ತೊಡೆಯ ಸುತ್ತಲೂ ನೋವು  ಮತ್ತು ಕಾಲುಗಳ ಮೇಲೆ ಜುಮ್ಮೆನಿಸುವಿಕೆ ಅಥವಾ ಸುಡುವಿಕೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಈ ಸಮಸ್ಯೆಯು ದೀರ್ಘಕಾಲದವರೆಗೂ ಇದ್ದಲ್ಲಿ ಅಪಾಯಕಾರಿಯಾಗಿದ್ದು, ದೇಹಕ್ಕೆ ಆರೋಗ್ಯಕರವಲ್ಲವಾಗಿದೆ.

ಇದನ್ನೂ ಓದಿ: ಪತಿಯಿಂದ ದೂರವಾದ ಮಹಿಳೆಯ ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಅಗತ್ಯವಿಲ್ಲ; ಕೇರಳ ಹೈಕೋರ್ಟ್

ಚರ್ಮದ ಪರಿಸ್ಥಿತಿಗಳನ್ನು ಕೆರಳಿಸಬಹುದು:

ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್’ನಂತಹ ಬಿಗಿಯಾದ ಬಟ್ಟೆಗಳನ್ನು ಧರಿಸಿದಾಗ, ಚರ್ಮದ ಉರಿಯೂತವು ಉಂಟಾಗುತ್ತದೆ. ಚರ್ಮವನ್ನು (Skin) ಈ ಬಿಗಿಯಾದ  ಬಟ್ಟೆಗಳು ಉಜ್ಜುತ್ತವೆ. ಇದರಿಂದ ಸೂಕ್ಷ್ಮ ಚರ್ಮ ಅಥವಾ ಎಸ್ಜಿಮಾ, ಸೋರಿಯಾಸಿಸ್, ಅಥವಾ ಕೆಲವು ಸೂಕ್ಷ್ಮತೆಗಳ ಕಾರಣದಿಂದಾಗಿ ಚರ್ಮದ ಮೇಲೆ ದದ್ದುಗಳು ಉಂಟಾಗುತ್ತವೆ.

click me!