ಡ್ರಗ್‌ ಪ್ರಯೋಗದ ಬಳಿಕ ಕ್ಯಾನ್ಸರ್‌ನಿಂದ ಮುಕ್ತಳಾದ ಭಾರತೀಯ ಮೂಲದ ಮಹಿಳೆ!

By Santosh NaikFirst Published Jul 5, 2022, 4:17 PM IST
Highlights

ಕ್ಯಾನ್ಸರ್‌ನಿಂದ ಇನ್ನೇನು ಕೆಲವೇ ತಿಂಗಳು ಮಾತ್ರವೇ ಬದುಕಬಹುದು ಎಂದು ಹೇಳಲಾಗಿದ್ದ ಮಹಿಳೆಯೊಬ್ಬರು ಡ್ರಗ್‌ ಟ್ರಯಲ್‌ನಲ್ಲಿ ಭಾಗಿಯಾಗುವ ಮೂಲಕ ಕ್ಯಾನ್ಸರ್‌ನಿಂದ ಗುಣಮುಖರಾದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಭಾರತೀಯ ಮೂಲದ ಮಹಿಳೆ ಡ್ರಗ್‌ ಟ್ರಯಲ್‌ನಲ್ಲಿ ಭಾಗಿಯಾಗಿದ್ದರು.

ಲಂಡನ್‌ (ಜುಲೈ 5): ಕ್ಯಾನ್ಸರ್‌ನಿಂದ (Cancer) ಇನ್ನೇನು ನೀವು ಬದುಕೋದು ಕೆಲವೇ ತಿಂಗಳು ಎಂದು ಭಾರತೀಯ ಮೂಲದ ಮಹಿಳೆಗೆ  (Indian Origin Woman) ವೈದ್ಯರು ಹೇಳಿದ್ದರು. ಆದರೆ, ಇಂಗ್ಲೆಂಡ್‌ನ ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಟ್ರಯಲ್‌ (Clinical Trial ) ನಡೆಸಿದ ಬಳಿಕ ಸ್ತನ ಕ್ಯಾನ್ಸರ್‌ನಿಂದ (breast cancer) ಬಳಲುತ್ತಿದ್ದ ಮಹಿಳೆಗೆ ಸೋಮವಾರ ಕ್ಯಾನ್ಸರ್‌ನಿಂದ ಮುಕ್ತರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ಕ್ಯಾನ್ಸರ್‌ನ ಯಾವ ಅಂಶಗಳೂ ಕೂಡ ಪತ್ತೆಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಮ್ಯಾಂಚೆಸ್ಟರ್‌ನ ಫಾಲೋಫೀಲ್ಡ್‌ನ 51 ವರ್ಷದ ಜಾಸ್ಮಿನ್ ಡೇವಿಡ್ ಯಶಸ್ವಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಯೋಗದ ನಂತರ ಸೆಪ್ಟೆಂಬರ್‌ನಲ್ಲಿ ತನ್ನ 25 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಎದುರು ನೋಡುತ್ತಿದ್ದಾರೆ. ಕ್ರಿಸ್ಟಿ NHS ಫೌಂಡೇಶನ್ ಟ್ರಸ್ಟ್‌ನಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ರಿಸರ್ಚ್ (NIHR) ಮ್ಯಾಂಚೆಸ್ಟರ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿ (CRF) ನಲ್ಲಿ ಜಾಸ್ಮಿನ್‌ ಡೇವಿಡ್‌ರ ಎರಡು ವರ್ಷಗಳ ಪ್ರಯೋಗವು ಅಟೆಝೋಲಿಜುಮಾಬ್‌ನೊಂದಿಗೆ ಸಂಯೋಜಿಸಲ್ಪಟ್ಟ ಪ್ರಾಯೋಗಿಕ ಔಷಧವನ್ನು ಒಳಗೊಂಡಿತ್ತು, ಇದು ಪ್ರತಿ ಮೂರು ವಾರಗಳ ಕಾಲ ಅಭಿದಮನಿ ಮೂಲಕ ನೀಡಲಾಗುವ ಇಮ್ಯುನೊಥೆರಪಿ ಔಷಧವಾಗಿದೆ. 

"ಈ ವೇಳೆ ನನಗೆ ಡ್ರಗ್‌ ಟ್ರಯಲ್‌ನ ಆಯ್ಕೆ ನೀಡಲಾಗಿತ್ತು. ಇದು ನನ್ನ ಮೇಲೆ ಕೆಲಸ ಮಾಡುತ್ತದೆಯೇ ಎಂದು ನನಗೆ ತಿಳಿದಿರಲಿಲ್ಲ, ಆದರೆ ನಾನು ಇತರರಿಗೆ ಸಹಾಯ ಮಾಡಲು ಮತ್ತು ಮುಂದಿನ ಪೀಳಿಗೆಗೆ ನನ್ನ ದೇಹವನ್ನು ಬಳಸಲು ಏನಾದರೂ ಮಾಡಬಹುದು ಎಂದು ನಾನು ಭಾವಿಸಿದೆ. ಆರಂಭದಲ್ಲಿ ನನಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ತುಂಬಾ ಸೈಡ್‌ ಎಫೆಕ್ಟ್‌ಗಳು ದಾಖಲಾಗಿದ್ದವು. ತಲೆನೋವು. ದೇಹದ ತಾಪಮಾನ ಏರಿಕೆಯಂಥ ಅಂಶಗಳು ಬಂದಿದ್ದವು. ಬಳಿಕ ನಾನು ಉತ್ತಮವಾಗಿ ಚಿಕಿತ್ಸೆಗೆ ಪ್ರತಿಕ್ರಿಯಿಸಲು ಆರಂಭಿಸಿದೆ' ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಫಿಟ್‌ ಆಗಿದ್ದ ನಾನು ಇಬ್ಬರು ವಯಸ್ಕ ಮಕ್ಕಳ ತಾಯಿಯಾಗಿದ್ದ. ಹಿರಿಯರ ಆರೈಕೆ ಮನೆಯಲ್ಲಿ ಕ್ಲಿನಿಕಲ್ ಲೀಡ್ ಆಗಿ ಕೆಲಸ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.ನವೆಂಬರ್ 2017 ರಲ್ಲಿ ಅವರು ಮೊಲೆತೊಟ್ಟುಗಳ ಮೇಲೆ ಗಡ್ಡೆಯನ್ನು ಕಂಡುಕೊಂಡಾಗ ಅವರು ಸ್ತನ ಕ್ಯಾನ್ಸರ್‌ನ ಟ್ರಿಪಲ್ ನೆಗೆಟಿವ್ ರೂಪ ತಮಗಿದೆ ಎನ್ನುವುದನ್ನು ಅರಿತುಕೊಂಡಿದ್ದರು.

ಏಪ್ರಿಲ್ 2018ರಲ್ಲಿ ಆರು ತಿಂಗಳ ಕಿಮೊಥೆರಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು, 2018ರ ಏಪ್ರಿಲ್‌ನಲ್ಲಿ ಮಾಸ್ಟೆಕ್ಟೊಮಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಅದರ ಬೆನ್ನಲ್ಲೇ 15 ಬಾರಿ ರೇಡಿಯೋಥೆರಪಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ದೇಹದಲ್ಲಿನ ಕ್ಯಾನ್ಸರ್‌ ಅಂಶವು ಮುಕ್ತವಾಗಿತ್ತು. ಆ ಬಳಿಕ ಅಕ್ಟೋಬರ್ 2019 ರಲ್ಲಿ ಕ್ಯಾನ್ಸರ್ ಮರಳಿತು, ಮತ್ತು ಸ್ಕ್ಯಾನ್‌ಗಳು ಅವಳ ದೇಹದಾದ್ಯಂತ ಅನೇಕ ಗಾಯಗಳನ್ನು ತೋರಿಸಿದವು.

ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!

ಕ್ಯಾನ್ಸರ್ ಶ್ವಾಸಕೋಶಗಳು, ದುಗ್ಧರಸ ಗ್ರಂಥಿಗಳು ಮತ್ತು ಎದೆಯ ಮೂಳೆಗಳಿಗೆ ಹರಡಿಕೊಂಡಿತ್ತು. ಹೆಚ್ಚೆಂದರೆ 12 ತಿಂಗಳಿಗಿಂತ ಕಡಿಮೆ ದಿನಗಳಿವೆ ಎಂದು ಆಕೆಗೆ ಈ ವೇಳೆ ವೈದ್ಯರು ಹೇಳಿದ್ದರು. ಎರಡು ತಿಂಗಳ ನಂತರ, ಮತ್ತು ಬೇರೆ ಯಾವುದೇ ಆಯ್ಕೆಗಳಿಲ್ಲದೆ, ಡೇವಿಡ್ ಹಂತ I ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸುವ ಮೂಲಕ ಸಂಶೋಧನೆಯ ಭಾಗವಾಗಲು ಮನಸ್ಸು ಮಾಡಿದ್ದರು. "ಚಿಕಿತ್ಸೆಯ ಮಧ್ಯದಲ್ಲಿ ಮತ್ತು ಭವಿಷ್ಯ ಏನೆಂದು ತಿಳಿಯದೆ ಫೆಬ್ರವರಿ 2020 ರಲ್ಲಿ ನಾನು ನನ್ನ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ಎರಡೂವರೆ ವರ್ಷಗಳ ಹಿಂದೆ ನಾನು ಅಂತ್ಯ ಎಂದು ಭಾವಿಸಿದ್ದೆ ಮತ್ತು ಈಗ ನಾನು ಮರುಜನ್ಮ ಪಡೆದಿದ್ದೇನೆ" ಎಂದು ಅವರು ಹೇಳುತ್ತಾರೆ.

ವಯಸ್ಸಾಯಿತು ಮೂವತ್ತು, ತರುತ್ತಾ ಸೆಕ್ಸ್ ಲೈಫಿಗೆ ಆಪತ್ತು?

"ಏಪ್ರಿಲ್‌ನಲ್ಲಿ ಕುಟುಂಬವನ್ನು ನೋಡಲು ಭಾರತದಿಂದ ಹಿಂದಿರುಗಿದ ನಂತರ ನನ್ನ ಜೀವನದಲ್ಲಿ ಬದಲಾವಣೆಯಾಗಿದೆ ಮತ್ತು ನಾನು ಬೇಗನೆ ನಿವೃತ್ತಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ನನ್ನ ಜೀವನವನ್ನು ದೇವರಿಗೆ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಕೃತಜ್ಞತೆಯಿಂದ ಬದುಕಲು ನಿರ್ಧರಿಸಿದೆ. ನನ್ನ ಕುಟುಂಬವು ಈ ನಿರ್ಧಾರಕ್ಕೆ ತುಂಬಾ ಬೆಂಬಲ ನೀಡಿದೆ. ನಾನು ಸೆಪ್ಟೆಂಬರ್‌ನಲ್ಲಿ ನನ್ನ 25 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇನೆ' ಎಂದು ಅವರು ಹೇಳಿದ್ದಾರೆ. ಜೂನ್ 2021 ರ ಹೊತ್ತಿಗೆ, ಸ್ಕ್ಯಾನ್‌ಗಳು ಇವರ ದೇಹದಲ್ಲಿ ಯಾವುದೇ ಅಳೆಯಬಹುದಾದ ಕ್ಯಾನ್ಸರ್ ಕೋಶಗಳನ್ನು ತೋರಿಸಲಿಲ್ಲ ಮತ್ತು ಆಕೆಯನ್ನು ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಗಿದೆ. ಹಾಗಿದ್ದರೂ 2023ರ ಡಿಸೆಂಬರ್‌ವರೆಗೂ ಅವರು ಟ್ರಯಲ್‌ನ ಭಾಗವಾಗಿ ಇರಲಿದ್ದಾರೆ.

click me!