ಕರ್ನಾಟಕದ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ’

Published : Jul 04, 2022, 08:43 AM ISTUpdated : Jul 04, 2022, 08:46 AM IST
ಕರ್ನಾಟಕದ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ’

ಸಾರಾಂಶ

* ಕರ್ನಾಟಕದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ-2022’ ಸ್ಪರ್ಧೆಯಲ್ಲಿ ವಿಜೇತೆ * ಮುಂಬೈನಲ್ಲಿ ನಡೆದ ಸ್ಪರ್ಧೆ * ರಾಜಸ್ಥಾನದ ರುಬಲ್‌ ಶೆಖಾವತ್‌ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ 1ನೇ ಹಾಗೂ 2ನೇ ರನ್ನರ್‌ ಅಪ್‌

ಮುಂಬೈ(ಜು.04): ಕರ್ನಾಟಕದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ-2022’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿವಿಜೇತರಾಗಿದ್ದು, ರಾಜಸ್ಥಾನದ ರುಬಲ್‌ ಶೆಖಾವತ್‌ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ 1ನೇ ಹಾಗೂ 2ನೇ ರನ್ನರ್‌ ಅಪ್‌ ಆದರು.

ದಕ್ಷಿಣ ಕನ್ನಡ ಮೂಲದ 21 ವರ್ಷದ ಸಿನಿ, ಮುಂಬೈನಲ್ಲಿ ಹುಟ್ಟಿಬೆಳೆದವರು. ಭರತನಾಟ್ಯ ಕಲಾವಿದೆಯಾಗಿದ್ದಾರೆ. ಇವರು ಮುಂದೆ ಮಿಸ್‌ ವಲ್ಡ್‌ರ್‍ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್‌ ಇಂಡಿಯಾ ಸ್ಪರ್ಧೆಗೆ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೊರಿಯಾ, ಮಿಥಾಲಿ ರಾಜ್‌ ಮುಂತಾದವರು ಜೂರಿಗಳಾಗಿದ್ದರು.

ಸಿನಿ ಶೆಟ್ಟಿ ಯಾರು?

ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದರು. ಆದರೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಲದವರು ಮತ್ತು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಹೀಗಿದ್ದರೂ ಅವರಿಗೆ ನೃತ್ಯ ಎಂದರೆ ಬಹಳ ಅಚ್ಚುಮೆಚ್ಚು. ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ತನ್ನ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು.

ಇನ್ನುಉ ಮಿಸ್ ಇಂಡಿಯಾ 2022 ರನ್ನರ್ ಅಪ್ ರುಬಲ್ ಶೇಖಾವತ್ ನೃತ್ಯ, ನಟನೆ, ಚಿತ್ರಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಬ್ಯಾಡ್ಮಿಂಟನ್ ಇಷ್ಟಪಡುತ್ತಾರೆ. ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಶಿನಾತಾ ಚೌಹಾಣ್ ಒಬ್ಬ ವಿದ್ವಾಂಸರಾಗಿದ್ದಾರೆ ಮತ್ತು ಯಾವಾಗಲೂ ನಾಯಕತ್ವದ ಪಾತ್ರಗಳನ್ನು ವಹಿಸಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?