ಹಿರಿಯರು ಮನೆಯಲ್ಲಿದ್ದರೆ ಹೆರಿಗೆ ನಂತ್ರ ನೀರು ಕುಡಿಯಲು ಬಿಡೋಲ್ಲ, ಇದು ಒಳ್ಳೇದಾ?

By Suvarna NewsFirst Published Dec 27, 2022, 3:53 PM IST
Highlights

ಮಗು ಜನಿಸಿದ ನಂತ್ರ ತಾಯಿಯಾದವಳ ಜವಾಬ್ದಾರಿ ಹೆಚ್ಚಿರುತ್ತದೆ. ಆಕೆ ಬೇಗ ಚೇತರಿಸಿಕೊಂಡರೆ ಮಗುವಿನ ಆರೋಗ್ಯದ ಬಗ್ಗೆ ಗಮನ ನೀಡಬಹುದು. ಆಕೆ ಶೀಘ್ರ ಗುಣಮುಖವಾಗಬೇಕೆಂದ್ರೆ ಆಹಾರ, ನೀರಿನ ಬಗ್ಗೆ ಗಮನ ನೀಡ್ಬೇಕು.
 

ಗರ್ಭಿಣಿಯರಿಗೆ, ಹೆರಿಗೆ ನಂತ್ರ ತಾಯಿಗೆ ಹಿರಿಯರು ಅನೇಕ ಸಲಹೆಗಳನ್ನು ನೀಡುತ್ತಾರೆ. ಅನಾದಿ ಕಾಲದಿಂದಲೂ ಕೆಲ ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗ್ತಿದೆ. ಕೆಲವೊಂದು ಕೆಲಸವನ್ನು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಇದ್ರಲ್ಲಿ ಕೆಲವೊಂದಕ್ಕೆ ವೈಜ್ಞಾನಿಕ ಕಾರಣವಿಲ್ಲ. ಅದು ಎಲ್ಲಿಂದ ಹುಟ್ಟಿಕೊಂಡಿತು ಎನ್ನುವುದು ಕೂಡ ಗೊತ್ತಿಲ್ಲ. ಹೆರಿಗೆ ನಂತ್ರ ಮಹಿಳೆಗೆ ನೀಡಲಾಗುವ ಸಲಹೆಗಳಲ್ಲಿ ಹೆರಿಗೆಯ ನಂತರ ತಾಯಿ ಕಡಿಮೆ ನೀರನ್ನು ಕುಡಿಯಬೇಕು ಎಂಬುದು ಕೂಡ ಸೇರಿದೆ.

ಹೆರಿಗೆ (Childbirth) ಯ ನಂತರ ಹೆಚ್ಚಿನ ನೀರ (Water) ನ್ನು ಕುಡಿಯುವುದ್ರಿಂದ ಚೇತರಿಸಿಕೊಳ್ಳುವುದು ನಿಧಾನವಾಗುತ್ತದೆ. ಅದ್ರಲ್ಲೂ ಸಿಸೇರಿಯನ್ ಹೆರಿಗೆಯಾಗಿರುವ ಮಹಿಳೆಯರು ಕನಿಷ್ಟ ನೀರನ್ನು ಕುಡಿಯಬೇಕೆಂದು ಹೇಳಲಾಗುತ್ತದೆ. ಹೆರಿಗೆಯ ನಂತರ ಹೆಚ್ಚು ನೀರು ಕುಡಿಯುವುದರಿಂದ ಹೊಲಿಗೆ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಹಿಳೆಯ ಚೇತರಿಕೆ ನಿಧಾನವಾಗುತ್ತದೆ ಎಂದು ನಂಬಲಾಗಿದೆ. ಸಿಸೇರಿಯನ್ ನಂತರ ನಿಜವಾಗಿಯೂ ಕಡಿಮೆ ನೀರು ಕುಡಿಯಬೇಕೇ ಎನ್ನುವ ಬಗ್ಗೆ ತಜ್ಞರು ಏನು ಹೇಳ್ತಾರೆ ಎಂಬುದನ್ನು ನಾವಿಂದು ಹೇಳ್ತೆವೆ.

ಗರ್ಭಾವಸ್ಥೆಯಲ್ಲಿ ಹೆಚ್ಚು ಹೊತ್ತು ನಿಲ್ಲೋದು ಡೇಂಜರಾ?

ಹೆರಿಗೆ ನಂತ್ರ ಹೆಚ್ಚು ನೀರು ಕುಡಿಯೋದು ತಪ್ಪಾ? : ಸಿಸೇರಿಯನ್ ನಂತರ ಕಡಿಮೆ ನೀರು ಕುಡಿಯುವುದು ಒಳ್ಳೆಯದಲ್ಲ. ಮಹಿಳೆ 3 ರಿಂದ 4 ಲೀಟರ್ ನೀರನ್ನು ಕುಡಿಯಬಹುದು ಎನ್ನುತ್ತಾರೆ ವೈದ್ಯ (Doctor) ರು. ಇದರಿಂದ ತಾಯಿಗೆ ತಲೆನೋವು ಬರುವುದಿಲ್ಲ. ಬಿಪಿ ಸಮತೋಲನದಲ್ಲಿರುತ್ತದೆ. ದೇಹದಲ್ಲಾಗಿರುವ ಗಾಯ ಬೇಗ ವಾಸಿಯಾಗುತ್ತದೆ ಎನ್ನುತ್ತಾರೆ ವೈದ್ಯರು. ನೀರು ನಮ್ಮ ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುವ ಕೆಲಸ ಮಾಡುತ್ತದೆ. ಹೆರಿಗೆ ನಂತ್ರ ಮಹಿಳೆ ಹೆಚ್ಚೆಚ್ಚು ನೀರು ಕುಡಿದ್ರೆ  ವೇಗವಾಗಿ ಆಕೆ ದೇಹದಲ್ಲಿರುವ ವಿಷ ಹೊರಹೋಗುತ್ತದೆ.  

ಅಜ್ವೈನಾ ನೀರು ಕುಡಿಯೋದು ಸರಿಯೇ ? : ಹೆರಿಗೆ ನಂತ್ರ ಮೂರು ತಿಂಗಳು ತಾಯಿಯಾದವಳು ಕಟ್ಟುನಿಟ್ಟಿನ ಪಥ್ಯ ಮಾಡಬೇಕು ಎನ್ನಲಾಗುತ್ತದೆ. ಕೆಲವು ಕಡೆ ತಾಯಿಗೆ ಬೆಳಿಗ್ಗೆ ಆಹಾರ ನೀಡುವುದಿಲ್ಲ. ಕಾಫಿಯಲ್ಲಿ ಉಪಹಾರ ಮುಗಿಸುತ್ತಾರೆ. ಗೋಧಿ ಚಪಾತಿ ಬಿಟ್ಟರೆ ಜೀರಿಗೆ ಮತ್ತು ಅಜ್ವೈನದ ನೀರನ್ನು ನೀಡ್ತಾರೆ. ಬ್ರೆಡ್ ಸೇವನೆಗೆ ಮಾತ್ರ ಒಪ್ಪಿಗೆ ನೀಡುತ್ತಾರೆ. ಕಹಿ ಕಷಾಯದ ಜೊತೆ ಡ್ರೈ ಫ್ರೂಟ್ಸ್ ಉಂಡೆಗಳನ್ನು ಮಾತ್ರ ನೀಡುವ ಜನರಿದ್ದಾರೆ. ವೈದ್ಯರ ಪ್ರಕಾರ, ನೀವು ಅಜ್ವೈನ ಹಾಗೂ ಜಿರಿಗೆ ನೀರನ್ನು ಕುಡಿಯಬಹುದು. ಆದ್ರೆ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಮಾತ್ರ ಕಡಿಮೆ ಮಾಡಬೇಡಿ. ಇದು ನಿಮ್ಮ ತಲೆನೋವಿಗೆ ಕಾರಣವಾಗುತ್ತದೆ. ಮೂತ್ರದ ಸೋಂಕು, ಬೆನ್ನುಮೂಳೆಯ ನೋವಿಗೆ ಮೂಲವಾಗುತ್ತದೆ. ಬೇಗ ಚೇತರಿಕೆ ಕಾಣಬೇಕು ಎನ್ನುವವರು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕೂಡ ಕುಡಿಯಬೇಕು. 

Freedom: ಸಂಬಂಧ ಚೆನ್ನಾಗಿರಬೇಕು ಅಂದ್ರೆ ಮೌನವಾಗಿರ್ಲೇಬೇಕಾ ಮಹಿಳೆಯರು?

ತಣ್ಣನೆಯ ಆಹಾರ, ಹಾಲು : ಹೆರಿಗೆಯಾದ್ಮೇಲೆ ತಾಯಿಗೆ ತಣ್ಣನೆಯ ಆಹಾರ, ಹಾಲನ್ನು ನೀಡುವುದಿಲ್ಲ. ತಣ್ಣಗಿರುವ ಹಾಲು ಎದೆ ಹಾಲಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ರೆ ತಾಯಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದಾದ್ರೆ ಆಕೆಯಿಂದ ಮಗುವಿಗೆ ನೆಗಡಿಯಾಗುವ ಸಂಭವವಿರುತ್ತದೆ ಎನ್ನುತ್ತಾರೆ ವೈದ್ಯರು.

ಈ ಕಾರಣಕ್ಕೆ ಕಡಿಮೆಯಾಗುತ್ತೆ ಎದೆಹಾಲು : ತಣ್ಣನೆಯ ಹಾಲು ಎದೆಹಾಲಿನ ಮೇಲೆ ಪರಿಣಾಮ ಬೀರದೆ ಇರಬಹುದು ಆದ್ರೆ ಕಡಿಮೆ ನೀರು ಸೇವನೆ ಎದೆ ಹಾಲಿನ ಮೇಲೆ ಪ್ರಭಾವ ಬೀರುತ್ತದೆ. ದೇಹ ನಿರ್ಜಲಿಕರಣಗೊಂಡಾಗ ಎದೆಹಾಲು ಉತ್ಪತ್ತಿಯಾಗುವುದಿಲ್ಲ. ಎದೆ ಹಾಲನ್ನು ತಯಾರಿಸಲು ದೇಹದಲ್ಲಿ ದ್ರವ ಇರಬೇಕು.  ಎದೆ ಹಾಲು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದರೆ ಮಗುವಿಗೆ ಪೌಷ್ಟಿಕಾಂಶ ಸಿಗುವುದಿಲ್ಲ. ಇದು ತಾಯಿಗೆ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಡಬಹುದು. 

ಹೆರಿಗೆ ನಂತ್ರ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದು ಬಹಳ ಮುಖ್ಯ. ಆದ್ರೆ ತಾಯಿಯಾದವಳು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯವಾಗುತ್ತದೆ. ಅವರ ಸೂಚನೆಯಂತೆ ಆಹಾರ ಸೇವನೆ ಮಾಡಬೇಕಾಗುತ್ತದೆ. 
 

click me!