
ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ಮಾತಿದೆ. ಈ ಮಾತು ನೂರಕ್ಕೆ ನೂರು ಸತ್ಯ. ಅನೇಕ ಸಂದರ್ಭಗಳಲ್ಲಿ ನಾವು ಮೌನವಾಗಿದ್ದರೆ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತದೆ. ಆದ್ರೆ ಈ ಮೌನ ಎನ್ನುವುದನ್ನು ನಮ್ಮ ಸಮಾಜದಲ್ಲಿ ಹೆಣ್ಣಿಗೆ ಹೆಚ್ಚು ಆಪ್ತವಾಗಿದೆ. ಹೆಣ್ಮಕ್ಕಳು ನಾಲ್ಕು ಜನರ ಮುಂದೆ ಮಾತನಾಡ್ಬಾರದು ಎನ್ನುವ ರೂಢಿ ಅನೇಕಾನೇಕ ವರ್ಷಗಳಿಂದ ಬೆಳೆದು ಬಂದಿದೆ. ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದರೂ, ಆಕೆಯೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಅನೇಕ ಕಡೆ ಮಹಿಳೆಯಾದವಳು ಕಡಿಮೆ ಮಾತನಾಡಬೇಕು ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಿದ್ದಾರೆ.
ರಸ್ತೆ (Road) ಯಲ್ಲಿ ಇಬ್ಬರು ಪುರುಷರ ಮಧ್ಯೆ ಗಲಾಟೆಯಾಗ್ತಿದ್ದರೆ ಅದನ್ನು ನೋಡುವ ಜನರಿಗಿಂತ ಹೆಣ್ಣು ದೊಡ್ಡ ಧ್ವನಿ (Voice) ಯಲ್ಲಿ ಮಾತನಾಡ್ತಿದ್ದರೆ ಬಗ್ಗಿ ನೋಡುವವರೇ ಹೆಚ್ಚು. ಹೆಣ್ಣಿಗೆ, ತನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಎತ್ತಿ ಹೇಳುವ ಸ್ವಾತಂತ್ರ್ಯ (Freedom) ನಮ್ಮಲ್ಲಿ ಈಗಲೂ ಸರಿಯಾಗಿ ಸಿಕ್ಕಿಲ್ಲವೆಂದ್ರೆ ತಪ್ಪಾಗಲಾರದು.
ಬಾಲ್ಯದಲ್ಲಿಯೇ ಶುರುವಾಗುತ್ತೆ ಕಲಿಕೆ : ಬಾಲ್ಯದಲ್ಲಿಯೇ ಲಿಂಗ ತಾರತಮ್ಯ ಶುರುವಾಗಿರುತ್ತದೆ. ಮನೆಯಲ್ಲಿ ಗಂಡು ಮಗು ಹಾಗೂ ಹೆಣ್ಣು ಮಗುವಿದ್ರೆ ಹೆಣ್ಣು ಮಗುವಿಗೆ ವಿಶೇಷ ರೂಲ್ಸ್ ಅನ್ವಯವಾಗುತ್ತಿರುತ್ತದೆ. ಹೆಚ್ಚು ಕಿರುಚಾಡಬೇಡ, ದೊಡ್ಡ ಧ್ವನಿಯಲ್ಲಿ ಮಾತನಾಡಬೇಡ ಎಂದು ಪಾಲಕರು ಹೇಳ್ತಿರುತ್ತಾರೆ. ನೀವು ಹೆಣ್ಮಗು ತಗ್ಗಿ – ಬಗ್ಗಿ ನಡೆಯೋದನ್ನು ಕಲಿಯಬೇಕೆಂದು ತಲೆತುಂಬುತ್ತಾರೆ.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ದೂರವಿರ್ತಾಳೆ ಮಹಿಳೆ : ಮನೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿರಲಿ ಆ ಸಂದರ್ಭದಲ್ಲಿ ಮಹಿಳೆಯರನ್ನು ಬಹುತೇಕ ದೂರವಿಡುತ್ತಾರೆ. ಧೈರ್ಯಮಾಡಿ ಆಕೆ ಮಾತನಾಡಿದ್ರೆ, ಇಲ್ಲಿ ನಿಮ್ಮ ಸಲಹೆ ಕೇಳುವವರು ಯಾರಿಲ್ಲವೆಂದೂ, ಗಂಡಸರ ವಿಷ್ಯದಲ್ಲಿ ನಿಮಗೇನು ಕೆಲಸವೆಂದೂ, ನಿನಗಲ್ಲ ಇದು ಅರ್ಥವಾಗುವುದಿಲ್ಲವೆಂದು ಗದರಿಯೋ ಅವರನ್ನು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತದೆ.
Baby Care: ಪುಟ್ಟ ಕಂದಮ್ಮಗಳಿಗೆ ಮುತ್ತು ಕೊಡೋ ಮುನ್ನ!
ಮಹಿಳೆ ಮೇಲಿರುತ್ತದೆ ನಿರೀಕ್ಷೆ : ನಮ್ಮ ಕುಟುಂಬ ಮತ್ತು ಸಮಾಜ ಮಹಿಳೆ ಮೇಲೆ ವಿಭಿನ್ನ ನಿರೀಕ್ಷೆಗಳನ್ನು ಹೊಂದಿರುತ್ತದೆ. ಇದರ ಹಿಂದೆ ಯಾವುದೇ ಕಾರಣವಿರಬಹುದು. ಹೆಚ್ಚಿನ ಜನರು ಮಹಿಳೆಯರು ನಿಧಾನವಾಗಿ ನಡೆಯಬೇಕು ಎಂದು ನಿರೀಕ್ಷಿಸುತ್ತಾರೆ. ನಿಧಾನವಾಗಿ ಮಾತನಾಡಿ ಮತ್ತು ಜಾಗರೂಕರಾಗಿರಿ ಎಂದು ಯಾವಾಗ್ಲೂ ಸಲಹೆ ನೀಡ್ತಿರುತ್ತಾರೆ.
ಬದಲಾಗದ ಸಮಾಜ : ನಾವೆಷ್ಟೆ ಅಭಿವೃದ್ಧಿ ಹೊಂದಿದ್ದೇವೆ, ಡಿಜಿಟಲ್ ಯುಗದಲ್ಲಿದ್ದೇವೆ ಎಂದ್ರೂ ಹೆಣ್ಣನ್ನು ನೋಡುವ ದೃಷ್ಟಿ ಮಾತ್ರ ಇನ್ನೂ ಬದಲಾಗಿಲ್ಲ. ಲಿಂಗ ತಾರತಮ್ಯ ಮುಂದುವರೆದುಕೊಂಡು ಬಂದಿದೆ. ಪುರುಷನಿಗೆ ವಾಕ್ ಸ್ವಾತಂತ್ರ್ಯವಿದೆ. ಆದ್ರೆ ಮಹಿಳೆ ಇದನ್ನು ಕಸಿದುಕೊಳ್ಳಬೇಕಾಗಿದೆ. ಮನೆಯಲ್ಲಿ ಅಂತಿಮ ನಿರ್ಧಾರ ಯಾವಾಗ್ಲೂ ಪುರುಷನಿಗೆ ನೀಡಲಾಗುತ್ತದೆ.
Skin Care: ಚರ್ಮದ ಆರೈಕೆಗೆ ಹ್ಯಾಂಡ್ ಕ್ರೀಮ್ ಬಳಸೋದು ಅಗತ್ಯ ಯಾಕೆ ?
ಮೃದುವಾಗಿ ಮಾತನಾಡಿದ್ರೆ ನೀವು ದುರ್ಬಲರಲ್ಲ : ಮೃದುವಾಗಿ ಮಾತನಾಡುವುದು ಕೆಲ ಮಹಿಳೆಯರ ಸ್ವಭಾವ. ಹಾಗಂತ ಅವರನ್ನು ದುರ್ಬಲರನ್ನಾಗಿ ನೋಡುವ ಅಗತ್ಯವಿಲ್ಲ. ಕೆಲ ವಿಷ್ಯಗಳನ್ನು ಮಹಿಳೆಯರು ಶಾಂತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಕಾರಣಕ್ಕೆ ಅವರು ಮೌನವಾಗಿರುತ್ತದೆ. ಹಾಗಂತ ಅವರ ಕೈನಲ್ಲಿ ಏನೂ ಸಾಧ್ಯವಿಲ್ಲ ಎಂಬುದನ್ನು ಇದು ಸೂಚಿಸುವುದಿಲ್ಲ. ಹೆಣ್ಣಾದವಳು ಹೆಚ್ಚು ಮಾತನಾಡಬಾರದು, ನಯ – ನಾಜೂಕಿನಿಂದ ಇರಬೇಕು, ದೊಡ್ಡದಾಗಿ ಕಿರುಚಬಾರದು ಈ ಎಲ್ಲ ಮಾತಿಗೆ ಯಾವುದೇ ವಿಶೇಷ ಅರ್ಥವಿಲ್ಲ. ಮಹಿಳೆ ಮೌನವಾಗಿರುವುದ್ರಿಂದ ಯಾವುದೇ ಪ್ರಯೋಜನವಿಲ್ಲ.
ಮೌನವಾಗಿರಬೇಡಿ : ಜೀವನದಲ್ಲಿ ಎಲ್ಲಾ ಸಮಯದಲ್ಲೂ ಮೌನವಾಗಿರುವುದು ಸೂಕ್ತವಲ್ಲ. ಎಲ್ಲಿ ಪಾಪ ಹೆಚ್ಚುತ್ತಿದೆ, ಎಲ್ಲಿ ಮೋಸ ನಡೆಯುತ್ತಿದೆ, ಅಲ್ಲಿ ಮೌನವಾಗಿರುವುದಕ್ಕಿಂತ ದೊಡ್ಡ ಅಪರಾಧ ಬೇರೊಂದಿಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಸಮಸ್ಯೆ ಎಲ್ಲರ ಬಾಳಲ್ಲಿ ಬರುತ್ತದೆ. ನಮ್ಮ ಮುಂದೆ ಬಲಶಾಲಿಗಳಿದ್ದಾರೆ ಎನ್ನುವ ಕಾರಣಕ್ಕೆ ನಾವು ಮಾತನಾಡದೆ ಹೋಗ್ತೇವೆ. ಇದ್ರಿಂದಾಗಿ ಹೊಸ ಸಮಸ್ಯೆಗೆ ನಾವೇ ಜನ್ಮ ನೀಡ್ತೇವೆ. ಹೆಣ್ಣಾಗಿರಲಿ ಇಲ್ಲ ಗಂಡಾಗಿರಲಿ ಸಮಸ್ಯೆಯನ್ನು ಎತ್ತಿ ಹೇಳಿದ್ರೆ ಆ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ನಿಮ್ಮ ಮನಸ್ಸು ಹಗುರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.