Dr Akhila Joshi: ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ...

Published : Jul 02, 2025, 09:25 PM IST
 Mistake most of the women make regarding food

ಸಾರಾಂಶ

ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು ಕಾರಣವೇನು? ಅವರು ಮಾಡ್ತಿರೋ ತಪ್ಪೇನು? ಖ್ಯಾತ ವೈದ್ಯೆ ಮಾತು ಕೇಳಿ... 

ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ...

Dr Akhila Joshi about big mistake most of the women make regarding food suc

ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು ಕಾರಣವೇನು? ಅವರು ಮಾಡ್ತಿರೋ ತಪ್ಪೇನು? ಖ್ಯಾತ ವೈದ್ಯೆ ಮಾತು ಕೇಳಿ...

ಹೆಂಗಸರು ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ಕೆಲವೊಂದು ವಿಷಯಗಳಲ್ಲಿ ಹಲವು ಮಹಿಳೆಯರು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಗೊತ್ತಿಲ್ಲದೇ ಅನಾರೋಗ್ಯ ಅವರ ದೇಹವನ್ನು ಬಾಧಿಸುತ್ತಿದೆ. ಎಷ್ಟೆಲ್ಲಾ ಕೇರ್‌ ತೆಗೆದುಕೊಂಡರೂ, ಅದೂ-ಇದೂ ಅಂತೆಲ್ಲಾ ತಿನ್ನದೇ ಇದ್ದರೂ ಪದೇ ಪದೇ ಆರೋಗ್ಯ ಏಕೆ ಕೆಡುತ್ತಿದೆ ಎಂದು ಹಲವು ಮಹಿಳೆಯರು ಹೇಳುವುದು ಸಹಜ. ಆದರೆ ಅವರಿಗೆ ಗೊತ್ತಿಲ್ಲದೆಯೇ ಬಹುದೊಡ್ಡ ತಪ್ಪು ಏನು ಮಾಡುತ್ತಿದ್ದಾರೆ ಎನ್ನುವುದಕ್ಕೆ ಡಾ.ಅಖಿಲಾ ಜೋಶಿ ಸುಂದರವಾಗಿ ವರ್ಣಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರು, ಬಹುತೇಕ ಮಹಿಳೆಯರು ಅನ್ನನೋ, ಇನ್ನೇನೋ ಆಹಾರವೋ ವೇಸ್ಟ್‌ ಆಗಬಾರದು ಎನ್ನುವ ಕಾರಣಕ್ಕೆ ಅದನ್ನು ತಿನ್ನುವುದು ಮಾಮೂಲಾಗಿದೆ. ಅನ್ನ ಅಥವಾ ಇನ್ನಿತರ ಆಹಾರ ಮಿಕ್ಕಿದರೆ ಅದನ್ನು ವೇಸ್ಟ್‌ ಮಾಡಬಾರದು ಎನ್ನುವ ಕಾರಣಕ್ಕೆ ದೇಹಕ್ಕೆ ಬೇಡವಾಗಿದ್ದರೂ ಅದನ್ನು ತಿಂದು ಬಿಡುತ್ತಾರೆ. ಕೆಲವೊಮ್ಮೆ ಹಿಂದಿನ ದಿನ ಮಿಕ್ಕಿದ ಆಹಾರಗಳನ್ನೂ ವೇಸ್ಟ್‌ ಆಗಬಾರದು ಎನ್ನುವ ಕಾರಣಕ್ಕೆ ತಿನ್ನುವುದು ಇದೆ. ಇವೆರಡು ಕೂಡ ದೇಹಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದಿದ್ದಾರೆ ವೈದ್ಯೆ.

ಚಿಕ್ಕಂದಿನಿಂದಲೂ ನಾವೆಲ್ಲಾ ಕೇಳಿಕೊಂಡು ಬಂದಿರುವುದು ಏನೆಂದರೆ ಆಹಾರ ವೇಸ್ಟ್‌ ಮಾಡಬಾರದು, ರೈತರು ಅದನ್ನು ತುಂಬಾ ಕಷ್ಟಪಟ್ಟು ಬೆಳೆದಿರುತ್ತಾರೆ ಎನ್ನುವುದು. ಇದು ನಿಜ ಕೂಡ. ಆದರೆ ಹಾಗೆಂದು ಆಹಾರ ಹೆಚ್ಚಾಯಿತು ಎಂದು ದೇಹಕ್ಕೆ ಬೇಡದಿದ್ದರೂ ಅದನ್ನು ತಿನ್ನುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಎಷ್ಟೋ ಮಹಿಳೆಯರು ನಾನು ಏನೂ ಕೆಟ್ಟದ್ದು ತಿನ್ನದಿದ್ದರೂ ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ. ಆದರೆ ಅವರಿಗೆ ತಾವು ಮಾಡುತ್ತಿರುವ ಈ ತಪ್ಪು ತಿಳಿಯುವುದೇ ಇಲ್ಲ ಎಂದಿದ್ದಾರೆ ಡಾ.ಅಖಿಲಾ ಜೋಶಿ.

ಒಂದು ವೇಳೆ ತಟ್ಟೆಯಲ್ಲಿ ಹೆಚ್ಚು ಮಿಕ್ಕಿತು ಎಂದು ತಿನ್ನುವವರು ನೀವಾಗಿದ್ದರೆ, ಮೊದಲಿಗೆ ಅಷ್ಟೆಲ್ಲಾ ಬಡಿಸಬೇಡಿ. ಎಷ್ಟು ಬೇಕೋ ಅಷ್ಟು ಬಡಿಸಿ. ಗಂಡನೋ, ಮಕ್ಕಳೋ ಅಗತ್ಯಬಿದ್ದರೆ ಮತ್ತೆ ಪುನಃ ಅವರಿಗೆ ಬಡಿಸಿ, ಅದನ್ನು ಬಿಟ್ಟು ಆರಂಭದಲ್ಲಿಯೇ ಅಗತ್ಯಕ್ಕಿಂತ ಹೆಚ್ಚು ಬಡಿಸಿ ನಂತರ ಆಹಾರ ವೇಸ್ಟ್‌ ಆಗುತ್ತದೆ ಎನ್ನುವ ಕಾರಣಕ್ಕೆ ತಿನ್ನುವುದನ್ನು ಮಾಡಬೇಡಿ, ಇದರಿಂದ ದೇಹಕ್ಕೆ ಸಮಸ್ಯೆ ಉಂಟಾಗುತ್ತದೆ. ಡಸ್ಟ್‌ಬಿನ್‌ ರೀತಿಯಲ್ಲಿ ನೀವು ಹೊಟ್ಟೆಗೆ ಹಾಕುತ್ತಾ ಹೋದರೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಆಗಿ, ಅನಾರೋಗ್ಯ ಬಾಧಿಸುತ್ತದೆ ಎಂದಿದ್ದಾರೆ ವೈದ್ಯೆ. ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಆಹಾರ ಮಾಡುವಾಗ, ಬಡಿಸುವಾಗ ಜಾಗೃತೆ ಇರಲಿ ಎನ್ನುವುದು ಅವರ ಮಾತು. ಆಹಾರ ತಜ್ಞರ ಪ್ರಕಾರ, ಆಹಾರ ವೇಸ್ಟ್‌ ಮಾಡಬಾರದು ಎನ್ನುವುದು ನಿಜ ಎಂದು ಹೀಗೆ ಮಿಕ್ಕಿದ ಆಹಾರ ತಿನ್ನಬೇಡಿ, ಆಹಾರ ವೇಸ್ಟ್‌ ಆಗುವುದೇ ಆದರೆ ಅದನ್ನು ಪ್ರಾಣಿ-ಪಕ್ಷಿಗಳಿಗೆ ಹಾಕಿ. ಆದರೆ ನೀವು ತಿನ್ನಬೇಡಿ ಎನ್ನುತ್ತಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!