ಸ್ವೀಟ್ ಇಲ್ಲದೆ ಹಬ್ಬವಿಲ್ಲ. ಬಗೆ ಬಗೆಯ ಸಿಹಿ ತಿಂಡಿಗಳು ಹಬ್ಬದ ಋತುವಿನಲ್ಲಿ ಮನೆ ತುಂಬುತ್ವೆ. ಯಾವುದು ತಿನ್ನೋದು, ಯಾವುದು ಬಿಡೋದು ಗೊತ್ತಾಗೋದಿಲ್ಲ. ಎಲ್ಲದರ ರುಚಿ ನೋಡ್ಬೇಕೆಂದ್ರೆ ಸಮಯ ಬೇಕು. ದೀರ್ಘಕಾಲ ಸ್ವೀಟ್ ಇಡೋದು ಹೇಗೆ?
ಹಬ್ಬವೆಂದ್ರೆ ಸಿಹಿ ಇರಲೇಬೇಕು. ಅದ್ರಲ್ಲೂ ದೀಪಾವಳಿ ಹಬ್ಬದಲ್ಲಿ ಸಿಹಿ ಇಲ್ಲವೆಂದ್ರೆ ಹೇಗೆ? ಬರೀ ಮನೆಯಲ್ಲಿ ಮಾಡಿದ ಸಿಹಿ ಮಾತ್ರವಲ್ಲ, ಅಲ್ಲಿ ಇಲ್ಲಿ ನೀಡಿದ ಸಿಹಿ ಕೂಡ ಮನೆಯಲ್ಲಿ ಜಾಗ ಪಡೆಯುತ್ತದೆ. ದೀಪಾವಳಿ ಶುಭ ಸಂದರ್ಭದಲ್ಲಿ ಉಡುಗೊರೆ ನೀಡುವ ಪದ್ಧತಿಯಿದೆ. ಅನೇಕರು ಸಿಹಿ ತಿಂಡಿಗಳನ್ನು ಉಡುಗೊರೆಯಾಗಿ ನೀಡ್ತಾರೆ. ಒಂದೇ ದಿನ ಅಷ್ಟೊಂದು ಸಿಹಿ ತಿನ್ನೋದು ಕಷ್ಟದ ಕೆಲಸ. ಹಾಗಂತ ತುಂಬಾ ದಿನ ಸ್ವೀಟನ್ನು ಇಡೋಕೆ ಆಗಲ್ಲ. ಯಾಕೆಂದ್ರೆ ಕೆಲ ಸ್ವೀಟ್, ಮೂರ್ನಾಲ್ಕು ದಿನದಲ್ಲೇ ವಾಸನೆ ಬರಲು ಶುರುವಾಗುತ್ತದೆ. ಇದ್ರಿಂದ ದುಬಾರಿ ಬೆಲೆಯ ಸ್ವೀಟುಗಳನ್ನು ಕಸಕ್ಕೆ ಎಸೆಯಬೇಕಾಗುತ್ತದೆ. ಸ್ವೀಟ್ ತುಂಬಾ ದಿನ ಚೆನ್ನಾಗಿರಬೇಕು, ತಿನ್ನಲು ಯೋಗ್ಯವಾಗಿರಬೇಕು ಎಂದಾದ್ರೆ ನೀವು ಕೆಲ ಟಿಪ್ಸ್ ಪಾಲನೆ ಮಾಡ್ಬೇಕಾಗುತ್ತದೆ. ನಾವಿಂದು ಸ್ವೀಟ್ ತುಂಬಾ ದಿನ ಚೆನ್ನಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಸಿಹಿ (Sweet) ತಿಂಡಿಗಳನ್ನು ಹೀಗೆ ರಕ್ಷಿಸಿ :
ಸ್ವೀಟ್ ಬಾಕ್ಸ್ (Box) ನಲ್ಲಿ ಇವುಗಳನ್ನು ಇಡಿ : ಪ್ರತಿಯೊಂದು ರೀತಿಯ ಸಿಹಿತಿಂಡಿಗಳನ್ನು ಸಂಗ್ರಹಿಸುವ ವಿಧಾನ ವಿಭಿನ್ನವಾಗಿರುತ್ತದೆ. ನಿಮ್ಮ ಮನೆಯಲ್ಲಿ ಡ್ರೈ ಸಿಹಿ (Dry sweet) ತಿಂಡಿಗಳಿದ್ದರೆ ಅವುಗಳನ್ನು ನೀವು ಸ್ವೀಟ್ ಬಾಕ್ಸ್ ನಲ್ಲಿ ಸಂಗ್ರಹಿಸಿ ಇಡಬೇಕು. ಏಕೆಂದರೆ ಸಿಹಿತಿಂಡಿಗಳನ್ನು ತುಂಬಿಕೊಂಡು ಬಂದಿರುವ ಬಾಕ್ಸ್ ನಲ್ಲಿ ಸ್ವೀಟ್ ಬೇಗ ಹಾಳಾಗುತ್ತದೆ. ಡ್ರೈ ಸಿಹಿತಿಂಡಿಗಳು ಗಾಳಿಗೆ ಒಡ್ಡಿಕೊಳ್ಳುವುದರಿಂದ ಬೇಗ ಒಡೆಯುತ್ತವೆ. ಹಾಗಾಗಿ ನೀವು ಡ್ರೈ ಸಿಹಿ ತಿಂಡಿಗಳನ್ನು ಯಾವಾಗ್ಲೂ ಸ್ವೀಟ್ ಬಾಕ್ಸ್ ನಲ್ಲಿ ಇಡಿ.
ಗಾಜಿನ ಜಾರ್ (Glass Jar ) ನಲ್ಲಿರಲಿ ಈ ಸ್ವೀಟ್ : ರಸ ಹೊಂದಿರುವ ಸಿಹಿ ತಿಂಡಿಗಳು ಬೇಗ ಹಾಳಾಗುವ ಸಾಧ್ಯತೆಯಿರುತ್ತವೆ. ಹಾಗಾಗಿ ಅವುಗಳ ಸಂಗ್ರಹಣೆ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ನೀವು ಜಾಮೂನ್, ರಸಗುಲ್ಲಾಗಳನ್ನು ಗ್ಲಾಸ್ ಜಾರ್ ನಲ್ಲಿ ಸಂಗ್ರಹಿಸಿಡುವುದು ಒಳ್ಳೆಯದು. ಇವುಗಳಿಗೆ ಗಾಳಿ ಸೋಕಿದ್ರೆ ಬೇಗ ಹಾಳಾಗುತ್ತವೆ. ಗಾಜಿನ ಜಾರ್ ನಲ್ಲಿ ಸಂಗ್ರಹಿಸಿದ್ರೆ ದೀರ್ಘಕಾಲ ಇಡಬಹುದು. ಗ್ಲಾಸ್ ಜಾರ್ ನಲ್ಲಿ ಸ್ವೀಟ್ ಇಡಬೇಕು ಎನ್ನುವ ಕಾರಣಕ್ಕೆ ಗುಲಾಬ್ ಜಾಮೂನ್ ಮತ್ತು ರಸಗುಲ್ಲಾ ಎರಡನ್ನೂ ಒಟ್ಟಿಗೆ ಇಡಬೇಡಿ. ಜಾಮೂನ್ (Jamun) ಬಳಸುವ ವೇಳೆ ನೀವು ಶುದ್ಧವಾದ ಮತ್ತು ಒಣಗಿದ ಸ್ಪೂನ್ ಬಳಕೆ ಮಾಡಿ.
Food Astro: ಸಿಹಿ ಪದಾರ್ಥ ಸೇವನೆ ಎಷ್ಟು ಒಳ್ಳೇದು? ಎಷ್ಟು ಕೆಟ್ಟದ್ದು?
ಒಟ್ಟಿಗೆ ಸಿಹಿ ತಿಂಡಿ ಇಡಬೇಡಿ : ದೀಪಾವಳಿ ಸಂದರ್ಭದಲ್ಲಿ ವೆರೈಟಿ, ವೆರೈಟಿ ಸಿಹಿ ತಿಂಡಿಗಳು ಮನೆಗೆ ಬರುತ್ತವೆ. ಅವುಗಳನ್ನು ನೀವು ಒಂದೇ ಕಡೆ ಇಡಬಾರದು. ಡ್ರೈ ಸಿಹಿ ತಿಂಡಿ ಹಾಗೂ ರಸವಿರುವ ಸಿಹಿ ತಿಂಡಿ ಎರಡನ್ನೂ ಒಟ್ಟಿಗೆ ಇಡಬಾರದು. ಯಾಕೆಂದ್ರೆ ರಸವಿರುವ ಸಿಹಿತಿಂಡಿ ಬೇಗ ಹಾಳಾಗುತ್ತದೆ. ಅದ್ರ ಜೊತೆಯಲ್ಲಿಯೇ ಡ್ರೈ ಸ್ವೀಟ್ ಇಟ್ಟರೆ ಅದು ಕೂಡ ಬೇಗ ಹಾಳಾಗುತ್ತದೆ. ಹಾಗಾಗಿ ಎಲ್ಲ ಸ್ವೀಟ್ ಗಳನ್ನು ನೀವು ಬೇರ್ಪಡಿಸಿ, ಬೇರೆ ಬೇರೆ ಜಾರ್ ಅಥವಾ ಬಾಕ್ಸ್ ನಲ್ಲಿ ಇಡಬೇಕು.
ಸಾದಾ ಅನ್ನ, ಬಾಸ್ಮತಿ ರೈಸ್ ರುಚಿ, ಪರಿಮಳ ಪಡೆಯಲು ಹೀಗ್ ಮಾಡಿ
ಫ್ರಿಜ್ (Fridge) ಒಳ್ಳೆಯ ಆಯ್ಕೆ : ತಿಂಗಳುಗಟ್ಟಲೆ ಸ್ವೀಟ್ ಸರಿಯಾಗಿ ಇರಬೇಕು ಅಂದ್ರೆ ಫ್ರಿಜ್ ಉತ್ತಮ ಆಯ್ಕೆಯಾಗಿದೆ. ಫ್ರಿಜ್ ನಲ್ಲಿ ಕೆಲ ಸ್ವೀಟ್ ತುಂಬಾ ದಿನ ಹಾಳಾಗುವುದಿಲ್ಲ. ಅದ್ರಿಂದ ವಾಸನೆ ಬರುವುದಿಲ್ಲ. ಆದ್ರೆ ಫ್ರಿಜ್ ನಲ್ಲಿ ಇಡುವಾಗ್ಲೂ ಕೆಲ ವಿಷ್ಯ ಗಮನಿಸಬೇಕು. ನೀವು ಬಾಕ್ಸ್ ನಲ್ಲಿ ಸ್ವೀಟ್ ಹಾಕಿಟ್ಟರೆ ಒಳ್ಳೆಯದು. ಫ್ರಿಜ್ ನಲ್ಲಿ ಸ್ವೀಟ್ ಬಾಕ್ಸ್ ತೆರೆದಿಟ್ಟರೆ ಅದು ಹಾಳಾಗುತ್ತದೆ. ಚಳಿ ವಾತಾವರಣದಲ್ಲಿ ಸ್ವೀಟ್ ಚೆನ್ನಾಗಿರುತ್ತದೆ. ಸಾಮಾನ್ಯ ತಾಪಮಾನದಲ್ಲಿ ಸ್ವೀಟ್ ಬೇಗ ಹಾಳಾಗುತ್ತದೆ.