ಉದ್ಯೋಗದಲ್ಲಿರುವ ಮಹಿಳೆಯರು ಗರ್ಭ ಧರಿಸುತ್ತಿದ್ದಂತೆ ಕೆಲಸಕ್ಕೆ ವಿದಾಯ ಹೇಳ್ತಾರೆ. ಮಕ್ಕಳ ಜವಾಬ್ದಾರಿ ಹೆಗಲ ಮೇಲೆ ಬರುವ ಕಾರಣ ವೃತ್ತಿ ಜೀವನ ಹಳ್ಳ ಹಿಡಿಯುತ್ತದೆ. ಮಗುವಿನ ಪಾಲನೆ ಜೊತೆ ಕೆಲಸ ಮಾಡ್ಬೇಕು ಎನ್ನುವ ಮಹಿಳೆಯರಿಗೆ ನ್ಯಾಷನಲ್ ಕ್ರಿಚ್ ಯೋಜನೆ ಸಹಾಯ ಮಾಡ್ತಿದೆ.
ಮಕ್ಕಳಾದ್ಮೇಲೆ ಪಾಲಕರ ಜವಾಬ್ದಾರಿ ಹೆಚ್ಚುತ್ತದೆ. ಅದ್ರಲ್ಲೂ ವಿಶೇಷವಾಗಿ ಮಹಿಳೆಗೆ ಮನೆ ಹಾಗೂ ಉದ್ಯೋಗ ಎರಡನ್ನೂ ನೋಡಿಕೊಳ್ಳೋದು ಕಷ್ಟ. ಮಕ್ಕಳ ಪಾಲನೆ ಮಹಿಳೆಯರ ಮೊದಲ ಆದ್ಯತೆಯಾಗುತ್ತದೆ. ಮಕ್ಕಳ ಪಾಲನೆಗೆ ಜನರಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಕೆಲಸ ಬಿಡ್ತಾರೆ. ಭಾರತದಲ್ಲಿ ಮದುವೆಯಾದ್ಮೇಲೆ ಹಾಗೂ ಮಕ್ಕಳಾದ್ಮೇಲೆ ಕೆಲಸ ಬಿಡುವ ಮಹಿಳೆಯರ ಸಂಖ್ಯೆ ಬಹಳಷ್ಟಿದೆ. ಮಹಿಳೆಯರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ರಾಷ್ಟ್ರೀಯ ಶಿಶುವಿಹಾರ ಯೋಜನೆಯನ್ನು ಜಾರಿಗೆ ತಂದಿದೆ. ನಾವಿಂದು ರಾಷ್ಟ್ರೀಯ ಶಿಶುವಿಹಾರ ಯೋಜನೆ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ತಾಯಂದಿರಿಗೆ ನೆರವಾಗ್ತಿದೆ ರಾಷ್ಟ್ರೀಯ (National) ಶಿಶುವಿಹಾರ ಯೋಜನೆ (Plan) : ರಾಷ್ಟ್ರೀಯ ಶಿಶುವಿಹಾರ ಯೋಜನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಜಾರಿಗೊಳಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. 2017 ರ ಜನವರಿ 1 ರಿಂದ ರಾಜ್ಯ (State) ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯನ್ನು ಮೊದಲು ರಾಜೀವ್ ಗಾಂಧಿ ರಾಷ್ಟ್ರೀಯ ಶಿಶುವಿಹಾರ (Kindergarten) ಯೋಜನೆ ಎಂದು ಹೆಸರಿಸಲಾಗಿತ್ತು. ಶಿಶುವಿಹಾರ (ಕ್ರೆಚ್ ) ಇದು, ಪಾಲಕರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಬಿಡುವ ಸ್ಥಳ. ಅಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ವಾತಾವರಣವನ್ನು ಒದಗಿಸಲಾಗುತ್ತದೆ. ಸೆಪ್ಟೆಂಬರ್ 21, 2020ರ ಪ್ರಕಾರ, ದೇಶಾದ್ಯಂತ 6004 ಶಿಶುವಿಹಾರಗಳು ಕಾರ್ಯನಿರ್ವಹಿಸುತ್ತಿವೆ. ರಾಜೀವ್ ಗಾಂಧಿ ರಾಷ್ಟ್ರೀಯ ಶಿಶುಪಾಲನಾ ಯೋಜನೆಯಡಿ ನಿರ್ಮಿಸಲಾದ ಶಿಶುವಿಹಾರಗಳು ಸೇರಿದಂತೆ ಭಾರತದಲ್ಲಿ ಒಟ್ಟು 21012 ಶಿಶುವಿಹಾರಗಳಿವೆ. ಯುಪಿಯೊಂದರಲ್ಲೇ 1724 ಸರ್ಕಾರಿ ಡೇ ಕೇರ್ ಸೆಂಟರ್‌ಗಳಿವೆ. ಬಹುತೇಕ ಈ ಎಲ್ಲಾ ಕೇಂದ್ರಗಳನ್ನು ಸರ್ಕಾರಿ ಕಟ್ಟಡಗಳಲ್ಲಿಯೇ ನಿರ್ಮಿಸಲಾಗಿದೆ.
Women's Health: ಹಿಂಗೆಲ್ಲ ಆದ್ರೆ ನಿಮ್ಮ ಯೋನಿ ಕ್ಲೀನ್ ಇಲ್ಲ ಎಂದರ್ಥ
ತಿಂಗಳಲ್ಲಿ ಎಷ್ಟು ದಿನ ಕೆಲಸ ಮಾಡುತ್ತೆ ಶಿಶುವಿಹಾರ ?: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಒದಗಿಸಿದ ಮಾಹಿತಿಯ ಪ್ರಕಾರ, ಶಿಶುವಿಹಾರವು ತಿಂಗಳಿಗೆ 26 ದಿನಗಳವರೆಗೆ 7 ರಿಂದ 7.5 ಗಂಟೆಗಳವರೆಗೆ ತೆರೆದಿರುತ್ತದೆ. ಶಿಶುವಿಹಾರದಲ್ಲಿ ಮಕ್ಕಳ ಸಂಖ್ಯೆ 25 ಮೀರಬಾರದು ಎಂಬ ನಿಯಮವಿದೆ.
ಶಿಶುವಿಹಾರದ ಶುಲ್ಕವೆಷ್ಟು? : ಬಿಪಿಎಲ್ ಕುಟುಂಬದವರು ಮಕ್ಕಳನ್ನು ಶಿಶುವಿಹಾರದಲ್ಲಿ ಇರಿಸಲು ತಿಂಗಳಿಗೆ 20 ರೂಪಾಯಿ ನೀಡಬೇಕು. ಅದೇ ಸಮಯದಲ್ಲಿ ಪ್ರತಿ ತಿಂಗಳು 12 ಸಾವಿರ ರೂಪಾಯಿ ಗಳಿಸುವ ಪೋಷಕರು 100 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳು 12 ಸಾವಿರಕ್ಕಿಂತ ಹೆಚ್ಚು ಸಂಪಾದನೆ ಮಾಡುವ ಪಾಲಕರು 200 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಮಾಹಿತಿ ಎಲ್ಲಿ ಲಭ್ಯವಿದೆ? : ರಾಷ್ಟ್ರೀಯ ಶಿಶುವಿಹಾರ ಯೋಜನೆಯಡಿ ಪ್ರತಿ ವಲಯದಲ್ಲಿ ವಿವಿಧ ಶಿಶುವಿಹಾರಗಳನ್ನು ತೆರೆಯಲಾಗಿದೆ. ಅಲ್ಲಿಗೆ ಹೋಗಿ ನಿಮ್ಮ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಹೆಚ್ಚಿನ ವಿವರಗಳಿಗಾಗಿ ನೀವು ಅಧಿಕೃತ ವೆಬ್‌ಸೈಟ್‌ಗೂ ಭೇಟಿ ನೀಡಬಹುದು.
Money Saving Tips: ಹೂಡಿಕೆ ಮಾಡುವ ಮುನ್ನ ಮಹಿಳೆಯರು ಈ ಸಂಗತಿ ತಿಳಿದಿರ್ಬೇಕು
ಎಷ್ಟು ವರ್ಷದ ಮಕ್ಕಳಿಗೆ ಅವಕಾಶ : ರಾಷ್ಟ್ರೀಯ ಶಿಶುವಿಹಾರ ಯೋಜನೆಯಲ್ಲಿ ಪಾಲಕರು ಆರು ತಿಂಗಳಿಂದ ಆರು ವರ್ಷದವರೆಗಿನ ಮಕ್ಕಳನ್ನು ಈ ಡೇಕ್ ಕೇರ್ ನಲ್ಲಿ ಬಿಡಬಹುದು. ಆರೋಗ್ಯ ತಪಾಸಣೆ ಮತ್ತು ವ್ಯಾಕ್ಸಿನೇಷನ್ ಸೌಲಭ್ಯ ಸೇರಿದಂತೆ ಪಾಲಕರಿಗೆ, ಮಕ್ಕಳ ಪೋಷಣೆ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ.
ಈ ಯೋಜನೆಯಿಂದ ಆಗುತ್ತಿರುವ ಲಾಭವೇನು? : ಇದು ಮಹಿಳೆಯರಿಗೆ ತಮ್ಮ ವೃತ್ತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಕ್ರೆಚ್‌ಗಳು ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವಕ್ಕೆ ಒತ್ತು ನೀಡುತ್ತದೆ.
ವರದಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಯರ ಪಾಲು 2017-18 ರಲ್ಲಿ ಶೇಕಡಾ 45.1 ರಷ್ಟಿತ್ತು. 2018-19 ರಲ್ಲಿ ಇದು ಶೇಕಡಾ 44.1 ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ ಗೃಹ ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಯರ ಸಂಖ್ಯೆ 2017-18 ರಲ್ಲಿ ಶೇಕಡಾ 47.3ರಷ್ಟಿತ್ತು. 2018-19 ರಲ್ಲಿ ಅದು ಶೇಕಡಾ 47.4 ಕ್ಕೆ ಏರಿಕೆಯಾಗಿದೆ.