Cleaning Hacks: ದಿಂಬು ಕೊಳಕಾಗಿದ್ದರೆ ಕೂದಲು. ತ್ವಚೆ ಸೌಂದರ್ಯವೇ ಹಾಳಾಗುತ್ತೆ!

By Suvarna News  |  First Published Jun 21, 2022, 12:38 PM IST

ದಿಂಬಿಲ್ಲದೆ ನಿದ್ರೆ ಬರೋದಿಲ್ಲ ಎನ್ನುವವರಿದ್ದಾರೆ. ಪ್ರತಿ ದಿನ ನಾವು – ನೀವೆಲ್ಲ ದಿಂಬಿನ ಬಳಕೆ ಮಾಡ್ತೇವೆ. ಆದ್ರೆ ಸುಖ ನಿದ್ರೆಗೆ ಕಾರಣವಾಗುವು ಈ ದಿಂಬಿನ ಕ್ಲೀನಿಂಗ್ ಮರೆತುಬಿಡ್ತೇವೆ. ಇದ್ರಿಂದಾಗಿ ಅನಾರೋಗ್ಯ ನಮ್ಮನ್ನು ಕಾಡಲು ಶುರು ಮಾಡುತ್ತದೆ.
 


ಮನೆ (Home) ಯಲ್ಲಿರುವ ಪ್ರತಿಯೊಂದು ವಸ್ತುವಿನ ಸ್ವಚ್ಛತೆ (Clean) ಬಹಳ ಮುಖ್ಯವಾಗುತ್ತದೆ. ನಮ್ಮ ಹಾಸಿಗೆ (Bed) ಯಲ್ಲೇ ಬ್ಯಾಕ್ಟೀರಿಯಾ (Bacteria) ಸಂಖ್ಯೆ ಹೆಚ್ಚಿರುತ್ತದೆ. ದೇಹದ ಬೆವರಿಗೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿರುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದ್ರೂ ಬೆಡ್ ಶೀಟ್ ಬದಲಿಸಬೇಕೆಂದು ತಜ್ಞರು ಹೇಳ್ತಾರೆ. ಬೆಡ್ ಶೀಟ್ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅನೇಕ ಬಾರಿ ನಾವು ಬೆಡ್ ಶೀಟ್ ಜೊತೆ ರಗ್ ಗಳನ್ನು ಕ್ಲೀನ್ ಮಾಡ್ತೇವೆ. ಸೋಪಾ ಕವರ್, ಕರ್ಟನ್ ಹೀಗೆ ಮನೆಯ ವಸ್ತುಗಳ ಸ್ವಚ್ಛತೆ ಬಗ್ಗೆ ಗಮನ ಹರಿಸ್ತೇವೆ. ಆದ್ರೆ ದಿಂಬ (Pillow) ನ್ನು ಮರೆತು ಬಿಡ್ತೇವೆ. ದಿಂಬನ್ನು ಕ್ಲೀನ್ ಮಾಡುವುದು ಕೂಡ ಅತ್ಯಗತ್ಯ. ಪ್ರತಿ ದಿನ ದಿಂಬನ್ನು ತೊಳೆಯುವುದು ಕಷ್ಟಸಾಧ್ಯ. ವಾರಕ್ಕೊಮ್ಮೆ ದಿಂಬಿನ ಕವರ್ ಶುಚಿಗೊಳಿಸಿದ್ರೆ ಸಾಕಾಗುತ್ತದೆ. ತಲೆಗೆ ಎಣ್ಣೆ ಬಳಸುವುದ್ರಿಂದ ಅಥವಾ ಜೊಲ್ಲು ಬೀಳುವುದ್ರಿಂದ ಸುಂದರ ದಿಂಬಿನ ಕವರ್ ಕೊಳಕಾಗಿರುತ್ತದೆ. ಅದ್ರಿಂದ ವಾಸನೆ ಬರ್ತಿರುತ್ತದೆ. ಆರು ತಿಂಗಳಾದ್ರೂ ದಿಂಬು ಹಾಗೂ ದಿಂಬಿನ ಕವರ್ ಕ್ಲೀನ್ ಮಾಡದೆ ಇರುವವರಿದ್ದಾರೆ. ಇದ್ರಿಂದ ನೀವು ರೋಗ ಆಹ್ವಾನಿಸಿದಂತೆ. ಇಂದು ನಾವು ದಿಂಬಿನ ಕವರ್ ಅಲ್ಲ,  ದಿಂಬನ್ನು ಸುಲಭವಾಗಿ ಕ್ಲೀನ್ ಮಾಡೋದು ಹೇಗೆ ಎಂಬುದನ್ನು ಹೇಳ್ತೇವೆ.

ಮನೆಯಲ್ಲೇ ನಿಯಮಿತವಾಗಿ ದಿಂಬನ್ನು ಹೀಗೆ ಕ್ಲೀನ್ ಮಾಡಿ :
ಮೊದಲನೇಯದಾಗಿ ನೀವು ದಿಂಬಿನ ಗೆ ಡಿಟರ್ಜೆಂಟ್ ಹಾಕಿ, ಉಗುರು ಬೆಚ್ಚಗಿನ ನೀರಿನಲ್ಲಿ ನೆನೆ ಹಾಕಿ. ಸುಮಾರು 15 ನಿಮಿಷಗಳ ಕಾಲ ದಿಂಬನ್ನು ನೆನೆ ಹಾಕ್ಬೇಕು. 

Tap to resize

Latest Videos

ಇದಾದ ನಂತ್ರ ನೀವು ದಿಂಬನ್ನು ವಾಷಿಂಗ್ ಮಷಿನ್ ನಲ್ಲಿ ಸ್ವಚ್ಛಗೊಳಿಸಬಹುದು. ಎಲ್ಲ ದಿಂಬುಗಳು ಮಷಿನ್ ನಲ್ಲಿ ಸ್ವಚ್ಛಗೊಳಿಸಲು ಬರುವುದಿಲ್ಲ. ಮೊದಲು ನಿಮ್ಮ ಮಷಿನ್ ಇದಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾಗೆ ಮೂರು – ನಾಲ್ಕು ದಿಂಬನ್ನು  ವಾಷಿಂಗ್ ಮಷಿನ್ ಗೆ ಹಾಕುವುದು ಸೂಕ್ತವಲ್ಲ. ಎರಡು ದಿಂಬನ್ನು ಮಾತ್ರ ಒಂದು ಬಾರಿ ಕ್ಲೀನ್ ಮಾಡಿ. 

ನಿಮ್ಮ ಆಭರಣಗಳನ್ನ ದೀರ್ಘಕಾಲ ಹೊಳೆಯುವಂತೆ ಇಡೋದು ಹೇಗೆ?

ವಾಷಿಂಗ್ ಮಷಿನ್ ಗೆ ನೀವು ಡಿಟರ್ಜೆಂಟ್ ಬಳಸಬೇಕು. ಡಿಟರ್ಜೆಂಟ್ ಅತಿ ಹೆಚ್ಚೂ ಇರಬಾರದು, ಅತಿ ಕಡಿಮೆಯೂ ಇರಬಾರದು.  ಯಾವಾಗ್ಲೂ ಉಗುರು ಬೆಚ್ಚಗಿನ ನೀರಿನಲ್ಲಿಯೇ ದಿಂಬನ್ನು ಸ್ವಚ್ಛ ಮಾಡ್ಬೇಕು. ಹಾಗಾಗಿ ಉಗುರು ಬೆಚ್ಚಗಿನ ನೀರಿನ ಮೋಡ್ ನಲ್ಲಿಯೇ ವಾಷಿಂಗ್ ಮಷಿನ್ ಇರಿಸಿ. 

ವಾಷಿಂಗ್ ಮಷಿನ್ ನಲ್ಲಿಯೇ ನೀವು ದಿಂಬನ್ನು ಡ್ರೈ ಮಾಡ್ಬಹುದು. ಆದ್ರೆ ಅದಕ್ಕೂ ಮಷಿನ್ ಹಾಗೂ ದಿಂಬು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ವಾಷಿಂಗ್ ಮಷಿನ್ ನಲ್ಲಿ ಡ್ರೈ ಆಗೋದು ಬೇಡ ಎನ್ನುವವರು ಬಿಸಿಲಿನಲ್ಲಿ ಇಡಬಹುದು. ಆದ್ರೆ ದಿಂಬಿಗೆ ಸರಿಯಾದ ಬಿಸಿಲಿನ ಅಗತ್ಯವಿರುತ್ತದೆ. ಒಳಗಿನ ಫೋಮ್ ಸರಿಯಾಗಿ ಒಣಗಬೇಕಾಗುತ್ತದೆ.  ಸುಮಾರು 30 ಗಂಟೆಗಳ ಕಾಲ ನೀವು ಬಿಸಿಲಿನಲ್ಲಿಟ್ಟರೆ ದಿಂಬು ಸರಿಯಾಗಿ ಒಣಗುತ್ತದೆ. ಡ್ರೈಯರ್ ನಲ್ಲಿ ದಿಂಬನ್ನು ಒಣಗಿಸಿದ್ರೂ ನೀವು ಅದನ್ನು ಬಿಸಿಲಿಗೆ ಹಾಕ್ಬೇಕಾಗುತ್ತದೆ. 

Home Remedies: ವಾರ್ಡ್ರೋಬ್‌ನಲ್ಲಿರೋ ಬಣ್ಣ ಮಾಸಿದ ಬಟ್ಟೆ ಈಗ್ಲೇ ಹೊರಗ್ ತೆಗಿರಿ

ದಿಂಬು ಸರಿಯಾಗಿ ಒಣಗಿದ ನಂತ್ರ ಇನ್ನೊಮ್ಮೆ ಪರಿಶೀಲನೆ ನಡೆಸಿ. ದಿಂಬಿನ  ಮೇಲೆ ಎಲ್ಲಾದ್ರೂ ಕಲೆಯಿದೆಯೇ ಎಂಬುದನ್ನು ನೋಡಿ.  ದಿಂಬು ಬೇಗ ಕೊಳಕಾಗಬಾರದು ಎನ್ನುವವರು ಕವರ್ ಕೆಳಗೆ ಯಾವಾಗ್ಲೂ ಪಿಲ್ಲೋ ಪ್ರೊಟಕ್ಟರ್ ಬಳಸಿ. ನೀವು ದಿಂಬಿನ ಕೆಳಗೆ ಮ್ಯಾಟ್ ಕೂಡ ಹಾಕ್ಬಹುದು. 

ದಿಂಬನ್ನು ಯಾವಾಗಲೂ ವರ್ಷದಲ್ಲಿ 3 ರಿಂದ 4 ಬಾರಿ ತೊಳೆಯಬೇಕು.  ಒಂದು ವೇಳೆ ದಿಂಬು ತೊಳೆಯಲು ಯೋಗ್ಯವಾಗಿಲ್ಲ ಎನ್ನುವವರು ಅದನ್ನು ಎಸೆದು ಹೊಸ ದಿಂಬು ಖರೀದಿ ಮಾಡೋದು ಒಳ್ಳೆಯದು. ದಿಂಬನ್ನು ಸ್ವಚ್ಛಗೊಳಿಸಿದ ನಂತ್ರ ಅದಕ್ಕೆ ಸ್ವಚ್ಛಗೊಂಡ ಅಥವಾ ಹೊಸದಾದ ದಿಂಬಿನ ಕವರ್ ಬಳಕೆ ಮಾಡ್ಬೇಕು ಎಂಬುದನ್ನು ಮರೆಯಬಾರದು. 


 

click me!