
ನವದೆಹಲಿ(ಜೂ.20): ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದೀಗ ಇಂಡಿಯನ್ ಬ್ಯಾಂಕ್ ನೇಮಕಾತಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮದಲ್ಲಿ ಗರ್ಭಿಣಿಯರು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹ ಎಂದಿದೆ. ಈ ನಿಯಮಕ್ಕೆ ದೆಹಲಿ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಈ ನಿಯಮವೇ ಅಕ್ರಮ ಎಂದಿದೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥ ಸ್ವಾತಿ ಮಲಿವಾಲ್, ಇಂಡಿಯನ್ ಬ್ಯಾಂಕ್‌ಗೆ ನೋಟಿಸ್ ನೀಡಿದ್ದಾರೆ. ಈ ನಿಯಮ ಅಕ್ರವಾಗಿದ್ದು, ತಕ್ಷಣವೇ ನೇಮಕಾತಿ ನಿಯಮ ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ಇಂಡಿಯನ್ ಬ್ಯಾಂಕ್ ತನ್ನ ನೇಮಕಾತಿ ನಿಯಮದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹರು ಎಂದಿದ. ಇದೇ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿಯನ್ ಬ್ಯಾಂಕ್ ನಿಯಮ ಇಷ್ಟಕ್ಕೆ ಮುಗಿಯುವುದಿಲ್ಲ. ಹೆರಿಗೆಯ ಬಳಿಕ ಕೆಲಸಕ್ಕೆ ಹಾಜರಾಗಲು ತಾನು ಕೆಲಸ ಮಾಡಲು ಆರೋಗ್ಯವಾಗಿದ್ದೇನೆ, ಹಾಗೂ ಫಿಟ್ ಎಂದು ವೈದ್ಯರ ಪ್ರಮಾಣ ಪತ್ರವನ್ನು ಸಲ್ಲಿಸಿ ಕೆಲಸಕ್ಕೆ ಸೇರಿಸಕೊಳ್ಳಬುಹುದು ಎಂದಿದೆ.
Yoga Day: ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು
ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮ ಸಾಮಾಜಿಕ ಭದ್ರತೆ ಸಂಹಿತೆ 2020ರ ಅಡಿಯಲ್ಲಿ ಮಹಿಳೆಗೆ ಒದಗಿಸಲಾಗಿರುವ ಹೆರಿಗೆ ಪ್ರಯೋಜನಕ್ಕೆ ವಿರುದ್ಧವವಾಗಿದೆ. ಇಷ್ಟೇ ಅಲ್ಲ ಈ ನಿಯಮ ಕಾನೂನು ಬಾಹಿರವಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಹೇಳಿದೆ.
ತಕ್ಷಣವೇ ಈ ನಿಯಮವನ್ನು ಹಿಂಪಡೆಯಬೇಕು ಎಂದು ದೆಹಲಿ ಮಹಿಳಾ ಆಯೋಗ ನೋಟಿಸ್‌ನಲ್ಲಿ ಸೂಚಿಸಿದೆ. ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮ ಪುರಷ ಪ್ರಧಾನ ಮನಸ್ಥಿತಿ ಹಾಗೂ ಸ್ತ್ರಿದ್ವೇಷವನ್ನು ಪ್ರತಿಬಿಂಬಿಸುತ್ತಿದೆ. ಗರ್ಭಿಣಿಯನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹ ಎಂದು ಕೆಲಸದ ಅವಕಾಶ ನಿರಾಕರಿಸಿವುದು ಅತೀ ದೊಡ್ಡ ತಪ್ಪು ಹಾಗೂ ಕಾನೂನು ಉಲ್ಲಂಘನೆಯಾಗಿದೆ. ಆರ್‌ಬಿಐ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.
ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮದ ವಿರುದ್ದ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ(AIDWA) ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಆಲ್ ಇಂಡಿಯಾ ವರ್ಕಿಂಗ್ ವುಮೆನ್ ಫೋರಮ್ ಮಹಿಳಾ ವಿರೋಧಿ ನೇಮಕಾತಿ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದೆ.
ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!
ಜನವರಿ ತಿಂಗಳಲ್ಲಿ ಎಸ್‌ಬಿಐ ಬ್ಯಾಂಕ್ ಇದೇ ರೀತಿಯ ನೇಮಕಾತಿ ನಿಯಮ ತಂದಿತ್ತು. ಮೂರು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿ ಕೆಲಸಕ್ಕೆ ಅನ್‌ಫಿಟ್. ಹೆರಿಗೆಯಾದ 4 ತಿಂಗಳ ಬಳಿಕ ಮಾತ್ರವೇ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು. ಆದರೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೇಮಕಾತಿ ನಿಯಮವನ್ನು ಹಿಂಪಡೆದಿತ್ತು. SBI ರೀತಿಯಲ್ಲೇ ಇಂಡಿಯನ್ ಬ್ಯಾಂಕ್ ಕೂಡ ಹೊಸ ನಿಯಮ ತಂದಿದೆ. ಆದರೆ ಆರಂಭಿಕ ಹಂತದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಈ ನೇಮಕಾತಿ ನಿಯಮವನ್ನು ಇಂಡಿಯನ್ ಬ್ಯಾಂಕ್ ಹಿಂಪಡೆಯುವ ಸಾಧ್ಯತೆಗಳಿವೆ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.