ಶಾಲೆ ಬಿಟ್ಟು 100 ರೂ ಸಂಬಳಕ್ಕೆ ಸೇರಿಕೊಂಡ ಈಕೆ ಈಗ ನಂ.1 ಶ್ರೀಮಂತೆ, ₹1.80 ಲಕ್ಷ ಕೋಟಿ ಸಂಪತ್ತು

Published : Oct 31, 2026, 03:30 PM IST
School Dropout to Billionaire

ಸಾರಾಂಶ

ಹಣಕಾಸಿನ ಸಮಸ್ಯೆಯಿಂದ ಶಾಲೆ ಬಿಟ್ಟು ಫ್ಯಾಕ್ಟರಿ ಕೆಲಸಕ್ಕೆ ಸೇರಿಕೊಂಡ ಈಕೆಗೆ 100 ರೂ ಸಂಬಳ. ಇದೀಗ ಈಕೆ ಬರೋಬ್ಬರಿ 1.80 ಲಕ್ಷ ಕೋಟಿ ರೂಪಾಯಿ ಒಡತಿ. ಶಿಕ್ಷಣ ಇಲ್ಲದೆ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದು ಹೇಗೆ?

ಬೀಜಿಂಗ್(ಅ.31) ಮನೆಯಲ್ಲಿ ಕಡು ಬಡನತ, ಶಾಲೆ ಫೀಸ್, ಇತರ ಖರ್ಚು ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಾಯಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ದುಡಿಯಲು ಆಕೆ ಶಾಲೆ ತೊರೆದಿದ್ದಳು. 100 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದಳು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಸಾಮಾನ್ಯ ಕಾರ್ಮಿಕರಂತೆ ಇದ್ದ ಈಕೆ ತನ್ನ ಬಡತನ, ಕಷ್ಟ, ನೋವು ಕಣ್ಣೀರಿನ ನಡುವೆ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾಳೆ. ಚೀನಾದ ಜೋ ಕ್ವಿನ್‌ಫೀ ಸಂಪತ್ತು 1.80 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಚೀನಾದ ನಂ.1 ಶ್ರೀಮಂತ ಮಹಿಳೆ ಅನ್ನೋ ದಾಖಲೆ ಬರೆದಿದ್ದಾರೆ.

ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಜೋ

ಚೀನಾದ ಜೋ ಕ್ವಿನ್‌ಫೀ (Zhou Qunfei) ಕೋಟಿ ಕೋಟಿ ರೂಪಾಯಿ ಆಸ್ತಿ ಸಂಪಾದಿಸುವ ಮೂಲಕ ಚೀನಾದ ನಂಬರ್ 1 ಶ್ರೀಮಂತ ಮಹಿಳೆ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೀನಾದ ಹುನಾನ್ ಪ್ರಾಂತ್ಯದ ಕಡು ಬಡ ಕುಟುಂಬದಲ್ಲಿ ಜನಿಸಿದ ಜೋ ಕ್ವಿನ್‌ಫೀ ಅವರ ಬಾಲ್ಯ ಕಣ್ಣೀರಿನಿಂದಲೇ ಕೂಡಿತ್ತು. ಶಾಲೆಯ ಮೆಟ್ಟಿಲು ಹತ್ತುವಷ್ಟರಲ್ಲೇ ತಾಯಿ ತೀರಿಕೊಂಡಿದ್ದರು. ಇನ್ನು ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ನಡೆದ ಅಪಘಾತದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಜೊತೆಗೆ ಕೈಬೆರಗಳು ಕಳೆದಕೊಂಡಿದ್ದರು. ಜೋ ದೊಡ್ಡವಳಾಗಿದ್ದರೆ, ಸಹೋದರ , ಸಹೋದರಿಯರ ನೋಡಿಕೊಳ್ಳುವ ಜವಾಬ್ದಾರಿ ಈಕೆಯ ಹೆಗಲಮೇಲಿತ್ತು. ಹೀಗಾಗಿ ಶಾಲೆ ತೊರೆಯಬೇಕಾಯಿತು. ಫ್ಯಾಕ್ಟರಿಯಲ್ಲಿ 100 ರೂಪಾಯಿ ಸಂಬಂಳದ ಕೆಲಸಕ್ಕೆ ಸೇರಿಕೊಂಡರು.

ನೈಟ್ ಶಿಫ್ಟ್‌ನಲ್ಲಿ ಕ್ರಾಂತಿ

ಫ್ಯಾಕ್ಟರಿಯಲ್ಲಿ ನೈಟ್ ಶಿಫ್ಟ್ ಹಾಕಿದಾಗ ಸಿಡಿಮಿಡಿ ಗೊಳ್ಳಲಿಲ್ಲ. ಬೆಳಗ್ಗೆ ಅಕೌಂಟಿಂಗ್, ಕಂಪ್ಯೂಟರ್ ಕೋರ್ಸ್ ಕಲಿಯಲು ಸೇರಿಕೊಂಡಿದ್ದರು. ತಮ್ಮ 22ನೇ ವಯಸ್ಸಿನಲ್ಲಿ, ತಾವು ಕಷ್ಟಪಟ್ಟು ಉಳಿಸಿದ್ದ ಕೇವಲ 20,000 ಹಾಂಗ್ ಕಾಂಗ್ ಡಾಲರ್ (ಅಂದಾಜು 2.5 ಲಕ್ಷ ರೂಪಾಯಿ) ಬಂಡವಾಳದೊಂದಿಗೆ ತಮ್ಮ ಕುಟುಂಬಸ್ಥರ ಜೊತೆ ಸೇರಿ ಅಪಾರ್ಟ್‌ಮೆಂಟ್‌ನ ಸಣ್ಣ ಕೊಠಡಿಯಲ್ಲಿ ಗಡಿಯಾರ ಗಾಜು ತಯಾರಿಸುವ ಸಣ್ಣ ಉದ್ಯಮ ಆರಂಭಿಸಿದ್ದರು. ಗಡಿಯಾರಕ್ಕೆ ಪಾಲಿಶ್ ಮಾಡುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜೋ ಉದ್ಯಮದ ಕನಸು ಕಂಡಿದ್ದಳು. ಗಡಿಯಾರಕ್ಕ ಗುಣಮಟ್ಟದ ಗಾಜು ತಯಾರಿಸುವ ಉದ್ಯಮ ಆರಂಭಿಸಿದರು.

ಲೆನ್ಸ್ ಟೆಕ್ನಾಲಜಿ' ಸಾಮ್ರಾಜ್ಯ

2000ರ ದಶಕದಲ್ಲಿ ಮೊಬೈಲ್ ಫೋನ್‌ಗಳ ಯುಗ ಆರಂಭವಾದಾಗ ಜೋ ಕ್ವಿನ್‌ಫೀ 'ಲೆನ್ಸ್ ಟೆಕ್ನಾಲಜಿ' (Lens Technology) ಎಂಬ ಬೃಹತ್ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಆ್ಯಪಲ್ (Apple), ಸ್ಯಾಮ್‌ಸಂಗ್ (Samsung) ಹಾಗೂ ಮೋಟೋರೊಲಾದಂತಹ ಜಾಗತಿಕ ಸ್ಮಾರ್ಟ್‌ಫೋನ್ ದೈತ್ಯ ಕಂಪನಿಗಳಿಗೆ ಮಲ್ಟಿ-ಟಚ್ ಸ್ಕ್ರೀನ್ ಗ್ಲಾಸ್ ಪೂರೈಸುವ ವಿಶ್ವದ ಅತಿದೊಡ್ಡ ಕಂಪನಿಯಾಗಿ ಲೆನ್ಸ್ ಟೆಕ್ನಾಲಜಿ ಹೊರಹೊಮ್ಮಿದೆ. ಇತ್ತೀಚೆಗೆ ಬಿಡುಗಡೆಯಾದ ಹುರುನ್ ರಿಚ್ ಲಿಸ್ಟ್ (Hurun Rich List) ಪ್ರಕಾರ, ಜೋ ಕ್ವಿನ್‌ಫೀ ಅವರ ಆಸ್ತಿ ಕೋಟ್ಯಂತರ ಡಾಲರ್ ತಲುಪಿದ್ದು, ಶೂನ್ಯದಿಂದ ಆರಂಭಿಸಿ ವಿಶ್ವದ ಅಗ್ರಗಣ್ಯ ಸ್ವಯಂ-ನಿರ್ಮಿತ ಮಹಿಳಾ ಬಿಲಿಯನೇರ್ ಆಗಿ ಅವರು ಇತಿಹಾಸ ಸೃಷ್ಟಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Sarees: ಸ್ಟೈಲ್ ಹಾಗೂ ಕಂಫರ್ಟ್ ಬಯಸುವವರಿಗೆ ಈ ಸೀರೆಗಳೇ ಬೆಸ್ಟ್, ನೋಡಿದ್ರೆ ನೀವೇ ಬಿಡಲ್ಲ!
ಮನೆಯಲ್ಲೇ ಹೋಟೆಲ್ ಸ್ಟೈಲ್ ಕ್ರಿಸ್ಪಿ ದೋಸೆ ಹಿಟ್ಟು.. ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ