Koppal: 10 km ಗುಡ್ಡಗಾಡು ಓಟದ ಸ್ಪರ್ಧೆ; 1 ವರ್ಷದ ಮಗುವಿನ ತಾಯಿಗೆ ಪ್ರಥಮ ಸ್ಥಾನ

Published : Oct 31, 2026, 08:41 AM IST
Koppal Mother

ಸಾರಾಂಶ

ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದ 10 ಕಿಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಒಂದು ವರ್ಷದ ಮಗುವಿನ ತಾಯಿ ನಾಗವೇಣಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿವಾಹವಾಗಿ ಮೂರು ವರ್ಷವಾದರೂ ಓದು ಮತ್ತು ಕ್ರೀಡೆಯ ಮೇಲಿನ ಆಸಕ್ತಿಯಿಂದ ಅವರು ಈ ಸಾಧನೆ ಮಾಡಿದ್ದಾರೆ.

ಪ್ರಹ್ಲಾರೆಡ್ಡಿ ಮಾದಿನಾಳ 

ಕನಕಗಿರಿ: ವಿಶ್ವವಿದ್ಯಾಲಯ ಮಟ್ಟದ 10 ಕಿಮೀ ಗುಡ್ಡಗಾಡು ಓಟದಲ್ಲಿ ಒಂದು ವರ್ಷದ ಮಗವಿನ ತಾಯಿ ಪ್ರಥಮ ಸ್ಥಾನ ಪಡೆದಿದ್ದಾಳೆ!

ಕನಕಗಿರಿಯ ಪದವಿ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜುಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕೊಪ್ಪಳ ತಾಲೂಕಿನ ಹಿಟ್ನಾಳದ ಸ.ಪ್ರ.ದ. ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ ನಾಗವೇಣಿ ದೇವಣ್ಣ ದ್ಯಾಮನೂರ ಇಂತಹದೊಂದು ಸಾಧನೆ ಮಾಡಿ, ಗಮನ ಸೆಳೆದಿದ್ದಾರೆ.

ಮೂರು ಬಾರಿ ಚಾಂಪಿಯನ್

ವಿವಾಹವಾದ ಬಳಿಕ ಮನೆಯಲ್ಲಿ ಗೃಹಣಿ ಅಥವಾ ಕೆಲಸಕ್ಕೆ ಹೋಗುವುದು ಸಾಮಾನ್ಯ. ಆದರೆ ಈ ವಿದ್ಯಾರ್ಥಿನಿ ಮದುವೆಯಾಗಿ ಮೂರು ವರ್ಷವಾದರೂ ಓದುವ ಹಂಬಲದಿಂದ ಹಿಟ್ನಾಳ್ ಸರ್ಕಾರಿ ಪದವಿ ಕಾಲೇಜಿಗೆ ಕಳೆದ ಎರಡು ವರ್ಷಗಳ ಹಿಂದೆ ದಾಖಲಾಗಿದ್ದರು. ಪ್ರಾಥಮಿಕ ಹಂತದಲ್ಲಿರುವಾಗಲೇ ರನ್ನಿಂಗ್ ರೇಸ್‌ನಲ್ಲಿ ಆಸಕ್ತಿ ಹೊಂದಿದ್ದ ನಾಗವೇಣಿ ಮೂರು ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಪ್ರೌಢಶಾಲೆ ಹಂತದಲ್ಲಿ ಕೊರೋನಾ ಹಿನ್ನೆಲೆ ಸ್ಪರ್ಧೆಗಳಿಂದ ಅನಿವಾರ್ಯವಾಗಿ ವಂಚಿತರಾದರು. ಪಿಯುಸಿ ಹಂತದಲ್ಲಿಯೂ ಎರಡು ಬಾರಿಯೂ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಈಗ ಕೊಪ್ಪಳ ವಿಶ್ವ ವಿದ್ಯಾಲಯ ಮಟ್ಟದ ಗುಡ್ಡಗಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸೈ ಎನಿಸಿದ್ದಾರೆ.

ಅ. 29ರ ರಾತ್ರಿಯೇ ಕನಕಗಿರಿಗೆ ತನ್ನ ಒಂದು ವರ್ಷದ ಮಗುವಿನ ಜತೆ ಬಂದಿದ್ದ ನಾಗವೇಣಿ, ಕ್ರೀಡಾಕೂಟದಲ್ಲಿ ಭಾಗಿಯಾದ ಎಲ್ಲರೂ ಪ್ರೋತ್ಸಾಹಿಸುತ್ತಿದ್ದರು. ಅ. 30ರಂದು ಬೆಳ್ಳಂಬೆಳಗ್ಗೆ ಶುರುವಾದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಥಮ ಸ್ಥಾನ ಪಡೆದರು. ಕಾಲೇಜು ಆವರಣದಲ್ಲಿ ಅಂತರ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿಯಿತು. ಸ್ಪರ್ಧೆ ಮುಕ್ತಾಯದ ನಂತರ ನಡೆದ ಕಾರ್ಯಕ್ರಮದಲ್ಲಿ ಪಾರಿತೋಷಕ ಹಾಗೂ ಪ್ರಶಸ್ತಿಪತ್ರ ವಿತರಿಸಿ, ಗೌರವಿಸಲಾಯಿತು.

ಆಸೆ ಈಡೇರಿದೆ

ಮೊದಲಿನಿಂದಲೂ ರನ್ನಿಂಗ್ ರೂಢಿಯಾಗಿತ್ತು. ಶಾಲಾ, ಕಾಲೇಜುಗಳಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಹೋಗಿದ್ದೆ. ಪದವಿಯಲ್ಲೂ ಹೆಸರು ಮಾಡಬೇಕೆನ್ನುವ ಆಸೆ ಎರಡು ವರ್ಷಗಳ ನಂತರ ಈಡೇರಿದೆ. ಈ ಸಾಧನೆಗೆ ನನ್ನ ಪತಿ, ಸ್ನೇಹಿತರು ಮತ್ತು ಕುಟುಂಬದ ಬೆಂಬಲ ಕಾರಣ ಎಂದು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಾಗವೇಣಿ ಹೇಳಿದರು.

ಹಿಟ್ನಾಳದ ವಿದ್ಯಾರ್ಥಿನಿ ನಾಗವೇಣಿ ಒಂದು ವರ್ಷದ ಮಗುವಿನ ತಾಯಿಯಾದರೂ ಕ್ರೀಡೆಯಲ್ಲಿ ಸಾಧಿಸಬೇಕೆನ್ನುವ ಹಂಬಲದಿಂದ ಕನಕಗಿರಿಗೆ ಬಂದಿದ್ದಳು. ಸತತ ಪ್ರಯತ್ನ, ಪರಿಶ್ರಮದಿಂದ ನಾಗವೇಣಿ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನಕ್ಕೆ ಭಾಜವಾದಳು. ಈ ಸಾಧನೆ ವಿಶ್ವವಿದ್ಯಾಲಯವೇ ಪ್ರಶಂಸೆ ವ್ಯಕ್ತಪಡಿಸಿದ್ದು, ಹೊಸ ದಾಖಲೆಯಾಗಿದೆ ಎಂದು ಕನಕಗಿರಿ ಡಿಗ್ರಿ ಕಾಲೇಜು ಪ್ರಾಂಶುಪಾಲ ಬಜರಂಗಬಲಿ ಹೇಳಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇವಲ ₹5 ಲಕ್ಷ ಹೂಡಿಕೆ, ಈಗ ₹20 ಲಕ್ಷದ ಉದ್ಯಮ! ಬೆಂಗಳೂರಿನ ಮಹಿಳೆಯ ಬಿಂದಿ ಬಿಸಿನೆಸ್‌ಗೆ ಬಾಲಿವುಡ್ ತಾರೆಯರೇ ಗ್ರಾಹಕರು!
ಮೈದಾ-ಸೋಡಾ ಬೇಡ್ವೇ ಬೇಡ, ದೀಪಾವಳಿಗೆ ಸಬ್ಬಕ್ಕಿಯಿಂದ ಮಾಡಿ ಗರಿಗರಿಯಾದ ಜ್ಯೂಸಿ ಜಿಲೇಬಿ.. 15 ನಿಮಿಷದಲ್ಲಿ ರೆಡಿಯಾಗುತ್ತೆ