'ಇದೊಂದು ದೊಡ್ಡ ವಿಚಾರವಲ್ಲ', ಕ್ಯಾಮೆರಾದೆದುರು ಮಗುವಿಗೆ ಜನ್ಮ ಕೊಟ್ಟ ಸೋಶಿಯಲ್ ಮೀಡಿಯಾ ಸ್ಟಾರ್!

By Suvarna News  |  First Published Mar 19, 2022, 12:51 PM IST

* 4 ಲಕ್ಷ 25 ಸಾವಿರ ಮಂದಿ ಸಮ್ಮುಖದಲ್ಲಿ ಮಗುವಿಗೆ ಜನ್ಮ ಕೊಟ್ಟ ಯೂಟ್ಯೂಬರ್

* ಈ ಬಗ್ಗೆ ನನಗೆ ಯಾವುದೇ ಮುಜುಗರವಿಲ್ಲ ಎಂದ ಇಮೋಜಿನ್

* ವೈರಲ್ ಆಯ್ತು ಯೂಟ್ಯೂಬ್ ವಿಡಿಯೋ


ಲಂಡನ್(ಮಾ.19): ಬ್ರಿಟನ್ ನಲ್ಲಿ ನೆಲೆಸಿರುವ 28ರ ಹರೆಯದ ಇಮೊಜೆನ್ ಹಾರ್ಟನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಇಮೋಜೆನ್ ಫ್ಯಾಷನ್ ಮತ್ತು ಬ್ಯಟು ಬ್ಲಾಗರ್. ಕೆಲ ಸಮಯದ ಹಿಂದೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಕುತೂಹಲಕಾರಿಯಾಗಿ, ಅವರು ತಮ್ಮ 425,000 ಯೂಟ್ಯೂಬ್ ಚಂದಾದಾರರಿಗೆ ಹೆಣ್ಣು ಮಗುವಿನ ಜನನವನ್ನು ತೋರಿಸಿದರು. ಘಟನೆಯನ್ನು ಚಿತ್ರೀಕರಿಸಿದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ಇಮೋಜೆನ್ ಹೇಳಿದ್ದಾರೆ.

ಇಮೊಜೆನ್ ಹಾರ್ಟನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಇಮೋಜೆನೇಶನ್‌ನಲ್ಲಿ ಮಗಳು ರೆನಾಲಿಯಾಗೆ ಜನ್ಮ ನೀಡುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಎಂಬುವುದು ಉಲ್ಲೇಖನೀಯ. ರೆನೆಲಿಯಾಳ ಜನನವನ್ನು ಚಿತ್ರೀಕರಿಸುವ ತನ್ನ ನಿರ್ಧಾರದ ಬಗ್ಗೆ ಮಾತನಾಡುತ್ತಾ, "ಯಾವಾಗಲೂ ಕ್ಯಾಮೆರಾದ ಮುಂದೆ ಇರುತ್ತೇನೆ ಹಾಗೂ ಪರ್ಫಾರ್ಮನ್ಸ್‌ ಕೊಡಲು ಇಷ್ಟಪಡುತ್ತೇನೆ ಹೀಗಾಗಿ ತನಗೆ ಇದೊಂದು ದೊಡ್ಡ ವಿಷಯವಲ್ಲ" ಎಂದು ಹೇಳಿದ್ದಾರೆ.

Tap to resize

Latest Videos

ಹೆರಿಗೆಯ ಸಮಯವನ್ನು ನೆನಪಿಸಿಕೊಳ್ಳುತ್ತಾ, ಆ ಸಮಯದಲ್ಲಿ ತನ್ನ ಪತಿ ಸ್ಪೆನ್ಸರ್ ಕೂಡ ತನ್ನೊಂದಿಗೆ ಇದ್ದರು ಎಂದು ಇಮೋಜೆನ್ ಹೇಳಿದ್ದಾರೆ. ದಂಪತಿ ಮಗುವಿನ ಜನನದ ವೀಡಿಯೊವನ್ನು ಶೂಟ್ ಮಾಡಲು ಒಪ್ಪಿಕೊಂಡರು, ಆದರೆ ಇದಕ್ಕೊಂದು ಮಿತಿ ನಿಗದಿಪಡಿಸಿದರಿ. ಮುಂದೆ ತಮ್ಮ ಮಗು ಈ ವೀಡಿಯೊವನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರೆ, ನಾವು ಅದನ್ನು ತೆಗೆದುಹಾಕುತ್ತೇವೆ ಎಂದು ಇಮೋಜೆನ್ ಹೇಳಿದ್ದಾರೆ.

2019 ರಲ್ಲಿ, ಇಮೋಜೆನ್ ಮತ್ತು ಸ್ಪೆನ್ಸರ್ ತಮ್ಮ ಮದುವೆಯನ್ನು ಯೂಟ್ಯೂಬ್‌ನಲ್ಲಿ ಲೈವ್ ಆಗಿ ಚಿತ್ರೀಕರಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ಲೈಂಗಿಕ ಜೀವನದ ಬಗ್ಗೆ ಯೂಟ್ಯೂಬ್‌ನಲ್ಲಿ ಆನ್‌ಲೈನ್ ಪ್ರಶ್ನೆಗಳು ಮತ್ತು ಉತ್ತರಗಳನ್ನೂ ನೀಡಿದ್ದರೆಂಬುವುದು ಗಮನಾರ್ಹ ವಿಚಾರ.

ಆದಾಗ್ಯೂ, ಅನೇಕ ಬಳಕೆದಾರರು ಯೂಟ್ಯೂಬ್‌ನಲ್ಲಿ ಮಗಳ ಜನನವನ್ನು ತೋರಿಸಲು ಇಷ್ಟಪಡಲಿಲ್ಲ. ಇಮೋಜೆನ್ ಅವರು ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸಬೇಕಾಯಿತು ಎಂದು ಹೇಳಿದರು. ಕೊಲೆ ಬೆದರಿಕೆ ಕೂಡ ಬಂದಿತ್ತು. ಅದೇ ಸಮಯದಲ್ಲಿ, ಅನೇಕ ಜನರು ಅವರ ಮುಕ್ತ ದೃಷ್ಟಿಕೋನಗಳನ್ನು ಸಹ ಇಷ್ಟಪಟ್ಟಿದ್ದಾರೆ.

click me!