Weight Loss And Fertility: ತೂಕ ಇಳಿಕೆ ಮಾಡ್ಕೊಂಡ್ರೂ ಸಂತಾನೋತ್ಪತ್ತಿಗೆ ಲಾಭವಿಲ್ಲ

By Suvarna News  |  First Published Mar 18, 2022, 8:22 PM IST

ತೂಕ ಇಳಿಕೆ (Weight Loss) ಮಾಡಿಕೊಳ್ಳುವುದರಿಂದ ಮಹಿಳೆಯರ ಸಂತಾನೋತ್ಪತ್ತಿ (Fertility ) ಸಾಮರ್ಥ್ಯದಲ್ಲಿ ಹೆಚ್ಚಳವೇನೂ ಆಗುವುದಿಲ್ಲ. ಹಾಗೂ ಆರೋಗ್ಯ (Health)ಪೂರ್ಣ ಹೆರಿಗೆಗೂ ಅದು ಕಾರಣವಾಗುವುದಿಲ್ಲ ಎಂದು ವರ್ಜೀನಿಯಾ ಸಂಸ್ಥೆಯ ಹೊಸ ಅಧ್ಯಯನವೊಂದು ಹೇಳಿದೆ.


ದಪ್ಪಗಿರುವ ಯುವತಿಯರು ವೈದ್ಯರ ಬಳಿ ಹೋದರೆ ಅವರಿಗೆ ತೂಕ (Weight) ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅಧಿಕ ಬೊಜ್ಜಿನ (Obesity) ಸಮಸ್ಯೆ ಗರ್ಭ ಧರಿಸುವುದಕ್ಕೆ ಸಮಸ್ಯೆ ತಂದೊಡ್ಡುತ್ತದೆ. ಹೀಗಾಗಿ, ತೂಕ ಇಳಿಸಿಕೊಳ್ಳಿ ಎನ್ನುವ ಸೂಚನೆ ಅತಿ ಸಾಮಾನ್ಯ. ಆದರೆ, ವರ್ಜೀನಿಯಾ ಸ್ಕೂಲ್ ಆಫ್ ರಿಪ್ರೊಡಕ್ಷನ್ ಮೆಡಿಸಿನ್ ಸಂಸ್ಥೆ (University of Virginia School of Medicine’s Center for Research in Reproduction) ನಡೆಸಿದ್ದ ಅಧ್ಯಯನವೊಂದು ವಿಚಿತ್ರವೆನಿಸುವ ಸಂಗತಿಯನ್ನು ಬಹಿರಂಗಪಡಿಸಿದೆ. ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಸಂತಾನೋತ್ಪತ್ತಿ (Fertility) ಶಕ್ತಿ ಸದೃಢವೇನೂ ಆಗುವುದಿಲ್ಲ ಎಂದು ಹೇಳಿದೆ.

ಹೆಚ್ಚು ದಪ್ಪಗಿರುವ, ಬೊಜ್ಜು ಹೊಂದಿರುವ ಮಹಿಳೆಯರಿಗೆ ಸಂತಾನೋತ್ಪತ್ತಿ ಸಮಸ್ಯೆ ಉಂಟಾಗುವುದು ಕಂಡುಬರುತ್ತದೆ. ಸಂತಾನೋತ್ಪತ್ತಿ ಶಕ್ತಿ ಮೇಲೆ ಬೊಜ್ಜು ಪರಿಣಾಮ ಬೀರುತ್ತದೆ ಎನ್ನುವುದನ್ನು ಇದುವರೆಗೆ ಅದೆಷ್ಟೋ ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ, ಈ ಅಧ್ಯಯನ ಮಾತ್ರ ಹಳೆಯ ನಂಬಿಕೆಗೆ ವ್ಯತಿರಿಕ್ತವಾದ ಪರಿಣಾಮದ ಬಗ್ಗೆ ಹೇಳಿರುವುದು ಕುತೂಹಲ ಮೂಡಿಸಿದೆ. 

Tap to resize

Latest Videos

ಸಂತಾನೋತ್ಪತ್ತಿಗೆ ಬೊಜ್ಜು ಕಡಿಮೆ ಮಾಡಿಕೊಳ್ಳುವುದರಿಂದ ಹೆಚ್ಚಿನ ಲಾಭವೇನೂ ಆಗುವುದಿಲ್ಲ, ಬೊಜ್ಜನ್ನು ಕಡಿಮೆ ಮಾಡಿಕೊಂಡರೆ ಸಂತಾನೋತ್ಪತ್ತಿ ಶಕ್ತಿ ಬಲವಾಗುತ್ತದೆ ಎನ್ನುವುದು ಸರಿಯಲ್ಲ ಎನ್ನುವುದು ಹೊಸ ಅಧ್ಯಯನದ ಸಾರ. ಈ ಕುರಿತ ಅಧ್ಯಯನ ವರದಿ ಪಿಎಲ್ಒಎಸ್ ಮೆಡಿಸಿನ್ ಎನ್ನುವ ಜರ್ನಲ್ ನಲ್ಲಿ ಪ್ರಕಟವಾಗಿದೆ. 

Healthy Foods: ಮಲಗೋ ಮುನ್ನ ಈ ಆಹಾರ ತಿಂದ್ರೆ ಪುರುಷರ ಸಮಸ್ಯೆಗೆ ಪರಿಹಾರ

ಈ ಸಂಬಂಧ, ವರ್ಜೀನಿಯಾ ಸ್ಕೂಲ್ ಆಫ್ ಮೆಡಿಸಿನ್ ಸಂಸ್ಥೆ ಒಂದು ಅಧ್ಯಯನ ನಡೆಸಿತ್ತು. ಇದರಲ್ಲಿ ಅಧಿಕ ತೂಕದ 379 ಮಹಿಳೆಯರು ಪಾಲ್ಗೊಂಡಿದ್ದರು. ವೈದ್ಯಕೀಯವಾಗಿ ಇಂಥದ್ದೇ ಎಂದು ಹೇಳಲಾಗದ ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವವರೂ ಇದರಲ್ಲಿದ್ದರು. ಅಧ್ಯಯನಕ್ಕಾಗಿ ಅವರ ಜೀವನಶೈಲಿಯಲ್ಲಿ ತೀವ್ರತರ ಬದಲಾವಣೆ ತರಲಾಗಿತ್ತು. ತೂಕ ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೂ ಅವರ ಸಂತಾನೋತ್ಪತ್ತಿ ಸಾಮರ್ಥ್ಯದಲ್ಲಿ ಬದಲಾವಣೆ ಏನೂ ಆಗಿರಲಿಲ್ಲ. 

ತೂಕ ಇಳಿಕೆ ಲಾಭ ಕಡಿಮೆ
“ಎಷ್ಟೋ ದಶಕಗಳಿಂದ ನಮ್ಮಲ್ಲಿ ಸಾಮಾನ್ಯವಾಗಿರುವ ನಂಬಿಕೆ ಎಂದರೆ, ಧಡೂತಿ ಮಹಿಳೆಯರಿಗೆ ಗರ್ಭ ಧರಿಸುವುದು ಕಷ್ಟವಾಗುತ್ತದೆ ಎಂದು. ಈ ಕಾರಣಕ್ಕಾಗಿ ಎಲ್ಲ ವೈದ್ಯರು ಮಹಿಳೆಯರಿಗೆ ತೂಕ ಇಳಿಸಿಕೊಳ್ಳಲು ಸಲಹೆ, ಸೂಚನೆ ನೀಡುತ್ತಾರೆ. ಆದರೆ, ಇದರಿಂದ ಹೆಚ್ಚು ಪ್ರಯೋಜನವಿಲ್ಲ. ಆರೋಗ್ಯಕರ ಜೀವನಶೈಲಿಯ ಮೇಲೆ ಬೆಳಕು ಚೆಲ್ಲಿರುವ ಅಧ್ಯಯನಗಳು ಕಡಿಮೆ. ದೈಹಿಕ ಚಟುವಟಿಕೆಗಾಗಿ ವ್ಯಾಯಾಮ ಮಾಡುವುದಕ್ಕೂ, ತೂಕ ಇಳಿಕೆ ಮಾಡಿಕೊಳ್ಳಲು ವ್ಯಾಯಾಮ ಮಾಡುವುದಕ್ಕೂ ವ್ಯತ್ಯಾಸವಿದೆ’ ಎನ್ನುತ್ತಾರೆ ಸಂಶೋಧಕ ಡೇನಿಯಲ್ ಜೆ. ಹೈಸಿನ್ ಲೆಡರ್ (Daniel J. Haisenleder). 

Urinary Tract Infection: ಸಂತಾನೋತ್ಪತ್ತಿಗೂ ತರುತ್ತಾ ಕುತ್ತು?

ಈ ಅಧ್ಯಯನದಲ್ಲಿ ಎರಡು ಗುಂಪುಗಳಾಗಿ ವಿಭಾಗಿಸಲಾಗಿತ್ತು. ಇದರಲ್ಲಿ ಅರ್ಧ ಮಹಿಳೆಯರು (Women) ಕಟ್ಟುನಿಟ್ಟಿನ ಡಯೆಟ್ (Diet) ಅನುಸರಿಸಿದ್ದರು. ಅವರ ದೈನಂದಿನ ಬದುಕಿನಲ್ಲಿ ಊಟದ ಬದಲಾವಣೆ, ಔಷಧ ಹಾಗೂ ದೈಹಿಕ ಚಟುವಟಿಕೆಗೆ ಒತ್ತು ನೀಡಲಾಗಿತ್ತು. ತೂಕ ಇಳಿಸಿಕೊಳ್ಳುವುದು ಅವರ ಪ್ರಮುಖ ಆದ್ಯತೆಯಾಗಿತ್ತು. ಇನ್ನೊಂದು ಭಾಗದ ಮಹಿಳೆಯರು ಸರಳವಾದ ದೈಹಿಕ ಚಟುವಟಿಕೆ ನಡೆಸಿದ್ದರು. ತೂಕ ಇಳಿಕೆ ಮಾಡಿಕೊಳ್ಳುವುದು ಅವರ ಪ್ರಯತ್ನವಾಗಿರಲಿಲ್ಲ. 

ಮೊದಲ ವಿಭಾಗದ ಮಹಿಳೆಯರು ಸರಿಸುಮಾರು ಶೇ.7ರಷ್ಟು ತೂಕ ಕಡಿಮೆ ಮಾಡಿಕೊಂಡಿದ್ದರು. ತೀವ್ರತರ ಡಯೆಟ್ ಮಾಡಿದ್ದ 188 ಮಹಿಳೆಯರ ಪೈಕಿ 23 ಮಹಿಳೆಯರು ಗರ್ಭ (Pregnancy) ಧರಿಸಿ ಹೆರಿಗೆಯಾದರೆ, ಕೇವಲ ಸರಳ ವ್ಯಾಯಾಮ ಮಾಡಿದ್ದ 191 ಮಹಿಳೆಯರ ಪೈಕಿ 29 ಜನ ಗರ್ಭ ಧರಿಸಿದ್ದರು ಹಾಗೂ ಆರೋಗ್ಯಪೂರ್ಣ ಹೆರಿಗೆಯೂ ಆಗಿತ್ತು.  ತೂಕ ಇಳಿಕೆ ಮಾಡಿಕೊಳ್ಳುವುದರಿಂದ ಆರೋಗ್ಯದ ಇತರ ಅಂಶಗಳ ಮೇಲೆ ಅತ್ಯುತ್ತಮ ಪರಿಣಾಮ ಕಂಡುಬರುತ್ತದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಒಟ್ಟಾರೆ ದೈಹಿಕ ಆರೋಗ್ಯಸ್ಥಿತಿಯೂ ಸುಧಾರಣೆಯಾಗಿದೆ. ಆದರೆ, ಸಂತಾನೋತ್ಪತ್ತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. 

click me!