ಹೆಣ್ಣಾದ ಮೇಲೆ ದೇವರನ್ನು, ಗಂಡಸರನ್ನು ನೋಡುವಂತಿಲ್ಲ... ಹಾಲು- ಹುಂಜ ಮುಟ್ಟೋಹಾಗಿಲ್ಲ ಮತ್ತು...

By Suchethana D  |  First Published Sep 19, 2024, 5:07 PM IST

ಲಿಂಗ ಪರಿವರ್ತನೆ ಆಪರೇಷನ್​ ಸಮಯದಲ್ಲಿ ಅನುಭವಿಸುವ ನೋವು ಎಂಥದ್ದು, ಆಪರೇಷನ್​ಗೆ ಮುನ್ನಾ ಮತ್ತು ಬಳಿಕ ತೃತೀಯಲಿಂಗಿ ಸಮುದಾಯದಲ್ಲಿ ಇರುವ ಸಂಪ್ರದಾಯಗಳೇನು? ಎಲ್ಲವನ್ನೂ ತಿಳಿಸಿದ್ದಾರೆ ಚರಿತಾ ಕೊಂಕಲ್​
 


ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಇತಿಹಾಸ ಸೃಷ್ಟಿಸಿದವ ಮೊದಲ ತೃತೀಯಲಿಂಗಿ ಚರಿತಾ ಕೊಂಕಲ್. ಟ್ರಾನ್ಸ್​ಜೆಂಡರ್​ ಎಂದಾಕ್ಷಣ ಅವರನ್ನು ಕಡೆಗಣ್ಣಿನಿಂದ ನೋಡುವವರಿಗೇನೂ ಕೊರತೆ ಇಲ್ಲ. ಗಂಡು ಮತ್ತು ಹೆಣ್ಣಿನ ಹಾಗೆ ಇದು ಕೂಡ ಸೃಷ್ಟಿಯ ನಿಯಮ ಎಂದುಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಮನೆಯಲ್ಲಿರುವ ಗಂಡು ಮಗು ಹೆಣ್ಣೆಂದು ಗೊತ್ತಾದಾಗ, ಕುಟುಂಬದವರು ಆತನನ್ನು ಬೀದಿಗೆ ತಳ್ಳುವ ಅದೆಷ್ಟೋ ಘಟನೆಗಳನ್ನು ಇದಾಗಲೇ ತೃತೀಯಲಿಂಗಿಗಳು ಹೇಳಿಕೊಂಡಿದ್ದಾರೆ. ಬೀದಿ ಪಾಲಾಗಿ ಅನುಭವಿಸಿರುವ ನೋವುಗಳನ್ನು ಹೇಳಿಕೊಂಡಿದ್ದಾರೆ.  ಇದೀಗ ಚರಿತಾ ಕೊಂಕಲ್​ ಅವರು ಗಂಡನ್ನು ಹೆಣ್ಣು ಮಾಡುವಾಗ ನಡೆಯುವ ಪ್ರಕ್ರಿಯೆ, ಆ ನೋವು, ಪ್ರಕ್ರಿಯೆ ಬಳಿಕದ ಸಂಪ್ರದಾಯ, ಶಾಸ್ತ್ರಗಳ ಕುರಿತು  ಯೂಟ್ಯೂಬರ್​ ರಾಜೇಶ್​ ಗೌಡ ಅವರ ಚಾನೆಲ್​ನಲ್ಲಿ ಮಾತನಾಡಿದ್ದಾರೆ.  

'ಗಂಡನ್ನು ಹೆಣ್ಣಾಗಿ ಪರಿವರ್ತಿಸುವ ಶಸ್ತ್ರಚಿಕಿತ್ಸೆ ಯಮಯಾತನೆ. ಎಷ್ಟೋ ಬಾರಿ ಸಾಯಬಾರದಾ ಎಂದು ಎನ್ನಿಸುವುದು ಉಂಟು. ಅಷ್ಟು ಹಿಂಸೆ, ನೋವಿನ ಶಸ್ತ್ರಚಿಕಿತ್ಸೆ ಇದು. ಎಷ್ಟೋ ಮಂದಿ ಇವರ್ಯಾಕೆ ಬೇಕು ಬೇಕಂತಲೇ ಹೆಣ್ಣಾಗುತ್ತಾರೆ ಎಂದು ಹೇಳುವುದು ಉಂಟು. ಆದರೆ ಆ ಭಯಾನಕ, ನರಕ ಯಾತನೆಯನ್ನು ಅನುಭವಿಸಿದವರಿಗೇ ಗೊತ್ತು ಈ ಜೀವನದ ಕರಾಳ ಮುಖ' ಎನ್ನುತ್ತಲೇ ಆಪರೇಷನ್​ ಮಾಡುವ ವಿಧಾನವನ್ನು ಹೇಳಿದ್ದಾರೆ ಚರಿತಾ. ನಮ್ಮ ಕಮ್ಯುನಿಟಿಯ ದೇವರು ಸಂತೋಷಿ ಮಾತಾ. ಈ ಆಪರೇಷನ್​ಗೆ ಹೋಗುವ ಮೊದಲು  ಸಂತೋಷಿಮಾತಾ ಮುಂದೆ ಕುಳ್ಳರಿಸಿ ಪೂಜೆ ಮಾಡುತ್ತಾರೆ. ಗಂಡನ್ನು ಹೆಣ್ಣು ಮಾಡುವ ಪ್ರಕ್ರಿಯೆಯ ದ್ಯೋತಕವಾಗಿ ಬಿರಿಯಾನಿ, ಪಾಯಸ, ಊಟದ ವ್ಯವಸ್ಥೆ ಮಾಡುತ್ತಾರೆ. ಕಂಕಣ ತೊಡಿಸುತ್ತಾರೆ.  ನಮ್ಮ ಕಮ್ಯುನಿಟಿಯ ಹಿರಿಯರು ಆಶೀರ್ವಾದ ಮಾಡಿ ಹೋಗುತ್ತಾರೆ. ಇವೆಲ್ಲಾ ಆಪರೇಷನ್​ನ ಮೊದಲ ಪ್ರಕ್ರಿಯೆ ಎಂದಿದ್ದಾರೆ ಅವರು.

Tap to resize

Latest Videos

undefined

ನಾನು ಹೆಣ್ಣೆಂದು ತಿಳಿದು ರಾಜಕಾರಣಿ ಸಂಬಂಧ ಬೆಳೆಸಿದ: ಅನುಭವ ತೆರೆದಿಟ್ಟ ಟ್ರಾನ್ಸ್​ಜೆಂಡರ್​ ಚರಿತಾ

ಇದಾದ ಬಳಿಕ ಆಪರೇಷನ್​ ಥಿಯೇಟರ್​ನಲ್ಲಿ ಮೊದಲಿಗೆ ಬೆನ್ನಿಗೆ ಅನಸ್ತೇಷಿಯಾ ಕೊಡುತ್ತಾರೆ. ಆದರೆ ಒಂದೇ ಇಂಜೆಕ್ಷನ್​ಗೆ ಪ್ರಜ್ಞೆ ತಪ್ಪುವುದಿಲ್ಲ. ನನಗೆ ನಾಲ್ಕು ಇಂಜೆಕ್ಷನ್​ ಕೊಟ್ಟರು. ಅದಾದ ಬಳಿಕ  ಆ ಭಾಗಕ್ಕೆ ಆಪರೇಷನ್​ ಆಗುತ್ತದೆ. ಐದಾರು ಗಂಟೆ ಆಪರೇಷನ್​ ನಡೆಯುತ್ತದೆ. ಆಗ ಇಂಜೆಕ್ಷನ್​ ಕೊಟ್ಟಿರುವ ಕಾರಣ ನೋವು ಗೊತ್ತಾಗುವುದಿಲ್ಲ. ಆಪರೇಷನ್​ ಮುಗಿದು ಸ್ವಲ್ಪ ಸಮಯದ ಬಳಿಕ ಇಂಜೆಕ್ಷನ್​ ಪವರ್​ ಮುಗಿಯುತ್ತಿದ್ದಂತೆಯೇ ಚಿತ್ರಹಿಂಸೆ ಶುರುವಾಗುತ್ತದೆ. ಸಹಿಸಿಕೊಳ್ಳಲಾಗದ ನೋವು ಬರುತ್ತದೆ. ಯಾಕಾದರೂ ಬದುಕಿದ್ದೇನೋ ಎನ್ನಿಸುತ್ತದೆ ಎಂದಿರುವ ಚರಿತಾ, ಈ ನೋವನ್ನು ಕಡಿಮೆ ಮಾಡಲು ಮತ್ತೆ ಇಂಜೆಕ್ಷನ್​ ಕೊಡಿ ಎಂದು ನಾನು ಬೇಡಿಕೊಂಡಿದ್ದೆ ವೈದ್ಯರ ಬಳಿ ಎಂದಿದ್ದಾರೆ. ಇದರ ಜೊತೆ ಅಲ್ಲಿ ಸಂತೈಸುವವರು ನಮ್ಮ ಕಮ್ಯುನಿಟಿಯವರು ಇರುತ್ತಾರೆ. ಆದರೆ ಹೆತ್ತ ಅಪ್ಪ-ಅಮ್ಮ ಇರುವುದಿಲ್ಲ ಎನ್ನುತ್ತಲೇ ಅವರು ಭಾವುಕರಾಗಿದ್ದಾರೆ. 

ಇದಾದ ಬಳಿಕ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬಾಣಂತಿಯಂತೆ ನೋಡಲಾಗುತ್ತದೆ. 41 ದಿನ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕು ಎನ್ನುತ್ತಲೇ ಆ 41 ದಿನಗಳು ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ ಚರಿತಾ. 41 ದಿನ ಒಂದೇ ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಅಲ್ಲಿರುವ ಎಲ್ಲಾ ದೇವರ ಫೋಟೋಗಳನ್ನು ವಸ್ತ್ರದಿಂದ ಮುಚ್ಚಲಾಗುತ್ತದೆ. ಇದೊಂದು ರೀತಿಯ ಸೂತಕ ಇದ್ದಂತೆ. ಆದ್ದರಿಂದ ಯಾರೂ ದೇವರ ಪೂಜೆ ಮಾಡುವುದಿಲ್ಲ. ಇನ್ನು ಸರ್ಜರಿ ಮಾಡಿಸಿಕೊಂಡವರು 41 ದಿನ ಗಂಡಸನ್ನು ನೋಡುವ ಹಾಗಿಲ್ಲ. ಕಂಕಣ ಕಟ್ಟಿರುತ್ತಾರೆ.  ನಾವು ಅಂದ್ರೆ ಸರ್ಜರಿ ಮಾಡಿಸಿಕೊಂಡವರು ಹಾಲು ಮುಟ್ಟುವ ಹಾಗಿಲ್ಲ. ನಮ್ಮ ದೇವತೆ ಸಂತೋಷಿ ಮಾ. ಆಕೆಯ ವಾಹನ ಹುಂಜ. ಆದ್ದರಿಂದ ನಮ್ಮ ಕಮ್ಯುನಿಟಿಯ ಯಾರೂ ಹುಂಜ ತಿನ್ನುವುದಿಲ್ಲ.  ಬಾಣಂತಿಯಂತೆ ಆರೈಕೆ ಮಾಡಲಾಗುತ್ತದೆ. ನಮ್ಮ ಗುರುಗಳು ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆ. ಅವರೇ ಎಲ್ಲ ರೀತಿಯ ಕೇರ್​ ಮಾಡುತ್ತಾರೆ ಎಂದಿದ್ದಾರೆ ಚರಿತಾ. 

ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್​ಬಾಸ್​ ನೀತು

click me!