ಐಶ್ವರ್ಯ ಡಿಕೆಎಸ್ ಹೆಗ್ಡೆ ಇದೀಗ ಮತ್ತೊಂದು ಒಳ್ಳೆ ಕೆಲಸಕ್ಕೆ ಕೈಹಾಕಿದ್ದಾರೆ. ಡಿಕೆ ಶಿವಕುಮಾರ್ ಪುತ್ರಿಯ ಈ ನಡೆಗೆ ಐಶ್ವರ್ಯ ಅಭಿಮಾನಿಗಳು ಮಾತ್ರವಲ್ಲ ಕರ್ನಾಟಕ ರಾಜ್ಯವೇ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರು(ಸೆ.19) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡೆಕೆಸ್ ಹೆಗ್ಡೆ ಯಶಸ್ವಿಯಾಗಿ ಉದ್ಯಮಿಯಾಗಿ, ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಆಡಳಿತಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳು, ಸೆಮಿನಾರ್ ನಡೆಸಿಕೊಡುವ ಐಶ್ವರ್ಯ ಡೆಕೆಎಸ್ ಹೆಗ್ಡೆ ಇದೀಗ ಮತ್ತೊಂದು ಒಳ್ಳೆ ಕೆಲಸಕ್ಕೆ ಕೈಹಾಕಿದ್ದಾರೆ. ಈ ಬಾರಿಯ ಐಶ್ವರ್ಯ ನಡೆಗೆ ಇಡೀ ರಾಜ್ಯವೇ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಹೌದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹಾಗೂ ಕೆಲ ಸಂಸ್ಥೆಗಳ ಸಹಯೋಗದಲ್ಲಿ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ ಬಸವನಗುಡಿಯ ಸರ್ಕಾರಿ ಬಾಲಕಿಯರ 1000ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಐಶ್ವರ್ಯ ಡಿಕೆಎಸ್ ಹೆಗ್ಡೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಲಾಬ್ ಸೇವಾ ಹಾಗೂ ಹರ್ಷಾ ಪೆರಿಕಲ್ ಫೌಂಡೇಷನ್ ಸಹಯೋಗದಲ್ಲಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಶಾಲಾ ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಕುರಿತು ಖುದ್ದು ಐಶ್ವರ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಗರ್ಭಕಂಠ ಕ್ಯಾನ್ಸರ್ ಕುರಿತು ತಿಳಿಯಲು ಹಾಗೂ ತಮ್ಮನ್ನು ರಕ್ಷಿಸಿಕೊಳ್ಳಲು ಧೈರ್ಯ ಮಾಡಿ ಮುಂದೆ ಬಂದಿರು ವಿದ್ಯಾರ್ಥಿನಿಯರನ್ನು ಪ್ರಶಂಸಿಸಿದ್ದಾರೆ.
undefined
ಚೇರ್ಮೆನ್ ಮಗಳು ಐಶ್ವರ್ಯ ಕ್ಲಾಸಿಗೆ ಹಾಕಿದ್ರಾ ಬಂಕ್? ಅಟೆಂಡೆನ್ಸ್ ಬಗ್ಗೆ ಡಿಕೆಶಿ ಪುತ್ರಿ ಹೇಳಿದ್ದೇನು?
ಈ ಕಾರ್ಯಕ್ರಮದ ಮೂಲಕ ಗರ್ಭಕಂಠ ಕ್ಯಾನ್ಸರ್ ಲಕ್ಷಣಗಳು, ಎದುರಾಗುವ ಅಪಾಯ, ತಡೆಗಟ್ಟಲು ಹಾಗೂ ಬರದಂತೆ ತಡೆಯಲು ಮಾಡಬೇಕಾದ ಆರೋಗ್ಯ ಕಾಳಜಿಗಳ ಕುರಿತು ಹೇಳಲಾಯಿತು ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. ಇದೇ ವೇಳೆ ಧೈರ್ಯವಾಗಿ ಮುಂದೆ ಬಂದು ಗರ್ಭಕಂಠ ಕ್ಯಾನ್ಸರ್ ಕುರಿತು ಅರಿವು, ತಮ್ಮನ್ನು ಹಾಗೂ ತಮ್ಮ ಸಮುದಾಯದ ರಕ್ಷಣೆಗೆ ನಿಂತಿರುವ ವಿದ್ಯಾರ್ಥಿನಿಯರಿಗೆ ಮೆಚ್ಚುಗೆಯನ್ನು ಸಲ್ಲಿಸಿದ್ದಾರೆ.
ಪ್ರತಿಯೊಬ್ಬ ಹೆಣ್ಣು ಮಗು ಬಲಿಷ್ಠವಾಗಬೇಕು ಹಾಗೂ ತನ್ನವರಿಗಾಗಿಯೂ ಅಷ್ಟೆ ಗಟ್ಟಿಗಿತ್ತಿಯಾಗಬೇಕು. ನಾವು ಜೊತೆಯಾಗಿ ಕೇವಲ ಜಾಗೃತಿ ಮಾತ್ರ ಮೂಡಿಸಿತ್ತಿಲ್ಲ, ಇದರ ಜೊತೆಗೆ ಸಮುದಾಯಗಳನ್ನು ಉಳಿಸುವ, ಆರೋಗ್ಯ ಸಮಸ್ಯೆಗಳಿಂದ ಮುಕ್ತವಾಗಿಸುವ, ಭ್ರಾತೃತ್ವ ಮೂಡಿಸುವು ಕಾರ್ಯಕ್ಕೆ ಮುನ್ನುಡಿ ಬರೆದಿದ್ದೇವೆ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿಕೊಂಡಿದ್ದಾರೆ.
ಮಹಿಳಾ ಸಬಲೀಕರಣ, ಮಹಿಳೆಯರ ರಕ್ಷಣೆಗೆ ನಾವು ಕಟಿಬದ್ಧರಾಗಬೇಕು. ಮಹಿಳೆಯರು ಮಹಿಳೆಯರ ಬೆಂಬಲಿಸಿದಾಗ ಬದಲಾವಣೆ ಹಾಗೂ ಸುಭದ್ರ ಸಮಾಜ ಸೃಷ್ಟಿಯಾಗಲಿದೆ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. ಐಶ್ವರ್ಯ ಡಿಕೆಎಸ್ ಹೆಗ್ಡೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ ಕುರಿತು ಹಲವು ಕಾರ್ಯಕ್ರಮ ಆಯೋಜಿಸಿದ್ದಾರೆ. ತಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಐಶ್ವರ್ಯ ಡಿಕೆಎಸ್ ಹೆಗ್ಡೆ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಲ್ಲಿ ಓದಿದ್ರೆ ಸಾಕು, ಪುತ್ರಿಗೆ ಡಿಕೆಶಿ ಹಾಕಿದ್ರಾ ಕಂಡೀಷನ್? ಐಶ್ವರ್ಯ ಮುಕ್ತ ಮಾತು!