ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋಗಳಿಗೆ ಕೊರತೆಯೇನಿಲ್ಲ. ಪ್ರತಿ ಬಾರಿ ಸ್ಕ್ರಾಲ್ ಮಾಡಿದಾಗಲೂ ವಿಭಿನ್ನವಾದ, ಹೊಸತಾದ ವಿಡಿಯೋಗಳನ್ನ ನೋಡುತ್ತಲೇ ಇರುತ್ತೀರಿ. ಹಾಗೆಯೇ ದಿನಾ ಲೆಕ್ಕವಿಲ್ಲದಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಜನರ ಗಮನ ಸೆಳೆಯುತ್ತವೆ. ಇಂತಹ ಕೆಲವು ವಿಡಿಯೋಗಳು ಸಾಕಷ್ಟಿವೆ. ನೀವೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ ಬಹುಶಃ ಈ ವೈರಲ್ ವಿಡಿಯೋಗಳನ್ನ ಸಾಕಷ್ಟು ನೋಡಿರುತ್ತೀರಿ. ಪ್ರಸ್ತುತ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೇದಿಕೆಯ ಮೇಲೆ ವಧು ಬಂದಾಗ ವರನು ಕೆಲವು ನೋಟುಗಳನ್ನು ಕೈಯಲ್ಲಿ ತೆಗೆದುಕೊಂಡು ವಧುವನ್ನು ಸುತ್ತುತ್ತಾ ಗಾಳಿಯಲ್ಲಿ ಎಸೆಯುವ ದೃಶ್ಯ ನೀವು ನೋಡಿರಬೇಕು. ಇಲ್ಲಿಯೂ ಅದೇ ರೀತಿ ಆಗಿದೆ. ಆದರೆ ಈ ಬಾರಿ ಮಾಡಿದ್ದು ವರನಲ್ಲ, ವಧು. ಹೌದು, ವರನು ವೇದಿಕೆಗೆ ಬಂದ ನಂತರ ವಧು ನೋಟುಗಳನ್ನು ಹೊರತೆಗೆಯುತ್ತಾಳೆ. ದೃಷ್ಟಿ ತೆಗೆಯುವ ಹಾಗೆ ಸುತ್ತು ಸುತ್ತಿ, ಗಾಳಿಯಲ್ಲಿ ಎಸೆಯುತ್ತಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಧುವಿನ ಹೆಸರೇನು, ವರ ಯಾರು, ಈ ಮಾಹಿತಿಯನ್ನು ನೀಡಲಾಗಿಲ್ಲ ಆದರೆ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ
ನೀವು ಈಗಷ್ಟೇ ನೋಡಿದ ವಿಡಿಯೋವನ್ನು @ArunKoslii ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋಗೆ 'ಹೆಂಡತಿ ಇದ್ದರೆ ಹೀಗಿರಬೇಕು' ಎಂದು ಬರೆಯಲಾಗಿದೆ. ಈ ಸುದ್ದಿ ಬರೆಯುವವರೆಗೆ 8 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ. ಜೊತೆಗೆ ಕಾಮೆಂಟ್ ಸಹ ಮಾಡಿದ್ದಾರೆ. "ಸಹೋದರ, ಇದು ಪ್ಲೇಬಾಯ್", "ವಾಹ್, ಭಾಭಿ ಜಿ, ನಾನು ಒಪ್ಪುತ್ತೇನೆ", "ಅವಳು ಎಲ್ಲವನ್ನೂ ನೋಡಿಕೊಳ್ಳುತ್ತಾಳೆ", "ಎಂತಹ ವಿಷಯ, ಸಹೋದರನ ಅದೃಷ್ಟ ತೆರೆದುಕೊಂಡಿದೆ, ಅವನಿಗೆ ಅಂತಹ ಹೆಂಡತಿ ಸಿಕ್ಕಿದ್ದಾಳೆ" ಎಂದೆಲ್ಲಾ ತಮಾಷೆಯಾಗಿ ಕಾಮೆಂಟ್ ಮಾಡಿರುವುದನ್ನ ನೋಡಬಹುದು.
ಈ ಹಿಂದೆಯೂ ಒಂದು ವಿಡಿಯೋ ವೈರಲ್ ಆಗಿತ್ತು. ಬಹುಶಃ ಅದು ಸ್ಕ್ರಿಪ್ಟೆಡ್ ಅನಿಸುತ್ತದೆ. ಆದ್ರೂ ಹಾಸ್ಯಮಯವಾಗಿದೆ. ಆ ವಿಡಿಯೋದಲ್ಲಿ ಏನಿತ್ತು ಅಂತೀರಾ?. ವೈರಲ್ ಆಗಿದ್ದ ವಿಡಿಯೋದಲ್ಲಿ ಒಬ್ಬ ಮಹಿಳೆ ಸೋಫಾದ ಅಂಚಿನಲ್ಲಿ ಕುಳಿತು ಫೋನ್‌ನಲ್ಲಿ ಏನೋ ನೋಡ್ತಿದ್ದಾಳೆ. ನಂತರ ಇದಕ್ಕಿದ್ದಂತೆ ಬರುವ ಆಕೆಯ ಗಂಡ ಪೊರಕೆಯಲ್ಲಿ ಬಟ್ಟೆಯನ್ನು ನೇತುಹಾಕಿಕೊಂಡು ಮೇಲಕ್ಕೆ ನೋಡುತ್ತಾ ಹೋಗುವುದನ್ನು ನೋಡುತ್ತಾಳೆ. ಹೆಂಡತಿಗೆ ಗಂಡನ ವರ್ತನೆ ನೋಡಿ ಆಶ್ಚರ್ಯವಾಗುತ್ತೆ. ನಂತರ ಅವಳು ಮತ್ತೆ ಫೋನ್ ನೋಡ್ತಾ ಸುಮ್ನಾಗ್ತಾಳೆ. ಹಾಗೆ ಹೋದ ಗಂಡ ಮತ್ತೆ ಹಿಂತಿರುಗುತ್ತಾನೆ. ಮತ್ತದೇ ರೀತಿಯಲ್ಲಿ. ಈ ಬಾರಿ ಒಂದೇ ವ್ಯತ್ಯಾಸವೆಂದರೆ ಅವನ ಇನ್ನೊಂದು ಕೈ ಖಾಲಿಯಾಗಿಲ್ಲ, ಬದಲಿಗೆ ಡ್ರಿಂಕ್ಸ್ ಬಾಟಲಿಯಿದೆ. ಇದನ್ನ ಹೆಂಡ್ತಿ ಗಮನಿಸಲ್ಲ. ಆ ವ್ಯಕ್ತಿ ಬಾಟಲಿಯನ್ನು ತೆಗೆದುಕೊಳ್ಳಲು ಇಷ್ಟೆಲ್ಲಾ ಮಾಡ್ತಾನೆ. ವಿಡಿಯೋವನ್ನ @OGitala ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದ ಜೊತೆಗೆ ಶೀರ್ಷಿಕೆ "ದೇವರು ಎಲ್ಲರಿಗೂ ಇಂತಹ ಮುಗ್ಧ ಹೆಂಡತಿಯನ್ನು ಕೊಡಲಿ." ಎಂದಿದೆ. ವಿಶಿಷ್ಟತೆಯಿಂದಾಗಿ ಈ ವಿಡಿಯೋ ವೈರಲ್ ಆಗಿದೆ ಮತ್ತು ಇತರ ಖಾತೆಗಳಿಂದಲೂ ಮರು ಪೋಸ್ಟ್ ಮಾಡಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.