Earning Money: ಶ್ರೀಮಂತೆಯಾಗಲು ಸರ್ಕಾರಿ ಕೆಲಸ ಬಿಟ್ಟ ಈಕೆ ಗಳಿಕೆ ಹುಬ್ಬೇರಿಸುವಂತಿದೆ!

Published : Aug 28, 2023, 01:31 PM IST
Earning Money: ಶ್ರೀಮಂತೆಯಾಗಲು ಸರ್ಕಾರಿ ಕೆಲಸ ಬಿಟ್ಟ ಈಕೆ ಗಳಿಕೆ ಹುಬ್ಬೇರಿಸುವಂತಿದೆ!

ಸಾರಾಂಶ

ಸರ್ಕಾರಿ ಕೆಲಸ ಸೇರಿದಂತೆ ಭದ್ರತೆ ಇರುವ ಕೆಲಸ ಬಿಡೋಕೆ ಪ್ರತಿಯೊಬ್ಬರಿಗೂ ಭಯ. ಆ ಕೆಲಸವನ್ನು ತೊರೆದು ಜೀವನದಲ್ಲಿ ಮತ್ತೊಂದು ಹಾದಿ ಹಿಡಿದು ಯಶಸ್ಸು ಗಳಿಸೋದು ಸುಲಭವಲ್ಲ. ಈ ಮಹಿಳೆ ಅದನ್ನು ಸಾಧಿಸಿದ್ದಾಳೆ.   

ಸರ್ಕಾರಿ ನೌಕರಿ ಸಿಕ್ಕಿದೆ ಅಂದ್ರೆ ಭಾರತೀಯರಿಗೆ ಅದೇನೋ ಖುಷಿ. ಸರ್ಕಾರಿ ನೌಕರಿಗಾಗಿ ಜನರು ಸಾಕಷ್ಟು ಪ್ರಯತ್ನ ಕೂಡ ಮಾಡ್ತಾರೆ. ಭಾರತದಲ್ಲಿ ಸರ್ಕಾರಿ ನೌಕರಿ ಸಿಗೋದು ಸುಲಭವಲ್ಲ. ಒಂದ್ವೇಳೆ ಸರ್ಕಾರಿ ಕೆಲಸ ಸಿಕ್ಕಿದ್ರೆ ಬಿಡುವ ಆಲೋಚನೆ ಕೂಡ ಜನರು ಮಾಡೋದಿಲ್ಲ. ಭಾರತ ಮಾತ್ರವಲ್ಲ, ಅಮೆರಿಕಾದಲ್ಲೂ ಇದೇ ಸ್ಥಿತಿ ಇದೆ. ಸರ್ಕಾರಿ ಕೆಲಸದಲ್ಲಿ ಉದ್ಯೋಗ ಕಳೆದುಕೊಳ್ಳುವ ಭಯವಿಲ್ಲ. ತಿಂಗಳಿಗೆ ಸರಿಯಾಗಿ ಸಂಬಳ. ದಿನದಲ್ಲಿ ನಿಗದಿತ ಸಮಯದಲ್ಲಿ ಮಾತ್ರ ಕೆಲಸ. ನಿವೃತ್ತಿ ನಂತ್ರ ಪಿಂಚಣಿ ಹೀಗೆ ನಾನಾ ಕಾರಣಕ್ಕೆ ಜನರು ಸರ್ಕಾರಿ ನೌಕರಿ ಪಡೆಯುವ ಪ್ರಯತ್ನ ಮಾಡ್ತಾರೆ. ಅದೇ ಖಾಸಗಿ ಕೆಲವನ್ನು ನಂಬೋದು ಕಷ್ಟ. ಯಾವಾಗ ಬೇಕಾದ್ರೂ ಕೆಲಸದಿಂದ ನಿಮ್ಮನ್ನು ತೆಗೆದುಹಾಕ್ಬಹುದು. ಅದನ್ನು ನಂಬಿ ಯಾವುದೇ ಪ್ಲಾನ್ ಮಾಡಲು ಸಾಧ್ಯವಾಗೋದಿಲ್ಲ. ಸರ್ಕಾರಿ ಕೆಲಸ ಸಿಕ್ಕಿದ್ಮೇಲೂ ಅದನ್ನು ಬಿಟ್ಟು ಬೇರೆ ಕೆಲಸ ಮಾಡ್ತೇನೆ ಅಂದ್ರೆ ಭಾರತದಲ್ಲಿ ನಿಮಗೆ ಹುಚ್ಚು ಎಂದುಕೊಳ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಹೆಚ್ಚು ಹಣ ಸಂಪಾದನೆ ಮಾಡೋಕೆ ಸರ್ಕಾರಿ ಕೆಲಸ ಬಿಟ್ಟಿದ್ದಾಳೆ. ಆಕೆ ಯಾರು, ಆಕೆ ಮಾಡ್ತಿರೋ ಕೆಲಸವೇನು ಎಂಬುದರ ವಿವರ ಇಲ್ಲಿದೆ.

ಅಮೆರಿಕಾದ ಬ್ರಿಯಾನಾ ಡೈಮಂಡ್ (Brianna Diamond) ಎಂಬ ಈ ಹುಡುಗಿ ಸರ್ಕಾರಿ ಕೆಲಸವನ್ನು ತೊರೆದವಳು. ಈಕೆ ಆರಂಭದಲ್ಲಿ ಸರ್ಕಾರಿ (Official) ಕೆಲಸ ಬಿಡಲು ತುಂಬಾ ಭಯಪಟ್ಟಿದ್ದಳಂತೆ. ಸರ್ಕಾರಿ ಕೆಲಸ ಬಿಟ್ಟರೆ ಮುಂದೆ ತೊಂದರೆಯಾಗಬಹುದು ಎಂಬ ಆತಂಕ ಬ್ರಿಯಾನಾ ಡೈಮಂಡ್ ಗೆ ಇತ್ತಂತೆ. ಆದ್ರೆ ಧೈರ್ಯ ಮಾಡಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ ಬ್ರಿಯಾನಾ ಡೈಮಂಡ್ ಈಗ ಕೈತುಂಬ ಸಂಪಾದನೆ ಮಾಡ್ತಿದ್ದಾಳೆ. 

Sleep Disorder: ಪುರುಷರಿಗೆ ಹೋಲಿಸಿದ್ರೆ ತಡರಾತ್ರಿಯಾದ್ರೂ ಮಹಿಳೆಗೆ ನಿದ್ರೆ ಬರೋದಿಲ್ಲ ಯಾಕೆ?

ಸರ್ಕಾರಿ ಕೆಲಸ ಬಿಟ್ಟು ಬ್ರಿಯಾನಾ ಡೈಮಂಡ್ ಮಾಡಿದ್ದೇನು? : ಬ್ರಿಯಾನಾ ಡೈಮಂಡ್ ಸರ್ಕಾರಿ ಕೆಲಸ ಬಿಟ್ಟ ಮೇಲೆ ತನ್ನ ಫೋಟೋ (Photo)ವನ್ನು ಮಾರಾಟ ಮಾಡಲು ಶುರು ಮಾಡಿದ್ದಾಳೆ. ಈಗ ಫೋಟೋ ಮಾರಾಟ ಮಾಡಿಯೇ ಆಕೆ ಸಾಕಷ್ಟು ಸಂಪಾದನೆ ಮಾಡ್ತಿದ್ದಾಳೆ. ಸರ್ಕಾರಿ ಸಂಬಳಕ್ಕಿಂತ ಹೆಚ್ಚು ಆದಾಯವನ್ನು ನಾನು ಗಳಿಸುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಸರ್ಕಾರಿ ಕೆಲಸ ಬಿಡುವ ಮನಸ್ಸು ಬ್ರಿಯಾನಾ ಡೈಮಂಡ್ ಗೆ ಇರಲಿಲ್ಲವಂತೆ. ಕೆಲಸ ಬಿಟ್ಟ ಮೇಲೆ ನನಗೆ ಪಶ್ಚಾತಾಪ ಆಗಿಲ್ಲ ಎಂದೂ ಆಕೆ ಹೇಳ್ತಾಳೆ. ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಹೆಚ್ಚು ಸಂಪಾದನೆ ಮಾಡೋದು ಅನಿವಾರ್ಯವಾಗಿತ್ತು ಎಂಬುದು ಬ್ರಿಯಾನಾ ಡೈಮಂಡ್ ಮಾತು.

ಭಾರತದಲ್ಲಿದೆ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್; ಇಲ್ಲಿ ರೋಬೋಟ್‌ ಗಳದ್ದೇ ಕೆಲಸ..!

ಬ್ರಿಯಾನಾ ಡೈಮಂಡ್ ಈಗಿನ ಗಳಿಕೆ ಎಷ್ಟು ಗೊತ್ತಾ? : ಬ್ರಿಯಾನಾ ಡೈಮಂಡ್ ತನ್ನ ವೃತ್ತಿ ಜೀವನವನ್ನು ಕೊನೆಗೂ ಬದಲಿಸಿದ್ದಾಳೆ. ಈಗ ಅವಳ ನಿವೃತ್ತಿ ಉಳಿತಾಯ ನಾಲ್ಕು ಪಟ್ಟು ಹೆಚ್ಚಾಗಿದೆ. ಬ್ರಿಯಾನಾ ಡೈಮಂಡ್ ಆರೋಗ್ಯ ವಿಮೆಯನ್ನು ಕೂಡ ತೆಗೆದುಕೊಂಡಿದ್ದಾಳೆ. ಬ್ರಿಯಾನಾ ಬರೀ ಒಂದು ವೆಬ್ಸೈಟ್ ನಲ್ಲಿ ತನ್ನ ಫೋಟೋಗಳನ್ನು ಹಂಚಿಕೊಳ್ಳೋದಿಲ್ಲ. ಆಕೆ 33 ವೇದಿಕೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡ್ತಾಳೆ. ಬ್ರಿಯಾನಾ ಡೈಮಂಡ್ ಫೋಟೋಗಳನ್ನು ನೀವು  ಪ್ಲೇಬಾಯ್, ಸೆಂಟರ್‌ಫೋಲ್ಡ್ ವೆಬ್‌ಸೈಟ್, ಮಾನಿವಿಡ್ಸ್ ಮತ್ತು ಫ್ಯಾನ್ಸ್ಲಿ ಪ್ಲಾಟ್‌ಫಾರ್ಮ್‌ಗಳಿಗೆ ಮಾರಾಟ ಮಾಡುತ್ತಾಳೆ. ತಾನು ಗಳಿಸಿದ್ದೆಲ್ಲವನ್ನೂ ತನ್ನ ಮಗನಿಗಾಗಿ ಕೂಡಿಡುತ್ತಿದ್ದಾಳೆ ಬ್ರಿಯಾನ್ ಡೈಮಂಡ್. 

ಸರ್ಕಾರಿ ಕೆಲಸ ಮಾಡುವಾಗ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಈಗ ಸಾಕಷ್ಟು ಹಣವಿದೆ, ಚಿನ್ನವಿದೆ, ಭೂಮಿಯಿದೆ, ಕೆಲ ಹಣಕಾಸಿನ ಬಾಂಡ್‌ಗಳು ಮತ್ತು ಷೇರುಗಳನ್ನು ಖರೀದಿಸಿದ್ದಾಗಿ ಬ್ರಿಯಾನ್ ಡೈಮಂಡ್ ಹೇಳಿದ್ದಾಳೆ. ಬ್ರಿಯಾನ್ ಮಾಡ್ತಿರುವ ಕೆಲಸಕ್ಕೆ ಕುಟುಂಬಸ್ಥರ ಸಂಪೂರ್ಣ ಬೆಂಬಲವಿದೆಯಂತೆ. ಮುಂದಿನ ಜೀವನ ಉತ್ತಮವಾಗಿರಲಿ ಎನ್ನುವ ಕಾರಣಕ್ಕೆ ಇದೆಲ್ಲವನ್ನೂ ಮಾಡ್ತಿದ್ದೇನೆ ಎನ್ನುತ್ತಾಳೆ ಬ್ರಿಯಾನ್ ಡೈಮಂಡ್. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?