
ಇಲ್ಲೊಬ್ಬ ಮಹಿಳೆ ತನ್ನ ಮಗುವಿಗೆ ಅನಾರೋಗ್ಯವಿದೆ ಎಂದು ತಾಯಿ ಆರೈಕೆ ಮುಖ್ಯವೆಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಹಾಲುಣಿಸುವ ರಜೆ ಹಾಕಿದ್ದಾರೆ. ಆದರೆ, ಇದಕ್ಕೆ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿ ನಿಮಗೆ ರಜೆ ಕೊಡಲು ಸಾಧ್ಯವಿಲ್ಲ ಎಂದಿದೆ. ಆದಾಗ್ಯೂ ರಜೆ ಬೇಕೆಂದರೆ ನೀವು ಹಾಲುಣಿಸುವುದರ ಸಾಕ್ಷಿ ಕೊಡುವಂತೆ ಕೇಳಿದೆ. ಈ ಕುರಿತು ಕಂಪನಿ ವಿರುದ್ಧ ಮಹಿಳೆ ಕೋರ್ಟ್ ಮೊರೆ ಹೋಗಿದ್ದು, ಖಾಸಗಿ ಕಂಪನಿಗೆ ಕೋರ್ಟ್‌ನಿಂದ ಛೀಮಾರಿ ಹಾಕಲಾಗಿದೆ.
ಸಾಮಾನ್ಯವಾಗಿ ಎಲ್ಲ ಬಡ ಮತ್ತು ಶ್ರೀಮಂತ ದೇಶಗಳಲ್ಲಿಯೂ ಕೂಡ ಒಂದು ನೋಂದಾಯಿತಿ ಕಂಪನಿ ಎಂದಾಕ್ಷಣ ಅಲ್ಲಿ ಮಹಿಳೆಯರಿಗೆ ತಾಯ್ತನದ ರಜೆಯನ್ನು ಕೊಡಲಾಗುತ್ತದೆ. ಒಂದು ವೇಳೆ ತಾಯ್ತನ ರಜೆಯ ಅವಧಿ ಮುಗಿದಾಗ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಾಗ ತಾಯಿ ರಜೆ ಹಾಕಿ ಹೋಗಬೇಕು. ಇಲ್ಲೊಬ್ಬ ಮಹಿಳೆ ತನ್ನ ಮಗುವಿಗೆ ಅನಾರೋಗ್ಯವಿದೆ ಎಂದು ತಾಯಿ ಹಾಲುಣಿಸುವುದು ಮುಖ್ಯವೆಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಹಾಲುಣಿಸುವ ರಜೆ ಹಾಕಿದ್ದಾರೆ. ಆದರೆ, ಇದಕ್ಕೆ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿ ನೀವು ಹಾಲುಣಿಸುತ್ತಿದ್ದೀರಿ ಎಂಬುದಕ್ಕೆ ಸಾಕ್ಷಿ ಕೊಡುವಂತೆ ಕೇಳಿದೆ. ಅಂದರೆ, ಮಹಿಳೆ ತನ್ನ ಮಗುವಿಗೆ ಹಾಲುಣಿಸುವ ಫೋಟೋ ಅಥವಾ ವಿಡಿಯೋವನ್ನು ಕೇಳಿದೆ.
ಮಗುವಿಗೆ ಅನಾರೋಗ್ಯ ಕಂಡುಬಂದ ಕಾರಣ ತಾಯಿ ಹಾಲುಣಿಸುವ ರಜೆ ಕೇಳಿದ್ದಾಳೆ. ಆದರೆ, ಇದಕ್ಕೆ ನಿರಾಕರಿಸಿದ ಕಂಪನಿಯ ವಿರುದ್ಧ ನ್ಯಾಯಾಲಯದ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಘಟನೆ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಲುವೋ ಎಂಬ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಹೆರಿಗೆ ರಜೆಯೊಂದಿಗೆ ಇವರಿಗೆ ನೀಡಲಾಗಿದ್ದ ಒಂದು ತಿಂಗಳ ಹಾಲುಣಿಸುವ ರಜೆಯನ್ನು ಕಂಪನಿ ರದ್ದುಪಡಿಸಿತ್ತು. ರಜೆ ನೀಡಬೇಕಾದರೆ ಮಗುವಿಗೆ ಹಾಲುಣಿಸಿದ ಪುರಾವೆ ತೋರಿಸಬೇಕು ಎಂದು ಕಂಪನಿ ವಿಚಿತ್ರ ರೀತಿಯಲ್ಲಿ ವಾದ ಮಾಡಿತ್ತು.
ಇದನ್ನೂ ಓದಿ: ಯುಕೆಜಿ ಮಕ್ಕಳಿಗೆ ಘಟಿಕೋತ್ಸವ: ಶಿಕ್ಷಣ ಸಂಸ್ಥೆಗಳಿಂದ ಹಣ ಸುಲಿಗೆಗೆ ಮತ್ತೊಂದು ಟ್ರಿಕ್ಸ್ ಎಂದು ಆಕ್ರೋಶ
2022ರ ಜನವರಿಯಲ್ಲಿ ಮಗು ಹುಟ್ಟುವ ಮುನ್ನ ಇ-ಕಾಮರ್ಸ್ ಕಂಪನಿ ಲುವೋಗೆ ಹೆರಿಗೆ ರಜೆಯೊಂದಿಗೆ ಒಂದು ತಿಂಗಳ ಹಾಲುಣಿಸುವ ರಜೆಯನ್ನು ನೀಡಿತ್ತು. ಆದರೆ, ಮಗು ಹುಟ್ಟಿದ ನಂತರ ಮಗುವಿಗೆ ಕಾಮಾಲೆ ರೋಗವಿದೆ ಎಂದು ತಿಳಿದುಬಂದ ಕಾರಣ, ಮಗು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಎರಡು ವಾರಗಳ ಕಾಲ ಹಾಲುಣಿಸುವುದನ್ನು ನಿಲ್ಲಿಸುವಂತೆ ವೈದ್ಯರು ಸೂಚಿಸಿದರು. ಮಗುವಿನ ಅನಾರೋಗ್ಯದ ಬಗ್ಗೆ ಲುವೋ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಆ ಪೋಸ್ಟ್ ಗಮನಿಸಿದ ಕಂಪನಿ, ಯುವತಿಗೆ ಹಾಲುಣಿಸಿದ ಪುರಾವೆ ನೀಡುವಂತೆ ಅಥವಾ ಹಾಲುಣಿಸುವ ರಜೆಯನ್ನು ರದ್ದುಗೊಳಿಸುವುದಾಗಿ ತಿಳಿಸಿತು. ಅಲ್ಲದೆ ರಜೆಯಲ್ಲಿದ್ದಾಗ ನೀಡಿದ ಸಂಬಳವನ್ನು ಕಂಪನಿ ವಾಪಸ್ ಕೇಳಿದೆ.
ಇದಾದ ಬಳಿಕ ಲುವೋ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯವು ಕಂಪನಿಯ ಕ್ರಮವನ್ನು ಟೀಕಿಸಿತು ಮತ್ತು ಲುವೋ ಪರವಾಗಿ ತೀರ್ಪು ನೀಡಿತು. ಆದರೆ, ಇದರ ವಿರುದ್ಧ ಕಂಪನಿ ಮೇಲ್ಮನವಿ ಸಲ್ಲಿಸಿದರೂ ಮೇಲ್ಮನವಿ ನ್ಯಾಯಾಲಯವು ಲುವೋ ಅವರ ವಾದವನ್ನು ಸಮರ್ಥಿಸಿ ಆಕೆಗೆ ಅನುಕೂಲಕರವಾಗಿ ತೀರ್ಪು ನೀಡಿತು. ಕಾನೂನಿನ ಪ್ರಕಾರ ಸಿಚುವಾನ್‌ನಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ 6 ತಿಂಗಳ ಹೆರಿಗೆ ರಜೆಯ ಜೊತೆಗೆ ಒಂದು ತಿಂಗಳ ಹೆಚ್ಚುವರಿ ಹಾಲುಣಿಸುವ ರಜೆಗೂ ಅರ್ಹತೆ ಹೊಂದಿದ್ದಾರೆ. ಈ ಸುದ್ದಿ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕಂಪನಿಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ದಟ್ಟ ಹಿಮ ಕಾಡಿನಲ್ಲಿ ಕಳೆದುಹೋದ ಯುವಕ; 10 ದಿನ ಟೂತ್‌ಪೇಸ್ಟ್ ತಿಂದು ಜೀವ ಉಳಿಸಿಕೊಂಡ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.