Women's day 2023 Special: ನಾಳೆ ಇಡೀ ದಿನ ಮಹಿಳೆಯರಿಗೆ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ

By Gowthami K  |  First Published Mar 7, 2023, 3:19 PM IST

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 8ರಂದು ಮಹಿಳೆಯರ ಉಚಿತ ಪ್ರಯಾಣಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ.  ಮಾ.7ರ ಮಧ್ಯರಾತ್ರಿ 12 ಗಂಟೆಯಿಂದಲೇ ಇದು ಜಾರಿಯಾಗಲಿದೆ.


ಬೆಂಗಳೂರು (ಮಾ.7): ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 8ರಂದು ಮಹಿಳೆಯರ ಉಚಿತ ಪ್ರಯಾಣಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ.  ಮಾ.7ರ ಮಧ್ಯರಾತ್ರಿ 12 ಗಂಟೆಯಿಂದ ಮಾ.8ರ ಮಧ್ಯರಾತ್ರಿ 12 ಗಂಟೆ ರವರೆಗೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಿಬಿಎಂಟಿಸಿ ಬಸ್​​ಗಳಲ್ಲಿ ಪ್ರಯಾಣಿಸಬಹುದು. ವೋಲ್ವೋ, ಎಸಿ ಬಸ್, ವಾಯುವ್ಯ ರಸ್ತೆ ಸಾರಿಗೆ, ಏರ್ಪೋರ್ಟ್ ಬಸ್ ಸೇರಿದಂತೆ ಬಿಎಂಟಿಸಿಯ ಎಲ್ಲ ಮಾದರಿಯ ಬಸ್​​ನಲ್ಲಿ ಉಚಿತವಾಗಿ ನಾಳೆ ಒಂದು ದಿನ ಮಹಿಳೆಯರು ಪ್ರಯಾಣಿಸಬಹುದಾಗಿದೆ.

ಈ ಸಂಬಂಧ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ  ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ (ಎಂ.ಡಿ) ಸತ್ಯವತಿ ಪತ್ರ ಬರೆದಿದ್ದರು. ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ  ಸಂಸ್ಥೆಯ ಎಲ್ಲಾ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಮನವಿ ಪತ್ರಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಬಿಎಂಟಿಸಿ ಬಸ್​​​ನಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಬೆಂಗಳೂರಿನಲ್ಲಿ 10,21,645 ಮಹಿಳಾ ಪ್ರಯಾಣಿಕರು ಸಂಚಾರ ಮಾಡುತ್ತಾರೆ.

Latest Videos

undefined

ಮಹಿಳಾ ದಿನಾಚರಣೆ  ದಿನದಂದು ಫ್ರೀ ಸೇವೆ ‌ಹಿನ್ನೆಲೆ ಸುಮಾರು 20.43 ಲಕ್ಷ ಮಹಿಳೆಯರು ಸಂಚಾರ ಮಾಡಬಹುದು ಎಂದು  ಅಂದಾಜು ಮಾಡಲಾಗಿದೆ.  ಹೀಗಾಗಿ ಬಿಎಂಟಿಸಿಗೆ ನಾಳೆ ಸುಮಾರು 8.17 ಕೋಟಿ ಖರ್ಚಾಗುವ ಸಾಧ್ಯತೆ ಇದೆ. ಸಂಸ್ಥೆಗೆ ಆಗುವ ಹೊರೆಯನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಲಾವುದು. ನಾಳೆ ಎಲ್ಲಾ ಮಹಿಳೆಯರು ಕುಟುಂಬ ಸಮೇತ ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡಿ ಅಂತ ಬಿಎಂಟಿಸಿ ಎಂ.ಡಿ ಸತ್ಯವತಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ?

ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು ಬಿಎಂಟಿಸಿ ಉದ್ದೇಶವಾಗಿದೆ. ಮಹಿಳಾ ದಿನದಂದು ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಅರಿವು ಮೂಡಿಸಿದಂತಾಗಲಿದೆ. ಜೊತೆಗೆ ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದಂತಾಗಲಿದೆ ಎಂದು ನಿಗಮ ಚಿಂತನೆ ನಡೆಸಿದ್ದು ಪ್ರಸ್ತಾವನೆ ಮೂಲಕ ಸರ್ಕಾರಕ್ಕೆ ಈ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ.

Women's Day Special : ಸೋಲಾರ್ ಪ್ಯಾನಲ್ ಮೂಲಕ ಮಹಿಳೆಯರಿಗೆ ಆಸರೆಯಾದ ಲಕ್ಷ್ಮಿ

ಬೆಂಗಳೂರಿನಲ್ಲಿ 40,86,580 ಮಹಿಳೆಯರಿದ್ದು, ಅದರಲ್ಲಿ ಪ್ರತಿದಿನ 10,21,645 ಮಂದಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಮಹಿಳಾ ದಿನವಾದ ಮಾರ್ಚ್‌ 8ರಂದು ಉಚಿತ ಬಸ್‌ ಪ್ರಯಾಣಕ್ಕೆ  ಸಮ್ಮತಿ ಸಿಕ್ಕಿದ್ದು ಅಂದಾಜು 20.44 ಲಕ್ಷ ಮಹಿಳೆಯರು ಪ್ರಯಾಣಿಸುವ ಸಾಧ್ಯತೆ ಇದೆ. ಇದರಿಂದ ಬಿಎಂಟಿಸಿಗೆ ಸುಮಾರು 8.17 ಕೋಟಿ ಖರ್ಚಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

click me!