ಇನ್ಸ್ಟಾಗ್ರಾಮ್ ಖಾತೆ ಹೆಸರಿಗಾಗಿ ಹುಡುಗಿ ಹಿಂದೆ ಬಿದ್ದ ಕೋಟ್ಯಾಧಿಪತಿ ಪತ್ನಿ! ಅಂಥದ್ದೇನಿತ್ತು ಅದ್ರಲ್ಲಿ?

Published : May 11, 2024, 12:21 PM IST
ಇನ್ಸ್ಟಾಗ್ರಾಮ್ ಖಾತೆ ಹೆಸರಿಗಾಗಿ ಹುಡುಗಿ ಹಿಂದೆ ಬಿದ್ದ ಕೋಟ್ಯಾಧಿಪತಿ ಪತ್ನಿ! ಅಂಥದ್ದೇನಿತ್ತು ಅದ್ರಲ್ಲಿ?

ಸಾರಾಂಶ

ಬಂಗಾರ, ಆಸ್ತಿ ಅಂತಾ ಅದ್ರ ಹಿಂದೆ ಓಡುವ ಜನರು ನಮಗಿಷ್ಟದ ವಸ್ತು ಸಿಕ್ಕಿಲ್ಲ ಅಂದಾಗ ಆಕ್ರಮಣಕಾರಿಯಾಗೋದಿದೆ. ಆದ್ರೆ ಈ ಶ್ರೀಮಂತರ ಮನೆ ಸೊಸೆ ಒಂದು ಹುಡುಗಿ ಹಿಂದೆ ಬಿದ್ದಿದ್ದಾಳೆ. ಅದು ಏನಕ್ಕೆ ಅಂತ ಕೇಳಿದ್ರೆ ನೀವು ದಂಗಾಗ್ತೀರಿ.  

ಜನರು ವಿಚಿತ್ರ ಸ್ವಭಾವವನ್ನು ಹೊಂದಿರ್ತಾರೆ. ತಮಗೆ ಬೇಕು ಎನ್ನಿಸಿದ್ದನ್ನು ಎಷ್ಟೇ ಕಷ್ಟವಾದ್ರೂ ಪಡೆದುಕೊಳ್ಳುವ ಸ್ವಭಾವ ಕೆಲವರದ್ದು. ಅದ್ರಲ್ಲೂ ಶ್ರೀಮಂತ ಕುಟುಂಬದ ಜನರ ಲೈಫ್ಸ್ಟೈಲ್ ಬೇರೆ. ಅವರಿಗೆ ಇಷ್ಟವಾಯ್ತು ಅಂದ್ರೆ ಎಷ್ಟೇ ಕಷ್ಟವಾದ್ರೂ ಅದನ್ನು ಪಡೆಯುತ್ತಾರೆ. ಅದಕ್ಕೆ ಕೋಟ್ಯಾಧಿಪತಿಯ ಪತ್ನಿಯೊಬ್ಬಳು ಉತ್ತಮ ನಿದರ್ಶನ. ಆಕೆ ಮಾಡಿದ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಗೆ ಇಷ್ಟವಾಗಿದ್ದು ಯಾವುದೋ ವಸ್ತುವಲ್ಲ, ಪ್ರಾಣಿಯಲ್ಲ. ಬದಲಾಗಿ ಇನ್ಸ್ಟಾಗ್ರಾಮ್ ಖಾತೆಯ ಹೆಸರು ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು.

ಕ್ಯಾಥರೀನ್  ಹೆಸರಿನ ಮಹಿಳೆ ಇತ್ತೀಚೆಗೆ ಪೆನ್ಸಿಲ್ವೇನಿಯಾ (Pennsylvania) ದ ಬಿಲಿಯನೇರ್ ಕ್ಯಾಬಟ್ ಆಸ್ಪ್ಲಂಡ್ ಎಂಬಾತನನ್ನು ಮದುವೆ ಆಗಿದ್ದಾಳೆ. ಕ್ಯಾಥರೀನ್ ನ್ಯೂಜೆರ್ಸಿ (New Jersey) ನಿವಾಸಿ. @katherinedrisc  ಹೆಸರಿನ ಖಾತೆಯನ್ನು ಕ್ಯಾಥರೀನ್ ಹೊಂದಿದ್ದು,  80,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಕ್ಯಾಥಲೀನ್, ಆಸ್ಪ್ಲಂಡ್ ಟ್ರೀ ಎಕ್ಸ್ಪರ್ಟ್ಸ್ನ ಸ್ಥಾಪಕ ಕುಟುಂಬದ ಕುಡಿಯನ್ನು ಮದುವೆ ಆಗಿದ್ದಾಳೆ. ಈ ಕಂಪನಿ  ವಹಿವಾಟು 5.4 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿದೆ, ಕ್ಯಾಥರೀನ್ ಮಾವ ಕ್ರಿಸ್ ಆಸ್ಪ್ಲಂಡ್ ಕಂಪನಿಯ ಸಿಇಒ (CEO) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಥರೀನ್ ಪೇಗ್ ನಲ್ಲಿ ಮೊದಲ ಬಾರಿ ತನ್ನ ಪತಿಯಾಗುವನನ್ನು ಭೇಟಿ ಆಗಿದ್ದಳು. ನಂತ್ರ ಇಬ್ಬರ ಮದುವೆ ನಡೆದಿತ್ತು. ಕ್ಯಾಥರೀನ್ ಮದುವೆ ಆದ್ಮೇಲೆ  ತನ್ನ ಇನ್ಸ್ಟಾಗ್ರಾಮ್ ಖಾತೆಯ ಹೆಸರು ಬದಲಿಸಲು ಮುಂದಾಗಿದ್ದಾಳೆ. ಇದೇ ವಿವಾದಕ್ಕೆ ಕಾರಣವಾಗಿದೆ. 

ಭಾರತದಲ್ಲಿರೋ ಹೆಣ್ಮಕ್ಕಳಿಗೆ ಈ ಮಾತು ಕೇಳಿ ಸಾಕೋ ಸಾಕಾಗಿದ್ಯಂತೆ!

ಕ್ಯಾಥರೀನ್ ತನ್ನ ಖಾತೆಯಲ್ಲಿ @katherineasplundh ಎಂದು ಬದಲಿಸಲು ನಿರ್ಧರಿಸಿದ್ದಳು. ಇನ್ಸ್ಟಾಗ್ರಾಮ್ ನಲ್ಲಿ ಈ ಹೆಸರಿನ ಹುಡುಕಾಟ ನಡೆಸಿದ್ದಳು. ಆದ್ರೆ ಮೊದಲೇ ಈ ಹೆಸರಿನಲ್ಲಿ ಖಾತೆ ಇರೋದು ಆಕೆಗೆ ಗೊತ್ತಾಗಿದೆ. ಜೊತೆಗೆ ಆ ಖಾತೆಗೆ 14,600 ಫಾಲೋವರ್ಸ್ ಇರೋದನ್ನು ಕ್ಯಾಥರೀನ್ ಅರಿತಿದ್ದಾಳೆ. ಈ ಖಾತೆಯನ್ನು ಹೊಂದಿದ್ದ ಕ್ಯಾಟ್ ಹೆಸರಿನ ಮಹಿಳೆಯನ್ನು ಕ್ಯಾಥರೀನ್ ಸಂಪರ್ಕಿಸಿದ್ದಾಳೆ. ಕ್ಯಾಟ್ ಇನ್ಸ್ಟಾಗ್ರಾಮ್ ಖಾತೆಯನ್ನು ನೀಡುವಂತೆ ಕ್ಯಾಥರೀನ್ ಕೇಳಿದ್ದಾಳೆ. ಆದ್ರೆ ಕ್ಯಾಟ್ ಇದನ್ನು ನಿರಾಕರಿಸಿದ್ದಾಳೆ. 

ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಖರೀದಿಸಲು ನಾನು ಬಯಸುತ್ತೇನೆ. ನನಗೆ ಈಗಷ್ಟೆ ಮದುವೆ ಆಗಿದ್ದು ನನ್ನ ಹೆಸರು ಬದಲಿಸಲು ನಾನು ಆಲೋಚನೆ ಮಾಡುತ್ತಿದ್ದೇನೆ ಎಂದು ಕ್ಯಾಥರೀನ್ ಹೇಳಿದ್ದಾಳೆ. ಆದ್ರೆ ಖಾತೆ ಮಾರಾಟ ಮಾಡಲು ಕ್ಯಾಟ್ ಒಪ್ಪಿಲ್ಲ. ಇನ್ಸ್ಟಾಗ್ರಾಮ್ ಖಾತೆಯನ್ನು ಮಾರಿದ್ರೆ ಸೋಷಿಯಲ್ ಮೀಡಿಯಾ ತನ್ನನ್ನು ನಿಷೇಧಿಸಬಹುದು ಎಂದು ಕ್ಯಾಟ್ ಭಯಗೊಂಡಿದ್ದಾಳೆ. ಇದೇ ಕಾರಣಕ್ಕೆ ಖಾತೆ ಮಾರಲು ಮನಸ್ಸು ಮಾಡಲಿಲ್ಲ. ಆದ್ರೆ ಈ ವಿಷ್ಯ ತಿಳಿದ ಕ್ಯಾಥರೀನ್ ಕೋಪಗೊಂಡಿದ್ದಾಳೆ. ಕ್ಯಾಟ್‌ಗೆ ಬೆದರಿಕೆ ಹಾಕಿದ್ದಾಳೆ. ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾಳೆ. ಮುಂದೆ ಇದ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾಳೆ. ಮೂರು ಬಾರಿ ಈಗಾಗಲೇ ಇನ್ಸ್ಟಾಗ್ರಾಮ್ ಖಾತೆ ಹೆಸರು ಬದಲಿಸಿದ್ದು, ಕೋಟ್ಯಾಧಿಪತಿ ಕುಟುಂಬ ಈಗ ಕೇಳಿದ್ರೆ ಹೆಸರು ಬದಲಿಸಲು ನಿರಾಕರಿಸುತ್ತಿದ್ದೀಯೇ ಎಂದು ಕ್ಯಾಥರೀನ್ ಹೇಳಿದ್ದಾಳೆ.

ಕ್ಯಾಥರೀನ್ ಮಾತಿಗೆ ಕ್ಯಾಟ್ ಮತ್ತಷ್ಟು ಕೋಪಗೊಂಡಿದ್ದಾಳೆ. ಕ್ಯಾಥರೀನ್ ಜೊತೆ ನಡೆದ ಎಲ್ಲ ಸಂಭಾಷಣೆಯನ್ನು ಆಕೆ ಇನ್ಸ್ಟಾಗ್ರಾಮ್ ನ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. 

ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಲೀಸಾಗಿ 50 ಕೆಜಿ ಎತ್ತಿ 'ನನಗೇನು ತುಂಬಾ ವಯಸ್ಸಾಗಿಲ್ಲ' ಎಂದ 82ರ ಅಜ್ಜಿ!

ಕ್ಯಾಥರೀನ್ ಮೊದಲು ಹೇಳಿದಾಗ ನಾನು ಖಾತೆ ಮಾರುವುದಿಲ್ಲವೆಂದಿದ್ದೆ. ಆದ್ರೆ ಹೆಸರು ಬದಲಿಸಲು ಸಿದ್ಧನಾಗಿದ್ದೆ. ಆದ್ರೆ ಕ್ಯಾಥರೀನ್ ನನಗೆ ಬೆದರಿಕೆ ಹಾಕಲು ಶುರು ಮಾಡಿದ್ದಳು. ಇದ್ರಿಂದ ನಾನು ಕೋಪಗೊಂಡೆ. ಕ್ಯಾಥರೀನ್ ನನಗೆ ಮನವಿ ಮಾಡಿದ್ದರೆ ನಾನು ಹೆಸರು ಬದಲಿಸಲು ಮುಂದಾಗ್ತಿದ್ದೆ ಎಂದು ಕ್ಯಾಟ್ ಹೇಳಿದ್ದಾಳೆ. ಕ್ಯಾಟ್ ಪೋಸ್ಟ್ ನೋಡಿದ ಇನ್ಸ್ಟಾಗ್ರಾಮ್ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?