Latest Videos

Hair Care: ಕಣ್ಣೀರು ಬರೆಸುವ ಈರುಳ್ಳಿ ಕೂದಲಿಗೆ ರಾಮಬಾಣ!

By Suvarna NewsFirst Published Jun 18, 2022, 4:20 PM IST
Highlights

ಹೆಣ್ಣು ಮಕ್ಕಳ ಅಂದ(Beauty) ಹೆಚ್ಚಿಸುವುದು ಕೂದಲಿನಿಂದ(Hair). ಸ್ವಲ್ಪ ಕೂದಲು ಉದುರಿದರು(Hair Fall) ಬಹುತೇಕರು ಆತಂಕಕ್ಕೊಳಗಾಗುವುದನ್ನು ನಾವು ಗಮನಿಸಿದ್ದೇವೆ. ಕೂದಲು ಉದುರುವುದು(Hair Loss), ಸ್ಪಿಲ್ಸ್(Splits), ತೆಳ್ಳಗಾಗುವುದು(Thin), ಬೆಳಿಯದೇ ಇರುವುದು(Lack Of Growth) ಹೀಗೆ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಔಷಧವಿದೆ(Medicine). ಇದನ್ನು ಉಪಯೋಗಿಸಿದರೆ ಬಹುಬೇಗ ರಿಸಲ್ಟ್ ಪಡೆಯಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳ ಅಂದ (Beauty) ಹೆಚ್ಚಿಸುವುದು ಕೂದಲಿನಿಂದ(Hair). ಸ್ವಲ್ಪ ಕೂದಲು ಉದುರಿದರು (Hair Fall) ಬಹುತೇಕರು ಆತಂಕಕ್ಕೊಳಗಾಗುವುದನ್ನು ನಾವು ಗಮನಿಸಿದ್ದೇವೆ. ಕೂದಲು ಉದುರುವುದು(Hair Loss), ಸ್ಪಿಲ್ಸ್ (Splits), ತೆಳ್ಳಗಾಗುವುದು (Thin), ಬೆಳಿಯದೇ ಇರುವುದು(Lack Of Growth) ಹೀಗೆ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಔಷಧವಿದೆ(Medicine). ಇದನ್ನು ಉಪಯೋಗಿಸಿದರೆ ಬಹುಬೇಗ ರಿಸಲ್ಟ್ ಪಡೆಯಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ.

ಈರುಳ್ಳಿ(Onion) ಎಂದಾಕ್ಷಣ ಎಲ್ಲರೂ ಮೂಗು ಮುರಿಯುತ್ತಾರೆ. ಕಾರಣ ಅದರ ವಾಸನೆ(Smell). ಕೆಲವರಿಗೆ ಈರುಳ್ಳಿ ವಾಸನೆ ಎಂದರೆ ಆಗುವುದಿಲ್ಲ ತಲೆನೋವು(Headache) ಬರುತ್ತದೆ ಎನ್ನುತ್ತಾರೆ. ಆದರೆ ಈರುಳ್ಳಿ ಆರೋಗ್ಯಕ್ಕಷ್ಟೇ (Health) ಅಲ್ಲದೆ ಕೂದಲಿಗೂ ಒಳ್ಳೆಯದು. ಮಾರ್ಕೆಟ್‌ನಲ್ಲಿ ಈರುಳ್ಳಿ ಉಪಯೋಗಿಸಿದ ಕೆಲ ಶಾಂಪೂಗಳು(Shampoo) ಬಂದಿವೆ. ಆದರೆ ಕೂದಲಿಗೆ ಈರುಳ್ಳಿಯನ್ನು ಮನೆಯಲ್ಲೇ ಉಪಯೋಗಿಸುವುದು ಒಳ್ಳೆಯದು. ಕೂದಲ ಸಮಸ್ಯೆಗಳಿಗೆ ಈರುಳ್ಳಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಈರುಳ್ಳಿ ಕೇವಲ ಕಣ್ಣಿರು(Tears in Eyes) ಬರಿಸುತ್ತದೆ ಎಂಬ ಆರೋಪವಿದೆ. ಆದರೆ ಹಸಿ ಈರುಳ್ಳಿ ಸಮಸ್ಯೆಗಳಿಗೆ ಕಣ್ಣೀರನ್ನು ಒರೆಸುತ್ತದೆ. ಹೌದು ಹಸಿ ಈರುಳ್ಳಿಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವುದು(Loss of Hairs) ತಡೆಗಟ್ಟಬಹುದು.

ದಟ್ಟ ಕೇಶರಾಶಿ ಒಡತಿ ನೀವಾಗಬೇಕೆ? ವಿಟಮಿನ್ ಬಿ -7 ಆಹಾರ ಸೇವಿಸಿ!

 ಕೂದಲ ಬೆಳವಣಿಗೆ ಹಾಗೂ ಸಮಸ್ಯೆಗಳು
ಕುದಲಿನ ಬೆಳವಣಿಗೆ(Growth) 3 ಹಂತದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಕೂದಲು ಶಾಫ್ಟ್(Soft) ಆಗಿ ಬೆಳೆಯುತ್ತದೆ. ಹೀಗೆ ಬೆಳೆದ ನಂತರ ಅದರ ಲೈಫ್ ಸೈಕಲ್(Life Cycle) ಮುಗಿದ ನಂತರ ಉದುರುತ್ತದೆ(Falls) ಹಾಗೂ ಆ ಜಾಗದಲ್ಲಿ ಮತ್ತೊಂದು ಕೂದಲು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಇದು ನಿರಂತರ ಪ್ರಕ್ರಿಯೆಯಾಗಿದೆ.

ಆದೆರ ಕೂದಲು ಉದುರುವ ಸಮಸ್ಯೆ ಹಾಗಲ್ಲ. ಅದರಲ್ಲೂ ಹಲವು ಬಗೆಯ ಸಮಸ್ಯೆಗಳಿವೆ. ಕೂದಲು ತೆಳುವಾಗುವುದು(Thin), ಬೋಳು ಕಲೆಗಳು, ತಲೆಹೊಟ್ಟು ಕಾಣಿಸಿಕೊಳ್ಳುತ್ತವೆ(Dandruff). ಈ ರೀತಿಯ ಸಮಸ್ಯೆಗಳು ವಂಶಪಾರAಪರಿಕವಾಗಿ(Heridity), ಒತ್ತಡದಿಂದಾಗಿ(Stress), ಅನಿಮಿಯಾ(Anaemia), ವಿಟಮಿನ್ ಕೊರತೆ(Lack of Vitamin), ಹಾರ್ಮೋನ್ ಅಸಮತೋಲನದಿಂದಾಗಿ(Harmon Imbalance) ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳಿಗೆ ಈರುಳ್ಳಿ ಮನೆಯಲ್ಲಿನ ಬೆಸ್ಟ್ ಮೆಡಿಸಿನ್. ಈರುಳ್ಳಿಯಿಂದ ಏನೆಲ್ಲಾ ಪ್ರಯೋಜನಗಳಿವೆ? ಅದನ್ನು ಹೇಗೆ ಉಪಯೋಗಿಸಬೇಕು? ಎಂಬುದರ ಮಾಹಿತಿ ಇಲ್ಲಿದೆ.

ಪ್ರಯೋಜನಗಳು
1.ಹಲವಾರು ವರ್ಷಗಳಿಂದ ಹಸಿ ಈರುಳ್ಳಿಯು ಕೂದಲಿಗೆ ಮನೆಯ ಔಷಧವಾಗಿ(Home Medicine) ಬಳಸಲಾಗುತ್ತಿದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಅಂಶವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕೂದಲಿನ ದಟ್ಟಣೆಯನ್ನೂ(Volume) ಹೆಚ್ಚಿಸುತ್ತದೆ. 
2.ಈರುಳ್ಳಿ ರಸವು(Juice) ಕೂದಲಿನ ಸಂಖ್ಯೆ(Numbers), ದಟ್ಟಣೆ, ಉದುರುವುದು, ತೆಳ್ಳುಗಾಗುವುದು(Thin) ಕಡಿಮೆ ಮಾಡುತ್ತದೆ.  
3. ತಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟು(Dandruff)  ಇದ್ದರೆ ಈರುಳ್ಳಿ ರಸ ಅದಕ್ಕೆ ರಾಮಬಾಣವಾಗಿದೆ.
4. ಈರುಳ್ಳಿಯಲ್ಲಿ ಆಂಟಿಆಕ್ಸಿಡೆAಟ್(Antioxidants) ಅಂಶವಿದ್ದು, ತಲೆಗೆ ಹಚ್ಚುವುದರಿಂದ ಬೇಗ ಬಿಳಿ ಕೂದಲಾಗುವುದನ್ನು(Grey Hairs) ತಡೆಯುತ್ತದೆ.
5. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ(Anti Bacteria) ಅಂಶವಿದ್ದು, ಬುರುಡೆ ಕ್ಲೀನ್(Schul Clean) ಆಗಿರುವಂತೆ ಹಾಗೂ ಹೊಟ್ಟಾಗುವುದು(Dandruff), ಯಾವುದೇ ರೀತಿಯ ಬ್ಯಾಕ್ಟೀರಿಯಾದಿಂದ ದೂರ ಇರುವಂತೆ ಹಾಗೂ ಅಡೆತಡೆ ಇಲ್ಲದೆ ಕೂದಲು ಬೆಳೆಯುವಂತೆ ಉತ್ತೇಜಿಸುತ್ತದೆ.
6. ಈರುಳ್ಳಿ ರಸ ಹಚ್ಚುವುದರಿಂದ ನೆತ್ತಿಯನ್ನು ಉತ್ತೇಜಿಸುತ್ತದೆ ಹಾಗೂ ಕೂದಲಿನ ಬೇರುಗಳಿಗೆ(Root) ಬೇಕಾದ ಪ್ರೋಟೀನ್(Protein) ನೀಡುವುದಲ್ಲದದೆ ರಕ್ತ ಸಂಚಾರ(Blood Supply) ಸುಗಮಗೊಳಿಸುತ್ತದೆ. 
7. ಸಲ್ಫರ್(Sulphur) ಅಂಶವು ಈರುಳ್ಳಿಯಲ್ಲಿ ಹೆಚ್ಚಿದ್ದು, ಕೂದಲು ಹಾಗೂ ಬುರುಡೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು(Hair Fall) ತಡೆಯುತ್ತದೆ. ಜೊತೆಗೆ ಗಟ್ಟಿಯಾಗಿ(Strong) ಬೆಳೆಯುವುದರ ಜೊತೆಗೆ ಕೂದಲು ಒಡೆಯುವುದನ್ನು(Splits) ನಿಯಂತ್ರಿಸುತ್ತದೆ.

ಹೇನಿನ ಸಮಸ್ಯೆಯಿಂದ ಹೈರಾಣಾಗಿದ್ದೀರಾ ? ಸಣ್ಣ ಕರ್ಪೂರ ಬಳಸಿ ನೋಡಿ

ಈರುಳ್ಳಿ ಜ್ಯೂಸ್ ಹೇರ್ ಮಾಸ್ಕ್ (Hair Mask)
ಈರುಳ್ಳಿ ವಾಸನೆ ಬರುತ್ತದೆ ಎಂದು ಅದನ್ನು ನೆಗ್ಲೆಕ್ಟ್(Neglect) ಮಾಡುವಹಾಗಿಲ್ಲ. ಈರುಳ್ಳಿ ಮಾಸ್ಕ್ ಮಾಡುವುದು ಬಹಳ ಸುಲಭ. 

ಮೊದಲು ಸಿಪ್ಪೆ ತೆಗೆದ ಈರುಳ್ಳಿಯನ್ನು ಚೆನ್ನಾಗಿ ತೊಳೆದು ಕಟ್(Cut) ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು(Grinde). ನುಣ್ಣಗೆ ರುಬ್ಬಿದ ನಂತರ ಅದನ್ನು ಸೋಸಿ, ರಸ(Juice) ತೆಗೆದುಕೊಂಡು ಒಂದು ಕಾಟನ್‌ನಲ್ಲಿ(Cotton) ಬುರುಡೆ(Schul) ಹಾಗೂ ಕೂದಲಿಗೆ(Hairs) ಹಚ್ಚಬೇಕು. ಸಂಪೂರ್ಣವಾಗಿ ಹಚ್ಚಿದ ನಂತರ ಮೈಲ್ಡ್ ಆಗಿ ಮಸಾಜ್ ಮಾಡಿ 30 ನಿಮಿಷಗಳ(Minutes) ನಂತರ ತಣ್ಣೀರು(Cold Water) ಹಾಗೂ ಶಾಂಪೂವಿನಲ್ಲಿ(Shampoo) ಸ್ನಾನ ಮಾಡಬೇಕು. ಈ ರೀತಿ ದಿನ ಬಿಟ್ಟು ದಿನ(Alternate Days) ಮಾಡಿದರೆ ಕೂದಲು ಬಲಿಷ್ಟವಾಗುವುದಲ್ಲದೆ(Strong), ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಕೆಲವರು ಈರುಳ್ಳಿ ರಸಕ್ಕೆ ಕೊಬ್ಬರಿ ಎಣ್ಣೆಯನ್ನು(Coconut Oil) ಉಪಯೋಗಿಸುತ್ತಾರೆ. ಹೀಗೆ ಮಾಡುವುದರಿಂದ ಕೂದಲು ಸ್ಮೂತ್ ಆಗುತ್ತದೆ ಕೂಡ. 

 

 

click me!