Uttara Kannada: ಸಿದ್ದಿ ಜನಾಂಗದ ಮಹಿಳೆಯರಿಗೆ ಸಾವಯಕ ಕೃಷಿ ಬಗ್ಗೆ ಜಾಗೃತಿ

Published : Oct 15, 2022, 02:43 PM ISTUpdated : Oct 15, 2022, 02:44 PM IST
Uttara Kannada: ಸಿದ್ದಿ ಜನಾಂಗದ ಮಹಿಳೆಯರಿಗೆ ಸಾವಯಕ ಕೃಷಿ ಬಗ್ಗೆ ಜಾಗೃತಿ

ಸಾರಾಂಶ

ಜಯ ಆಗ್ರ್ಯಾನಿಕ್‌ ಯೋಜನೆ ಲೈವ್‌ಲೀಹೂಡ್‌ ಡೆವಲಪ್‌ಮೆಂಟ್‌ ಪ್ರೊಗ್ರಾಂ ಹಾಗೂ ಅವೇಕ್‌ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆಯಿಂದ ಮೂರು ದಿನಗಳ ಕಾಲ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಬುಡಕಟ್ಟು ಸಿದ್ದಿ ಜನಾಂಗದ ಮಹಿಳೆಯರಿಗೆ ಸಾವಯಕ ಕೃಷಿ ಮತ್ತು ಸ್ವಉದ್ಯೋಗ ಕುರಿತು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಯಿತು.

ಮುಂಡಗೋಡ (ಅ.15) : ಜಯ ಆಗ್ರ್ಯಾನಿಕ್‌ ಯೋಜನೆ ಲೈವ್‌ಲೀಹೂಡ್‌ ಡೆವಲಪ್‌ಮೆಂಟ್‌ ಪ್ರೊಗ್ರಾಂ ಹಾಗೂ ಅವೇಕ್‌ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆಯಿಂದ ಮೂರು ದಿನಗಳ ಕಾಲ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಬುಡಕಟ್ಟು ಸಿದ್ದಿ ಜನಾಂಗದ ಮಹಿಳೆಯರಿಗೆ ಸಾವಯಕ ಕೃಷಿ ಮತ್ತು ಸ್ವಉದ್ಯೋಗ ಕುರಿತು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಯಿತು.

ಮೂರು ಅಂತಸ್ತಿನ ಮನೆಯಲ್ಲಿ ಸಾವಯವ ಕೃಷಿ, ವರ್ಷಕ್ಕೆ ಭರ್ತಿ 70 ಲಕ್ಷ ಆದಾಯ

ಮಹಿಳೆಯರೇ ಖುದ್ದಾಗಿ ಸಾವಯವ ಕೃಷಿಯ ಮೂಲಕ ಬೆಳೆದು ಸ್ವಉದ್ಯೋಗ ಮಾಡಲೆಂದು 32 ತಳಿಯ ತರಕಾರಿ ಬೀಜ ವಿತರಿಸಲಾಯಿತು. ಅಲ್ಲದೇ ಆಸಕ್ತ ಮಹಿಳೆಯರಿಗೆ ಜೇನು ಸಾಕಾಣಿಕೆ ಪೆಟ್ಟಿಗೆ ಹಾಗೂ ಸಾವಯಯ ಎರೆಹುಳು ಗೊಬ್ಬರದ ತೊಟ್ಟಿಮತ್ತು 30 ಕುಟುಂಬಗಳಿಗೆ ತಲಾ 20 ತೆಂಗಿನ ಸಸಿಗಳನ್ನು ವಿತರಿಸಲಾಯಿತು.

ಮೂರು ದಿನಗಳ ಕಾಲ ಗುಂಜಾವತಿ ಮತ್ತು ಉಗ್ಗಿನಕೇರಿ ಗ್ರಾಮದ ಸಿದ್ದಿ ಜನಾಂಗ ವಾಸಿಸುವ ಪ್ರದೇಶದಲ್ಲಿ ಜರುಗಿದ ತರಬೇತಿ ಕಾರ್ಯಕ್ರಮದಲ್ಲಿ ಕಂಪ್ಯೂಟರ್‌, ಟೈಲರಿಂಗ್‌, ಹೈನುಗಾರಿಕೆ, ಕುರಿ, ಕೋಳಿ, ಜೇನು ಸಾಕಾಣಿಕೆಗೆ ಮಾಡುವ ಮೂಲಕ ಹೇಗೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಢವಾಗಿ ಹೇಗೆ ಜೀವನ ಸಾಗಿಸಬಹುದು ಎಂಬುವುದ ಕುರಿತು ಅವೇಕ್‌ ಸಂಸ್ಥೆ ತರಬೇತಿ ಮುಖ್ಯಸ್ಥ ಸದಾಶಿವ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಗಮನ ಸೆಳೆದರು.

ಸಾವಯವ ಕೃಷಿಯೊಂದಿಗೆ ಸ್ವದ್ಯೋಗ ಮಾಡುವ ಮೂಲಕ ಮಹಿಳೆಯರನ್ನು ಕೂಡ ಆರ್ಥಿಕವಾಗಿ ಸಬಲರನ್ನಾಗಿಸುವುದು ತರಬೇತಿಯ ಮೂಲ ಉದ್ದೇಶವಾಗಿದೆ. ಮುಂಡಗೋಡ ಮತ್ತು ಯಲ್ಲಾಪುರ ತಾಲೂಕಿನಲ್ಲಿ ತಲಾ 30 ಜನರಿರುವ 5 ತಂಡಗಳನ್ನು ರಚಿಸಿ 150 ಫಲಾನುಭವಿಗಳಿಗೆ ಸ್ವ ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದು ಜಯ ಆಗ್ರ್ಯಾನಿಕ್‌ ಯೋಜನೆಯ ಮುಖ್ಯ ಪ್ರೊಗ್ರಾಮಿಂಗ್‌ ಅಧಿಕಾರಿ ವಿಕಾಸ ವಿಶ್ವಕರ್ಮ ತಿಳಿಸಿದರು.

ಮಹಿಳೆಯರಿಗೆ ವಿವಿಧ ತರಕಾರಿ ಬೀಜಗಳನ್ನು ನೀಡಲಾಗಿದ್ದು, ಸಾವಯವ ಕೃಷಿ ಮೂಲಕ ಬೆಳೆದು ಮನೆಗೆ ಅಗತ್ಯವಿರುವಷ್ಟುತರಕಾರಿ ಇಟ್ಟುಕೊಂಡು ಉಳಿದ ತರಕಾರಿಯನ್ನು ಮಾರಾಟ ಮಾಡಿ ಹಣ ಗಳಿಸಲು ಅವಕಾಶವಿದೆ. ಇದರಿಂದ ಉತ್ತಮ ಆರೋಗ್ಯ ಕೂಡ ಸಿಗುತ್ತದೆ. ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯ ಎಂದರು. ಮಹಿಳೆಯರು ಇದರ ಸದುಪಯೋಗಪಡೆದುಕೊಂಡು ಮುಂದೆ ಬರಬೇಕು ಎಂದು ಜಯ ಆಗ್ರ್ಯಾನಿಕ್‌ ಯೋಜನೆ ಆರ್ಡಿನೇಟರ್‌ ಇಮಾಮ್‌ ಕಕ್ಕೇರಿ ಹೇಳಿದರು.

ನದಿಯಲ್ಲಿ ಸಿಲುಕಿದ ದೋಣಿ; ಆತಂಕ

ಅಂಕೋಲಾ ತಾಲೂಕಿನ ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ಬಳಿ ಯಾಂತ್ರೀಕೃತ ದೋಣಿ ಮಣ್ಣಿಗೆ ಸಿಲುಕಿ ಆತಂಕ ಸೃಷ್ಟಿಯಾದ ಘಟನೆ ಶುಕ್ರವಾರ ನಡೆಯಿತು. ಮಂಜಗುಳಿ-ಗಂಗಾವಳಿ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ಸಂಪೂರ್ಣವಾಗಿ ತೆರವುಗೊಂಡಿರಲಿಲ್ಲ. ಈ ಹಿನ್ನೆಲೆ ಜನರು ಸಂಚರಿಸುತ್ತಿದ್ದ ಯಾಂತ್ರೀಕೃತ ದೋಣಿ ಮಣ್ಣಿಗೆ ಸಿಲುಕಿ ನದಿ ಮಧ್ಯೆಯೇ ಸ್ಥಗಿತಗೊಂಡಿತ್ತು. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಸೇತುವೆ ನಿರ್ಮಾಣಕ್ಕೆಂದು ಹಾಕಲಾದ ಮಣ್ಣು ತೆರವುಗೊಳಿಸುವಂತೆ ಹಲವು ಬಾರಿ ಒತ್ತಾಯಿಸಿದರೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿರುವುದರಿಂದ ಇದೀಗ ದೋಣಿಯೊಂದರ ಸಂಚಾರಕ್ಕೂ ಅಡಚಣೆ ಉಂಟಾಯಿತು. ನದಿ ದಾಟಲೆಂದು ದೋಣಿ ಹತ್ತಿದ್ದ ಹತ್ತಾರು ಜನ ಇದರಿಂದಾಗಿ ಆತಂಕಕ್ಕೊಳಗಾಗಿದ್ದರು. ಕೊನೆಗೆ ಸ್ಥಳೀಯರು ಹಾಗೂ ಸ್ಥಳೀಯ ಮತ್ತೊಂದು ದೋಣಿಯ ಸಹಾಯದಿಂದ ಹಗ್ಗ ಕಟ್ಟಿಎಳೆದು ದಡಕ್ಕೆ ತರುವಲ್ಲಿ ಯಶಸ್ವಿಯಾದರು.

Managaluru: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ರಾರಾಜಿಸುತ್ತಿದೆ ಸಾವಯವ ಕೃಷಿ ತೋರಣ!

ಇನ್ನು ಮಣ್ಣನ್ನು ಹಾಗೇ ಬಿಟ್ಟರೆ ಮುಂದೆಯೂ ಅನಾಹುತ ಕಟ್ಟಿಟ್ಟಬುತ್ತಿ. ಹೀಗಾಗಿ ಕೂಡಲೇ ನದಿಗೆ ಹಾಕಲಾದ ಸಾವಿರಾರು ಲೋಡ್‌ ಮಣ್ಣನ್ನು ತೆರವುಗೊಳಿಸಬೇಕು. ಜತೆಗೆ ಸೇತುವೆ ಕಾಮಗಾರಿಯು ಆದಷ್ಟುಬೇಗ ಮುಗಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಸದ ಬುಟ್ಟಿಯ ವಾಸನೆ, ಕೊಳೆ ಎರಡೂ ಒಟ್ಟಿಗೆ ತೆಗೆದುಹಾಕಲು ಭಾಳ ಸಿಂಪಲ್ಲಾಗಿರೊ ಟ್ರಿಕ್ ಇದು
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..