40 ಕೆಜಿ ಚಿನ್ನದ ಒಡತಿ ಈ ಸುಂದರಿ! ಪ್ರತಿ ವರ್ಷ ಗಂಡ ಕೊಡಿಸ್ತಾರೆ 3 ಕೆಜಿ ಬಂಗಾರ, ಯಾರೀಕೆ?

Published : Nov 21, 2026, 12:46 PM IST
Tabinda Sanpal

ಸಾರಾಂಶ

ನೆಟ್‌ಫ್ಲಿಕ್ಸ್‌ನ 'ದೇಸಿ ಬ್ಲಿಂಗ್' ಕಾರ್ಯಕ್ರಮದಲ್ಲಿ ತಬಿಂದಾ ಸನ್ಪಾಲ್ ತಮ್ಮ ಬಳಿ 200 ಕೋಟಿ ರೂ.ಗೂ ಅಧಿಕ ಮೌಲ್ಯದ 40 ಕೆಜಿ ಚಿನ್ನವಿದೆ ಎಂದು ಹೇಳಿದ್ದಾರೆ. ಪ್ರತಿ ವರ್ಷ ಧನತರೇಸಾಗೆ 3 ಕೆಜಿ ಚಿನ್ನ ಕೊಡಿಸುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಮುಂಬೈ: ಸುಂದರಿಯೊಬ್ಬರು ತನ್ನ ಬಳಿಯಲ್ಲಿ 40 ಕೆಜಿಯಷ್ಟು ಚಿನ್ನವಿದ್ದು, ಇವುಗಳ ಮೌಲ್ಯ 200 ಕೋಟಿ ರೂ.ಗಳಿಗಿಂತ ಅಧಿಕವಾಗಿದೆ ಎಂದು ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ, ಪ್ರತಿ ವರ್ಷದ ಧನತರೇಸಾ (Dhanteras) ನನಗೆ 3 ಕೆಜಿ ಚಿನ್ನವನ್ನು ಕೊಡಿಸುತ್ತಾರೆ ಎಂದು ಹೇಳಿದ್ದಾರೆ. ಇಷ್ಟು ಚಿನ್ನ ಹೊಂದಿರುವ ಈ ಸುಂದರಿ ಯಾರು ಮತ್ತು ಇಷ್ಟೊಂದು ಬಂಗಾರ ಕೊಡಿಸುವ ಆಕೆಯ ಗಂಡ ಯಾರು ಎಂದು ಜನರು ಗೂಗಲ್ ಹುಡುಕಾಡುತ್ತಿದ್ದಾರೆ.

OTTಯ ದೇಸಿ ಬ್ಲಿಂಗ್ ಕಾರ್ಯಕ್ರಮ!

ಹಿಂದಿ ಕಿರುತೆರೆಯ ಕಲಾವಿದರಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ (Karan Kundrra and Tejasswi Prakash) ಜೊತೆಯಾಗಿ ನೆಟ್‌ಫ್ಲಿಕ್ಸ್‌ನಲ್ಲಿ Desi Bling ಹೆಸರಿನ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಖ್ಯಾತ ಉದ್ಯಮಿಯ ಪತ್ನಿ ತಬಿಂದಾ ಸನ್ಪಾಲ್ (Tabinda Sanpal), ತಮ್ಮಲ್ಲಿರುವ ಚಿನ್ನದ ಖಜಾನೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ದೇಸಿ ಬ್ಲಿಂಗ್ ಕಾರ್ಯಕ್ರಮ ದುಬೈ ಮತ್ತು ಭಾರತದಲ್ಲಿ ಪ್ರಸಾರವಾಗುತ್ತದೆ.

ಯಾರು ಈ ತಬಿಂದಾ ಸನ್ಪಾಲ್?

ತಬಿಂದಾ ಸನ್ಪಾಲ್ ಅವರು ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್) ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿರುವ ಉದ್ಯಮಿಯಾಗಿದ್ದಾರೆ. ಟೆಲಿವಿಷನ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕಾರಣ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. 'ಅನಾಕ್ಸ್' (ANAX) ಗ್ರೂಪ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ತಬಿಂದಾ ಪತಿ ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ನೆಟ್‌ಫ್ಲಿಕ್ಸ್ ನ'ದೇಸಿ ಬ್ಲಿಂಗ್' (Desi Bling) ನಲ್ಲಿ ಕಾಣಿಸಿಕೊಂಡ ನಂತ್ರ ಅಂತರ್ಜಾಲದಲ್ಲಿ ತಬಿಂದಾ ಹೆಸರು ಹೆಚ್ಚು ಸರ್ಚ್ ಆಗುತ್ತಿದೆ.

ತಬಿಂದಾ ಸನ್ಪಾಲ್ ಪತಿ ಯಾರು?

ತಬಿಂದಾ ಸನ್ಪಾಲ್ ಪತಿ ಸತೀಶ್ ಸನ್ಪಾಲ್ ದುಬೈನಲ್ಲಿ ನೆಲೆಸಿರುವ ಬಿಲಿಯನೇರ್ ಉದ್ಯಮಿಯಾಗಿದ್ದು, ANAX ಹೋಲ್ಡಿಂಗ್ ಅಧ್ಯಕ್ಷರಾಗಿದ್ದಾರೆ. ಸತೀಶ್ ಸನ್ಪಾಲ್ ಪ್ರತಿ ವರ್ಷ ಧನತರೇಸಾದ ವಿಶೇಷ ದಿನದಂದು ಪತ್ನಿ ತಬಿಂದಾ ಅವರಿಗೆ 3 ಕೆಜಿ ಚಿನ್ನ ಕೊಡಿಸುತ್ತಾರೆ. ಸತೀಶ್ ಸನ್ಪಾಲ್ ಅವರು ಮೂಲತಃ ಮಧ್ಯಪ್ರದೇಶ ಜಬಲ್‌ಪುರದವರು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸತೀಶ್ ಸನ್ಪಾಲ್‌, 8ನೇ ತರಗತಿಯ ನಂತರ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿ 15ನೇ ವಯಸ್ಸಿನಲ್ಲಿಯೇ ದಿನಸಿ ಅಂಗಡಿ ಪ್ರಾರಂಭಿಸಿದ್ದರು. ಇದಕ್ಕಾಗಿ ತಾಯಿಯಿಂದ 50 ರಿಂದ 80 ಸಾವಿರ ರೂಪಾಯಿ ಸಾಲವನ್ನು ಸಹ ಪಡೆದುಕೊಂಡಿದ್ದರು. ಆದ್ರೆ ಮೊದಲ ವ್ಯಾಪರದಲ್ಲಿ ನಷ್ಟ ಅನುಭವಿಸಿದ ಸತೀಶ್, ತಮ್ಮ 20ನೇ ವಯಸ್ಸಿನಲ್ಲಿ ಸುಮಾರು 1 ಮಿಲಿಯನ್ ದಿರ್ಹಮ್‌ಗಳೊಂದಿಗೆ ದುಬೈಗೆ ತೆರಳಿದರು.

ಇದನ್ನೂ ಓದಿ: 15 ಕೋಟಿ ಉದ್ಯಮ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಸಿದ್ಧವಾದ ಒಂದೇ ಕುಟುಂಬದ ನಾಲ್ವರು; ಅಪ್ಪ-ಅಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳು, ಜವಳಿ ಉದ್ಯಮಿ

ಅಂದಾಜು 14 ಸಾವಿರ ಕೋಟಿ ರೂ. ನಿವ್ವಳ ಆಸ್ತಿ

ದುಬೈನಲ್ಲಿ ಚಿನ್ನದ ವ್ಯವಹಾರದಲ್ಲಿ ತೊಡಗಿಕೊಂಡ ಸತೀಶ್ ಸನ್ಪಾಲ್, ಗ್ರಾಹಕರನ್ನು ಷೇರು ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ಬ್ರೋಕರ್ ಆಗಿ ಕೆಲಸ ಮಾಡಿದರು. ಆ ಬಳಿಕ 2018ರಲ್ಲಿ ಅವರು 'ANAX ಹೋಲ್ಡಿಂಗ್' (ANAX Holding) ಸಂಸ್ಥೆಯನ್ನು ಸ್ಥಾಪಿಸಿದರು. ವರದಿಗಳ ಪ್ರಕಾರ ಸತೀಶ್ ಸನ್ಪಾಲ್ ಅವರ ಒಟ್ಟು ಆಸ್ತಿಯ ಮೌಲ್ಯ ಅಂದಾಜು 14 ಸಾವಿರ ಕೋಟಿ ರೂ.ಗಳಾಗಿದೆ.

ಇದನ್ನೂ ಓದಿ: ನೆಲಕಚ್ಚಿದ ಎನ್‌ವಿಡಿಯಾ ಷೇರುಗಳು, ಅಮೆರಿಕಕ್ಕೆ ಆಘಾತ: ಅಂಬಾನಿ, ಅದಾನಿ ಉದ್ಯಮಕ್ಕೆ ಸುವರ್ಣಾವಕಾಶ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಪಾತಿ ಹಂಚಿಗೆ ಅಂಟಿಕೊಂಡು ಸೀದು ಹೋಗ್ತಿದ್ಯಾ? ಸುಲಭವಾಗಿ ಮೇಲೆಳಲು ಇಲ್ಲಿದೆ ಸೂಪರ್ ಟಿಪ್ಸ್
ಪುಟ್ಟ ಮಕ್ಕಳ ಪಾದಕ್ಕೆ ಅಂದವಾದ ಕಾಲ್ಗೆಜ್ಜೆಗಳು.. ಇಲ್ಲಿವೆ ಕ್ಯೂಟ್ ಡಿಸೈನ್