ಗುಲಾಬಿ ಕೆನ್ನೆ, ಹೊಳೆಯುವ ಮುಖ ನಿಮ್ದಾಗ್ಬೇಕು ಅಂದ್ರೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ತಯಾರಿಸಿ ಈ ಬ್ಲಶ್

Published : Nov 13, 2026, 12:15 PM IST
beetroot blush

ಸಾರಾಂಶ

homemade blush : ಮುಖದ ಸೌಂದರ್ಯ ಹೆಚ್ಚಾಗ್ಬೇಕು, ಚರ್ಮಕ್ಕೆ ಯಾವುದೇ ಹಾನಿ ಆಗ್ಬಾರದು ಅಂದ್ರೆ ಮನೆಯಲ್ಲೇ ಬ್ಲಶ್‌ ತಯಾರಿಸಿ ಬಳಸಿ. ಕಡಿಮೆ ಖರ್ಚಿನಲ್ಲಿ ಆರೋಗ್ಯಕರ ಬ್ಲಶ್‌ ತಯಾರಿ ವಿಧಾನ ಇಲ್ಲಿದೆ.

ಹೊಳೆಯುವ ಕೆನ್ನೆ ಮಹಿಳೆಯರ ಕನಸು. ಅದಕ್ಕೆ ಮಾರ್ಕೆಟ್‌ ನಲ್ಲಿ ಸಿಗುವ ನಾನಾ ಸೌಂದರ್ಯ ವರ್ಧಕಗಳನ್ನು ಬಳಸ್ತಿರ್ತಾರೆ. ಆದ್ರೆ ಮಾರ್ಕೆಟ್‌ ನಲ್ಲಿ ಸಿಗುವ ಈ ಸೌಂದರ್ಯ ವರ್ಧಕಗಳು ಕೆಮಿಕಲ್‌ ಮಿಶ್ರಿತವಾಗಿರೋದ್ರಿಂದ ತ್ವಚೆ ಹಾಳಾಗುವ ಭಯ ಹೆಚ್ಚು. ನೀವು ಮನೆಯಲ್ಲೇ ಆರೋಗ್ಯಕರ ಬ್ಲಶ್‌ ಮಾಡಿ ಅದನ್ನು ಬಳಸ್ಬಹುದು.

ಬೀಟ್ರೂಟ್ ಬ್ಲಶ್

ನೀವು ಮನೆಯಲ್ಲಿ ಬೀಟ್ ರೂಟ್‌ ಬ್ಲಶ್‌ ತಯಾರಿಸಿ ಬಳಸ್ಬಹುದು. ಬೀಟ್ರೂಟ್ನ ನೈಸರ್ಗಿಕ ಕೆಂಪು ಬಣ್ಣ ಕೆನ್ನೆಗಳಿಗೆ ತಿಳಿ ಗುಲಾಬಿ ಬಣ್ಣದ ಲುಕ್ ನೀಡುತ್ತದೆ. ಬೀಟ್ರೂಟ್ ಬ್ಲಶ್ ತಯಾರಿಸಲು, ತಾಜಾ ಬೀಟ್ರೂಟ್, ಮೊಸರು ಮತ್ತು ಜೇನುತುಪ್ಪದ ಅಗತ್ಯವಿದೆ.

ಬ್ಲಶ್ ತಯಾರಿಸೋದು ಹೇಗೆ?

ಮೊದಲಿಗೆ ಒಂದು ತಾಜಾ ಬೀಟ್ರೂಟ್ ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಈ ತುಂಡುಗಳನ್ನು ಮಿಕ್ಸಿ ಜಾರ್ಗೆ ಹಾಕಿ. ಇದಕ್ಕೆ ಸ್ವಲ್ಪ ತಾಜಾ ಮೊಸರು ಮತ್ತು ಜೇನುತುಪ್ಪ ಸೇರಿಸಿ. ಮೂರೂ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಂಡು ನುಣ್ಣನೆಯ ಪೇಸ್ಟ್ ತಯಾರಿಸಿಕೊಳ್ಳಿ. ಒಂದು ವೇಳೆ ಮನೆಯಲ್ಲಿ ಮಿಕ್ಸಿ ಇಲ್ಲದಿದ್ದರೆ ಬೀಟ್ರೂಟ್ ಅನ್ನು ಸಣ್ಣದಾಗಿ ತುರಿದುಕೊಂಡು ಅದಕ್ಕೆ ಮೊಸರು ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ಮನೆಯಲ್ಲೇ ನೈಸರ್ಗಿಕ ಬ್ಲಶ್ ಸಿದ್ಧವಾಗುತ್ತದೆ.

ಬೀಟ್ರೂಟ್ ಬ್ಲಶ್ ಬಳಸುವುದು ಹೇಗೆ?

ಈ ಪೇಸ್ಟ್ ಅನ್ನು ಮುಖ ಮತ್ತು ಕೆನ್ನೆಗಳ ಮೇಲೆ ತೆಳುವಾಗಿ ಹಚ್ಚಿಕೊಳ್ಳಬಹುದು. ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಬೇಕು. ಇದರಿಂದ ಕೆನ್ನೆಗಳಿಗೆ ತಿಳಿಯಾದ ಗುಲಾಬಿ ಬಣ್ಣ ಸಿಗುತ್ತದೆ. ಮುಖದ ತಾಜಾತನ ಹಾಳಾಗುವುದಿಲ್ಲ. ಮೊದಲ ಬಾರಿಗೆ ಬಳಸುವಾಗ ಮುಖದ ಮೇಲೆ ನೇರವಾಗಿ ಹಚ್ಚುವ ಬದಲು ಕೈಯ ಒಳಭಾಗದಲ್ಲಿ ಸ್ವಲ್ಪ ಹಚ್ಚಿ ಪರೀಕ್ಷಿಸಿಕೊಳ್ಳಿ. ಯಾವುದೇ ತುರಿಕೆ, ಉರಿ ಅಥವಾ ಅಲರ್ಜಿ ಇಲ್ಲದಿದ್ದರೆ ಮಾತ್ರ ಮುಖಕ್ಕೆ ಬಳಸಿ.

ಬೀಟ್ರೂಟ್ ಬ್ಲಶ್ನಿಂದ ಏನೆಲ್ಲಾ ಪ್ರಯೋಜನ?

ಬೀಟ್ರೂಟ್ನಲ್ಲಿರುವ ನೈಸರ್ಗಿಕ ಕೆಂಪು ವರ್ಣದ್ರವ್ಯ ಕೆನ್ನೆಗಳಿಗೆ ತಿಳಿ ಗುಲಾಬಿ ಬಣ್ಣದ ಛಾಯೆ ನೀಡುತ್ತದೆ. ಇದು ಮುಖಕ್ಕೆ ನೈಸರ್ಗಿಕ ಬ್ಲಶ್ ಹಚ್ಚಿದಂತಹ ಲುಕ್ ನೀಡುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಮೇಲ್ಮೈಯನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ. ಇನ್ನು ಜೇನುತುಪ್ಪ ತ್ವಚೆಯ ತೇವಾಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗಿ ಕಾಣಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಧ್ಯರಾತ್ರಿ 2-3 ಗಂಟೆಗೆ ಹುಡುಗಿಯರೇ ಹೆಚ್ಚು ಫುಡ್ ಆರ್ಡರ್ ಮಾಡ್ತಾರಂತೆ! ಡೆಲಿವರಿ ಬಾಯ್ ಹೇಳಿದ ಆ ಸೀಕ್ರೆಟ್ ಏನು?
Nita Ambani: ನೀತಾ ಅಂಬಾನಿ ಭದ್ರತೆಗೆ ಇಬ್ಬರು ಮಹಿಳಾ ಬೌನ್ಸರ್ಸ್, ಇವರ ಸಂಬಳ ಕೇಳಿದ್ರೆ ಅಚ್ಚರಿಯಾಗುತ್ತೆ