Latest Videos

ಅತ್ತೆಗೆ ಸೊಸೆ ಮೇಲೆ‌‌ ದೈಹಿಕ ಸಂಬಂಧ ಬೆಳೆಸೋ ಮನಸ್ಸು, ಕಥೆ ಕೇಳಿ ಪೊಲೀಸರೇ ದಂಗು!

By Roopa HegdeFirst Published Jun 26, 2024, 11:21 AM IST
Highlights

ಆಗ್ರಾದಲ್ಲಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅತ್ತೆಯೊಬ್ಬಳು ಸೊಸೆಗೆ ಲೈಂಗಿಕ ಹಿಂಸೆ ನೀಡಿದ್ದಾಳೆ. ಅತ್ತೆ ಕಾಟಕ್ಕೆ ಬೇಸತ್ತ ಸೊಸೆ ಪೊಲೀಸ್ ಮೊರೆ ಹೋಗಿದ್ದಾಳೆ. 
 

ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಸೇರಿಸಿದ್ರೆ ಹೆಣ್ಣು ಹೆತ್ತವರ ಜವಾಬ್ದಾರಿ ಮುಗಿಯಲಿಲ್ಲ. ಗಂಡನ ಮನೆಯಲ್ಲಿ ಮಗಳು ಹೇಗಿದ್ದಾಳೆ ಎಂಬುದನ್ನು ಪದೇ ಪದೇ ವಿಚಾರಿಸುವ ಸ್ಥಿತಿ ಈಗಿದೆ. ಜಗತ್ತು ಎಷ್ಟೇ ಮುಂದುವರೆದ್ರೂ ವರದಕ್ಷಿಣೆ ಕಿರುಕುಳ, ಹೆಣ್ಣಿನ ಮೇಲೆ ದೌರ್ಜನ್ಯ ನಿಂತಿಲ್ಲ. ಕೆಲ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ಮತ್ತೆ ಕೆಲ ಪ್ರಕರಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತವೆ. ಎಷ್ಟೋ ಹೆಣ್ಣು ಮಕ್ಕಳು ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಅತ್ತೆ ಮನೆಯಲ್ಲಿ ಮಾವ ಅಥವಾ ಮೈದುನ, ಲೈಂಗಿಕ ಕಿರುಕುಳ ನೀಡಿದ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬರ್ತಿರುತ್ತವೆ. ಆದ್ರೀಗ ಉತ್ತರ ಪ್ರದೇಶದ ಆಗ್ರಾದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 

ಇಲ್ಲಿ ಸೊಸೆ (Daughter In Law) ಗೆ ಲೈಂಗಿಕ (Sex) ಹಿಂಸೆ ನೀಡಿದ್ದು ಮಾವನಲ್ಲ, ಅತ್ತೆ. ಹೌದು, ಅತ್ತೆಯೊಬ್ಬಳು, ಸೊಸೆಯ ಮೋಹಕ್ಕೆ ಬಿದ್ದಿದ್ದಾಳೆ. ಸೊಸೆಯನ್ನು ಪ್ರೀತಿ (love) ಮಾಡೋದಾಗಿ ಪೀಡಿಸಿದ್ದಲ್ಲದೆ ಆಕೆ ಜೊತೆ ಶಾರೀರಿಕ ಸಂಬಂಧ (Physical Relationship) ಬೆಳೆಸಲು ಮುಂದಾಗಿದ್ದಾಳೆ. ಆಕೆಗೆ  ನಾನಾ ರೀತಿಯಲ್ಲಿ ಹಿಂಸೆ ನೀಡಿದ್ದಾಳೆ. ಇದಕ್ಕೆ ಒಲ್ಲೆ ಎಂದ ಸೊಸೆಯನ್ನು ಒಂದು ತಿಂಗಳವರೆಗೆ ರೂಮಿನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾಳೆ. ದುಷ್ಟರಿಂದ ಹೇಗೋ ತಪ್ಪಿಸಿಕೊಂಡ ಮಹಿಳೆ, ಘಟನೆ ನಡೆದು ವರ್ಷವಾದ್ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಷ್ಯ ಕೇಳಿದ ಪೊಲೀಸರೇ ದಂಗಾಗಿದ್ದಾರೆ.

ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ಚಟ್ನಿ ಪೌಡರ್​ ಮಾಡುವುದು ಹೇಗೆ? ನಟಿ ಅದಿತಿ ಪ್ರಭುದೇವ ಟಿಪ್ಸ್​ ಕೇಳಿ...

ಪೀಡಿತೆ ಮದುವೆ 2022ರಲ್ಲಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿತ್ತು. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ದಿನ ಕಳೆದಂತೆ ಅತ್ತೆ ಕಾಟ ಶುರುವಾಗಿದೆ. ನಾನಾ ತೊಂದರೆ ನೀಡಲು ಅತ್ತೆ ಶುರು ಮಾಡಿದ್ದಾಳೆ. ತನ್ನ ಜೊತೆ ಶಾರೀರಿಕ ಸಂಬಂಧ ಬೆಳೆಸುವಂತೆ ಅತ್ತೆ, ಸೊಸೆ ಮೇಲೆ ಒತ್ತಡ ಹೇರಿದ್ದಾಳೆ. ಇದಕ್ಕೆ ಸೊಸೆ ಒಪ್ಪದ ಕಾರಣ, ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾಳೆ. ಇದ್ರಿಂದ ಸೊಸೆ ಕೈಗೆ ಗಾಯವಾಗಿದೆ. ಅತ್ತೆ ನಿರಂತರ ಹಿಂಸೆ ನೀಡಿದ್ದಾಳೆಂದು ಸೊಸೆ ಆರೋಪ ಮಾಡಿದ್ದಾಳೆ. ಅಷ್ಟೇ ಅಲ್ಲ, ನಾದಿನಿ ವಿರುದ್ಧವೂ ಮಹಿಳೆ ದೂರು ನೀಡಿದ್ದಾಳೆ. ನಾದಿನಿ, ಪೀಡಿತೆಯ ಎಲ್ಲ ಬಟ್ಟೆಯನ್ನು ಕಸಿದಿಟ್ಟುಕೊಂಡಿದ್ದಳು. ಇದ್ರಿಂದ ಧರಿಸಲು ಬಟ್ಟೆ ಇರಲಿಲ್ಲ. ಒಂದು ತಿಂಗಳು ಒಂದೇ ಬಟ್ಟೆಯಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಯ್ತು. ಬಟ್ಟೆ ಕಸಿದುಕೊಂಡ ಅತ್ತೆ ಮನೆಯವರು, ಒಂದು  ಕೋಣೆಯಲ್ಲಿ ಕೂಡಿ ಹಾಕಿದ್ದರು. ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದರು ಎಂದು ಸೊಸೆ  ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾಳೆ. 

ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ 5 ಅಪರೂಪದ ಸಂಗತಿಗಳು

ಇಷ್ಟೇ ಅಲ್ಲ, 2023ರಲ್ಲಿ ಒಂದು ಮಗುವಿಗೆ ಪೀಡಿತೆ ಜನ್ಮ ನೀಡಿದ್ದಾಳೆ. ಮಗು ತನ್ನದಲ್ಲ ಎಂದು ಪತಿ ಆರೋಪಿಸಿದ್ದಲ್ಲದೆ ಆಕೆಯನ್ನು ಮನೆಯಿಂದ ಹೊರದಬ್ಬುವ ಪ್ರಯತ್ನ ನಡೆಸಿದ್ದಾನೆ. ಅಕ್ಕಪಕ್ಕದವರ ಮಾತಿನ ನಂತ್ರ ಪತ್ನಿಯನ್ನು ಮತ್ತೆ ಮನೆಗೆ ಕರೆದಿದ್ದಾನೆ. ಆದ್ರೆ ಮನೆಯಲ್ಲಿ ಸೊಸೆ ಮೇಲೆ ಹಿಂಸೆ ಮುಂದುವರೆದಿತ್ತು. ಈ ಮಧ್ಯೆ ಪೀಡಿತೆ ತಂದೆ ಮನೆಗೆ ಬಂದಿದ್ದಾನೆ. ಆತನ ಜೊತೆ ಮಹಿಳೆ ತವರಿಗೆ ವಾಪಸ್ ಆಗಿದ್ದಾಳೆ. ಇಷ್ಟಾದ್ಮೇಲೆ ಜೂನ್ ತಿಂಗಳಿನಲ್ಲಿ ಗಂಡನ ಮನೆಯವರು ಮತ್ತೆ ಪೀಡಿತೆ ಮನೆಗೆ ಬಂದಿದ್ದಾರೆ. ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದಾರೆ. ಪತಿ ಜೊತೆ ವಾಸ ಮುಂದುವರೆಸುವ ಆಸೆಯಲ್ಲಿ ಅಲ್ಲಿಗೆ ಹೋದ ಪೀಡಿತೆ ಹಾಗೂ ಆಕೆ ತಂದೆ ಮೇಲೆ ಗಂಡನ ಮನೆಯವರು ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಯಿಂದ ಬೇಸತ್ತ ಮಹಿಳೆ ಕೊನೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. 

click me!