ಗರ್ಭಿಣಿಯರಿಗೆ ಹುರುಳಿ ಕಾಳಿನ ಟೇಸ್ಟಿ ರೆಸಿಪಿ ಜೊತೆ, ಚಿಕ್ಕಪುಟ್ಟ ಸಮಸ್ಯೆಗಳಿಗೆ ನಟಿ ಅದಿತಿ ಪರಿಹಾರ

By Suvarna NewsFirst Published Feb 27, 2024, 12:52 PM IST
Highlights

ಗರ್ಭಿಣಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು, ಗರ್ಭ ಧರಿಸಿದ ಸಮಯದಲ್ಲಿ ಎದುರಾಗುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರ ಹೇಳುವ ಜೊತೆಗೆ ಹುರುಳಿಕಾಳಿನ ರೆಸಿಪಿ ಹೇಳಿದ್ದಾರೆ.
 

 ಇತ್ತೀಚೆಗಷ್ಟೇ ಸೀಮಂತ ಮಾಡಿಸಿಕೊಂಡಿರುವ ಖುಷಿಯಲ್ಲಿದ್ದಾಗ ನಟಿ ಅದಿತಿ ಪ್ರಭುದೇವ. ಕೆಲ ತಿಂಗಳ ಹಿಂದಷ್ಟೇ ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟಿದ್ದ ನಟಿ, ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡುತ್ತಿದ್ದು, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 
ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಗರ್ಭಿಣಿಯಾದ ಮೇಲೂ ಆ್ಯಕ್ಟೀವ್​ ಆಗಿಯೇ ಇದ್ದಾರೆ. ಇದೀಗ ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಮಾತನಾಡಿರುವ ನಟಿ, ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದಾರೆ. ಕಾಲು ಊದಿಕೊಳ್ಳುವುದು ಹಲವು ಗರ್ಭಿಣಿಯರಿಗೆ ಸಾಮಾನ್ಯ. ಇಡೀ ದೇಹದಲ್ಲಿನ ಪ್ರಕ್ರಿಯೆ ಒಂದೇ ಸಮನೆ ಬದಲಾಗುವ ಕಾರಣ, ದೇಹ ಮತ್ತು ಮನಸ್ಸು ಎರಡರ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ. ಕೆಲವೊಂದು ದೈಹಿಕ ಸಮಸ್ಯೆಗಳು ಕಾಣಿಸುತ್ತವೆ. ಅಂಥದ್ದರಲ್ಲಿ ಒಂದು ಕಾಲು ಊದಿಕೊಳ್ಳುವುದುದ. ಅದಕ್ಕೆ ಏನೇನು ಪರಿಹಾರ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಅದಿತಿ ನೀಡಿದ್ದಾರೆ.

ಮಕ್ಕಳಿಗೂ ಇಷ್ಟ, ದೊಡ್ಡವರಿಗೂ ರುಚಿ: ಫಟಾಫಟ್​ ಮೆಂತ್ಯ ಸಣ್ಣ ಕಡುಬು ರೆಸಿಪಿ ತಿಳಿಸಿಕೊಟ್ಟ ಅದಿತಿ ಪ್ರಭುದೇವ

ಇದೇ ವೇಳೆ, ಗರ್ಭ ಧರಿಸಿದ ವೇಳೆ ಆಹಾರವೂ ಮುಖ್ಯವಾಗುತ್ತದೆ. ಅದರಲ್ಲಿ ಒಂದು ಹುರುಳಿ ಕಾಳು. ಇದರ ಅಡುಗೆ ಹೇಗೆ ಮಾಡಬೇಕು ಎನ್ನುವುದನ್ನು ನಟಿ ಹೇಳಿಕೊಟ್ಟಿದ್ದಾರೆ. ಮೊದಲಿಗೆ ಅನ್ನ ಮಾಡಿಕೊಂಡಿದ್ದಾರೆ. ಇದರಲ್ಲಿಯೂ ಸ್ವಲ್ಪ ಡಿಫರೆಂಟ್​ ವಿಧಾನ ಅನುಸರಿಸಿದ್ದಾರೆ. ಅಕ್ಕಿಯ ಜೊತೆ ಸ್ವಲ್ಪ ತೊಗರಿಬೇಳೆ, ಹೆಸರು ಕಾಳು, ಸ್ವಲ್ಪ ಕಡ್ಲೆಬೇಳೆ ಸೇರಿಸಿದ್ದಾರೆ. ನಂತರ ನೀರು ಹಾಕಿ ಬೇಯಿಸಿ ಅನ್ನ ರೆಡಿ ಮಾಡಿಕೊಂಡಿದ್ದಾರೆ.
 
ಹುರುಳಿ  ಕಾಳಿನ ಚಟ್ನ ಮಾಡಿಕೊಳ್ಳಲು ಸ್ವಲ್ಪ ತುಪ್ಪದಲ್ಲಿ, ಹುರುಳಿ ಕಾಳು,  ಕೊಬ್ಬರಿ, ಬೆಳ್ಳುಳ್ಳಿ, ಒಣ ಮೆಣಸಿನ ಕಾಯಿ, ಸ್ವಲ್ಪ ಜೀರಿಗೆ, ಕಡಲೆ ಬೇಳೆ, ಹುಣಸೇಹಣ್ಣು, ಕರಿಬೇವು ಸೇರಿಸಿ ಹುರಿದುಕೊಂಡಿದ್ದಾರೆ.  ನಿಧಾನವಾದ ಉರಿಯಲ್ಲಿ ಕೆಂಪಗಾಗುವವರೆಗೂ ಹುರಿದುಕೊಳ್ಳಬೇಕು. ನಂತರ ಉಪ್ಪನ್ನು ಹಾಕಿಕೊಂಡು ಸ್ಟವ್​ ಆಫ್​ ಮಾಡಬೇಕು. ಪೂರ್ತಿ ಆರಿದ ಮೇಲೆ ಪುಡಿ ಮಾಡಿಕೊಳ್ಳಬೇಕು. ಸ್ವಲ್ಪ ನೀರು ಹಾಕಿಕೊಂಡು ಮಿಕ್ಸಿ ಮಾಡಿಕೊಳ್ಳಬೇಕು. ನಂತರ ಉಂಡೆ ಕಟ್ಟಿಕೊಳ್ಳಬೇಕು. ರೆಡಿಯಾದ ಅನ್ನಕ್ಕೆ ಇದನ್ನು ಹಾಕಿಕೊಂಡು ತಿಂದರೆ ಗರ್ಭಧರಿಸಿದ ಸಮಯದಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತದೆ ಎಂದು ನಟಿ ಹೇಳಿದ್ದಾರೆ. 

ಗರ್ಭಿಣಿ ಅದಿತಿ ಪ್ರಭುದೇವ ಅಮ್ಮ ಕಲಿಸಿಕೊಟ್ರು ಮುತ್ತಜ್ಜಿಯ ರೆಸಿಪಿ ಸೂಪರ್​, ಟೇಸ್ಟಿ 'ಮಾದಲಿ'!

click me!