ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಬಳಿ ಇರುವ ಲಕ್ಸುರಿ ಬ್ಯಾಗ್ಗಳ ಪ್ರದರ್ಶನ ಮಾಡಿದ್ದಾರೆ. ಇದರಲ್ಲಿ ಗಮನ ಸೆಳೆದಿದ್ದು ಚಿನ್ನ, ಬೆಳ್ಳಿಯ ಬ್ಯಾಗ್
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್. ಕೆಲ ದಿನಗಳ ಹಿಂದಷ್ಟೇ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಸಕತ್ ಸ್ಮಾರ್ಟ್ ಕಾಣಿಸುತ್ತಿದ್ದ ನಟಿಯರನ್ನು ಫ್ಯಾನ್ಸ್ ಹಾಡಿ ಹೊಗಳಿದರು. ತಮ್ಮ ಯೂಟ್ಯೂಬ್ ಹೊಂದಿರೋ ನಟಿ ಮೇಘನಾ ಕೆಲವೊಂದು ವಿಷಯಗಳನ್ನು ಅದರಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಬ್ಯೂಟಿಗೆ ಸಂಬಂಧಿಸಿದ ಸುದ್ದಿಗಳು ಹಾಗೂ ತಾವು ಬಳಸುವ ಕೆಲವೊಂದು ಪ್ರಾಡಕ್ಟ್ಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ.
ಈಗ ಅವರು ತಮ್ಮಲ್ಲಿರುವ ಬ್ಯಾಗ್ ಕಲೆಕ್ಷನ್ ಕುರಿತು ಮಾತನಾಡಿದ್ದಾರೆ. ಲಕ್ಸುರಿ ಬ್ಯಾಗ್ ಕಲೆಕ್ಷನ್ ಎಂದರೆ ಇಷ್ಟಪಡುವ ನಟಿ, ಕೆಲ ತಿಂಗಳ ಹಿಂದಷ್ಟೇ ಬ್ಯಾಗಲ್ಲಿ ಏನಿದೆ ಎಂದು ತೋರಿಸಿ, ವಿಡಿಯೋ ಮಾಡಿದ್ದರು. ತಮ್ಮ ಬ್ಯಾಗ್ನಲ್ಲಿ ಏನೇನಿದೆ ಎಂದು ಪದೇ ಪದೇ ಅಭಿಮಾನಿಗಳು ಕೇಳುತ್ತಿದ್ದುದಕ್ಕೆ ಈ ವಿಡಿಯೋ ಮಾಡುವ ಮೂಲಕ ಅಪ್ಡೇಟ್ ನೀಡಿರುವುದಾಗಿ ಹೇಳಿದ್ದರು. ಮೇಘನಾ ವಿಡಿಯೋದಲ್ಲಿ ಐಷಾರಾಮಿ ಬ್ರ್ಯಾಂಡ್ louis vuitton ಬ್ಯಾಗ್ ಪ್ರದರ್ಶಿಸಿ ಅದರಲ್ಲಿ ಏನೆನಿದೆ ಎಂಬ ಬಗ್ಗೆ ಹೇಳಿದ್ದರು. 'ನನ್ನ ಬ್ಯಾಗಲ್ಲಿ ಎರಡು ತರ ಕನ್ನಡಕ ಇರುತ್ತೆ. ಒಂದು ಪವರ್ ಮತ್ತೊಂದು ಸ್ಟೈಲ್ ಮಾಡುವುದಕ್ಕೆ. 100% ಕಾಂಟ್ಯಾಕ್ಟ್ ಲೆನ್ಸ್ ಬಳಸುವುದಕ್ಕೆ ಆಗಲ್ಲ ಅದಿಕ್ಕೆ. ಹಾಡುಗಳನ್ನು ಹೆಚ್ಚಿಗೆ ಕೇಳುವ ಕಾರಣ ಏರ್‌ಪಾಡ್‌ಗಳಿರುತ್ತದೆ. ಕಾಂಪ್ಯಾಕ್ಟ್ ಪೌಡರ್ ಇರುತ್ತದೆ. ಗಮ್ ಎಂದು ಸ್ಮೆಲ್ ಮಾಡುವುದು ಮುಖ್ಯವಾಗುತ್ತದೆ. ಹೊರಗಡೆ ಹೋದರೆ ಮಾತ್ರ ಪರ್ಫ್ಯೂಮ್ ಬಳಸುವುದಿಲ್ಲ ಮನೆಯಲ್ಲಿದ್ದರೂ 10-20 ಸಲ ಹಾಕಿಕೊಳ್ಳುವೆ. ನನ್ನ ಮಗ ಆಟವಾಡುತ್ತಿರುವ ಗೊಂಬೆಗಳನ್ನು ಪುಸ್ತಕಗಳ ಮೇಲೆ ಅಂಟಿಸಿಕೊಂಡಿರುವೆ... ಹೀಗೆ ಒಂದೊಂದೇ ವಿಷಯ ಹೇಳುತ್ತಾ ಹೋಗಿದ್ದರು.
ಮೇಘನಾ ರಾಜ್ ಕೈಯಲ್ಲಿ ಬಾಟಲಿಗಳು ಪೀಸ್ ಪೀಸ್, ಪಾತ್ರೆಗಳು ಪುಡಿಪುಡಿ: ಆಗಿದ್ದೇನು?
ಆದರೆ ಇದೀಗ ನಟಿ ಮೇಘನಾ ಐಷಾರಾಮಿ ಬ್ಯಾಗ್ಗಳ (Luxury bags) ಪ್ರದರ್ಶನ ಮಾಡಿದ್ದಾರೆ. ಲಕ್ಸುರಿ ಬ್ಯಾಗ್ಗಳ ಬಗ್ಗೆ ವಿವರಣೆ ನೀಡುವುದಕ್ಕೂ ಮೊದಲು ನಟಿ ತಮಗೆ ಬ್ಯಾಗ್ ಎಂದರೆ ಎಷ್ಟು ಇಷ್ಟ ಎಂಬುದನ್ನು ಹೇಳಿದ್ದಾರೆ. ಒಂದು ಕಂಕುಳಿನಲ್ಲಿ ಮಗನಿದ್ದರೆ ಇನ್ನೊಂದು ಕಂಕುಳಿನಲ್ಲಿ ನನ್ನ ಬ್ಯಾಗ್ ಇರುತ್ತದೆ. ಇದೇ ಕಾರಣಕ್ಕೆ ನನ್ನ ಫ್ರೆಂಡ್ಸ್ ಕೂಡ ಯಾವಾಗ್ಲೂ ಇದರ ಬಗ್ಗೆನೇ ಕೇಳುತ್ತಿರುತ್ತಾರೆ ಎಂದು ಬ್ಯಾಗ್ ಕುರಿತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಮೀಟಿಂಗ್ಗೆ ಒಯ್ಯುವ ಬ್ಯಾಗ್ಗಳ ವಿವರಣೆ ನೀಡಿದ್ದಾರೆ.
ತಮ್ಮ ಔಟ್ಫಿಟ್ಗೆ ಮ್ಯಾಚ್ ಆಗುವ ಚಿಕ್ಕ ಹ್ಯಾಂಡ್ಬ್ಯಾಗ್ ತಾವು ಮೀಟಿಂಗ್ ಸಮಯದಲ್ಲಿ ತೆಗೆದುಕೊಂಡು ಹೋಗುವುದಾಗಿ ನಟಿ ಹೇಳಿದ್ದಾರೆ. ಏನಾದ್ರೂ ಮಹತ್ವದ ವಿಷಯಗಳನ್ನು ಮೊಬೈಲ್ನಲ್ಲಿ ಬರೆದುಕೊಳ್ಳುವ ಬದಲು ನೋಟ್ಬುಕ್ನಲ್ಲಿ ಬರೆದುಕೊಳ್ಳುವುದಕ್ಕೆ ಒಂದು ಚಿಕ್ಕ ನೋಟ್ಬುಕ್ ಜೊತೆಗೆ ಲಿಪ್ಸ್ಟಿಕ್, ಕೆಲವು ಕಂಪೆನಿಯ ಫೌಂಡೇಷನ್ ಕ್ರೀಮ್ ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಜೊತೆಗೆ ಲಕ್ಸುರಿ ಕಂಪೆನಿಗಳಾದ Salvatore Ferragamo, Louis Vuitton, Burberry ಮುಂತಾದ ಕಂಪೆನಿಗಳ ಬ್ಯಾಗ್ಗಳು ತಮ್ಮ ಬಳಿ ಇವೆ ಎಂದು ಅವುಗಳ ವಿವರಣೆ ನೀಡಿದರು.
ಊಟಿ: ಫ್ರೆಂಡ್ಸ್, ರಾಯನ್ ಜೊತೆ ಮೇಘನಾ ರಾಜ್ ಮಸ್ತಿ, ಫೋಟೋಸ್ ವೈರಲ್
ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆದದ್ದು ಎರಡು ಬ್ಯಾಗ್ಗಳು. ಅವುಗಳೆಂದರೆ, ನಿರ್ಮಾಪಕ ವಿಜಯ್ ಕಿರಂಗಂದೂರು ಪತ್ನಿ ಶೈಲಜಾ ಅವರು ನೀಡಿರುವ ಬೆಳ್ಳಿಯ ಬ್ಯಾಗ್ ಹಾಗೂ ಮೇಘನಾ ಅವರ ಬಳಿ ಇರುವ Aranya ಕಂಪೆನಿಯ ಹ್ಯಾಂಡ್ ಬ್ಯಾಗ್ಗಳು. ಶೈಲಜಾ ಅವರು ನೀಡಿರುವ ಬೆಳ್ಳಿಯ ಬ್ಯಾಗ್ ಮೇಲೆ ಗಂಡಬೇರುಂಡ ಕಸೂತಿ ಇದ್ದು, ಅದರಲ್ಲಿ ಜೆಮ್ಸ್ಟೋನ್ ಅಳವಡಿಸಲಾಗಿದೆ. ಈ ಬ್ಯಾಗ್ ವೆಡ್ಡಿಂಗ್ ಸೀಸನ್ಗೆ ತುಂಬಾ ಸೂಟ್ ಆಗುವುದಾಗಿ ನಟಿ ಹೇಳಿದರು. ಇನ್ನು ಅರಣ್ಯಾ ಕಂಪೆನಿ ಬ್ಯಾಗ್ ಬಗ್ಗೆ ಹೇಳುವುದಾದರೆ ಇದು ಭಾರತದಲ್ಲಿಯೇ ತಯಾರಾಗುತ್ತಿರುವುದಾಗಿ ಹೇಳಿದ ನಟಿ, ಅದರ ಮೇಲೆ ಎಂಆರ್ ಅರ್ಥಾ ಮೇಘನಾ ರಾಜ್ (Meghana Raj) ಎಂದು ಚಿನ್ನದಲ್ಲಿ ಬರೆದಿರುವುದನ್ನು ತೋರಿಸಿದರು. ಇವರ ಈ ಬ್ಯಾಗ್ ಕಲೆಕ್ಷನ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಅಬ್ಬಬ್ಬಾ ಎನ್ನುತ್ತಿದ್ದಾರೆ. ಥಹರೇವಾರಿ ಕಮೆಂಟ್ಗಳು ಬರುತ್ತಿವೆ.