ಮದುವೆಯಾದ ಆರಂಭದಲ್ಲಿ, 35 ವರ್ಷ ಗಡಿ ದಾಟಿದ ಮೇಲೆ, ಈಗಾಗಲೇ ಎರಡು ಮಕ್ಕಳ ತಾಯಿಯಾಗಿರುವ ಹೆಣ್ಣು ಮತ್ತೆ ಗರ್ಭಧರಿಸಿದ್ರೆ ಅದನ್ನು ಹೇಳಲು ನಾಚುತ್ತಾಳೆ. ಗರ್ಭಪಾತದ ನಿರ್ಧಾರಕ್ಕೆ ಬರ್ತಾಳೆ. ಔಷಧಿ ಅಂಗಡಿಗೆ ಹೋಗಿ ಮಾತ್ರೆ ತಂದು ಸೇವನೆ ಮಾಡ್ತಾಳೆ. ಆದ್ರೆ ಮುಂದಾಗೋದು…
ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಅನಗತ್ಯ ಗರ್ಭಧಾರಣೆಯಾಗೋದು ಸಾಮಾನ್ಯ. ಮಕ್ಕಳನ್ನು ಬಯಸದ ಅನೇಕ ದಂಪತಿ ನಿರ್ಲಕ್ಷ್ಯ ಮಾಡ್ತಾರೆ. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸ್ತಾರೆ. ಇದ್ರಿಂದ ಬೇಡದ ಗರ್ಭ ಹೊಟ್ಟೆಯಲ್ಲಿ ಬೆಳೆಯಲು ಶುರುವಾಗುತ್ತದೆ. ಮಗು ಬೇಡ ಎನ್ನುವ ಕಾರಣ ಗರ್ಭಪಾತಕ್ಕೆ ಮುಂದಾಗ್ತಾರೆ. ಮಗುವಿನ ಬೆಳವಣಿಗೆ ಹೆಚ್ಚಾದಾಗ ಗರ್ಭಪಾತ ಕಷ್ಟವಾಗುತ್ತದೆ. ಎರಡರಿಂದ ಮೂರು ವಾರಗಳಲ್ಲಿ ಗರ್ಭವನ್ನು ಔಷಧಿ ಮೂಲಕ ಸುಲಭವಾಗಿ ತೆಗೆಯಬಹುದು.
ಅನೇಕ ಮಹಿಳೆಯರು ಪದೇ ಪದೇ ಅನಗತ್ಯ ಗರ್ಭಧಾರಣೆ (Pregnancy) ಗೆ ಒಳಗಾಗ್ತಾರೆ. ಪ್ರತಿ ಬಾರಿಯೂ ಗರ್ಭಪಾತ (Miscarriage ) ಮಾಡಿಸಿಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಒಮ್ಮೆ ಹೋಗುವ ಮಹಿಳೆಯರು ನಂತ್ರ ವೈದ್ಯರ ಬಳಿ ಹೋಗೋದಿಲ್ಲ. ಹಳೆ ಚೀಟಿ ತೋರಿಸಿ ಗರ್ಭಪಾತದ ಔಷಧಿ (Medicine) ಪಡೆಯುತ್ತಾರೆ. ಮತ್ತೆ ಕೆಲವರು, ಬೇರೆ ಯಾರಿಗೋ ನೀಡಿದ ಔಷಧಿ ಚೀಟಿಯನ್ನು ತೋರಿಸಿ, ತಾವೂ ಆ ಔಷಧಿಯನ್ನು ತೆಗೆದುಕೊಂಡು ಗರ್ಭಪಾತಕ್ಕೆ ಒಳಗಾಗ್ತಾರೆ.
ರಿಸ್ಕ್ ವಿಷ್ಯ ಬಂದಾಗ ಹಿಂದೆ ಸರಿತಾರೆ ಮಹಿಳೆಯರು!
ಗರ್ಭಪಾತಕ್ಕೆ ಎರಡು ಮಾತ್ರೆಗಳನ್ನು ನೀಡಲಾಗುತ್ತದೆ. ಈ ಎರಡೂ ಮಾತ್ರೆಗಳು ಕಠಿಣವಾಗಿರುತ್ತವೆ. ಮಾತ್ರೆ ಸೇವನೆ ಮಾಡಿದ ನಂತ್ರ ಅತಿಯಾದ ಬ್ಲೀಡಿಂಗ್ ಕಾಡುವುದಿದೆ. ಹಾಗೆಯೇ ಗರ್ಭದಲ್ಲಿರುವ ಭ್ರೂಣ ಸಂಪೂರ್ಣವಾಗಿ ಹೋಗಿದೆ ಎನ್ನುವುದಕ್ಕೆ ಯಾವುದೇ ಖಾತ್ರಿ ಇರೋದಿಲ್ಲ. ಪದೇ ಪದೇ ಗರ್ಭಪಾತ ಮಾತ್ರೆ ಸೇವನೆಯಿಂದ ಅಡ್ಡಪರಿಣಾಮ ಹೆಚ್ಚು. ಸಣ್ಣ ಭ್ರೂಣದ ತುಣುಕು ಹೊಟ್ಟೆಯಲ್ಲಿದ್ದರೂ ಅದು ಮುಂದೆ ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಗರ್ಭಪಾತಕ್ಕಿಂತ ಮೊದಲು ವೈದ್ಯರನ್ನು ಭೇಟಿಯಾಗಿ ಔಷಧಿ ಪಡೆಯುವುದು ಒಳ್ಳೆಯದು. ಅಲ್ಲದೆ ಮಾತ್ರೆ ಮುಗಿದ ನಂತ್ರ ವೈದ್ಯರ ಹೇಳಿದಂತೆ ಸ್ಕ್ಯಾನಿಂಗ್ ಮಾಡಿಸಿಕೊಂಡಲ್ಲಿ ಮುಂದೆ ದೊಡ್ಡ ಸಮಸ್ಯೆಯಿಂದ ನೀವು ತಪ್ಪಿಸಿಕೊಳ್ತಿರಿ.
ಗರ್ಭಪಾತ ಮಾತ್ರೆಯಿಂದ ಆಗುವ ಅಡ್ಡಪರಿಣಾಮಗಳು :
ಕಿಬ್ಬೊಟ್ಟೆ ಸೆಳೆತ ಮತ್ತು ನೋವು : ಗರ್ಭಪಾತನ ಮಾತ್ರೆಯನ್ನು ನೀವು ಸೇವನೆ ಮಾಡಿದಾಗ ವಿಪರೀತ ಕಿಬ್ಬೊಟ್ಟೆ ನೋವು ನಿಮ್ಮನ್ನು ಕಾಡಬಹುದು. ಗರ್ಭಾಶಯವು ಗರ್ಭಾವಸ್ಥೆಯ ಅಂಗಾಂಶವನ್ನು ಹೊರಹಾಕಲು ಸಂಕುಚಿತಗೊಂಡಾಗ ಈ ನೋವು ಕಾಣಿಸಿಕೊಳ್ಳುತ್ತದೆ.
ಅತಿಯಾದ ರಕ್ತಸ್ರಾವ : ಗರ್ಭಪಾತದ ಮಾತ್ರೆ ಸೇವನೆ ಮಾಡಿದಾಗ ರಕ್ತಸ್ರಾವ ಹೆಚ್ಚಾಗುತ್ತದೆ. ಸಾಮಾನ್ಯ ಮುಟ್ಟಿಗಿಂತ ಹೆಚ್ಚು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಈ ರಕ್ತಸ್ರಾವ ನಾಲ್ಕೈದು ದಿನ ನಿಮ್ಮನ್ನು ಕಾಡುತ್ತದೆ.
ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ 3 ಆರೋಗ್ಯ ರಹಸ್ಯಗಳು!
ಕಾಡಬಹುದು ವಾಕರಿಕೆ – ವಾಂತಿ : ವಾಕರಿಕೆ ಹಾಗೂ ವಾಂತಿ ಎಲ್ಲರಿಗೂ ಕಾಡುತ್ತದೆ ಎಂದಲ್ಲ. ಕೆಲ ಮಹಿಳೆಯರಿಗೆ ವಾಕರಿಗೆ ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ ವಾಂತಿಯಾಗುತ್ತದೆ. ಇದು ತಾತ್ಕಾಲಿಕ.
ಆಯಾಸ, ಅತಿಸಾರ, ತಲೆತಿರುಗುವಿಕೆ : ಗರ್ಭಪಾತದ ಮಾತ್ರೆ ಸೇವನೆ ಮಾಡೋದ್ರಿಂದ ನಿಮ್ಮ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಜೊತೆಗೆ ರಕ್ತಸ್ರಾವ ಹಾಗೂ ನೋವು ಇರುವ ಕಾರಣ, ಸುಸ್ತು ಕಾಡೋದು ಸಹಜ. ಕೆಲವರಿಗೆ ಅತಿಸಾರವಾದ್ರೆ ಮತ್ತೆ ಕೆಲವರಿಗೆ ತಲೆ ಸುತ್ತಿದ ಅನುಭವವಾಗುತ್ತದೆ.
ಈ ಸಂದರ್ಭದಲ್ಲಿ ವರ್ಕ್ ಆಗಲ್ಲ ಗರ್ಭಪಾತದ ಮಾತ್ರೆ : ಮೊದಲೇ ಹೇಳಿದಂತೆ ಗರ್ಭಧರಿಸಿ ಹತ್ತು ವಾರದ ನಂತ್ರ ಗರ್ಭಪಾತದ ಮಾತ್ರೆ ಪರಿಣಾಮ ಬೀರುವುದಿಲ್ಲ. ಈ ಸಮಯದಲ್ಲಿ ಗರ್ಭಪಾತದ ಮಾತ್ರೆ ಸೇವನೆ ಮಾಡಿದ್ರೆ ಸಮಸ್ಯೆ ಹೆಚ್ಚಾಗಬಹುದು. 10 ವಾರದ ನಂತ್ರ ಗರ್ಭಪಾತಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.
ಗರ್ಭಪಾತಕ್ಕೂ ಮುನ್ನವೇ ಇದನ್ನು ಆಲೋಚನೆ ಮಾಡಿ : ಗರ್ಭಪಾತಕ್ಕೆ ಒಳಗಾಗುವ ಪರಿಸ್ಥಿತಿ ತಂದುಕೊಳ್ಳದೆ ಇದ್ರೆ ಬಹಳ ಒಳ್ಳೆಯದು. ಈಗ ಅನಗತ್ಯ ಗರ್ಭಧಾರಣೆ ತಡೆಯಲು ನಾನಾ ವಿಧಗಳಿವೆ. ಅವುಗಳನ್ನು ಅನುಸರಿಸಿ ನೀವು ಗರ್ಭಧಾರಣೆ ತಡೆಯಬಹುದು. ಅಚಾನಕ್ ಸಂಭವಿಸಿದಲ್ಲಿ, ಗರ್ಭಪಾತ ಅಗತ್ಯವೇ ಎಂದು ಮೊದಲು ನಿರ್ಧರಿಸಿ. ಅನಿವಾರ್ಯ ಎನ್ನುವ ಸಂದರ್ಭದಲ್ಲಿ ಯಾವುದೇ ಮುಜುಗರವಿಲ್ಲದೆ ವೈದ್ಯರನ್ನು ಭೇಟಿಯಾಗಿ. ಈಗಾಗಲೇ ನೀವು ಬೇರೆ ರೋಗದಿಂದ ಬಳಲುತ್ತಿದ್ದರೆ ವೈದ್ಯರಿಗೆ ಅದರ ಮಾಹಿತಿ ತಿಳಿಸಿ. ಮಾತ್ರೆ ಸೇವನೆ ನಂತ್ರ ಏನೆಲ್ಲ ಬದಲಾವಣೆಯಾಗಬಹುದು ಎಂಬುದನ್ನು ಸರಿಯಾಗಿ ತಿಳಿದಿರಿ.