ಬ್ಯೂಟಿ ಟಿಪ್ಸ್ ಹೇಳಿ, ಪತಿಯೊಂದಿಗೆ ಅಡುಗೆ ಮಾಡಿದ ಅದಿತಿ ಪ್ರಭುದೇವ್!

By Suvarna News  |  First Published Jul 20, 2023, 3:46 PM IST

ಅಡುಗೆ ಮನೆ ಕೆಲಸದಲ್ಲಿ ಪತಿ ಸಹಾಯ ಮಾಡಿದ್ರೆ ಪತ್ನಿಯರು ಖುಷಿಯಲ್ಲಿ ತೇಲಾಡ್ತಾರೆ. ನಟಿ ಅದಿತಿ ಪ್ರಭುದೇವ ಕೂಡ ಪತಿ ಮಾಡಿದ ಸೋಯಾ ಪುಲಾವ್ ತಿಂದು ಎಂಜಾಯ್ ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
 


ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅನೇಕರ  ಫೆವರೆಟ್. ನಟನೆ ಜೊತೆ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ನಟಿ ನಟಿ ಅದಿತಿ ಪ್ರಭುದೇವ. 2022, ನವೆಂಬರ್ 28ರಂದು ಯಶಸ್ ಪಟ್ಲಾ ಅವರನ್ನು ಮದುವೆಯಾಗಿರುವ ಅದಿತಿ ಪ್ರಭುದೇವ ಯುಟ್ಯೂಬ್ ಚಾನೆಲ್ ನಡೆಸ್ತಾರೆ. ಅದ್ರಲ್ಲಿ ಅವರ ರುಚಿ ಅಡುಗೆ ಜೊತೆ ಬ್ಯೂಟಿ ಟಿಪ್ಸ್ ಕೂಡ ಇರುತ್ತೆ. ಈ ಬಾರಿ ಅದಿತಿ ಪ್ರಭುದೇವ ತಮ್ಮ ಪತಿ ಕೈನಲ್ಲಿ ಅಡುಗೆ ಮಾಡಿಸಿದ್ದಾರೆ.

ಮನೆಯಲ್ಲಿರುವ ಪುರುಷರು ಅಡುಗೆ (Cooking) ಮನೆ ಸೇರಿದ್ರೆ ಮಹಿಳೆಯರಿಗೆ ಏನೋ ಕುತೂಹಲ. ಹಾಗೆ ಖುಷಿ. ತಂದೆ ಇರಲಿ, ಸಹೋದರ ಇರಲಿ ಇಲ್ಲ ಪತಿ ಇರಲಿ, ಅವರ ಕೈ ರುಚಿ ತಿನ್ನೋ ಮಜವೇ ಬೇರೆ. ಸಂಸಾರ ಅಂದ್ಮೇಲೆ ಪತಿ – ಪತ್ನಿ ಇಬ್ಬರೂ ಜವಾಬ್ದಾರಿ ಹಂಚಿಕೊಳ್ಳಬೇಕು. ಅಡುಗೆ ಮಾಡೋದು ಪತ್ನಿಗೆ ಸೀಮಿತವಾಗಿಲ್ಲ. ಪತ್ನಿ ಅಡುಗೆ ಮಾಡ್ವಾಗ ಮೊಬೈಲ್ ಹಿಡಿದು ಕುಳಿತುಕೊಳ್ಳುವ ಪತಿಗಿಂತ ಅಡುಗೆ ಮನೆಗೆ ನುಗ್ಗಿ ಸ್ವಲ್ಪ ಹೆಲ್ಪ್ ಮಾಡುವ ಪತಿ ಮೇಲೆ ಪತ್ನಿಗೆ ವಿಶೇಷ ಪ್ರೀತಿ (love). ಇಡೀ ದಿನ ಮನೆ ಕೆಲಸ ಮಾಡಿ ಸುಸ್ತಾಗಿರು, ಯಾಕಪ್ಪ ಅಡುಗೆ ಮಾಡ್ಬೇಕು ಅಂತಾ ಬೇಸರ ವ್ಯಕ್ತಪಡಿಸುವ ಮಹಿಳೆಯರಿಗೆ ಪತಿ ಒಂದು ದಿನ ಟೀ ಮಾಡಿಕೊಟ್ರೂ ಖುಷಿಯಾಗುತ್ತೆ. 

Tap to resize

Latest Videos

ಸೆಕ್ಸ್‌ ಬಾಂಬ್‌ ಎಂದೇ ಖ್ಯಾತರಾಗಿದ್ದ ನಟಿಗೆ ಮುಳುವಾದ ಬೋಲ್ಡ್‌ ದೃಶ್ಯ! ತುತ್ತು ಅನ್ನಕ್ಕೂ ಈಗ ಪರದಾಟ

ಅದಿತಿ ಪ್ರಭುದೇವ (Aditi Prabhudeva) ಪತಿ ಕೂಡ ಪತ್ನಿಗೆ ವಿಶೇಷ ಅಡುಗೆ ಮಾಡಿ ಬಡಿಸಿದ್ದಾರೆ.  ತಮಾಷೆ ಮಾಡ್ತಾ, ನಗ್ತಾ ಇಬ್ಬರು ಮಾಡಿರುವ ಸೋಯಾ ಪಲಾವ್ ಗೆ ಇವರ ಪ್ರೀತಿ ಸೇರಿರೋದ್ರಿಂದ ರುಚಿ ಡಬಲ್ ಆಗಿದೆ ಅಂದ್ರೆ ತಪ್ಪಾಗೋದಿಲ್ಲ.ಅದಿತಿ ಪ್ರಭುದೇವ ಪತಿ ಯಶ್ ಮಾಡಿರುವ ಪಲಾವ್ ಗೆ ಅವರು ಸೋಯಾ, ಸೋಂಪು, ಪಲಾವ್ ಎಲೆ, ಚಕ್ಕೆ, ಸಾಂಬಾರ್ ಪೌಡರ್, ಲವಂಗ, ಈರುಳ್ಳಿ, ಟೊಮಾಟೊ, ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ, ನಿಂಬೆ ಹಣ್ಣು, ಪುದೀನಾ, ಕಾಯಿತುರಿ, ಮೆಣಸಿನಕಾಯಿ ಬಳಸಿದ್ದಾರೆ.

ಸೋಯಾ ಪಲಾವ್ ಮಾಡುವ ವಿಧಾನ : ಬಿಸಿ ನೀರಿಗೆ ಸೋಯಾ ಹಾಕಿ ಸ್ವಲ್ಪ ಸಮಯ ನೆನೆಸಿಡಿ. ಸೋಂಪು, ಚಕ್ಕೆ, ಮೆಣಸಿನಕಾಯಿ, ಈರುಳ್ಳಿ, ಟೊಮಾಟೊ, ಪುದೀನಾ,ಕೊತ್ತಂಬರಿ ಸೊಪ್ಪು, ತುರಿದ ಕೊಬ್ಬರಿ ಹಾಕಿ, ನೀರನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತ್ರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಗ್ಯಾಸ್ ಮೇಲೆ ಕುಕ್ಕರ್ ಇಟ್ಟು, ತುಪ್ಪ ಹಾಕಿ. ಅದಕ್ಕೆ ಪಲಾವ್ ಎಲೆ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಸಿದ್ಧಪಡಿಸಿದ ಮಸಾಲೆ ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಗರಂ ಮಸಾಲೆ ಹಾಕಿ, ನೆನೆಸಿಟ್ಟ ಸೋಯಾವನ್ನು ಸೋಸಿಕೊಂಡು ಮಸಾಲೆಗೆ ಹಾಕಿ.  ಸೋಯಾ ಮಸಾಲೆ ಜೊತೆ ಚೆನ್ನಾಗಿ ಬೆರೆಯಲಿ. ನಂತ್ರ ಅಕ್ಕಿಯನ್ನು ಚೆನ್ನಾಗಿ ತೊಳೆದು ಇದಕ್ಕೆ ಹಾಕಿ, ಕುಕ್ಕರ್ ಮುಚ್ಚಿ. ಎರಡು ಸೀಟಿಯಾದ್ಮೇಲೆ ಮುಚ್ಚಳ ತೆಗೆದು, ನಿಂಬೆ ರಸ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.  

ಈ ಕಾಲದಲ್ಲೂ ಗಂಡನ ಪಾದಪೂಜೆನಾ! ಇಂಥ ನಂಬಿಕೆಯಲ್ಲೇ ಮುಳುಗೇಳ್ತಿವೆಯಾ ನಮ್ ಸೀರಿಯಲ್ಸ್?

ಇನ್ನು ನಟಿ ಅದಿತಿ ಪ್ರಭುದೇವ್ ಬ್ಯೂಟಿ ಟಿಪ್ಸ್ ಕೂಡ ಹೇಳಿದ್ದಾರೆ. 

ಕಪ್ಪು ತುಟಿಗೆ ಬ್ಯೂಟಿ ಟಿಪ್ಸ್ : ತುಟಿ ಕಪ್ಪಾಗಿದ್ದರೆ ಬೀಟ್ರೋಟ್ ಪೌಡರ್  ಹಾಗೂ ರೋಸ್ ವಾಟರನ್ನು ಸರಿಯಾಗಿ ಮಿಕ್ಸ್ ಮಾಡಿ ಅದನ್ನು ತುಟಿಗೆ ಹಚ್ಚಬೇಕು. ಅರ್ಧಗಂಟೆ ಅದನ್ನು ಬಿಟ್ಟು ವಾಶ್ ಮಾಡಿದ್ರೆ ಮುಗೀತು.  ನಿಮ್ಮ ತುಟಿ ನೈಸರ್ಗಿಕ ಬಣ್ಣ ಪಡೆಯುತ್ತದೆ.

ಚರ್ಮದ ಸೌಂದರ್ಯಕ್ಕೆ ಬ್ಯೂಟಿ ಟಿಪ್ಸ್ : ಸ್ವಲ್ಪ ಕೊಬ್ಬರಿ ಎಣ್ಣೆಗೆ ನೀಮ್ ಪೌಡರ್ ಹಾಗೂ ಅರಿಶಿನ ಹಾಕಬೇಕು. ಅದನ್ನು ಚೆನ್ನಾಗಿ ಮಿಕ್ಸ್ ಮಾಡ್ಬೇಕು. ಮೈಗೆಲ್ಲ ಹಚ್ಚಿ, ಅರ್ಧಗಂಟೆ ಬಿಟ್ಟು ಸ್ನಾನ ಮಾಡ್ಬೇಕು. ಡ್ರೈ ಸ್ಕಿನ್ ಗೆ ಇದು ಒಳ್ಳೆಯದು. 
 

click me!