
ದೇಹದ ಪ್ರಮುಖ ಅಂಗ ಹೃದಯ. ಇದ್ರಲ್ಲಿ ಸ್ವಲ್ಪ ದೋಷ ಕಂಡು ಬಂದ್ರೂ ಮನುಷ್ಯ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಬ್ರಿಟನ್‌ನ ಮಹಿಳೆಯೊಬ್ಬಳ ದೇಹದಲ್ಲಿ ಹೃದಯವೇ ಇಲ್ಲ.
ಹೌದು, ಎರಡು ಮಕ್ಕಳ ತಾಯಿಯಾದ 39 ವರ್ಷದ ಸೆಲ್ವಾ ಹುಸೇನ್ ಹೃದಯವಿಲ್ಲದೆ ಬದುಕುತ್ತಿರುವ ಮಹಿಳೆ. ಆಕೆಯ ಜೀವ ಉಳಿಸಲು ಶಸ್ತ್ರಚಿಕಿತ್ಸೆಗೆ ನಡೆಸಬೇಕಾಯ್ತು. ಶಸ್ತ್ರಚಿಕಿತ್ಸೆ ನಂತ್ರ ಸೆಲ್ವಾ ದೇಹದಿಂದ ಹೃದಯವನ್ನು ತೆಗೆಯಲಾಗಿದೆ. ಅವರು ಹೃದಯವನ್ನು ಚೀಲದಲ್ಲಿ ಇಟ್ಟುಕೊಂಡಿದ್ದಾರೆ.
ಸೆಲ್ವಾ (Selva ) ಬ್ಯಾಕ್ ಪ್ಯಾಕಲ್ಲಿ ಏನಿದೆ? : ಸೆಲ್ವಾ ಅವರ 15lb ಬ್ಯಾಕ್ ಪ್ಯಾಕನ್ನು ಸದಾ ಹಾಕಿಕೊಂಡಿರಬೇಕು. ಇದ್ರಲ್ಲಿ ಬ್ಯಾಟರಿ, ಎಲೆಕ್ಟ್ರಿಕ್ (Electric) ಮೋಟರ್ ಮತ್ತು ಒಂದು ಪಂಪ್ ಇದೆ. ಇದು ಟ್ಯೂಬ್‌ಗಳ ಮೂಲಕ ಗಾಳಿಯನ್ನು ತಳ್ಳುವ ಮೂಲಕ ಆಕೆಯ ಎದೆಯಲ್ಲಿನ ಚೇಂಬರ್‌ಗಳಿಗೆ ಶಕ್ತಿ ತುಂಬುತ್ತದೆ.
ಹಲ್ಲುಜ್ಜುವಾಗ ಆಕಸ್ಮಿಕವಾಗಿ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ, ಆಮೇಲೆ ಏನಾಯ್ತು?
ಜೀವ ಉಳಿಸಲು ನಡೆದಿತ್ತು ಪ್ರಯತ್ನ: ಸೆಲ್ವಾಗೆ ತೀವ್ರವಾದ ಉಸಿರಾಟದ ತೊಂದರೆ ಪ್ರಾರಂಭವಾದಾಗ ಆಘಾತಕಾರಿ ಕಥೆ ಪ್ರಾರಂಭವಾಯಿತು. ಅವಳು ಎದೆ ನೋವು ಕಾಣಿಸಿಕೊಳ್ಳುತ್ತಿದ್ದೆ ಎಸೆಕ್ಸ್ ನ ಕ್ಲೇಹಾಲ್‌ನಲ್ಲಿರುವ ತನ್ನ ಕುಟುಂಬ ವೈದ್ಯರನ್ನು ಭೇಟಿಯಾದಳು. ಅವಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು. ಸೆಲ್ವಾ ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿದ್ದಾಳೆ ಎಂಬುದು ಪತ್ತೆಯಾಯ್ತು.
ನಾಲ್ಕು ದಿನಗಳ ನಂತರ, ಆಕೆಯನ್ನು ಆಂಬ್ಯುಲೆನ್ಸ್ ನಲ್ಲಿ ವಿಶ್ವಪ್ರಸಿದ್ಧ ಹೇರ್‌ಫೀಲ್ಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದ್ರೋಗ ತಜ್ಞರು ಅವಳ ಜೀವ ಉಳಿಸಲು ಹೋರಾಡಿದ್ರು. ಸೆಲ್ವಾ, ಸಪೋರ್ಟ್ ಪಂಪ್ ಮೂಲಕ ಉಸಿರಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೃದಯ ಕಸಿ ಮಾಡಲೂ ಸಾಧ್ಯವಾಗದ ಸ್ಥಿತಿಯನ್ನು ಆಕೆ ತಲುಪಿದ್ದಳು. ಇನ್ನೇನು ಆಕೆ ಜೀವನ ಮುಗೀತು ಎನ್ನುವ ಸ್ಥಿತಿಯಲ್ಲಿದ್ದಾಗ ಸೆಲ್ವಾ ಪತಿ ಅಲ್ ತನ್ನ ಹೆಂಡತಿಗೆ ಕೃತಕ ಹೃದಯವನ್ನು ನೀಡಲು ಒಪ್ಪಿದರು.
ಸೆಲ್ವಾ ಅವರ ನೈಸರ್ಗಿಕ ಹೃದಯವನ್ನು ಶಸ್ತ್ರಚಿಕಿತ್ಸಕರು ತೆಗೆದು ಹಾಕಿದ್ದಾರೆ. ಕೃತಕ ಹೃದಯವನ್ನು ಇಂಪ್ಲಾಂಟ್ ಮಾಡಲಾಗಿದೆ. ಸೆಲ್ವಾ ಬೆನ್ನಿನ ಮೇಲೆ ವಿಶೇಷ ಘಟಕವನ್ನು ಅಳವಡಿಸಲಾಗಿದೆ. ಸೆಲ್ವಾ ತನ್ನ ಬ್ಯಾಕ್ ಪ್ಯಾಕ್ ಮೋಟಾರ್ ಅನ್ನು ಪವರ್ ಮಾಡಲು ಎರಡು ಸೆಟ್ ಬ್ಯಾಟರಿಗಳನ್ನು ಹೊಂದಿದ್ದಾರೆ.
ಕೀಮೋಥೆರಪಿ ಮಾಡೋವಾಗ ಕೂದಲು ಉದುರುವುದೇಕೆ?
ಅಲ್ ಅಥವಾ ಸಹಾಯಕ್ಕೆ ಯಾರಾದ್ರೂ ಆಕೆ ಬಳಿ ಇರಬೇಕು. ಅವಳನ್ನು ಬ್ಯಾಕ್-ಅಪ್ ಯಂತ್ರಕ್ಕೆ ಜೋಡಿಸಲು 90 ಸೆಕೆಂಡುಗಳಷ್ಟೇ ಇರುತ್ತವೆ. ಆರಂಭದಲ್ಲಿ ಕೃತಕ ಹೃದಯಕ್ಕೆ ಹೊಂದಿಕೊಳ್ಳುವುದು ಸೆಲ್ವಾಗೆ ತುಂಬಾ ಕಷ್ಟವಾಗಿತ್ತು. ಸೆಲ್ವಾಗೆ ಅಳವಡಿಸಿರುವ ಕೃತಕ ಹೃದಯ ಪ್ರತಿ ನಿಮಿಷಕ್ಕೆ 138 ಬಡಿತಗಳ ದರದಲ್ಲಿ ದೇಹದ ಮೂಲಕ ರಕ್ತವನ್ನು ಪಂಪ್ ಮಾಡುತ್ತದೆ. ಇದರಿಂದಾಗಿ ಅವಳ ಎದೆ ಕಂಪಿಸುತ್ತದೆ. ಬ್ಯಾಕ್ ಪ್ಯಾಕ್ ನಲ್ಲಿ ಜೋಡಿಸಲಾದ ಎರಡು ದೊಡ್ಡ ಪ್ಲಾಸ್ಟಿಕ್ ಟ್ಯೂಬ್‌ಗಳು ಅವಳ ಹೊಕ್ಕಳಿನ ಮೂಲಕ ಅವಳ ದೇಹವನ್ನು ಪ್ರವೇಶಿಸಿ ಅವಳ ಎದೆಗೆ ಹೋಗುತ್ತವೆ.
ಸೆಲ್ವಾಗೆ ಈ ಸಮಸ್ಯೆ ಉಂಟಾದಾಗ ಐದು ವರ್ಷದ ಮಗ ಹಾಗೂ 18 ತಿಂಗಳ ಮಗಳನ್ನು ಹೊಂದಿದ್ದಳು. ಸೆಲ್ವಾಗೆ ಕಾರ್ಡಿಯೊಮಿಯೋಪತಿ ಎಂಬ ಕಾಯಿಲೆ ಇದೆ. ಇದು ಅಪರೂಪದ ಖಾಯಿಲೆಯಾಗಿದ್ದು, ಗರ್ಭಾವಸ್ಥೆಯಿಂದ ಉಂಟಾಗುತ್ತದೆ. ಅಮೆರಿಕನ್ ಕಂಪನಿ ತಯಾರಿಸಿದ ಕೃತಕ ಹೃದಯವನ್ನು ಶಸ್ತ್ರಚಿಕಿತ್ಸಕ ಡಯಾನಾ ಗಾರ್ಸಿಯಾ ಸಾಯೆಜ್ ಅವರು ಆರು ಗಂಟೆಗಳ ಸಮಯದಲ್ಲಿ ಕಸಿ ಮಾಡಿದ್ದಾರೆ. ಇದಕ್ಕೆ ಕಸಿ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಆಂಡ್ರೆ ಸೈಮನ್ ಸಹಾಯ ಮಾಡಿದರು. ಯುಕೆಯಲ್ಲಿ ಈ ಉಪಕರಣವನ್ನು ಬಳಸುವ ಏಕೈಕ ಕೇಂದ್ರವೆಂದರೆ ಹರೇಫೀಲ್ಡ್ (Harefield). ಸೆಲ್ವಾ ಬಿಟ್ಟು ಯಕೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಕೃತಕ ಹೃದಯದೊಂದಿಗೆ ಮನೆಗೆ ಹಿಂತಿರುಗಿದ್ದಾರಂತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.