ಎಲ್ಲರ ಮನಸ್ಸು ಗೆದ್ದ 99ರ ಅಜ್ಜಿ; ಸೌಂದರ್ಯ ವರ್ಧಕ ವಸ್ತುವಿಗೆ ಇವರೇ ಬ್ರ್ಯಾಂಡ್ ಮಾಡೆಲ್!

By Suvarna News  |  First Published Aug 5, 2021, 7:28 PM IST
  • ವಯಸ್ಸು ಕೇವಲ ನಂಬರ್ ಎಂಬುದು ಮತ್ತೊಮ್ಮೆ ಸಾಬೀತು
  • ಸೌಂದರ್ಯ ವರ್ಧಕ ವಸ್ತುವಿಗೆ 99ರ ಹರೆಯದ ಅಜ್ಜಿ ಮಾಡೆಲ್
  • ಎಲ್ಲರ ಮನಸ್ಸು ಗೆದ್ದ ಬ್ರ್ಯಾಂಡ್ ಮಾಡೆಲ್ ಅಜ್ಜಿ

ಕ್ಯಾಲಿಫೋರ್ನಿಯಾ(ಆ.05): ವಯಸ್ಸು ಕೇವಲ ನಂಬರ್. ಸಾಧಿಸುವ ಛಲ, ಮನಸ್ಸು ಇದ್ದರೆ ವಯಸ್ಸು ಅಡ್ಡಿಯಾಗಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ 99ರ ಅಜ್ಜಿ ಈ ಮಾತನ್ನು ಮತ್ತೊಮ್ಮೆ ನಿಜವಾಗಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಯುವತಿಯರಿಗೆ ಹೆಚ್ಚಿನ ಪ್ರಾಶಸ್ತ್ಯ. ಅದರಲ್ಲೂ ಹದಿ ಹರಿಯದ ಸುಂದರ ಯುವತರಿಗೆ ಹೆಚ್ಚಿನ ಬೇಡಿಕೆ. ಆದರೆ ಈ ಎಲ್ಲಾ ಸಂಪ್ರದಾಯ ಮುರಿದ ಕ್ಯಾಲಿಫೋರ್ನಿಯಾದ ಹಿಲೆನೆ ಸಿಮೋನಾ ಅಜ್ಜಿ, ಸೌಂದರ್ಯ ವರ್ಧಕದ ಬ್ರ್ಯಾಂಡ್ ಮಾಡೆಲ್ ಆಗಿ ಮಿಂಚಿದ್ದಾರೆ.

ಕೊರೋನಾ ಸೋಂಕಿತ 95 ವರ್ಷದ ಅಜ್ಜಿಯ ಗರ್ಭಾ ಡ್ಯಾನ್ಸ್ ನೋಡಿ, ವಿಡಿಯೋ ವೈರಲ್

Tap to resize

Latest Videos

ಬಳುಕವ ಬಳ್ಳಿಯಾಗಬೇಕು, ಎತ್ತರ ಇಷ್ಟಿರಬೇಕು, ತೂಕ ಹೆಚ್ಚಾಗಬಾರದು, ನೋಟದಲ್ಲಿ ಮೋಡಿ ಮಾಡುವಂತಿರಬೇಕು, ಮಾತು, ನಡಿಗೆ ಎಲ್ಲವೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಷ್ಟ ಮುಖ್ಯ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವತಿಯರು ಜಾಹೀರಾತು, ಬ್ರ್ಯಾಂಡ್ ಬಿಲ್ಡಿಂಗ್ ಸೇರಿದಂತೆ ಹಲವು ಪ್ರಾಯೋಜಕತ್ವ, ರಾಯಭಾರಿಯಾಗಿ ಆಯ್ಕೆಯಾಗುತ್ತಾರೆ. ಆದರೆ ಇದೆಲ್ಲವನ್ನು ಮೀರಿ 99ರ ಹಿಲೆನೆ ಸಿಮೋನ್ ಅಜ್ಜಿ ಬ್ರ್ಯಾಂಡ್ ಮಾಡೆಲ್ ಕತೆ ಮತ್ತು ರೋಚಕ.

ಕ್ರೀಮ್ ಸೇರಿದಂತೆ ಹಲವು ಸೌಂದರ್ಯ ವರ್ಧಕ ಕಂಪನಿ ಸಯೆ ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದಲ್ಲಿ ಜನಪ್ರಿಯ. ಈ ಕಂಪನಿಯ ಸಿಇಓ ಲ್ಯಾನಿ ಕ್ರೋವೆಲ್. ಕಂಪನಿಯ ಸೌಂದರ್ಯ ವರ್ಧಕ ಜಾಹೀರಾತು, ಪ್ರಚಾರಕ್ಕೆ ಬ್ರ್ಯಾಂಡ್ ಮಾಡೆಲ್ ಅವಶ್ಯಕತೆ ಇತ್ತು. ಇದಕ್ಕಾಗಿ ಲ್ಯಾನಿ ಕ್ರೋವೆಲ್ ಹಲವು ಮಾಡೆಲ್ ಸಂದರ್ಶನ ನಡೆಸಿದ್ದಾರೆ.

BP, ಶುಗರ್ ಇದ್ರೂ ಮನೆಯಲ್ಲೇ ಕೊರೋನಾ ಸೋಲಿಸಿದ 100ರ ವೃದ್ಧೆ

ತಾವು ಸಿದ್ಧಪಡಿಸಿದ ಪರಿಕಲ್ಪನೆಗೆ ಹೊಸ ಮುಖದ ಅವಶ್ಯಕತೆ ಇತ್ತು. ಆದರೆ ಯಾವ ಮಾಡೆಲ್ ಕೂಡ ಸೂಕ್ತವಾಗಿ ಹೊಂದಿಕೆಯಾಗುತ್ತಿರಲಿಲ್ಲ. ಸುಮಾರು 2 ತಿಂಗಳು ಮಾಡೆಲ್ ಸಂದರ್ಶನ ನಡೆದಿದೆ. ಯಾರೂ ಕೂಡ ಆಯ್ಕೆಯಾಗಲಿಲ್ಲ. ಅಂತಿಮವಾಗಿ ಲ್ಯಾನಿ ಕ್ರೋವೆಲ್ ತನ್ನ ಅಜ್ಜಿಯನ್ನೇ ಬ್ರ್ಯಾಂಡ್ ಮಾಡೆಲ್ ಮಾಡಿದರೆ ಹೇಗೆ ಎಂದು ಕುಟುಂಬಸ್ಥರ ಮಂದಿಟ್ಟಿದ್ದಾಳೆ.

 

 
 
 
 
 
 
 
 
 
 
 
 
 
 
 

A post shared by Saie (@saiebeauty)

ಆರಂಭದಲ್ಲಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಅಜ್ಜಿ ಸೇರಿದಂತೆ ಕುಟುಂಬಸ್ಥರನ್ನು ಒಪ್ಪಿಸಿದ ಲ್ಯಾನಿ ಅಜ್ಜಿ ಲಾವೆನಾ ಸಿಮೋನ್ ಮೂಲಕ ಜಾಹೀರಾತು ಸೇರಿದಂತೆ ಹಲವು ಪ್ರಾಯೋಜಕತ್ವ ಶೂಟ್ ಮಾಡಿದ್ದಾರೆ. ಈ ಜಾಹೀರಾತುಗಳು ಹೊರಬಂದಾಗ ಎಲ್ಲರ ಮನಸ್ಸು ಗೆದ್ದಿದೆ. ಕ್ಯಾಲಿಫೋರ್ನಿಯಾದಲ್ಲಿ ಇದೀಗ ಅಜ್ಜಿ ಎಲ್ಲರ ಮನೆಮಾತಾಗಿದ್ದಾರೆ.

99ರ ಅಜ್ಜಿ ಸೌಂದರ್ಯ ವರ್ಧಕ ಕಂಪನಿಯ ಬ್ರ್ಯಾಂಡ್ ಮಾಡೆಲ್ ಆಗಿರುವುದು ಇದೇ ಮೊದಲು. ಸಾಮಾಜಿಕ ಜಾಲತಾಣದಲ್ಲಿ ಇದೀಗ ಅಜ್ಜಿ ಜೊತೆ ಬ್ಯೂಟಿ ಬ್ರ್ಯಾಂಡ್ ಭಾರಿ ವೈರಲ್ ಆಗಿದೆ. 
 

click me!