ಶಿಕ್ಷಣದ ಕನಸಿನಿಂದ ಮದುವೆಯಾಗಿ 1 ತಿಂಗಳಿಗೆ ಗಂಡನ ಬಿಟ್ಟಳು

By Suvarna News  |  First Published Aug 1, 2021, 2:03 PM IST

ಜೀವನದಲ್ಲಿ ಒಬ್ಬ ವ್ಯಕ್ತಿಯ ಕನಸು ಆತನನ್ನು ನಿದ್ರಿಸಲು ಬಿಡುವುದಿಲ್ಲ. ಆ ಕನಸು ನನಸಾಗುವುದೇ ದೊಡ್ಡ ಗುರಿಯಾಗಿರುತ್ತದೆ. ಅದಕ್ಕಾಗಿ ಏನನ್ನು ತ್ಯಜಿಸುವುದಕ್ಕೂ ಸಿದ್ಧರಾಗುತ್ತಾರೆ. ಪುಟ್ಟ ಹಳ್ಳಿಯೊಂದರ ಸಂಪ್ರದಾಯಸ್ಥ ಮನೆಯ 19ರ ಯುವತಿ ದಿಟ್ಟ ನಿರ್ಧಾರ ತೆಗೆದುಕೊಂಡು ಅಂತೂ ಕನಸನ್ನು ನನಸು ಮಾಡುವ ಹಾದಿ ಹಿಡಿದಿದ್ದಾಳೆ.


ಪಾಟ್ನಾ.01): ಸಂಭ್ರಮದಿಂದ ಮಗಳನ್ನು ಮದುವೆ ಮಾಡಿ ಕಳಿಸಲಾಗಿತ್ತು. ಪದವಿ ಓದಬೇಕಾಗಿದ್ದ 19ರ ಪುಟ್ಟ ಹುಡಗಿ ಗೃಹಿಣಿಯಾಗಿ ಗಂಡನ ಮನೆ ಸೇರಿದ್ದಳು. ಓದುವುದಿರಲಿ ಮನೆಯ ಕೆಲಸ ಮಾಡುವುದು ಬಿಟ್ಟು ಬೇರೇನೂ ಯೋಚಿಸುವುದು ಆಕೆಗೆ ಸಾಧ್ಯವಿರಲಿಲ್ಲ. ಆದರೆ ಕನಸುಗಳು ಕಾಡುತ್ತಿತ್ತು.. ಕಾಡುತ್ತಿದ್ದ ಕನಸುಗಳು ಆಕೆಯನ್ನು ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು.

ಜೀವನದಲ್ಲಿ ಒಬ್ಬ ವ್ಯಕ್ತಿಯ ಕನಸು ಆತನನ್ನು ನಿದ್ರಿಸಲು ಬಿಡುವುದಿಲ್ಲ. ಆ ಕನಸು ನನಸಾಗುವುದೇ ದೊಡ್ಡ ಗುರಿಯಾಗಿರುತ್ತದೆ. ಅದಕ್ಕಾಗಿ ಏನನ್ನು ತ್ಯಜಿಸುವುದಕ್ಕೂ ಸಿದ್ಧರಾಗುತ್ತಾರೆ. ಪುಟ್ಟ ಹಳ್ಳಿಯೊಂದರ ಸಂಪ್ರದಾಯಸ್ಥ ಮನೆಯ 19ರ ಯುವತಿ ದಿಟ್ಟ ನಿರ್ಧಾರ ತೆಗೆದುಕೊಂಡು ಅಂತೂ ಕನಸನ್ನು ನನಸು ಮಾಡುವ ಹಾದಿ ಹಿಡಿದಿದ್ದಾಳೆ.

Tap to resize

Latest Videos

undefined

ಬಿಹಾರದ ಬಗಲ್‌ಪುರ ಜಿಲ್ಲೆಯಲ್ಲಿ ಒಂದು ಗ್ರಾಮ ಕಚೇರಿ ಹೆಣ್ಣು ಮಗಳ ದಿಟ್ಟ ನಿರ್ಧಾರದ ಬೆಂಬಲಕ್ಕೆ ನಿಂತು ಒಂದೂವರೆ ತಿಂಗಳ ಹಿಂದೆ ನಡೆದ ಆಕೆಯ ವಿವಾಹವನ್ನೇ ಅಸಿಂಧುಗೊಳಿಸಿದೆ. ಸಂಪ್ರದಾಯಸ್ಥ ಹಳ್ಳಿಯಲ್ಲಿ ಮದುವೆಯಾಗಿ ಒಂದೇ ತಿಂಗಳಿಗೆ ಮನೆ ಬಿಟ್ಟ 19ರ ಬಾಲೆಗೆ ಬೆಂಬಲ ಕೊಟ್ಟಿದೆ ಊರಿನ ಪಂಚಾಯಿತಿ. ಗಂಡನಿಂದ ಬೇರ್ಪಟ್ಟು ಶಿಕ್ಷಣ ಪಡೆಯಬೇಕೆಂಬ ಆಕೆಯ ಕನಸಿಗೆ ಗ್ರಾಮ ಕಚೇರಿ ಬೆಂಬಲ ನೀಡಿದೆ. 19 ವರ್ಷದ ನೇಹಾ ಕುಮಾರಿ ಗ್ರಾಮದ ನ್ಯಾಯ ಪಂಚಾಯಿತಿಯಲ್ಲಿ ಒಂದು ಅರ್ಜಿ ಸಲ್ಲಿಸಿದ್ದಳು. ಗಂಗಾನಿಯ ಪಂಚಾಯತ್‌ನಲ್ಲಿ ನೇಹಾಳ ಅರ್ಜಿ ಸಲ್ಲಿಕೆಯಾಗಿತ್ತು.  ಜು.26ರಂದು ಆಕೆಯ ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ತನ್ನ ಗಂಡನಿಂದ ದೂರಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು ಆಕೆ.

ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!

ನನಗೆ ಮದುವೆಯ ನಂತರ ಶಿಕ್ಷಣ ಮುಂದುವರಿಸಬೇಕಿತ್ತು. ಆದರೆ ಗಂಡ ಹಾಗೂ ಮನೆಯವರು ಇದನ್ನು ವಿರೋಧಿಸಿದ್ದಾರೆ. ಆಕೆಯ ಬೇಡಿಕೆ ತಿರಸ್ಕರಿಸಲ್ಪಟ್ಟಾಗ ಆಕೆ ಗಂಡನ ಮನೆಯಿಂದ ಓಡಿ ಹೋಗಿ ಪಾಟ್ನಾ ಸೇರಿದಳು. ಈ ಸಂದರ್ಭ ಮಗಳು ಕಾಣೆಯಾಗಿದ್ದಾಳೆಂದು ನೇಹಾಳ ತಂದೆ ಗುರುದೇವ್ ಪಂಡಿತ್ ಜೆಹಂಗೀರ್ ಗ್ರಾಮದಲ್ಲಿ ದೂರು ದಾಖಲಿಸಿದ್ದರು. ಪಿಯುಸಿ ಮುಗಿಸಿದ್ದ ನೇಹಾ ಪೊಲೀಸ್ ದೂರಿನ ಬಗ್ಗೆ ತಿಳಿದು ಇದರಲ್ಲಿ ಸರ್ಪಂಚ್ ದಾಮೋಧರ್ ಚೌಧರಿ ಅವರ ಮಧ್ಯಸ್ಥಿಕೆ ಕೇಳಿದ್ದರು. ಜು.28ರಂದು ಎರಡು ಕುಟುಂಬದ ಮಧ್ಯೆ ಸಭೆ ನಡೆದಿತ್ತು. ನೇಹಾ ಹಾಗೂ ಆಕೆಯ ಪತಿಯೂ ಇದ್ದರು. ತನ್ನ ಐಟಿಐ ಶಿಕ್ಷಣ ಮುಗಿಸಿ ತಾನು ಕೆಲಸಕ್ಕೆ ಸೇರಬೇಕು ನಂತರ ಉನ್ನತ ಶಿಕ್ಷಣ ಪಡೆಯಬೇಕೆಂಬ ಇಚ್ಛೆಯನ್ನು ನೇಹಾ ಮುಂದಿಟ್ಟಿದ್ದಾಳೆ. ಬಲವಂತವಾಗಿ ನನ್ನ ಮದುವೆ ಮಾಡಲಾಯಿತು. ಈಗ ನನ್ನ ಶಿಕ್ಷಣಕ್ಕಾಗಿ ನಾನು ಈ ವಿವಾಹದಿಂದ ದೂರ ಹೋಗಬೇಕಿದೆ ಎಂದಿದ್ದಾಳೆ.

ಆರಂಭದಲ್ಲಿ ಎರಡು ಕುಟುಂಬಗಳ ನಡುವೆ ಮಾತುಕತೆಯಲ್ಲಿ ಈ ಘಟನೆ ಪರಿಹರಿಸಲು ಪ್ರಯತ್ನಿಸಿದರೂ ಈ ಪ್ರಯತ್ನ ಫಲಿಸಲಿಲ್ಲ. ನಂತರ ಅವರಿಬ್ಬರನ್ನು ಬೇರ್ಪಡಿಸದೆ ದಾರಿ ಇರಲಿಲ್ಲ. ಇದಕ್ಕೂ ಮುಖ್ಯವಾಗಿ ಯುವತಿ ಪ್ರಾಯಪೂರ್ತಿಯಾಗಿದ್ದು ಆಕೆಯ ಜೀವನದ ನಿರ್ಧಾರ ತೆಗೆದುಕೊಳ್ಳಲು ಅರ್ಹಳಾಗಿದ್ದಾಳೆ ಎಂದಿದ್ದಾರೆ ಪಂಚಾಯಿತಿ ಮುಖ್ಯಸ್ಥರು. ವಿವಾಹ ಅಸಿಂಧುಗೊಳಿಸಿದ್ದಕ್ಕಾಗಿ ನೇಹಾಳನ್ನು ದೋಷಿಸಬಾರದು, ಆಕೆಯ ಮೇಲೆ ಒತ್ತಡ ಹೇರಬಾರದು ಎಂದೂ ಒಪ್ಪಂದ ಮಾಡಲಾಗಿದೆ. ನೇಹಾ ತನ್ನ ಬದುಕನ್ನು ಕಾಪಾಡಿದ್ದಕ್ಕಾಗಿ ಗ್ರಾಮ ಕಚೇರಿಗೆ ಧನ್ಯವಾದ ಹೇಳಿದ್ದಾಳೆ. 

click me!