ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!

By Suvarna News  |  First Published Feb 7, 2020, 12:22 PM IST

೮೫ ವರ್ಷದ ಅಜ್ಜಿ ವೀಕೆಂಡ್ನಲ್ಲಿ ಒಂಟಿಯಾಗಿ ಸಿನಿಮಾ ನೋಡ್ತಾರೆ, ಇಷ್ಟವಾದ ಅಡುಗೆ ಮಾಡ್ಕೊಂಡು ತಿನ್ತಾರೆ, ಲೈಫ್ ಅನ್ನು ಸಖತ್ತಾಗಿ ಎನ್ಜಾಯ್ ಮಾಡ್ತಾರೆ..


ಈ ಅಜ್ಜಿ ಅವರೆಲ್ಲರಿಗಿಂತ ಡಿಫರೆಂಟ್. ಯಾರ ಮೇಲೂ ಡಿಪೆಂಡ್‌ ಆಗದೇ ತನ್ನ ಪಾಡಿಗೆ ತಾನು ಲೈಫ್ ಅನ್ನು ಎನ್‌ಜಾಯ್ ಮಾಡೋ ಅಜ್ಜಿ ತನ್ನ ಈ ಇಳಿ ವಯಸ್ಸಲ್ಲೂ ಒಬ್ಬರೇ ಹೋಗಿ ಸಿನಿಮಾ ನೋಡ್ತಾರೆ. ಬೇಕಾದ ಅಡುಗೆ ಮಾಡ್ಕೊಂಡು ತಿನ್ನುತ್ತಿರುತ್ತಾರೆ. ಚಿಕ್ಕ ಮಗುವಿನ ಹಾಗೆ ನಗುತ್ತಾ ಸದಾ ಲವಲವಿಕೆಯಿಂದ ಇರುವ ಈಕೆಯನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ. ತನ್ನ ಲೈಫ್ ಬಗ್ಗೆ ಈಕೆ ಬರೆದ ನೋಟ್ ಸಖತ್ ಇಂಟೆರೆಸ್ಟಿಂಗ್ ಆಗಿದೆ.

ನನ್ನ ಗಂಡ ತೀರಿ ಹೋಗಿ 35 ವರ್ಷಗಳಾದವು. ಆವಾಗಿಂದ ನಾನು ಒಬ್ಬಳೇ ಇದ್ದೇನೆ. ಈ 35 ವರ್ಷಗಳಲ್ಲಿ ನಾನು ನನ್ನ ಬಗ್ಗೆ ಬಹಳ ತಿಳಿದುಕೊಂಡೆ. ನನಗೆ ಅಡುಗೆ ಮಾಡೋದು ಅಷ್ಟು ಖುಷಿ ಕೊಡುತ್ತೆ ಅಂತ ಗೊತ್ತಾಗಿದ್ದೇ ಈ ಟೈಮ್ ನಲ್ಲಿ. ನಾನು ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುತ್ತಾ ಇರುತ್ತೀನಿ. ಇತ್ತೀಚೆಗೆ ಪುಡ್ಡಿಂಗ್, ಕಸ್ಟರ್ಡ್, ಜೆಲ್ಲಿ ಇತ್ಯಾದಿ ಹೊಸ ಬಗೆಯ ಡೆಸರ್ಟ್ (ಊಟದ ಕೊನೆಯ ಸಿಹಿ ತಿನಿಸು) ಕಲೀತಾ ಇದ್ದೀನಿ. ಆಮೇಲೆ ಒಬ್ಬಳೇ ಕೂತು ಸಿನಿಮಾ ನೋಡೋ ಮಜಾನೇ ಬೇರೆ. ನಾನು ಈ ವೀಕೆಂಡ್ ನಲ್ಲಿ 'ಜವಾನಿ ಜಾನೇಮನ್ ' ಸಿನಿಮಾಕ್ಕೆ ಹೋಗೋದಕ್ಕೆ ಪ್ಲಾನ್ ಮಾಡ್ತಾ ಇದ್ದೀನಿ. ಇದು ಕಾಮಿಡಿ ಮತ್ತು ನನ್ನ ಫೇವರೆಟ್ ಜಾನರ್ ಸಿನಿಮಾ.

Latest Videos

undefined

 

ಈ 35 ವರ್ಷಗಳಲ್ಲಿ ನಾನು ಬಹಳಷ್ಟು ಓದುತ್ತಿದ್ದೀನಿ. ಬಹಳ ಗಾಢ ಓದು. ಹಿಂದೆಂದೂ ಈ ಥರ ಓದಿರಲಿಲ್ಲ. ಹಿಂದಿ ಗುಜರಾತಿ ಪುಸ್ತಕಗಳು ನನಗಿಷ್ಟ, ಅದೇ ರೀತಿ ಬೆಳ್ಳಂಬೆಳಗ್ಗೆ ನಾನು ಏಳುವಾಗ ಮೆಟ್ಟಿಲ ಮೇಲೆ ಪೇಪರ್ ಬಿದ್ದಿರುತ್ತೆ. ಅದನ್ನು ಎತ್ತಿಕೊಂಡು ಒಂದು ಕಪ್ ಚಾಯ್ ಜೊತೆಗೆ ಸುದ್ದಿ ಓದೋದು ಎಕ್ಸಾಯಿಂಟ್.

 

4ನೇ ತರಗತಿ ಪರೀಕ್ಷೆ ಪಾಸಾದ 105 ವರ್ಷದ ವೃದ್ಧೆ! 

 

ಹಾಗಂತ ನನಗೆ ಒಂಟಿತನದ ಫೀಲ್ ಆಗೋದೇ ಇಲ್ಲ ಅಂತಲ್ಲ. ಒಬ್ಬಳೇ ಬಾಲ್ಕನಿಯಲ್ಲಿ ಕೂತಿದ್ದಾಗ ಒಳಗೆ ಸಣ್ಣ ತಳಮಳ ಶುರುವಾಗುತ್ತೆ. ಕೂಡಲೇ ಎದ್ದು ಬಿಡ್ತೀನಿ. ಏನಾದ್ರೂ ಕೆಲಸದಲ್ಲಿ ತೊಡಗಿಸಿಕೊಳ್ತೀನಿ. ಟಿವಿ ನೋಡೋದು, ಓದೋದು, ಮನೆ ಕ್ಲೀನಿಂಗ್ ಮಾಡೋದು ಇತ್ಯಾದಿ. ಕೆಲಸದಲ್ಲಿ ಮುಳುಗಿರುವಾಗ ಮನಸ್ಸು ಅಳೋದಿಲ್ಲ. ಕೆಲಸಗಳೇ ನನಗೆ ಯಾವತ್ತೂ ಒಂಟಿತನದ ಫೀಲಿಂಗ್ ಬರದ ಹಾಗೆ ನೋಡಿಕೊಂಡಿವೆ, ನನಗೆ ಗೊತ್ತು ನಾನು ಒಂಟಿ ಅಲ್ಲ ಅಂತ. ನನಗೆ ನಾನೇ ಜೊತೆಗಾರ್ತಿ, ನನಗೆ ಇಷ್ಟ ಬಂದದ್ದನ್ನು ಮಾಡಲು ತುಂಬ ಸಮಯ ಇರುತ್ತದೆ. ಅದಕ್ಕಿಂತ ಖುಷಿ ಬೇಕಾ, ನಮಗೆ ನಾವಿಷ್ಟಪಟ್ಟ ರೀತಿಯಲ್ಲಿ ಬದುಕಲು ಅವಕಾಶ ಸಿಗೋದೂ ಖುಷಿನೇ ಅಲ್ವಾ? ಅಮೇಲೆ ನಮಗಿಷ್ಟ ಆಗೋ ಕೆಲಸ ಮಾಡ್ತಿದ್ರೆ ನಾವೂ ಸಂತೋಷವಾಗಿರ್ತೀವಿ.
 

ಈ 85ನೇ ವಯಸ್ಸು ನನಗೊಂಥರ ಲೆಮೆನೇಡ್ ಥರ ಅನಿಸುತ್ತೆ. ಅಫ್ ಕೋರ್ಸ್ ನಾನು ಅದ್ಭುತವಾಗಿ ಲೆಮನೈಡ್ ಮಾಡ್ತೀನಿ. ಬದುಕೇ ಒಂಥರ ಲೆಮನೈಡ್ ಥರ ಇದೆ, ಸಿಹಿ ಮತ್ತು ಹುಳಿಗಳ ಹದವಾದ ಮಿಶ್ರಣ!

*

ಕೋಚಿಂಗ್‌ ಇಲ್ಲದೆ ಕೆಎಎಸ್‌ ಪಾಸಾಗಿ ಡಿವೈಎಸ್‌ಪಿ ಆದ ನಿಖಿತಾ!

 

ನೇರಳೆ ಬಣ್ಣದ ಚೂಡಿದಾರ್‌ನಲ್ಲಿ ಶಾಪಿಂಗ್ ಹೊರಟ ಈ ಅಜ್ಜಿಯ ಮುಖದಲ್ಲಿ ಮಗುವಿನಂಥಾ ಚೆಂದದ ನಗುವಿದೆ. ಫೋಟೋದಲ್ಲಿ ಅವರ ಮುಖ ನೋಡೋದೇ ಖುಷಿ. ಅಂದ ಹಾಗೆ ಅವರ ಈ ಸ್ಟೋರಿ ಸಾವಿರಾರು ಮಂದಿಗೆ ಇನ್ ಸ್ಪಿರೇಶನ್ ಆಗಿದೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಬದುಕುವ ಹೆಣ್ಮಕ್ಕಳೂ ಇವರ ಲೈಫ್ ಸ್ಟೋರಿಯಿಂದ ಸ್ಪೂರ್ತಿ ಪಡೆದಿದ್ದಾರೆ. ಕೆಲವೊಬ್ರು, ' ಅಜ್ಜೀ, ನೀನಿಲ್ಲಿ ಲೈಫ್ ಅನ್ನು ಎನ್ ಜಾಯ್ ಮಾಡೋದನ್ನು ತಾತ ಮೇಲಿಂದ ನೋಡ್ತಾ ಮುಗುಳ್ನಗುತ್ತಿರುತ್ತಾರೆ. ಗೋ ಅಹೆಡ್ ' ಅಂತಿದ್ದಾರೆ. ಅಜ್ಜಿ ತಲೆ ಕೊಡವಿ ನಗುತ್ತಾ , ' ಆಲ್ ರೈಟ್ ಮುಂದಕ್ಕೋಗೋಣ' ಅಂತಾರೆ.

click me!