
ಬ್ರಿಟಿಷ್ ಹೈ ಕಮಿಷನರ್ ಅಂದರೆ ಸುಮ್ನೇನಾ..? ಒಮದು ದಿನದ ಮಟ್ಟಿಗೆ ಈ ಪಟ್ಟವನ್ನು ಅಲಂಕರಿಸಿದ್ದಾಳೆ ದೆಹಲಿಯ ಬಾಲೆ. ರಾಷ್ಟ್ರರಾಜಧಾನಿಯ ಹುಡುಗಿ ಚೈತನ್ಯ ವೆಂಕಟೇಶ್ವರನ್ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗಿದ್ದಾರೆ.
ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಿದ ನಿಟ್ಟಿನಲ್ಲಿ ಹೈ ಕಮಿಷನರ್ ಫಾರ್ ದ ಡೇ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ದೆಹಲಿಯ ಚೈತನ್ಯ ಗೆಲುವು ಸಾಧಿಸಿದ್ದಾಳೆ.
ಫಿನ್‌ಲೆಂಡ್ ಪ್ರಧಾನಿಯಾದ 16 ವರ್ಷದ ಬಾಲಕಿ..!
ಚೈತನ್ಯ ಯುಕೆಯ ಹಿರಿಯ ರಾಜತಾಂತ್ರಿಕಳಾಗಿ ಒಂದು ದಿನ ಕಳೆದಿದ್ದಾಳೆ. ಕಮಿಷನರ್ ಡಿಪಾರ್ಟ್‌ಮೆಂಟ್ ಹೆಡ್‌ಗಳ ಜೊತೆ ಕಮಿಷನರ್ ಕಾರ್ಯಗಳನ್ನು ನಿರ್ವಹಿಸಿದ್ದಾಳೆ. ಹಿರಿಯ ಮಹಿಳಾ ಪೊಲೀಸರ ಜೊತೆ ಮಾತನಾಡಿ, ಪ್ರೆಸ್ ಮೀಟಿಂಗ್ ಮಾಡಿ, ಬ್ರಿಟಿಷ್ ಕೌನ್ಸಿಲ್ ಸ್ಟೆಮ್ ಸ್ಕಾಲರ್‌ಶಿಪ್ ನಲ್ಲಿ ಭಾರತದ ಮಹಿಳೆಯರ ಭಾಗವಹಿಸುವಿಕೆ ಸಮೀಕ್ಷೆಯನ್ನು ಲಾಂಚ್ ಮಾಡಿದ್ದಾಳೆ. ಕೊರೋನಾ ಪ್ರೊಟೋಕಾಲ್ ಪ್ರಕಾರ ಇವೆಲ್ಲವೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದೆ.
ವಾಷಿಂಗ್ಟನ್‌ನಲ್ಲಿ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ಇಂಟರ್‌ನ್ಯಾಷನಲ್ ಸ್ಟಡೀಸ್, ಹಾಗೂ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿರುವ ಈಕೆ ಅಂಧ ವಿದ್ಯಾರ್ಥಿಗಳ, ಆಸಿಡ್ ಸಂತ್ರಸ್ತೆಯರ ಪರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಶಿಕ್ಷಣ ವಿದ್ಯಾರ್ಥಿಯಾಗಿ ರಾಜತಾಂತ್ರಿಕ ಕೆಲಸ ಕುರಿತು ತಿಳಿದುಕೊಂಡೆ. ಈ ದಿನ ಪೂರ್ತಿ ವಿವಿಧ ಅನುಭವವಾಯಿತು ಎಂದಿದ್ದಾರೆ ಚೈತನ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.