ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟ ಹುಡುಗಿ..ಮುಂದೆ ಆಗಿದ್ದೇನು?

By Suvarna News  |  First Published Apr 5, 2022, 9:00 PM IST

ಎಂಥೆಂಥವರು ಇರ್ತಾರೆ ನೋಡಿ..ಯೂಟ್ಯೂಬ್‌ (Youtube) ನೊಡ್ಕೊಂಡು ಅಡುಗೆ ಮಾಡೋದು, ನೈಲ್ ಆರ್ಟ್ ಮಾಡೋದು, ಎಂಬ್ರಾಯಿಡರಿ ಮಾಡೋದೆಲ್ಲಾ ನೋಡಿದ್ದೀವಿ. ಆದ್ರೆ ಇಲ್ಲೊಬ್ಬಾಕೆ ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ (Abortion) ಮಾಡ್ಕೊಳ್ಲೋಕೆ ಹೊರಟಿದ್ಲು. ಆಮೇಲೇನಾಯ್ತು ?


ಮೊಬೈಲ್‌ (Mobile) ತಂತ್ರಜ್ಞಾನದ ಬಳಕೆ ಮನುಷ್ಯನ ಜೀವನದಲ್ಲಿ ಅನಿವಾರ್ಯವಾಗಿರುವುದರ ಜೊತೆಗೆ ಸಾಮಾಜಿಕ ಜಾಲತಾಣಗಳ (Social Media) ಬಳಕೆಯೂ ಹೆಚ್ಚಾಗಿದೆ. ಅಗತ್ಯವಿದೆಯೋ ಇಲ್ಲವೋ ಎಂಬುದರ ಪರಿವಿಯಿಲ್ಲದೆ ಆನ್‌ಲೈನ್‌ನಲ್ಲಿ ಎಲ್ಲವೂ ಲಭ್ಯವಿದೆ. ಹೀಗಾಗಿಯೇ ಅದೆಷ್ಟು ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಲಭಿಸುವ ಮಾಹಿತಿಗಳು ಎಡವಟ್ಟಿಗೆ ಕಾರಣವಾಗುತ್ತವೆ. ಇಲ್ಲಾಗಿದ್ದು ಅದೇ, ಎಲ್ಲಾ ಬಿಟ್ಟು ಬಾಲಕಿ ಯೂಟ್ಯೂಬ್ (Youtube) ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟಿದ್ಲು. ಈ ಘಟನೆ ಇತ್ತೀಚೆಗೆ ನಾಗ್ಪುರ ಜಿಲ್ಲೆಯ ನಾರ್ಖೇಡ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಗರ್ಭಪಾತ (Abortion) ಮಾಡುವುದು ಕಾನೂನು ದೃಷ್ಟಿಯಲ್ಲಿ ಅಪರಾಧ. ಇದು ಗೊತ್ತಿದ್ದೂ ಈ ಬಾಲಕಿ ಸ್ವತಃ ತಾನೇ ಅಬಾರ್ಷನ್ ಮಾಡ್ಕೊಳ್ಳೋಕೆ ಮುಂದಾಗಿದ್ಲು. ಪ್ರಿಯಕರನಿಂದ ಗರ್ಭ ಧರಿಸಿದ ಬಾಲಕಿ (Girl) ತಾನೇ ಗರ್ಭಪಾತ ಮಾಡಲು ಮುಂದಾಗಿದ್ದಳು. ಯೂಟ್ಯೂಬ್ ಸಹಾಯ ಪಡೆದುಕೊಂಡು ಗರ್ಭಪಾತಕ್ಕೆ ಯತ್ನಿಸಿದ್ದಾಳೆ. ಸದ್ಯ ಬಾಲಕಿಗೆ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯ ಸುಧಾರಿಸಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು (Doctor) ತಿಳಿಸಿದ್ದಾರೆ.

Tap to resize

Latest Videos

ವಿಲಕ್ಷಣ ಘಟನೆಯೊಂದರಲ್ಲಿ, 17 ವರ್ಷದ ಹುಡುಗಿಯೊಬ್ಬಳು ಯೂಟ್ಯೂಬ್‌ನಲ್ಲಿನ ವೀಡಿಯೊ ಕ್ಲಿಪ್‌ಗಳಿಂದ ಸಲಹೆಗಳನ್ನು ತೆಗೆದುಕೊಳ್ಳುವ ಮೂಲಕ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಪ್ರಯತ್ನಿಸಿದಳು. ಸ್ವಯಂ-ಔಷಧಿ ಗರ್ಭಪಾತದ ಪ್ರಯತ್ನವು ಈ ಅಪ್ರಾಪ್ತ ಬಾಲಕಿಗೆ ಅಪಾಯಕಾರಿ ಎಂದು ಸಾಬೀತಾಯಿತು. ಬಾಲಕಿಯ ಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.

ಗರ್ಭಿಣಿಯರು ಈ ಮಲ್ಟಿ ಗ್ರೇನ್ ರೊಟ್ಟಿ ಸೇವಿಸಿದ್ರೆ, ಮಲಬದ್ಧತೆ ಸಮಸ್ಯೆ ಇರೋದಿಲ್ಲ

ವರದಿಗಳ ಪ್ರಕಾರ, ಆರು ತಿಂಗಳ ಹಿಂದೆ, ಅಪ್ರಾಪ್ತ ಸಂತ್ರಸ್ತೆ ತನ್ನ ಗೆಳೆಯನೊಂದಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಳು. ಹುಡುಗಿ ಮತ್ತು ಹುಡುಗ ಒಟ್ಟಿಗೆ ಇರುವಾಗ ಸಹಬಾಳ್ವೆ ನಡೆಸುತ್ತಿದ್ದರು. ಬಾಲಕಿ ಕಳೆದ ಕೆಲವು ದಿನಗಳಿಂದ ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದಳು. ಅದೇ ಸಮಯದಲ್ಲಿ ತಾನು ಗರ್ಭಿಣಿ ಎಂದು ತಿಳಿದು ಗಾಬರಿಯಾದಳು. ಇದನ್ನು ತನ್ನ ಗೆಳೆಯನಿಗೆ ತಿಳಿಸಿದಳು. ಮನೆಯವರಿಗೆ ಗೊತ್ತಾಗದಂತೆ ಎಚ್ಚರಿಕೆ ವಹಿಸಲು ಇಬ್ಬರೂ ಪ್ಲಾನ್ ಮಾಡಿದ್ದಾರೆ. ಔಷಧ ಸೇವಿಸಿದರೆ ಗರ್ಭಪಾತ ಆಗುವುದಾಗಿ ಯುವಕ ಹೇಳಿದ್ದಾನೆ. ಅವನು ಅವಳಿಗೆ ಗರ್ಭಪಾತಕ್ಕೆ ಕೆಲವು ಔಷಧಿಗಳನ್ನು ಕೊಟ್ಟನು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಆದ್ದರಿಂದ ಭಯಭೀತಳಾದ ಹುಡುಗಿ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸಿದಳು, ಗರ್ಭಧಾರಣೆಯನ್ನು ಕೊನೆಗೊಳಿಸುವ ಮಾರ್ಗಗಳನ್ನು ಹುಡುಕಿದಳು.

ನಿರ್ದಿಷ್ಟ ವೀಡಿಯೊ ಕ್ಲಿಪ್ ಅನ್ನು ವೀಕ್ಷಿಸಿದ ನಂತರ, ಗರ್ಭಪಾತ ಮಾಡಿಕೊಳ್ಳಲು ಮುಂದಾದಳು. ಆದರೆ ಸಂತ್ರಸ್ತೆಯ ತಾಯಿ ಹುಡುಗಿಯ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಇದೀಗ ಆಕೆ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಲಾಗಿದೆ. ನಗರದ ಎಂಐಡಿಸಿ ಪೊಲೀಸರ ಪ್ರಕಾರ, ಹುಡುಗಿಯ ವಯಸ್ಸು 17 ಮತ್ತು ಹುಡುಗನ ವಯಸ್ಸು 27 ವರ್ಷ. ಆರೋಪಿಗಳ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Migraine in Pregnancy: ಗರ್ಭಿಣಿಯರಿಗೆ ಮೈಗ್ರೇನ್ ಏಕೆ ಕಾಡುತ್ತೆ?

ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಆಕೆ ತಾನು ತೆಗೆದುಕೊಂಡ ಔಷಧದಿಂದ ನರಳಾಟವಾಡಿದ್ದಾಳೆ. ಆದರೆ ಆಕೆಯ ಪರಿಸ್ಥಿತಿಯನ್ನು ಕಂಡು ಅನುಮಾನ ಬಂದ ತಾಯಿ ವಿಚಾರಿಸುತ್ತಾರೆ. ಕೊನೆಗೆ ತನಗೂ ಹಾಗೂ ಆಕೆಯ ಪ್ರಿಯಕರ ನಡುವೆ ಸಂಬಂಧವಿದೆ ಎಂಬುದನ್ನು ತಾಯಿಯೊಂದಿಗೆ ಮನಬಿಚ್ಚಿ ಹೇಳುತ್ತಾಳೆ. ಅಷ್ಟು ಮಾತ್ರವಲ್ಲದೆ. ಆತನೊಂದಿಗೆ ದೈಹಿಕ ಸಂಪರ್ಕ ನಡೆದಿದೆ ಎಂಬ ವಿಚಾರವನ್ನು ತಾಯಿಗೆ ತಿಳಿಸುತ್ತಾಳೆ. ಇದರಿಂದಾಗಿ ನಿಮಗೆಲ್ಲ ಬೇಸರವಾಗುತ್ತದೆ ಎಂಬ ಕಾರಣಕ್ಕೆ ಗರ್ಭಪಾತ ಔಷಧ ತೆಗೆದುಕೊಂಡಿರುವ ವಿಚಾರವನ್ನು ತಾಯಿ ಬಳಿ ಹೇಳುತ್ತಾಳೆ.

ಆದರೆ ತಾಯಿ ಇದನ್ನು ತಿಳಿದು ಮಗಳ ಜೀವ ಉಳಿಸಲು ಯತ್ನಿಸುತ್ತಾರೆ. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿಯ ಕುಟುಂಬಸ್ಥರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯ ಪ್ರಿಯಕರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!