ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !

ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !

Published : Oct 17, 2023, 09:03 AM IST

ಯುದ್ಧ ಎಲ್ಲೇ ನಡೆಯಲಿ, ಅದರಿಂದ ಯಾರಿಗೂ ಲಾಭವಿಲ್ಲ
ಯುದ್ಧದಿಂದ ಸಾವು-ನೋವುಗಳೇ ಹೊರತು ಗೆಲುವು ಅಲ್ಲ 
ಯುದ್ಧ ಆರಂಭವಾದ ಮೇಲೆ ಸರಿ ತಪ್ಪುಗಳ ಲೆಕ್ಕ ಬರೋದಿಲ್ಲ 
ಯುದ್ಧದಿಂದ ಸಾವು ನೋವುಗಳ ಲೆಕ್ಕ ಏರುತ್ತಾ ಹೋಗುತ್ತೆ
ಯುದ್ಧಭೂಮಿ ಅಂದ್ರೆ ಆಕ್ರಂದನಗಳು, ಆರ್ತನಾದಗಳು

ಯುದ್ಧ ಯಾರಿಗೂ ಒಳ್ಳೇಯದಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೂ ಯುದ್ಧಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡ ನಡೆದುಕೊಂಡೇ ಬಂದಿವೆ. ಹೀಗೆ ಯುದ್ಧ ನಡೆದಾಗಲೆಲ್ಲ ಯುದ್ಧಭೂಮಿ ರಕ್ತಭೂಮಿಯಾಗುತ್ತಲೇ ಬಂದಿದೆ. ಯುದ್ಧಗಳು ಒಳ್ಳೆಯದಲ್ಲ ಅನ್ನೋದು ಅದೆಂತ ದಡ್ಡನಿಗೂ ಗೊತ್ತಿರುತ್ತೆ. ಆದ್ರೆ ಜಗತ್ತಿನ ಮಹಾನ್ ಬುದ್ದಿವಂತರಿಂದ ಈ ಭೂಮಿ ಮೇಲೆ ಯುದ್ಧಗಳು ನಡೆಯುತ್ತಲೇ ಬಂದಿವೆ. ಹೀಗೆ ಯುದ್ಧಗಳು ನಡೆದಾಗಲೆಲ್ಲ ಯುದ್ಧ ಭೂಮಿಗಳು ರಕ್ತಸಿಕ್ತ ಭೂಮಿಗಳಾಗುತ್ತವೆ. ಎಲ್ಲೆಂದರಲ್ಲಿ ಹೆಣಗಳು ಬಿದ್ದಿರುತ್ತವೆ. ಈಗ ಇಸ್ರೇಲ್(Isreal) ಹೊಡೆತಕ್ಕೆ ಗಾಜಾ(Gaza) ಸಹ ಅದೇ ಸ್ಥಿತಿಗೆ ಜಾರುತ್ತಿದೆ. ಯುದ್ಧಭೂಮಿಯೆಂದ್ರೆ ಅಲ್ಲಿ ಕರುಣೆ ಕಕ್ಕುಲತೆಗೆ ಜಾಗವಿಲ್ಲ. ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಅಲ್ಲಿ ಬೆಲೆನೇ ಇಲ್ಲ. ಅಲ್ಲೇನಿದ್ರು ವಿರೋಧಿಗಳ ಪ್ರಾಣ ತೆಗೆದರಷ್ಟೆ ಬೆಲೆ. ಆ ವಿರೋಧಿಗಳು ಯಾವ ವಯಸ್ಸಿನವರಾದ್ರೂ ಪರವಾಗಿಲ್ಲ. ಯುದ್ಧಕ್ಕೆ ನಿಂತ ದೇಶಗಳಲ್ಲಿನ ಪ್ರಜೆಗಳ ಸ್ಥಿತಿ ಹೇಗಿರುತ್ತೆ ಗೊತ್ತಾ? ಅವರ ಪ್ರಾಣ ಯಾವ ಕ್ಷಣದಲ್ಲಾದ್ರು ಹಾರಿ ಹೋಗಬಹುದು. ಯುದ್ಧ ಪೀಡಿತ ದೇಶಗಳ ಪ್ರಜೆಗಳು ಪ್ರತಿ ಕ್ಷಣ ಉಳಿವಿಗಾಗಿ ಓಡುತ್ತಲೇ ಇರಬೇಕು. ಸದ್ಯಕ್ಕೆ ಇಸ್ರೇಲ್ ಮತ್ತು ಗಾಜಾ ಪರಿಸ್ಥಿತಿ ಹೇಗಿದೆಯಂದ್ರೆ, ದೀಪಾವಳಿ ಸಮಯದಲ್ಲಿ ಭಾರತೀಯರ ಕಿವಿಗೆ ನಿರಂತರವಾಗಿ ಹೇಗೆ ಪಟಾಕಿ ಸದ್ದು ಕೇಳುತ್ತಿರುತ್ತೋ, ಅದೇ ರೀತಿ ಅಲ್ಲಿ ರಾಕೆಟ್‌ನ ಸದ್ದು ಕೇಳಿಸುತ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ನವರಾತ್ರಿಯ ಮೂರನೇ ದಿನವಾಗಿದ್ದು, ಇಂದು ಮಹಾಕಾಳಿಯ ಆರಾಧನೆ ಹೀಗೆ ಮಾಡಿ..

20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
Read more