Russia Ukraine War: ಉಕ್ರೇನ್‌ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು!

Mar 3, 2022, 11:54 AM IST

ಕೀವ್‌ (ಮಾ. 03:) ಯುದ್ಧ​ಪೀಡಿತ ಉಕ್ರೇ​ನ್‌​ನ ಖಾರ್ಕೀವ್‌​ನಲ್ಲಿ ಕಿರಿ​ದಾದ ಬಂಕ​ರ್‌ಗಳಲ್ಲಿ ಅನ್ನ, ಆಹಾರ ಇಲ್ಲದೆ ರಕ್ಷ​ಣೆ​ಗಾಗಿ ಎದು​ರು ನೋಡು​ತ್ತಿ​ದ್ದ ಕರ್ನಾ​ಟ​ಕದ ಅನೇಕ ವಿದ್ಯಾ​ರ್ಥಿ​ಗಳೀಗ ದಿಢೀರ್‌ ರೈಲು, ಬಸ್ಸು ಸೇರಿ ಕಂಡ ಕಂಡ ವಾಹ​ನ​ಗ​ಳ​ನ್ನೇರಿ ಗಡಿ​ಯತ್ತ ದೌಡಾ​ಯಿ​ಸು​ತ್ತಿ​ದ್ದಾ​ರೆ. ಹಾವೇರಿ ಮೂಲದ ನವೀನ್‌ ಸಾವು ಮತ್ತಷ್ಟುದಿಕ್ಕೆ​ಡಿ​ಸಿದ್ದು, ಭಯ​ಭೀ​ತ​ರಾ​ಗಿ​ರುವ 50ಕ್ಕೂ ಹೆಚ್ಚು ವಿದ್ಯಾ​ರ್ಥಿ​ಗಳು ಬಾಂಬ್‌, ಶೆಲ್‌ ದಾಳಿ ಆತಂಕದ ನಡು​ವೆಯೇ ತಾಯ್ನಾ​ಡಿಗೆ ದಾಪು​ಗಾಲು ಹಾಕು​ತ್ತಿ​ದ್ದಾ​ರೆ. ಇಲ್ಲೇ ಇದ್ದರೆ ನವೀ​ನ್‌​ಗಾದ ಗತಿಯೇ ತಮ​ಗಾ​ಗ​ಬ​ಹುದು ಎಂಬ ಆತಂಕ​ದಿಂದಲೇ ಹೊರಟು ನಿಂತಿ​ದ್ದಾ​ರೆ.

ಇದನ್ನೂ ಓದಿ: Russia Ukraine Crisis ಉಕ್ರೇನ್‌ನ ಪರಿಸ್ಥಿತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಕನ್ನಡಿಗ

ಖಾರ್ಕಿವ್‌ ನ್ಯಾಷ​ನಲ್‌ ಮೆಡಿ​ಕಲ್‌ ಯುನಿ​ವ​ರ್ಸಿ​ಟಿ​ ವಿದ್ಯಾ​ರ್ಥಿ​ಯಾ​ಗಿ​ದ್ದ ನವೀನ್‌ ತನಗೆ ಹಾಗೂ ಸ್ನೇಹಿ​ತ​ರಿಗೆ ಆಹಾರ ತರ​ಲೆಂದು ದಿನಸಿ ಅಂಗಡಿ ಮುಂದೆ ಸಾಲಿ​ನಲ್ಲಿ ನಿಂತಿ​ದ್ದಾಗ ರಷ್ಯಾದ ಶೆಲ್‌ ದಾಳಿಗೆ ಸಿಲುಕಿ ಮಂಗ​ಳ​ವಾರ ಬೆಳ​ಗ್ಗೆ ಮೃತ​ಪ​ಟ್ಟಿ​ದ್ದರು. ಇದು ಯುದ್ಧ​ಪೀ​ಡಿತ ಪ್ರದೇ​ಶ​ವಾದ ಕೀವ್‌, ಖಾರ್ಕೀವ್‌​ನ​ಲ್ಲಿದ್ದ ಉಳಿದ ವಿದ್ಯಾ​ರ್ಥಿ​ಗ​ಳಲ್ಲಿ ದಿಗ್ಭ್ರಮೆ ಮೂಡಿ​ಸಿದೆ. ಇಲ್ಲೇ ಇದ್ದರೆ ನಾವೂ ಆಹಾರ, ನೀರಿ​ಲ್ಲದೆ ಪರ​ದಾಟ ಅನು​ಭ​ವಿಸಿ ಕೊನೆಗೆ ನವೀ​ನ್‌ ರೀತಿ ಸಾವು ಕಾಣ​ಬ​ಹುದು ಎಂಬ ಆತಂಕ​ ಅನೇ​ಕ​ರನ್ನು ಕಾಡಲು ಶುರು​ವಾ​ಗಿದೆ.

 ಹೀಗಾಗಿ ಕೀವ್‌ ಮತ್ತು ಖಾರ್ಕೀವ್‌​ನಿಂದ ಅನೇ​ಕರು ಬಸ್‌, ರೈಲು, ಖಾಸಗಿ ವಾಹ​ನ​ಗಳ ಮೂಲಕ ಗಡಿಯತ್ತ ಹೊರ​ಟಿ​ದ್ದಾ​ರೆ. ಕಲ​ಬು​ರ​ಗಿ​ಯಿಂದ ಏಳು, ದಕ್ಷಿಣ ಕನ್ನ​ಡ, ಚಿತ್ರ​ದು​ರ್ಗ​, ಬಳ್ಳಾ​ರಿಯಿಂದ ತಲಾ 4, ಮಂಡ್ಯ-2, ದಾವ​ಣ​ಗೆರೆ, ಚಾಮ​ರಾ​ಜ​ನ​ಗರರಿಂದ ತಲಾ ಒಬ್ಬರು ಸೇರಿ​ದಂತೆ ಸುಮಾರು 50ಕ್ಕೂ ಹೆಚ್ಚು ವಿದ್ಯಾ​ರ್ಥಿ​ಗಳು ಈಗಾ​ಗಲೇ ಹಾಲೆಂಡ್‌, ಹಂಗೇರಿ ಗಡಿ​ಯತ್ತ ಹೊರ​ಟಿ​ದ್ದಾ​ರೆ ಎನ್ನುವ ಮಾಹಿತಿ ಸದ್ಯಕ್ಕೆ ದೊರೆ​ತಿ​ದೆ.