ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!

ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!

Published : Oct 10, 2025, 10:51 AM ISTUpdated : Oct 10, 2025, 10:53 AM IST
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ತನ್ನ ಅಪಾರ ಖನಿಜ ಸಂಪತ್ತಿನ ಗಣಿಗಾರಿಕೆಗಾಗಿ ಅಮೆರಿಕದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಪಾಕಿಸ್ತಾನ-ಅಮೆರಿಕ ಸಂಬಂಧವನ್ನು ಬಲಪಡಿಸಿದರೆ, ಅಮೆರಿಕದ ಹೆಚ್ಚಿದ ಉಪಸ್ಥಿತಿಯು ಭಾರತದ ಭದ್ರತೆಗೆ ಕಂಟಕವಾಗುವ ಸಾಧ್ಯತೆ ಇದೆ.

ಬೆಂಗಳೂರು (ಅ.10): ಪಾಕಿಸ್ತಾನ ಮತ್ತು ಅಮೆರಿಕಾದ ನಡುವೆ ನಡೆದಿರುವ ಒಂದು ಮಹತ್ವದ ವ್ಯಾಪಾರ ಒಪ್ಪಂದವು ಪ್ರಾದೇಶಿಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಆರ್ಥಿಕವಾಗಿ ಭಿಕಾರಿ ಸ್ಥಿತಿಯಲ್ಲಿರುವ ಪಾಕಿಸ್ತಾನ, ತನ್ನ ದೇಶದ ಭೂಗರ್ಭದಲ್ಲಿರುವ ಅಪಾರ ಖನಿಜ ಸಂಪತ್ತಿನ ಗಣಿಗಾರಿಕೆಗಾಗಿ ಅಮೆರಿಕಾದ ಅಧ್ಯಕ್ಷರ ಪಡೆಗೆ ಪ್ರವೇಶ ನೀಡಲು ಮುಂದಾಗಿದೆ.

ಈ $500 ಮಿಲಿಯನ್ ಮೌಲ್ಯದ ಒಪ್ಪಂದವು ಪಾಕಿಸ್ತಾನದ ಆರ್ಥಿಕತೆಗೆ ತಾತ್ಕಾಲಿಕ ಮದ್ದು ನೀಡುವ ಪ್ರಯತ್ನವಾದರೆ, ಪಾಕಿಸ್ತಾನದ ಒಡಲಲ್ಲಿರುವ ಅಂದಾಜು $6 ಟ್ರಿಲಿಯನ್ ಮೌಲ್ಯದ ಸಂಪತ್ತಿನ ಮೇಲೆ ಅಮೆರಿಕಾ ಕಣ್ಣಿಟ್ಟಿದೆ.
ಔರಂಗಜೇಬ್ ಕಾಲದಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು, ಪಾಕ್ ರಕ್ಷಣಾ ಸಚಿವನ ಮತ್ತೊಂದು ವಿವಾದ

ಅಮೆರಿಕಾದಿಂದ ಸಿಗುವ ಈ ಭದ್ರತಾ ಸಹಕಾರವು ಭಾರತದ ಹಿತಾಸಕ್ತಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಪಾಕಿಸ್ತಾನದ ಬಂದರುಗಳಲ್ಲಿ ಅಮೆರಿಕಾದ ಅಟ್ಟಹಾಸ ಹೆಚ್ಚಾದರೆ, ಅದು ಭಾರತದ ಭದ್ರತೆ ಮತ್ತು ನೆರೆಹೊರೆಯ ರಾಜಕೀಯ ಸಮತೋಲನಕ್ಕೆ ಕಂಟಕವಾಗಬಹುದು. ಈ ಹೊಸ ಒಪ್ಪಂದವು ಪಾಕಿಸ್ತಾನ ಮತ್ತು ಅಮೆರಿಕಾದ ಸಂಬಂಧವನ್ನು ಗಟ್ಟಿಗೊಳಿಸಲಿದ್ದು, ಪಾಕಿಸ್ತಾನಕ್ಕೆ ಅಮೆರಿಕಾದ ಭದ್ರತಾ ಸಹಕಾರ ಲಭಿಸುವ ಸಾಧ್ಯತೆ ಇದೆ.
 

 

44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more