ಆಮೆಗತಿಯ ಮತ ಎಣಿಕೆ..ರೊಚ್ಚಿಗೆದ್ದ ಪಾಕ್ ಜನತೆ! ಆ ಮೂವರ ನಡುವೆ ನಡೆದಿತ್ತು ಮತಸಂಗ್ರಾಮ!

ಆಮೆಗತಿಯ ಮತ ಎಣಿಕೆ..ರೊಚ್ಚಿಗೆದ್ದ ಪಾಕ್ ಜನತೆ! ಆ ಮೂವರ ನಡುವೆ ನಡೆದಿತ್ತು ಮತಸಂಗ್ರಾಮ!

Published : Feb 11, 2024, 05:56 PM IST

ಇಮ್ರಾನ್  ಲಾಸ್ಟ್ ಬಾಲ್ ನಲ್ಲಿ ನೋ ಬಾಲ್ ಎಸೆದರೆ ಏನಾಗುತ್ತೆ..?
ಪಾಕ್‌ನಲ್ಲಿ ನಡೆದಿದ್ದು ಚುನಾವಣೆಯೋ.. ಘೋರ ಯುದ್ಧವೋ..?
ಸಿಡಿದವು ಬಾಂಬು.. ಹೋದವು ಜೀವ.. ಇದೆಂಥಾ ಎಲೆಕ್ಷನ್..!?

ಪಾಕಿಸ್ತಾನದ ಚುನಾವಣೆ ಅದ್ಯಾವ ದುರ್ಮುಹೂರ್ತದಲ್ಲಿ ಶುರುವಾಯ್ತೋ ಏನೋ, ಆ ಕ್ಷಣದಿಂದ ಈ ಹೊತ್ತಿನ ತನಕ ನರಬಲಿ ಅನ್ನೋದು ಸರ್ವೇ ಸಾಮಾನ್ಯವಾಗ್ಬಿಟ್ಟಿದೆ. ಪಾಕಿಸ್ತಾನದ ಚುನಾವಣೆ(Pakistan election) ಅದೆಷ್ಟು ಶಾಂತಿಯುತವಾಗಿ ನಡೆದಿತ್ತು ಅನ್ನೋದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಪಾಕಿನ ಚುನಾವಣೆ ಅದೆಷ್ಟು ಅದ್ಭುತವಾಗಿ ನಡೀತು ಅಂದ್ರೆ, ವಿಶ್ವಸಂಸ್ಥೆ(United Nations) ಪಾಕಿಸ್ತಾನ ಎಲೆಕ್ಷನ್ ರಿಸಲ್ಟ್(Result) ಮೇಲೇ ಅನುಮಾನ ಪಡೋ ಹಾಗಾಗಿದೆ. ಆಸ್ಟ್ರೇಲಿಯಾ ಅಂತೂ, ಓಪನ್ ಲೆಟರ್ ಬರ್ದು, ಈ ಚುನಾವಣೆಯ ಸತ್ಯಾಸತ್ಯ ಬಗ್ಗೆ ಅನುಮಾನ ವ್ಯಕ್ತಪಡಿಸ್ತಾ ಇದೆ. ಅಮೆರಿಕಾ ಅಂತೂ, ಪಾಕಿಸ್ತಾನದ ವಾಯ್ಲೆನ್ಸ್ ನೋಡಿ ಶಾಕ್‌ಗೆಗೊಳಗಾಗಿದೆ. ಜನ ಏನೋ ಪ್ರಾಣಭೀತಿಯ ಮಧ್ಯೆಯೇ ಓಟ್ ಹಾಕಿದ್ದೂ ಆಯ್ತು. ಅದರ ರಿಸಲ್ಟ್ ಬಯಲಿಗೆ ಬಂದಿದ್ದೂ ಆಯ್ತು. ಪಾಕಿಸ್ತಾನದಲ್ಲಿ ಈ ಸಲ ಎಲೆಕ್ಷನ್ ನಡೆದಿದ್ದು, ಪ್ರಮುಖವಾಗಿ ಮೂವರ ಮಧ್ಯೆ. ಅದರಲ್ಲೊಬ್ಬ, ಮಾಜಿ ಪ್ರಧಾನಿ, ಇಮ್ರಾನ್ ಖಾನ್. ಮತ್ತೊಬ್ಬನೂ ಕೂಡ, ಪಾಕಿನ ಮಾಜಿ ಪ್ರಧಾನಿ, ನವಾಜ್ ಷರೀಫ್. ಈ ಇಬ್ಬರ ಮಧ್ಯೆ ಕಾಣಿಸಿಕೊಂಡೋನು, ಈ ಭಿಲಾವಲ್ ಭುಟ್ಟೋ. ಪಾಕಿಸ್ತಾನದಲ್ಲಿ ಸರ್ಕಾರ ನಡೆಸೋಕೆ ಬೇಕಿರೋ ಬಹುಮತ 134.. ಆದ್ರೆ, ಶನಿವಾರ ಮಧ್ಯಾಹ್ನದ ಹೊತ್ತಿಗೆ 244 ಕ್ಷೇತ್ರಗಳ ಫಲಿತಾಂಶ ಹೊರಬಂದಿತ್ತು. ಆ ವೇಳೆಗೆ, ನವಾಜ್ ಷರೀಫ್ನ ಪಾಕಿಸ್ತಾನ್ ಮುಸ್ಲಿಂ ಲೀಗ್  ಪಾರ್ಟಿ 71 ಸ್ಥಾನ ಗೆದ್ದಿತ್ತು. ಭುಟ್ಟೋನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಾರ್ಲಿಮೆಂಟರಿಯನ್ಸ್ 54 ಸ್ಥಾನ ಗಳಿಸಿತ್ತು. ಉಳಿದ ಸ್ಥಾನಗಳು ಇತರರ ಪಾಲಾಗಿದ್ರೆ, ಬರೋಬ್ಬರಿ 100 ಕ್ಷೇತ್ರಗಳಲ್ಲಿ, ಪಕ್ಷೇತರ ಅಭ್ಯರ್ಥಿಗಳು ಭರ್ಜರಿಯಾಗಿ ವಿನ್ ಆಗಿದ್ರು.

ಇದನ್ನೂ ವೀಕ್ಷಿಸಿ:  Narendra Modi: ನಯಾ ಕಾಶ್ಮೀರದ ಬಗ್ಗೆ ಮೋದಿ ವರ್ಣನೆ..! 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪ..!

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!